logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಲಿಂಪಿಕ್ಸ್​ ಇತಿಹಾಸದಲ್ಲಿ ಅಪರೂಪದ ದಾಖಲೆ: ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿ ಪದಕ ಗೆದ್ದ ಮೊದಲ ಕ್ರೀಡಾಪಟು

ಒಲಿಂಪಿಕ್ಸ್​ ಇತಿಹಾಸದಲ್ಲಿ ಅಪರೂಪದ ದಾಖಲೆ: ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿ ಪದಕ ಗೆದ್ದ ಮೊದಲ ಕ್ರೀಡಾಪಟು

Aug 06, 2024 07:00 AM IST

Henry Fieldman: ಬ್ರಿಟನ್​​ ರೋವರ್​​ ಕ್ರೀಡಾಪಟು, ಒಲಿಂಪಿಕ್ಸ್​​​ನ ಪುರುಷ ಹಾಗೂ ಮಹಿಳಾ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಿ ಪದಕ ಗೆದ್ದಿದ್ದಾರೆ. ಆದರೆ ಇದು ಹೇಗೆ ಸಾಧ್ಯ? ಒಬ್ಬ ಪುರುಷ ಅಥ್ಲೀಟ್ ಮಹಿಳೆಯರ ವಿಭಾಗದಲ್ಲಿ ಮೆಡಲ್ ಗೆದ್ದಿದ್ದೇಗೆ? ಇಲ್ಲಿದೆ ಉತ್ತರ.

  • Henry Fieldman: ಬ್ರಿಟನ್​​ ರೋವರ್​​ ಕ್ರೀಡಾಪಟು, ಒಲಿಂಪಿಕ್ಸ್​​​ನ ಪುರುಷ ಹಾಗೂ ಮಹಿಳಾ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಿ ಪದಕ ಗೆದ್ದಿದ್ದಾರೆ. ಆದರೆ ಇದು ಹೇಗೆ ಸಾಧ್ಯ? ಒಬ್ಬ ಪುರುಷ ಅಥ್ಲೀಟ್ ಮಹಿಳೆಯರ ವಿಭಾಗದಲ್ಲಿ ಮೆಡಲ್ ಗೆದ್ದಿದ್ದೇಗೆ? ಇಲ್ಲಿದೆ ಉತ್ತರ.
2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಹಲವು ಅದ್ಭುತ ಮತ್ತು ಅಚ್ಚರಿಗಳಿಗೆ ಸಾಕ್ಷಿಯಾಗಿದೆ. ಆದರೆ ಇಲ್ಲೊಬ್ಬ ಕ್ರೀಡಾಪಟು ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪದಕ ಗೆದ್ದು ಮೂಲಕ ಅಪರೂಪದ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ.
(1 / 5)
2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಹಲವು ಅದ್ಭುತ ಮತ್ತು ಅಚ್ಚರಿಗಳಿಗೆ ಸಾಕ್ಷಿಯಾಗಿದೆ. ಆದರೆ ಇಲ್ಲೊಬ್ಬ ಕ್ರೀಡಾಪಟು ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪದಕ ಗೆದ್ದು ಮೂಲಕ ಅಪರೂಪದ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ.(REUTERS)
ಬ್ರಿಟನ್​​ ರೋವರ್​​ ಕ್ರೀಡಾಪಟು ಹೆನ್ರಿ ಫೀಲ್ಡ್‌ಮನ್, ಒಲಿಂಪಿಕ್ಸ್ ಇತಿಹಾಸದಲ್ಲಿ ಪುರುಷ ಹಾಗೂ ಮಹಿಳಾ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಿ ಪದಕ ಗೆದ್ದಿದ್ದಾರೆ. ಆದರೆ ಇದು ಹೇಗೆ ಸಾಧ್ಯ? ಒಬ್ಬ ಪುರುಷ ಅಥ್ಲೀಟ್ ಮಹಿಳೆಯರ ವಿಭಾಗದಲ್ಲಿ ಮೆಡಲ್ ಗೆದ್ದಿದ್ದೇಗೆ ಎಂಬ ಪ್ರಶ್ನೆ ಮೂಡಬಹುದು.
(2 / 5)
ಬ್ರಿಟನ್​​ ರೋವರ್​​ ಕ್ರೀಡಾಪಟು ಹೆನ್ರಿ ಫೀಲ್ಡ್‌ಮನ್, ಒಲಿಂಪಿಕ್ಸ್ ಇತಿಹಾಸದಲ್ಲಿ ಪುರುಷ ಹಾಗೂ ಮಹಿಳಾ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಿ ಪದಕ ಗೆದ್ದಿದ್ದಾರೆ. ಆದರೆ ಇದು ಹೇಗೆ ಸಾಧ್ಯ? ಒಬ್ಬ ಪುರುಷ ಅಥ್ಲೀಟ್ ಮಹಿಳೆಯರ ವಿಭಾಗದಲ್ಲಿ ಮೆಡಲ್ ಗೆದ್ದಿದ್ದೇಗೆ ಎಂಬ ಪ್ರಶ್ನೆ ಮೂಡಬಹುದು.
ಹೆನ್ರಿ ಫೀಲ್ಡ್‌ಮನ್ ಮಹಿಳಾ ರೋಯಿಂಗ್ ತಂಡದಲ್ಲಿ ಕಾಕ್ಸ್ ಅಥವಾ ಕಾಕ್ಸ್​ವೆನ್​ ಆಗಿ ಸ್ಥಾನ ಪಡೆದಿದ್ದರು. ಈ ತಂಡ ಕಂಚಿನ ಪದಕ ಗೆದ್ದಿದೆ. ಕೆನಡಾ ಮೊದಲ ಸ್ಥಾನ, ರೊಮೇನಿಯಾ 2ನೇ ಸ್ಥಾನ ಪಡೆಯಿತು. ಮಹಿಳಾ ತಂಡದಲ್ಲಿ ಹೆನ್ರಿಗೆ ಅವಕಾಶ ಕೊಟ್ಟಿದ್ದೇಕೆ? ಇಲ್ಲಿದೆ ವಿವರ.
(3 / 5)
ಹೆನ್ರಿ ಫೀಲ್ಡ್‌ಮನ್ ಮಹಿಳಾ ರೋಯಿಂಗ್ ತಂಡದಲ್ಲಿ ಕಾಕ್ಸ್ ಅಥವಾ ಕಾಕ್ಸ್​ವೆನ್​ ಆಗಿ ಸ್ಥಾನ ಪಡೆದಿದ್ದರು. ಈ ತಂಡ ಕಂಚಿನ ಪದಕ ಗೆದ್ದಿದೆ. ಕೆನಡಾ ಮೊದಲ ಸ್ಥಾನ, ರೊಮೇನಿಯಾ 2ನೇ ಸ್ಥಾನ ಪಡೆಯಿತು. ಮಹಿಳಾ ತಂಡದಲ್ಲಿ ಹೆನ್ರಿಗೆ ಅವಕಾಶ ಕೊಟ್ಟಿದ್ದೇಕೆ? ಇಲ್ಲಿದೆ ವಿವರ.(AFP)
ಮಹಿಳಾ ರೋಯಿಂಗ್‌ನಲ್ಲಿ ಭಿನ್ನ ಲಿಂಗಿಯರಿಗೆ ಪಾಲ್ಗೊಳ್ಳಲು 2017 ರಲ್ಲಿ ನಿಯಮಕ್ಕೆ ತಿದ್ದುಪಡಿ ಮಾಡಲಾಗಿತ್ತು. ಮಹಿಳಾ ರೋಯಿಂಗ್​ ತಂಡದಲ್ಲಿ ಕಾಕ್ಸ್‌ ಆಗಿ ಪುರುಷ ಅಥ್ಲೀಟ್ ಭಾಗವಹಿಸಲು ಅವಕಾಶ ಇದೆ. 
(4 / 5)
ಮಹಿಳಾ ರೋಯಿಂಗ್‌ನಲ್ಲಿ ಭಿನ್ನ ಲಿಂಗಿಯರಿಗೆ ಪಾಲ್ಗೊಳ್ಳಲು 2017 ರಲ್ಲಿ ನಿಯಮಕ್ಕೆ ತಿದ್ದುಪಡಿ ಮಾಡಲಾಗಿತ್ತು. ಮಹಿಳಾ ರೋಯಿಂಗ್​ ತಂಡದಲ್ಲಿ ಕಾಕ್ಸ್‌ ಆಗಿ ಪುರುಷ ಅಥ್ಲೀಟ್ ಭಾಗವಹಿಸಲು ಅವಕಾಶ ಇದೆ. 
ಕಾಕ್ಸ್‌ ಆಗಿ ತಂಡದಲ್ಲಿ ಸ್ಥಾನ ಪಡೆದವರು ದೋಣಿ ಓಡಿಸುವಂತಿಲ್ಲ. ಆದರೆ ದೋಣಿ ಓಡಿಸುವವರು ಒಂದೇ ಲಿಂಗದವರಾಗಿರಬೇಕು. ಆದರೆ,  ಭಿನ್ನ ಲಿಂಗದವರು ದೋಣಿಯಲ್ಲಿದ್ದುಕೊಂಡು ತಂತ್ರಗಾರಿಕೆ ರೂಪಿಸಬೇಕು. ತಂಡಕ್ಕೆ ಸಲಹೆ ನೀಡುತ್ತಿರಬೇಕು. ಇದು ಬ್ರಿಟನ್ ತಂಡ ಪದಕ ಗೆಲ್ಲಲು ನೆರವಾಯಿತು. ಇದೇ ಸ್ಪರ್ಧೆಯಲ್ಲಿ ಪುರುಷರ ತಂಡದಲ್ಲಿ ಆಡಿ ಕಂಚಿನ ಪದಕವನ್ನು ಗೆದ್ದಿದ್ದರು.
(5 / 5)
ಕಾಕ್ಸ್‌ ಆಗಿ ತಂಡದಲ್ಲಿ ಸ್ಥಾನ ಪಡೆದವರು ದೋಣಿ ಓಡಿಸುವಂತಿಲ್ಲ. ಆದರೆ ದೋಣಿ ಓಡಿಸುವವರು ಒಂದೇ ಲಿಂಗದವರಾಗಿರಬೇಕು. ಆದರೆ,  ಭಿನ್ನ ಲಿಂಗದವರು ದೋಣಿಯಲ್ಲಿದ್ದುಕೊಂಡು ತಂತ್ರಗಾರಿಕೆ ರೂಪಿಸಬೇಕು. ತಂಡಕ್ಕೆ ಸಲಹೆ ನೀಡುತ್ತಿರಬೇಕು. ಇದು ಬ್ರಿಟನ್ ತಂಡ ಪದಕ ಗೆಲ್ಲಲು ನೆರವಾಯಿತು. ಇದೇ ಸ್ಪರ್ಧೆಯಲ್ಲಿ ಪುರುಷರ ತಂಡದಲ್ಲಿ ಆಡಿ ಕಂಚಿನ ಪದಕವನ್ನು ಗೆದ್ದಿದ್ದರು.(REUTERS)

    ಹಂಚಿಕೊಳ್ಳಲು ಲೇಖನಗಳು