logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇತಿಹಾಸ ಬರೆದ ಲಕ್ಷ್ಯ ಸೇನ್; ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ ಸಿಂಗಲ್ಸ್ ಸೆಮಿಫೈನಲ್ ತಲುಪಿದ ಭಾರತದ ಮೊದಲ ಆಟಗಾರ

ಇತಿಹಾಸ ಬರೆದ ಲಕ್ಷ್ಯ ಸೇನ್; ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ ಸಿಂಗಲ್ಸ್ ಸೆಮಿಫೈನಲ್ ತಲುಪಿದ ಭಾರತದ ಮೊದಲ ಆಟಗಾರ

Aug 03, 2024 06:10 AM IST

ಭಾರತದ ಬ್ಯಾಡ್ಮಿಂಟನ್‌ ಸ್ಟಾರ್‌ ಲಕ್ಷ್ಯಸೇನ್ ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಪುರುಷ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ, ಐತಿಹಾಸಿಕ ಪದಕ ಗೆಲುವಿಗೆ ಇನ್ನೂ ಒಂದು ಪಂದ್ಯದಲ್ಲಿ ಗೆಲ್ಲಬೇಕಿದೆ.

  • ಭಾರತದ ಬ್ಯಾಡ್ಮಿಂಟನ್‌ ಸ್ಟಾರ್‌ ಲಕ್ಷ್ಯಸೇನ್ ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಪುರುಷ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ, ಐತಿಹಾಸಿಕ ಪದಕ ಗೆಲುವಿಗೆ ಇನ್ನೂ ಒಂದು ಪಂದ್ಯದಲ್ಲಿ ಗೆಲ್ಲಬೇಕಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಬ್ಯಾಡ್ಮಿಂಟನ್‌ ಆಟಗಾರ ಲಕ್ಷ್ಯ ಸೇನ್‌ ಇತಿಹಾಸ ನಿರ್ಮಿಸಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧದ ರೋಚಕ ಪಂದ್ಯದಲ್ಲಿ ಲಕ್ಷ್ಯ ಸೇನ್ ಗೆಲುವು ಸಾಧಿಸಿದರು. ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಸಿಂಗಲ್ಸ್ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಲಕ್ಷ್ಯ ಪಾತ್ರರಾದರು.
(1 / 5)
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಬ್ಯಾಡ್ಮಿಂಟನ್‌ ಆಟಗಾರ ಲಕ್ಷ್ಯ ಸೇನ್‌ ಇತಿಹಾಸ ನಿರ್ಮಿಸಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧದ ರೋಚಕ ಪಂದ್ಯದಲ್ಲಿ ಲಕ್ಷ್ಯ ಸೇನ್ ಗೆಲುವು ಸಾಧಿಸಿದರು. ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಸಿಂಗಲ್ಸ್ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಲಕ್ಷ್ಯ ಪಾತ್ರರಾದರು.(Reuters)
ರೋಚಕವಾಗಿ ನಡೆದ ಪಂದ್ಯದಲ್ಲಿ ಲಕ್ಷ್ಯ ಮೊದಲ ಸೆಟ್‌ ಅನ್ನು 19-21 ಅಂತರದಿಂದ ಕಳೆದುಕೊಂಡರು. ಕಠಿಣ ಪೈಪೋಟಿ ನೀಡಿ ಕೊನೆಯ ಹಂತದಲ್ಲಿ ಮೊದಲ ಸೆಟ್‌ ಸೋತರು. ಆದರೆ, ಆ ಬಳಿಕ ಎದುರಾಳಿಯ ವೀಕ್‌ನೆಸ್‌ ಅರ್ಥಮಾಡಿಕೊಂಡ ಭಾರತೀಯ ಚಾಣಾಕ್ಷ ಆಟವಾಡಿದರು.
(2 / 5)
ರೋಚಕವಾಗಿ ನಡೆದ ಪಂದ್ಯದಲ್ಲಿ ಲಕ್ಷ್ಯ ಮೊದಲ ಸೆಟ್‌ ಅನ್ನು 19-21 ಅಂತರದಿಂದ ಕಳೆದುಕೊಂಡರು. ಕಠಿಣ ಪೈಪೋಟಿ ನೀಡಿ ಕೊನೆಯ ಹಂತದಲ್ಲಿ ಮೊದಲ ಸೆಟ್‌ ಸೋತರು. ಆದರೆ, ಆ ಬಳಿಕ ಎದುರಾಳಿಯ ವೀಕ್‌ನೆಸ್‌ ಅರ್ಥಮಾಡಿಕೊಂಡ ಭಾರತೀಯ ಚಾಣಾಕ್ಷ ಆಟವಾಡಿದರು.
22 ವರ್ಷದ ಆಟಗಾರ ನಿಖರ ಹೊಡೆತಗಳೊಂದಿಗೆ ಎರಡು ಹಾಗೂ ಮೂರನೇ ಸೆಟ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು. ಎರಡನೇ ಸೆಟ್‌ ಅನ್ನು 21-15ರಿಂದ ವಶಪಡಿಸಿಕೊಂಡ ಬಳಿಕ, ಆತ್ಮವಿಶ್ವಾಸ ಹೆಚ್ಚಿಸಿಕೊಂಡರು.
(3 / 5)
22 ವರ್ಷದ ಆಟಗಾರ ನಿಖರ ಹೊಡೆತಗಳೊಂದಿಗೆ ಎರಡು ಹಾಗೂ ಮೂರನೇ ಸೆಟ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು. ಎರಡನೇ ಸೆಟ್‌ ಅನ್ನು 21-15ರಿಂದ ವಶಪಡಿಸಿಕೊಂಡ ಬಳಿಕ, ಆತ್ಮವಿಶ್ವಾಸ ಹೆಚ್ಚಿಸಿಕೊಂಡರು.
ಕೊನೆಯಲ್ಲಿ 19-21 21-15 21-12 ಅಂತರದಿಂದ ಪಂದ್ಯ ಗೆದ್ದು ಬೀಗಿದರು. ವಿಶ್ವದ 11ನೇ ಶ್ರೇಯಾಂಕದ ಚೌ ವಿರುದ್ಧ, 2021ರ ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತ ಲಕ್ಷ್ಯ ಗೆದ್ದು ಬೀಗಿದರು.
(4 / 5)
ಕೊನೆಯಲ್ಲಿ 19-21 21-15 21-12 ಅಂತರದಿಂದ ಪಂದ್ಯ ಗೆದ್ದು ಬೀಗಿದರು. ವಿಶ್ವದ 11ನೇ ಶ್ರೇಯಾಂಕದ ಚೌ ವಿರುದ್ಧ, 2021ರ ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತ ಲಕ್ಷ್ಯ ಗೆದ್ದು ಬೀಗಿದರು.
ಲಕ್ಷ್ಯ ಅವರ ಸೆಮಿಫೈನಲ್‌ ಪಂದ್ಯವು ಆಗಸ್ಟ್‌ 4ರ ಭಾನುವಾರ ಮಧ್ಯಾಹ್ನ ನಡೆಯಲಿದೆ. ಅವರ ಎದುರಾಳಿ ಯಾರೆಂಬುದು ಇನ್ನಷ್ಟೇ ಖಚಿತವಾಗಬೇಕಿದೆ. ಸೆಮೀಸ್‌ನಲ್ಲಿ ಗೆದ್ದರೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗುತ್ತದೆ. ಒಂದು ವೇಳೆ ಸೋತರೂ ಕಂಚಿನ ಪದಕದ ಪೈಪೋಟಿಯಲ್ಲಿ ಗೆಲ್ಲುವ ಅವಕಾಶವಿದೆ.
(5 / 5)
ಲಕ್ಷ್ಯ ಅವರ ಸೆಮಿಫೈನಲ್‌ ಪಂದ್ಯವು ಆಗಸ್ಟ್‌ 4ರ ಭಾನುವಾರ ಮಧ್ಯಾಹ್ನ ನಡೆಯಲಿದೆ. ಅವರ ಎದುರಾಳಿ ಯಾರೆಂಬುದು ಇನ್ನಷ್ಟೇ ಖಚಿತವಾಗಬೇಕಿದೆ. ಸೆಮೀಸ್‌ನಲ್ಲಿ ಗೆದ್ದರೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗುತ್ತದೆ. ಒಂದು ವೇಳೆ ಸೋತರೂ ಕಂಚಿನ ಪದಕದ ಪೈಪೋಟಿಯಲ್ಲಿ ಗೆಲ್ಲುವ ಅವಕಾಶವಿದೆ.(reuters)

    ಹಂಚಿಕೊಳ್ಳಲು ಲೇಖನಗಳು