logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  What Is Sudden Heart Attack: ಹಠಾತ್ ಹೃದಯಾಘಾತಕ್ಕೇನು ಕಾರಣ? ಡಾಕ್ಟರ್ಸ್‌ ಹೇಳೋದೇನು?

What is Sudden Heart Attack: ಹಠಾತ್ ಹೃದಯಾಘಾತಕ್ಕೇನು ಕಾರಣ? ಡಾಕ್ಟರ್ಸ್‌ ಹೇಳೋದೇನು?

Aug 24, 2022 09:36 AM IST

Causes of sudden heart attack: ಹೃದಯಾಘಾತದ ಸಮಸ್ಯೆ 30 ರಿಂದ 50 ವರ್ಷ ವಯಸ್ಸಿನವರಲ್ಲಿ ಇತ್ತೀಚೆಗೆ ಸಾಮಾನ್ಯವಾಗಿ ಕಂಡುಬರುತ್ತಿದೆ. ಅನೇಕ ಬಾರಿ ಒಂಟಿತನ, ಒತ್ತಡ, ಭಾವನಾತ್ಮಕ ಯಾತನೆ, ಮದ್ಯಪಾನ, ಧೂಮಪಾನ, ಸರಿಯಾದ ವ್ಯಾಯಾಮದ ಕೊರತೆ, ಸರಿಯಾದ ಆಹಾರದ ಕೊರತೆ ಹೃದಯಾಘಾತಕ್ಕೆ ಕಾರಣ ಎನ್ನುತ್ತಾರೆ ವೈದ್ಯಕೀಯ ಪರಿಣತರು.

ಕಳೆದ ಕೆಲವು ವರ್ಷಗಳ ಅವಧಿಯಲ್ಲಿ 50 ವರ್ಷದೊಳಗಿನ ಅನೇಕ ಸೆಲೆಬ್ರಿಟಿಗಳು ಮೃತಪಟ್ಟಿದ್ದಾರೆ. ಗಾಯಕ ಕೆ.ಕೆ ನಂತರ, ಆಗಸ್ಟ್ 23 ರಂದು, ಬಿಜೆಪಿ ನಾಯಕಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋನಾಲಿ ಫೋಗಟ್ ಹೃದಯಾಘಾತದಿಂದ ನಿಧನರಾದರು. ಅದಕ್ಕೂ ಮುನ್ನ ಕರ್ನಾಟಕದಲ್ಲಿ ಹಿರಿಯ ಪತ್ರಕರ್ತ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ಕೂಡ ಹಠಾತ್‌ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು. ಈ ರೀತಿ ರಾಜ್ಯದಲ್ಲಿ ಅನೇಕರಿಗೆ ಆಗಿದೆ. ಈ ರೀತಿ ಹಠಾತ್‌ ಹೃದಯಾಘಾತ ಪ್ರಕರಣಗಳು ಹಲವು ಮಧ್ಯ ವಯಸ್ಕರಲ್ಲಿ ಕಳವಳ ಉಂಟುಮಾಡಿದೆ. ಆದ್ದರಿಂದ ಜಾಗೃತಿ ಮೂಡಿಸುವ ಉದ್ದೇಶದಿಂದ ಹಠಾತ್‌ ಹೃದಯಾಘಾತ ಯಾಕೆ ಸಂಭವಿಸುತ್ತದೆ ಎಂಬುದನ್ನು ವಿವರಿಸಿದ್ದಾರೆ ವೈದ್ಯಕೀಯ ಪರಿಣತರು. 
(1 / 7)
ಕಳೆದ ಕೆಲವು ವರ್ಷಗಳ ಅವಧಿಯಲ್ಲಿ 50 ವರ್ಷದೊಳಗಿನ ಅನೇಕ ಸೆಲೆಬ್ರಿಟಿಗಳು ಮೃತಪಟ್ಟಿದ್ದಾರೆ. ಗಾಯಕ ಕೆ.ಕೆ ನಂತರ, ಆಗಸ್ಟ್ 23 ರಂದು, ಬಿಜೆಪಿ ನಾಯಕಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋನಾಲಿ ಫೋಗಟ್ ಹೃದಯಾಘಾತದಿಂದ ನಿಧನರಾದರು. ಅದಕ್ಕೂ ಮುನ್ನ ಕರ್ನಾಟಕದಲ್ಲಿ ಹಿರಿಯ ಪತ್ರಕರ್ತ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ಕೂಡ ಹಠಾತ್‌ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು. ಈ ರೀತಿ ರಾಜ್ಯದಲ್ಲಿ ಅನೇಕರಿಗೆ ಆಗಿದೆ. ಈ ರೀತಿ ಹಠಾತ್‌ ಹೃದಯಾಘಾತ ಪ್ರಕರಣಗಳು ಹಲವು ಮಧ್ಯ ವಯಸ್ಕರಲ್ಲಿ ಕಳವಳ ಉಂಟುಮಾಡಿದೆ. ಆದ್ದರಿಂದ ಜಾಗೃತಿ ಮೂಡಿಸುವ ಉದ್ದೇಶದಿಂದ ಹಠಾತ್‌ ಹೃದಯಾಘಾತ ಯಾಕೆ ಸಂಭವಿಸುತ್ತದೆ ಎಂಬುದನ್ನು ವಿವರಿಸಿದ್ದಾರೆ ವೈದ್ಯಕೀಯ ಪರಿಣತರು. (HT)
ಹಠಾತ್ ಹೃದಯಾಘಾತಕ್ಕೆ ವಿವಿಧ ಅಂಶಗಳು ಕಾರಣವಾಗಬಹುದು. ಯಾರಿಗಾದರೂ ಮಧುಮೇಹ, ರಕ್ತದೊತ್ತಡ ಇದ್ದರೆ ಅದು ಹೃದಯಾಘಾತದ ಸಮಸ್ಯೆಯನ್ನು ಹೆಚ್ಚಿಸುತ್ತದೆ. 30 ರಿಂದ 50 ವರ್ಷ ವಯಸ್ಸಿನವರಲ್ಲಿ ಹೃದಯಾಘಾತದ ಸಮಸ್ಯೆ ಕಂಡುಬರುತ್ತದೆ. ಅನೇಕ ಬಾರಿ ಒಂಟಿತನ, ಒತ್ತಡ, ಭಾವನಾತ್ಮಕ ಯಾತನೆ, ಮದ್ಯಪಾನ, ಧೂಮಪಾನ, ಸರಿಯಾದ ವ್ಯಾಯಾಮದ ಕೊರತೆ ಮತ್ತು ಸರಿಯಾದ ಆಹಾರದ ಕೊರತೆಯು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಡಾ. ರುಚಿತ್‌ ಶಾ. 
(2 / 7)
ಹಠಾತ್ ಹೃದಯಾಘಾತಕ್ಕೆ ವಿವಿಧ ಅಂಶಗಳು ಕಾರಣವಾಗಬಹುದು. ಯಾರಿಗಾದರೂ ಮಧುಮೇಹ, ರಕ್ತದೊತ್ತಡ ಇದ್ದರೆ ಅದು ಹೃದಯಾಘಾತದ ಸಮಸ್ಯೆಯನ್ನು ಹೆಚ್ಚಿಸುತ್ತದೆ. 30 ರಿಂದ 50 ವರ್ಷ ವಯಸ್ಸಿನವರಲ್ಲಿ ಹೃದಯಾಘಾತದ ಸಮಸ್ಯೆ ಕಂಡುಬರುತ್ತದೆ. ಅನೇಕ ಬಾರಿ ಒಂಟಿತನ, ಒತ್ತಡ, ಭಾವನಾತ್ಮಕ ಯಾತನೆ, ಮದ್ಯಪಾನ, ಧೂಮಪಾನ, ಸರಿಯಾದ ವ್ಯಾಯಾಮದ ಕೊರತೆ ಮತ್ತು ಸರಿಯಾದ ಆಹಾರದ ಕೊರತೆಯು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಡಾ. ರುಚಿತ್‌ ಶಾ. (HT)
ಪಾಶ್ಚಿಮಾತ್ಯ ಜೀವನಶೈಲಿಯನ್ನು ಅಳವಡಿಸಿಕೊಂಡ ಭಾರತೀಯರು ಅನೇಕ ಬಾರಿ ಜೀವನದಲ್ಲಿ ಈ ರೀತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.  ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ಅಭಿಪ್ರಾಯ ಎಂದು ಡಾ.ರವಿ ಗುಪ್ತಾ ಅವರದ್ದು. ಈ ಹಠಾತ್‌ ಹೃದಯಾಘಾತಕ್ಕೆ ಕಾರಣವೇನು ಎಂದು ಗಮನಿಸೋಣ.
(3 / 7)

ಮಧುಮೇಹ - ಯಾರಿಗಾದರೂ ಮಧುಮೇಹ ಇದ್ದರೆ, ಹೃದಯ ಸಮಸ್ಯೆ ಅವರನ್ನು ಕಾಡುವ ಸಾಧ್ಯತೆ 4 ಪಟ್ಟು ಹೆಚ್ಚು. ಅನೇಕ ಮಧುಮೇಹ ರೋಗಿಗಳು ಎದೆ ನೋವು ಅನುಭವಿಸುತ್ತಾರೆ. ಈ ಸಂದರ್ಭದಲ್ಲಿ ಜಾಗರೂಕರಾಗಿರಿ.
(4 / 7)
ಮಧುಮೇಹ - ಯಾರಿಗಾದರೂ ಮಧುಮೇಹ ಇದ್ದರೆ, ಹೃದಯ ಸಮಸ್ಯೆ ಅವರನ್ನು ಕಾಡುವ ಸಾಧ್ಯತೆ 4 ಪಟ್ಟು ಹೆಚ್ಚು. ಅನೇಕ ಮಧುಮೇಹ ರೋಗಿಗಳು ಎದೆ ನೋವು ಅನುಭವಿಸುತ್ತಾರೆ. ಈ ಸಂದರ್ಭದಲ್ಲಿ ಜಾಗರೂಕರಾಗಿರಿ.
ಧೂಮಪಾನ ಮತ್ತು ಮದ್ಯಪಾನ - ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚಿಸಲು ಧೂಮಪಾನ ಮತ್ತು ಮದ್ಯಪಾನಗಳ ಚಟ ಇದ್ದರೆ ಅಷ್ಟೇ ಸಾಕು. ಧೂಮಪಾನ ಮತ್ತು ಮದ್ಯಪಾನವು ದೇಹದ ಅನೇಕ ಅಂಗಗಳಿಗೆ ಹಾನಿ ಉಂಟುಮಾಡುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಜಾಗೃತಿ ಮೂಡಿಸಬೇಕಾದ್ದು ಅವಶ್ಯ ಎನ್ನುತ್ತಾರೆ ಪರಿಣತರು. 
(5 / 7)

ಹೆಚ್ಚುವರಿ ವ್ಯಾಯಾಮ - ಅನೇಕ ಜನರು ಜಿಮ್‌ಗೆ ಹೋಗಿ ಕೊಬ್ಬನ್ನು ಕಡಿಮೆ ಮಾಡಲು ವ್ಯಾಯಾಮ ಮಾಡುತ್ತಾರೆ. ಹೆಚ್ಚಾಗಿ ವರ್ಕ್ ಔಟ್ ಮಾಡುವವರು ತಮ್ಮ ದೇಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುತ್ತಾರೆ.‌ ಆದರೆ ನಿಗದಿತ ಅವಧಿಯ ನಂತರ ಅತಿಯಾದ ವ್ಯಾಯಾಮ ಕೂಡ ದೇಹಕ್ಕೆ ಹಾನಿಕರ ಎನ್ನುತ್ತಾರೆ ಡಾಕ್ಟರ್ಸ್. 
(6 / 7)

ಸ್ಟ್ರೆಸ್‌- ವಿವಿಧ ರೀತಿಯ ಸ್ಟ್ರೆಸ್‌ ಇದ್ದಾಗ, ಅದು ದೇಹದ ಮೇಲೆ ವಿವಿಧ ಪರಿಣಾಮಗಳನ್ನು ಬೀರುತ್ತದೆ. ಪರಿಣಾಮವಾಗಿ, ಹೃದಯದ ತೊಂದರೆಗಳು ಹೆಚ್ಚಾಗುತ್ತವೆ. ಅಲ್ಲದೆ, ಕೋವಿಡ್‌ನಲ್ಲಿ ಹೆಚ್ಚಿದ ಹೃದಯ ಸಮಸ್ಯೆಗಳ ಪ್ರಕರಣಗಳು ಸಹ ಕಂಡುಬಂದಿವೆ ಎಂಬುದನ್ನು ಡಾಕ್ಟರ್ಸ್‌ ಉಲ್ಲೇಖಸುತ್ತಾರೆ. 
(7 / 7)
ಸ್ಟ್ರೆಸ್‌- ವಿವಿಧ ರೀತಿಯ ಸ್ಟ್ರೆಸ್‌ ಇದ್ದಾಗ, ಅದು ದೇಹದ ಮೇಲೆ ವಿವಿಧ ಪರಿಣಾಮಗಳನ್ನು ಬೀರುತ್ತದೆ. ಪರಿಣಾಮವಾಗಿ, ಹೃದಯದ ತೊಂದರೆಗಳು ಹೆಚ್ಚಾಗುತ್ತವೆ. ಅಲ್ಲದೆ, ಕೋವಿಡ್‌ನಲ್ಲಿ ಹೆಚ್ಚಿದ ಹೃದಯ ಸಮಸ್ಯೆಗಳ ಪ್ರಕರಣಗಳು ಸಹ ಕಂಡುಬಂದಿವೆ ಎಂಬುದನ್ನು ಡಾಕ್ಟರ್ಸ್‌ ಉಲ್ಲೇಖಸುತ್ತಾರೆ. (Instagram )

    ಹಂಚಿಕೊಳ್ಳಲು ಲೇಖನಗಳು