logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rama Navami 2024: ಕರ್ನಾಟಕದ 5 ಪ್ರಸಿದ್ಧ ರಾಮ ದೇಗುಲಗಳಿವು; ಇಲ್ಲಿನ ರಾಮ ನವಮಿ ಸಂಭ್ರಮವನ್ನು ಒಮ್ಮೆಯಾದ್ರೂ ಕಣ್ತುಂಬಿಕೊಳ್ಳಲೇಬೇಕು

Rama Navami 2024: ಕರ್ನಾಟಕದ 5 ಪ್ರಸಿದ್ಧ ರಾಮ ದೇಗುಲಗಳಿವು; ಇಲ್ಲಿನ ರಾಮ ನವಮಿ ಸಂಭ್ರಮವನ್ನು ಒಮ್ಮೆಯಾದ್ರೂ ಕಣ್ತುಂಬಿಕೊಳ್ಳಲೇಬೇಕು

Apr 16, 2024 06:15 PM IST

ದೇಶದಾದ್ಯಂತ ಶ್ರೀರಾಮ ನವಮಿ ಸಂಭ್ರಮ ಜೋರಾಗಿದೆ. ಅಯೋಧ್ಯೆ ರಾಮಮಂದಿರ ಸೇರಿದಂತೆ ಭಾರತದಾದ್ಯಂತ ಇರುವ ರಾಮಮಂದಿರಗಳಲ್ಲಿ ರಾಮ ನವಮಿ ಆಚರಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಹೊತ್ತಿನಲ್ಲಿ ಕರ್ನಾಟಕದ 5 ಪ್ರಸಿದ್ಧ ರಾಮ ದೇಗುಲಗಳ ಬಗ್ಗೆ ತಿಳಿಯಿರಿ. ಇಲ್ಲಿನ ರಾಮ ನವಮಿ ಸಂಭ್ರಮವನ್ನು ಒಮ್ಮೆಯಾದ್ರೂ ಕಣ್ತುಂಬಿಕೊಳ್ಳಲೇಬೇಕು. 

  • ದೇಶದಾದ್ಯಂತ ಶ್ರೀರಾಮ ನವಮಿ ಸಂಭ್ರಮ ಜೋರಾಗಿದೆ. ಅಯೋಧ್ಯೆ ರಾಮಮಂದಿರ ಸೇರಿದಂತೆ ಭಾರತದಾದ್ಯಂತ ಇರುವ ರಾಮಮಂದಿರಗಳಲ್ಲಿ ರಾಮ ನವಮಿ ಆಚರಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಹೊತ್ತಿನಲ್ಲಿ ಕರ್ನಾಟಕದ 5 ಪ್ರಸಿದ್ಧ ರಾಮ ದೇಗುಲಗಳ ಬಗ್ಗೆ ತಿಳಿಯಿರಿ. ಇಲ್ಲಿನ ರಾಮ ನವಮಿ ಸಂಭ್ರಮವನ್ನು ಒಮ್ಮೆಯಾದ್ರೂ ಕಣ್ತುಂಬಿಕೊಳ್ಳಲೇಬೇಕು. 
ದಶರಥ ನಂದನ, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರಪ್ರಭುವಿನ ಹುಟ್ಟಿದ ದಿನವನ್ನು ಎಲ್ಲೆಡೆ ಶ್ರೀರಾಮ ನವಮಿ ಎಂದು ಆಚರಿಸುತ್ತಾರೆ. ಚೈತ್ರ ಮಾಸ ಶುಕ್ಲಪಕ್ಷದ ಒಂಬತ್ತನೇ ದಿನದಂದು ಶ್ರೀರಾಮ ಅಯೋಧ್ಯೆಯಲ್ಲಿ ಜನಿಸುತ್ತಾನೆ. ರಾಮ ನವಮಿ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಈ ದಿನದಂದು ದೇಶದಾದ್ಯಂತ ಇರುವ ರಾಮ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. 
(1 / 9)
ದಶರಥ ನಂದನ, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರಪ್ರಭುವಿನ ಹುಟ್ಟಿದ ದಿನವನ್ನು ಎಲ್ಲೆಡೆ ಶ್ರೀರಾಮ ನವಮಿ ಎಂದು ಆಚರಿಸುತ್ತಾರೆ. ಚೈತ್ರ ಮಾಸ ಶುಕ್ಲಪಕ್ಷದ ಒಂಬತ್ತನೇ ದಿನದಂದು ಶ್ರೀರಾಮ ಅಯೋಧ್ಯೆಯಲ್ಲಿ ಜನಿಸುತ್ತಾನೆ. ರಾಮ ನವಮಿ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಈ ದಿನದಂದು ದೇಶದಾದ್ಯಂತ ಇರುವ ರಾಮ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. 
ಕರ್ನಾಟಕದಲ್ಲಿ ಶ್ರೀರಾಮದೇವರಿಗಾಗಿ ನಿರ್ಮಿಸಲ್ಪಟ್ಟಿರುವ ದೇವಾಲಯಗಳು ಕೆಲವೇ ಕೆಲವು ಇವೆಯಾದರೂ ಅಲ್ಲಿ ಶ್ರೀರಾಮ ನವಮಿಯ ಆಚರಣೆಯನ್ನು ಕಣ್ತುಂಬಿಕೊಳ್ಳುವ ಖುಷಿಯೇ ಬೇರೆ. ಹಾಗಾದರೆ ಕರ್ನಾಟಕದಲ್ಲಿರುವ ಪ್ರಮುಖ ರಾಮ ದೇಗುಲಗಳು ಯಾವುದು? ಅಲ್ಲಿ ರಾಮ ನವಮಿಯನ್ನು ಆಚರಿಸುವ ಬಗೆ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.  
(2 / 9)
ಕರ್ನಾಟಕದಲ್ಲಿ ಶ್ರೀರಾಮದೇವರಿಗಾಗಿ ನಿರ್ಮಿಸಲ್ಪಟ್ಟಿರುವ ದೇವಾಲಯಗಳು ಕೆಲವೇ ಕೆಲವು ಇವೆಯಾದರೂ ಅಲ್ಲಿ ಶ್ರೀರಾಮ ನವಮಿಯ ಆಚರಣೆಯನ್ನು ಕಣ್ತುಂಬಿಕೊಳ್ಳುವ ಖುಷಿಯೇ ಬೇರೆ. ಹಾಗಾದರೆ ಕರ್ನಾಟಕದಲ್ಲಿರುವ ಪ್ರಮುಖ ರಾಮ ದೇಗುಲಗಳು ಯಾವುದು? ಅಲ್ಲಿ ರಾಮ ನವಮಿಯನ್ನು ಆಚರಿಸುವ ಬಗೆ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.  
ಚುಂಚನಘಟ್ಟ ಕೋದಂಡರಾಮ ದೇವಸ್ಥಾನ: ಮೈಸೂರಿನ ಕೃಷ್ಣರಾಜನಗರದಲ್ಲಿರುವ ಚುಂಚನಘಟ್ಟ ಎಂಬಲ್ಲಿರುವ ಕೋದಂಡರಾಮ ದೇವಾಲಯವು ಬಹಳ ವರ್ಷಗಳ ಇತಿಹಾಸವನ್ನು ಹೊಂದಿದೆ. ತ್ರೇತಾಯುಗದಲ್ಲಿ ವನವಾಸದ ವೇಳೆ ಶ್ರೀರಾಮಚಂದ್ರಪ್ರಭು, ಸೀತಾದೇವಿ ಹಾಗೂ ಲಕ್ಷ್ಮಣ ಇಲ್ಲಿಗೆ ಬಂದಿದ್ದರು ಎಂಬ ನಂಬಿಕೆಯಿದೆ. ಇಲ್ಲಿನ ಖುಷಿ ಮುನಿಗಳಿಗೆ ಉಪಟಳ ಕೊಡುತ್ತಿದ್ದ ಚುಂಚ ಹಾಗೂ ಚುಂಚಿ ಎಂಬ ಇಬ್ಬರು ರಾಕ್ಷಸರನ್ನು ಶ್ರೀರಾಮಚಂದ್ರನೇ ಸಂಹಾರ ಮಾಡಿದ್ದು, ಈ ಕಾರಣದಿಂದಲೇ ಇಲ್ಲಿಗೆ ಚುಂಚನಕಟ್ಟೆ ಅಥವಾ ಚುಂಚನಘಟ್ಟವೆಂದು ಹೆಸರು ಬಂತೆಂದೂ ಹೇಳಲಾಗುತ್ತದೆ. ಸೀತೆ, ಲಕ್ಷ್ಮಣ ಸಮೇತರಾಗಿ ಬಂದ ಶ್ರೀರಾಮ ದೇವರ ನೆನಪಿಗಾಗಿ ಇಲ್ಲಿ ಕೋದಂಡಸ್ವಾಮಿ ದೇವಾಲಯವನ್ನು ನಿರ್ಮಿಸಲಾಗಿದೆ. ಕೋದಂಡವನ್ನು ಕೈಯಲ್ಲಿ ಹಿಡಿದ ಶ್ರೀರಾಮನ ವಿಗ್ರಹವನ್ನೂ ನಯನ ಮನಮೋಹಕವಾಗಿದೆ. 
(3 / 9)
ಚುಂಚನಘಟ್ಟ ಕೋದಂಡರಾಮ ದೇವಸ್ಥಾನ: ಮೈಸೂರಿನ ಕೃಷ್ಣರಾಜನಗರದಲ್ಲಿರುವ ಚುಂಚನಘಟ್ಟ ಎಂಬಲ್ಲಿರುವ ಕೋದಂಡರಾಮ ದೇವಾಲಯವು ಬಹಳ ವರ್ಷಗಳ ಇತಿಹಾಸವನ್ನು ಹೊಂದಿದೆ. ತ್ರೇತಾಯುಗದಲ್ಲಿ ವನವಾಸದ ವೇಳೆ ಶ್ರೀರಾಮಚಂದ್ರಪ್ರಭು, ಸೀತಾದೇವಿ ಹಾಗೂ ಲಕ್ಷ್ಮಣ ಇಲ್ಲಿಗೆ ಬಂದಿದ್ದರು ಎಂಬ ನಂಬಿಕೆಯಿದೆ. ಇಲ್ಲಿನ ಖುಷಿ ಮುನಿಗಳಿಗೆ ಉಪಟಳ ಕೊಡುತ್ತಿದ್ದ ಚುಂಚ ಹಾಗೂ ಚುಂಚಿ ಎಂಬ ಇಬ್ಬರು ರಾಕ್ಷಸರನ್ನು ಶ್ರೀರಾಮಚಂದ್ರನೇ ಸಂಹಾರ ಮಾಡಿದ್ದು, ಈ ಕಾರಣದಿಂದಲೇ ಇಲ್ಲಿಗೆ ಚುಂಚನಕಟ್ಟೆ ಅಥವಾ ಚುಂಚನಘಟ್ಟವೆಂದು ಹೆಸರು ಬಂತೆಂದೂ ಹೇಳಲಾಗುತ್ತದೆ. ಸೀತೆ, ಲಕ್ಷ್ಮಣ ಸಮೇತರಾಗಿ ಬಂದ ಶ್ರೀರಾಮ ದೇವರ ನೆನಪಿಗಾಗಿ ಇಲ್ಲಿ ಕೋದಂಡಸ್ವಾಮಿ ದೇವಾಲಯವನ್ನು ನಿರ್ಮಿಸಲಾಗಿದೆ. ಕೋದಂಡವನ್ನು ಕೈಯಲ್ಲಿ ಹಿಡಿದ ಶ್ರೀರಾಮನ ವಿಗ್ರಹವನ್ನೂ ನಯನ ಮನಮೋಹಕವಾಗಿದೆ. 
ರಾಮನಗರದ ರಾಮದೇವರ ಬೆಟ್ಟ: ಪುರಾಣ ಪ್ರಸಿದ್ಧವಾದ ರಾಮನಗರದ ರಾಮದೇವರ ಬೆಟ್ಟವು ಬೆಂಗಳೂರಿನಿಂದ 50 ಕಿಮೀ ದೂರದಲ್ಲಿದೆ. ಹಿಂದೂಗಳ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಈ ಬೆಟ್ಟವು ಸಮುದ್ರಮಟ್ಟಕ್ಕಿಂತ 4000 ಅಡಿ ಎತ್ತರದಲ್ಲಿದ್ದು, ಬೆಟ್ಟದ ಮೇಲಿರುವ ಪಟ್ಟಾಭಿರಾಮ ದೇಗುಲ ಇಲ್ಲಿನ ಆಕರ್ಷಿಣೀಯ ಕೇಂದ್ರವಾಗಿದೆ. ವಿಜಯನಗರ ಸಾಮ್ರಾಜ್ಯದ ರಾಜರ ಮಾರ್ಗದರ್ಶನದಲ್ಲಿ ಸಾಮಂತರಾಗಿದ್ದ ಕೆಂಪೇಗೌಡರೇ ಈ ದೇವಾಲಯವನ್ನು ಕಟ್ಟಿಸಿದ್ದರೆಂದು ಹೇಳಲಾಗುತ್ತದೆ. ಇಲ್ಲಿ ಕಪ್ಪುಶಿಲೆಯ ವಿಗ್ರಹದಲ್ಲಿ ಪಟ್ಟಾಭಿರಾಮ ಭಕ್ತರಿಗೆ ದರ್ಶನ ನೀಡುತ್ತಾನೆ. ಪಟ್ಟಾಭಿರಾಮ ದೇಗುಲ ಮಾತ್ರವಲ್ಲದೆ ಇಲ್ಲಿ ರಾಮೇಶ್ವರ ದೇಗುಲವೂ ಇದೆ. 
(4 / 9)
ರಾಮನಗರದ ರಾಮದೇವರ ಬೆಟ್ಟ: ಪುರಾಣ ಪ್ರಸಿದ್ಧವಾದ ರಾಮನಗರದ ರಾಮದೇವರ ಬೆಟ್ಟವು ಬೆಂಗಳೂರಿನಿಂದ 50 ಕಿಮೀ ದೂರದಲ್ಲಿದೆ. ಹಿಂದೂಗಳ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಈ ಬೆಟ್ಟವು ಸಮುದ್ರಮಟ್ಟಕ್ಕಿಂತ 4000 ಅಡಿ ಎತ್ತರದಲ್ಲಿದ್ದು, ಬೆಟ್ಟದ ಮೇಲಿರುವ ಪಟ್ಟಾಭಿರಾಮ ದೇಗುಲ ಇಲ್ಲಿನ ಆಕರ್ಷಿಣೀಯ ಕೇಂದ್ರವಾಗಿದೆ. ವಿಜಯನಗರ ಸಾಮ್ರಾಜ್ಯದ ರಾಜರ ಮಾರ್ಗದರ್ಶನದಲ್ಲಿ ಸಾಮಂತರಾಗಿದ್ದ ಕೆಂಪೇಗೌಡರೇ ಈ ದೇವಾಲಯವನ್ನು ಕಟ್ಟಿಸಿದ್ದರೆಂದು ಹೇಳಲಾಗುತ್ತದೆ. ಇಲ್ಲಿ ಕಪ್ಪುಶಿಲೆಯ ವಿಗ್ರಹದಲ್ಲಿ ಪಟ್ಟಾಭಿರಾಮ ಭಕ್ತರಿಗೆ ದರ್ಶನ ನೀಡುತ್ತಾನೆ. ಪಟ್ಟಾಭಿರಾಮ ದೇಗುಲ ಮಾತ್ರವಲ್ಲದೆ ಇಲ್ಲಿ ರಾಮೇಶ್ವರ ದೇಗುಲವೂ ಇದೆ. (Karnataka Tourism )
ಹಿರೇಮಗಳೂರು ಕೋದಂಡರಾಮ ದೇವಸ್ಥಾನ: ಚಿಕ್ಕಮಗಳೂರಿಗೆ ಹೊಂದಿಕೊಂಡಿರುವ ಹಿರೇಮಗಳೂರು ಎಂಬಲ್ಲಿರುವ ಕೋದಂಡಸ್ವಾಮಿ ದೇವಾಲಯವು ದಕ್ಷಿಣ ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಮ ದೇವಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಮಾಯಣದ ಕಾಲಾವಧಿಯಲ್ಲಿ ಪ್ರಭು ಶ್ರೀರಾಮಚಂದ್ರರು ಹಾಗೂ ಗುರು ಪರಶುರಾಮರು ಮುಖಾಮುಖಿಯಾದ ಸ್ಥಳ ಹಿರೇಮಗಳೂರು. ಈ ವೇಳೆ ಪರಶುರಾಮರು ಶ್ರೀರಾಮನನ್ನು ಅವರ ಕಲ್ಯಾಣೋತ್ಸವದ ದರ್ಶನವನ್ನು ಮಾಡಿಸುವಂತೆ ಕೋರಿಕೊಳ್ಳುತ್ತಾರೆ. ಪರಶುರಾಮನ ಕೋರಿಕೆಗೆ ಓಗೊಟ್ಟು, ಬಲಬದಿಯಲ್ಲಿ ಸೀತೆ, ಎಡಬದಿಯಲ್ಲಿ ಲಕ್ಷ್ಮಣನನ್ನು ನಿಲ್ಲಿಸಿ ಕಲ್ಯಾಣೋತ್ಸವದ ದರ್ಶನ ನೀಡುತ್ತಾರೆ. ಇಲ್ಲಿ ರಾಮನ ಕೈಯಲ್ಲಿ ಬಿಲ್ಲುಬಾಣವಿದ್ದರೆ, ಸೀತಾ ಮಾತೆಯ ಮುಖದಲ್ಲಿ ಅರಿಶಿಣವಿದ್ದು, ನಾಚಿಕೊಂಡು ಕಣ್ಣಿನ ದೃಷ್ಟಿ ಕೆಳಮುಖವಾಗಿದೆ ಎಂಬುದು ಐತಿಹ್ಯ.
(5 / 9)
ಹಿರೇಮಗಳೂರು ಕೋದಂಡರಾಮ ದೇವಸ್ಥಾನ: ಚಿಕ್ಕಮಗಳೂರಿಗೆ ಹೊಂದಿಕೊಂಡಿರುವ ಹಿರೇಮಗಳೂರು ಎಂಬಲ್ಲಿರುವ ಕೋದಂಡಸ್ವಾಮಿ ದೇವಾಲಯವು ದಕ್ಷಿಣ ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಮ ದೇವಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಮಾಯಣದ ಕಾಲಾವಧಿಯಲ್ಲಿ ಪ್ರಭು ಶ್ರೀರಾಮಚಂದ್ರರು ಹಾಗೂ ಗುರು ಪರಶುರಾಮರು ಮುಖಾಮುಖಿಯಾದ ಸ್ಥಳ ಹಿರೇಮಗಳೂರು. ಈ ವೇಳೆ ಪರಶುರಾಮರು ಶ್ರೀರಾಮನನ್ನು ಅವರ ಕಲ್ಯಾಣೋತ್ಸವದ ದರ್ಶನವನ್ನು ಮಾಡಿಸುವಂತೆ ಕೋರಿಕೊಳ್ಳುತ್ತಾರೆ. ಪರಶುರಾಮನ ಕೋರಿಕೆಗೆ ಓಗೊಟ್ಟು, ಬಲಬದಿಯಲ್ಲಿ ಸೀತೆ, ಎಡಬದಿಯಲ್ಲಿ ಲಕ್ಷ್ಮಣನನ್ನು ನಿಲ್ಲಿಸಿ ಕಲ್ಯಾಣೋತ್ಸವದ ದರ್ಶನ ನೀಡುತ್ತಾರೆ. ಇಲ್ಲಿ ರಾಮನ ಕೈಯಲ್ಲಿ ಬಿಲ್ಲುಬಾಣವಿದ್ದರೆ, ಸೀತಾ ಮಾತೆಯ ಮುಖದಲ್ಲಿ ಅರಿಶಿಣವಿದ್ದು, ನಾಚಿಕೊಂಡು ಕಣ್ಣಿನ ದೃಷ್ಟಿ ಕೆಳಮುಖವಾಗಿದೆ ಎಂಬುದು ಐತಿಹ್ಯ.(Chikkamagaluru Tourism)
ಹಂಪಿಯ ರಾಮ ದೇಗುಲಗಳು: ಕರ್ನಾಟಕದ ಸುಪ್ರಸಿದ್ಧ ಪ್ರವಾಸಿ ತಾಣ ಹಂಪಿಯು ರಾಮಾಯಣದೊಂದಿಗೆ ಸಂಬಂಧವನ್ನು ಹೊಂದಿದೆ. ವಿಜಯನಗರ ಸಾಮ್ರಾಜ್ಯದ ವೈಭವಯುತ ಸಾಮ್ರಾಜ್ಯವಾಗಿ ಮೆರೆದಿದ್ದಂತಹ ಹಂಪಿಯ ಸುತ್ತಮುತ್ತಲಿರುವ ತುಂಗಭದ್ರ ನದಿಯ ತೀರ ಪ್ರದೇಶವೇ ಹಿಂದೆ ತ್ರೇತಾಯುಗದ ರಾಮಾಯಣದ ಅವಧಿಯಲ್ಲಿ ಕಿಷ್ಕಿಂಧೆಯಾಗಿತ್ತು ಎಂಬ ನಂಬಿಕೆಯಿದೆ. ಹಿಂದೆ ಶ್ರೀರಾಮನು ಲಕ್ಷ್ಮಣ ಸಮೇತನಾಗಿ ಸೀತೆಯನ್ನು ಹುಡುಕುತ್ತಾ ಹಿಂದೆ ಹಂಪಿಗೆ ಆಗಮಿಸಿದ್ದರಂತೆ. ಇಲ್ಲಿಯೇ ಶ್ರೀರಾಮ-ಆಂಜನೇಯ ಭೇಟಿಯಾಗುವುದು ಎಂಬ ನಂಬಿಕೆಯಿದೆ.
(6 / 9)
ಹಂಪಿಯ ರಾಮ ದೇಗುಲಗಳು: ಕರ್ನಾಟಕದ ಸುಪ್ರಸಿದ್ಧ ಪ್ರವಾಸಿ ತಾಣ ಹಂಪಿಯು ರಾಮಾಯಣದೊಂದಿಗೆ ಸಂಬಂಧವನ್ನು ಹೊಂದಿದೆ. ವಿಜಯನಗರ ಸಾಮ್ರಾಜ್ಯದ ವೈಭವಯುತ ಸಾಮ್ರಾಜ್ಯವಾಗಿ ಮೆರೆದಿದ್ದಂತಹ ಹಂಪಿಯ ಸುತ್ತಮುತ್ತಲಿರುವ ತುಂಗಭದ್ರ ನದಿಯ ತೀರ ಪ್ರದೇಶವೇ ಹಿಂದೆ ತ್ರೇತಾಯುಗದ ರಾಮಾಯಣದ ಅವಧಿಯಲ್ಲಿ ಕಿಷ್ಕಿಂಧೆಯಾಗಿತ್ತು ಎಂಬ ನಂಬಿಕೆಯಿದೆ. ಹಿಂದೆ ಶ್ರೀರಾಮನು ಲಕ್ಷ್ಮಣ ಸಮೇತನಾಗಿ ಸೀತೆಯನ್ನು ಹುಡುಕುತ್ತಾ ಹಿಂದೆ ಹಂಪಿಗೆ ಆಗಮಿಸಿದ್ದರಂತೆ. ಇಲ್ಲಿಯೇ ಶ್ರೀರಾಮ-ಆಂಜನೇಯ ಭೇಟಿಯಾಗುವುದು ಎಂಬ ನಂಬಿಕೆಯಿದೆ.(Karnataka.com)
ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಪರ್ವತವೂ ಸಹ ಹಂಪಿಯ ಸಮೀಪದಲ್ಲಿಯೇ ಇದ್ದು, ರಾಮಾಯಣದ ಅನೇಕ ಸನ್ನಿವೇಶಗಳು ನಡೆದಿರುವುದು ಹಂಪಿಯ ಸುತ್ತಮುತ್ತಲ ಪ್ರದೇಶಗಳಲ್ಲಿ. ಶ್ರೀರಾಮಚಂದ್ರರಿಗೆಂದೇ ವಿಜಯನಗರ ಸಾಮ್ರಾಜ್ಯದ ಅರಸರು ಹಂಪಿಯ ಸುತ್ತಮುತ್ತ 4 ಭವ್ಯ ದೇಗುಲಗಳನ್ನು ನಿರ್ಮಿಸಿದ್ದಾರೆ. ಅವುಗಳೆಂದರೆ ಕೋದಂಡಸ್ವಾಮಿ ದೇವಸ್ಥಾನ, ಪಟ್ಟಾಭಿರಾಮ ದೇಗುಲ, ಹಜಾರ ರಾಮಚಂದ್ರ ದೇಗುಲ, ಮಾಲ್ಯವಂತ ರಘುನಾಥ ಸ್ವಾಮಿ ದೇಗುಲ. ಇವುಗಳ ಪೈಕಿ ಕೋದಂಡಸ್ವಾಮಿ ದೇವಸ್ಥಾನ, ಹಾಗೂ ಮಾಲ್ಯವಂತ ರಘುನಾಥ ಸ್ವಾಮಿ ದೇಗುಲ ಇಂದಿಗೂ ಸುಸ್ಥಿತಿಯಲ್ಲಿದ್ದು, ನಿತ್ಯವೂ ಇಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ಮಾಲ್ಯವಂತ ರಘುನಾಥ ಸ್ವಾಮಿ ದೇಗುಲದಲ್ಲಿ ರಾಮ ಪೂರ್ವಾಭಿಮುಖವಾಗಿ ಪದ್ಮಾಸನದಲ್ಲಿ ಕುಳಿತು ಹೃದಯದ ಮೇಲೆ ಕೈಯಿರಿಸಿಕೊಂಡು ಧ್ಯಾನಸ್ಥ ಸ್ಥಿತಿಯಲ್ಲಿದ್ದಾರೆ. ಇಲ್ಲಿ ಶಸ್ತ್ರಗಳಿಲ್ಲದ ರಾಮದೇವ ದರ್ಶನ ಲಭ್ಯವಾಗುತ್ತದೆ. ಕೋದಂಡಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ಲಕ್ಷ್ಮಣ, ಸೀತೆ ಹಾಗೂ ಸುಗ್ರೀವರ ಸಹಿತ ಉತ್ತರಾಭಿಮುಖವಾಗಿದ್ದಾರೆ. 
(7 / 9)
ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಪರ್ವತವೂ ಸಹ ಹಂಪಿಯ ಸಮೀಪದಲ್ಲಿಯೇ ಇದ್ದು, ರಾಮಾಯಣದ ಅನೇಕ ಸನ್ನಿವೇಶಗಳು ನಡೆದಿರುವುದು ಹಂಪಿಯ ಸುತ್ತಮುತ್ತಲ ಪ್ರದೇಶಗಳಲ್ಲಿ. ಶ್ರೀರಾಮಚಂದ್ರರಿಗೆಂದೇ ವಿಜಯನಗರ ಸಾಮ್ರಾಜ್ಯದ ಅರಸರು ಹಂಪಿಯ ಸುತ್ತಮುತ್ತ 4 ಭವ್ಯ ದೇಗುಲಗಳನ್ನು ನಿರ್ಮಿಸಿದ್ದಾರೆ. ಅವುಗಳೆಂದರೆ ಕೋದಂಡಸ್ವಾಮಿ ದೇವಸ್ಥಾನ, ಪಟ್ಟಾಭಿರಾಮ ದೇಗುಲ, ಹಜಾರ ರಾಮಚಂದ್ರ ದೇಗುಲ, ಮಾಲ್ಯವಂತ ರಘುನಾಥ ಸ್ವಾಮಿ ದೇಗುಲ. ಇವುಗಳ ಪೈಕಿ ಕೋದಂಡಸ್ವಾಮಿ ದೇವಸ್ಥಾನ, ಹಾಗೂ ಮಾಲ್ಯವಂತ ರಘುನಾಥ ಸ್ವಾಮಿ ದೇಗುಲ ಇಂದಿಗೂ ಸುಸ್ಥಿತಿಯಲ್ಲಿದ್ದು, ನಿತ್ಯವೂ ಇಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ಮಾಲ್ಯವಂತ ರಘುನಾಥ ಸ್ವಾಮಿ ದೇಗುಲದಲ್ಲಿ ರಾಮ ಪೂರ್ವಾಭಿಮುಖವಾಗಿ ಪದ್ಮಾಸನದಲ್ಲಿ ಕುಳಿತು ಹೃದಯದ ಮೇಲೆ ಕೈಯಿರಿಸಿಕೊಂಡು ಧ್ಯಾನಸ್ಥ ಸ್ಥಿತಿಯಲ್ಲಿದ್ದಾರೆ. ಇಲ್ಲಿ ಶಸ್ತ್ರಗಳಿಲ್ಲದ ರಾಮದೇವ ದರ್ಶನ ಲಭ್ಯವಾಗುತ್ತದೆ. ಕೋದಂಡಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ಲಕ್ಷ್ಮಣ, ಸೀತೆ ಹಾಗೂ ಸುಗ್ರೀವರ ಸಹಿತ ಉತ್ತರಾಭಿಮುಖವಾಗಿದ್ದಾರೆ. (Karnataka Tourism )
ಕನ್ಯಾಡಿಯ ಶ್ರೀರಾಮ ಕ್ಷೇತ್ರ: ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯ ಸನಿಹವೇ ಇರುವ ಕ್ಷೇತ್ರ ಕನ್ಯಾಡಿಯ ಶ್ರೀರಾಮ ಕ್ಷೇತ್ರ. ಮಂಗಳೂರಿನಿಂದ 67 ಕಿ.ಮೀ. ದೂರ, ಧರ್ಮಸ್ಥಳದಿಂದ 4 ಕಿ.ಮೀ. ದೂರದಲ್ಲಿರುವ ಈ ದೇವಾಲಯವನ್ನು ನಿರ್ಮಿಸಿದವರು ಶ್ರೀ ನಿತ್ಯಾನಂದ ಸ್ವಾಮೀಜಿಯ ಶಿಷ್ಯರಾಗಿರುವ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ. 2007ರಲ್ಲಿ ಇದರ ಪ್ರತಿಷ್ಠಾ ಕಲಶೋತ್ಸವ ನಡೆಯಿತು. ಈ ಸಂದರ್ಭ 36 ದೇವರ ಗರ್ಭಗುಡಿಗಳು ಹಾಗೂ ರಾಮ ದೇವರ ‘ಪೂಜಾ ಸ್ಥಳವನ್ನು ಏಕಕಾಲದಲ್ಲಿ ವಿಧ್ಯುಕ್ತವಾಗಿ ಆರಂಭಿಸಲಾಯಿತು. ಶ್ರೀ ರಾಮ ಇಲ್ಲಿನ ಮುಖ್ಯ ದೇವರಾಗಿದ್ದು, ಒಂದೇ ಸೂರಿನಡಿಯಲ್ಲಿ ಇತರ 36 ದೇವರುಗಳ ಗರ್ಭಗುಡಿಗಳಿವೆ. ಕಲಾತ್ಮಕ ಶೈಲಿಯ ದೇವಸ್ಥಾನದಲ್ಲಿರುವ ಮೂರು ಮಹಡಿಗಳಿವೆ. ತಳ ಮಹಡಿಯನ್ನು ಸಮಾರಂಭ ಮತ್ತು ಭಜನೆಗಳಿಗಾಗಿ ಉಪಯೋಗಿಸಿದರೆ ಎರಡನೇ ಮಹಡಿಯಲ್ಲಿ ಪವಿತ್ರ ಗರ್ಭಗೃಹಗಳಿವೆ ಮತ್ತು ಮೂರನೇ ಮಹಡಿಯಲ್ಲಿ ಪಟ್ಟಾಭಿರಾಮ ಸನ್ನಿಧಿಯಿದೆ. ಹನುಮಂತ, ನವದುರ್ಗೆಯರು ಮತ್ತು ನವಗ್ರಹಗಳು ಪೂಜಿಸಲ್ಪಡುತ್ತವೆ. 2007ರಲ್ಲಿ ಮೂರು ರಥಗಳನ್ನು ನಿರ್ಮಿಸಲಾಗಿದ್ದು ಕ್ಷೇತ್ರದ ವಿಶೇಷ ಆಕರ್ಷಣೆಗಳಾಗಿವೆ. ಶಿಲ್ಪಿಗಳು ರಾಮ ದೇವರಿಗಾಗಿ 72 ಅಡಿ ಎತ್ತರದ ಬ್ರಹ್ಮರಥವನ್ನು ಕೆತ್ತಿದ್ದಾರೆ. 
(8 / 9)
ಕನ್ಯಾಡಿಯ ಶ್ರೀರಾಮ ಕ್ಷೇತ್ರ: ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯ ಸನಿಹವೇ ಇರುವ ಕ್ಷೇತ್ರ ಕನ್ಯಾಡಿಯ ಶ್ರೀರಾಮ ಕ್ಷೇತ್ರ. ಮಂಗಳೂರಿನಿಂದ 67 ಕಿ.ಮೀ. ದೂರ, ಧರ್ಮಸ್ಥಳದಿಂದ 4 ಕಿ.ಮೀ. ದೂರದಲ್ಲಿರುವ ಈ ದೇವಾಲಯವನ್ನು ನಿರ್ಮಿಸಿದವರು ಶ್ರೀ ನಿತ್ಯಾನಂದ ಸ್ವಾಮೀಜಿಯ ಶಿಷ್ಯರಾಗಿರುವ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ. 2007ರಲ್ಲಿ ಇದರ ಪ್ರತಿಷ್ಠಾ ಕಲಶೋತ್ಸವ ನಡೆಯಿತು. ಈ ಸಂದರ್ಭ 36 ದೇವರ ಗರ್ಭಗುಡಿಗಳು ಹಾಗೂ ರಾಮ ದೇವರ ‘ಪೂಜಾ ಸ್ಥಳವನ್ನು ಏಕಕಾಲದಲ್ಲಿ ವಿಧ್ಯುಕ್ತವಾಗಿ ಆರಂಭಿಸಲಾಯಿತು. ಶ್ರೀ ರಾಮ ಇಲ್ಲಿನ ಮುಖ್ಯ ದೇವರಾಗಿದ್ದು, ಒಂದೇ ಸೂರಿನಡಿಯಲ್ಲಿ ಇತರ 36 ದೇವರುಗಳ ಗರ್ಭಗುಡಿಗಳಿವೆ. ಕಲಾತ್ಮಕ ಶೈಲಿಯ ದೇವಸ್ಥಾನದಲ್ಲಿರುವ ಮೂರು ಮಹಡಿಗಳಿವೆ. ತಳ ಮಹಡಿಯನ್ನು ಸಮಾರಂಭ ಮತ್ತು ಭಜನೆಗಳಿಗಾಗಿ ಉಪಯೋಗಿಸಿದರೆ ಎರಡನೇ ಮಹಡಿಯಲ್ಲಿ ಪವಿತ್ರ ಗರ್ಭಗೃಹಗಳಿವೆ ಮತ್ತು ಮೂರನೇ ಮಹಡಿಯಲ್ಲಿ ಪಟ್ಟಾಭಿರಾಮ ಸನ್ನಿಧಿಯಿದೆ. ಹನುಮಂತ, ನವದುರ್ಗೆಯರು ಮತ್ತು ನವಗ್ರಹಗಳು ಪೂಜಿಸಲ್ಪಡುತ್ತವೆ. 2007ರಲ್ಲಿ ಮೂರು ರಥಗಳನ್ನು ನಿರ್ಮಿಸಲಾಗಿದ್ದು ಕ್ಷೇತ್ರದ ವಿಶೇಷ ಆಕರ್ಷಣೆಗಳಾಗಿವೆ. ಶಿಲ್ಪಿಗಳು ರಾಮ ದೇವರಿಗಾಗಿ 72 ಅಡಿ ಎತ್ತರದ ಬ್ರಹ್ಮರಥವನ್ನು ಕೆತ್ತಿದ್ದಾರೆ. (Tripadvisor)
ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 
(9 / 9)
ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 

    ಹಂಚಿಕೊಳ್ಳಲು ಲೇಖನಗಳು