logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಳೆಯಿಂದ ಪಂದ್ಯ ರದ್ದು; ಪ್ಲೇಆಫ್​ಗೆ ಲಗ್ಗೆಯಿಟ್ಟ ಎಸ್​ಆರ್​​ಹೆಚ್, ಗುಜರಾತ್​ಗೆ ನಿರಾಸೆ, ಡೆಲ್ಲಿ ಕ್ಯಾಪಿಟಲ್ಸ್ ಹೊರಕ್ಕೆ

ಮಳೆಯಿಂದ ಪಂದ್ಯ ರದ್ದು; ಪ್ಲೇಆಫ್​ಗೆ ಲಗ್ಗೆಯಿಟ್ಟ ಎಸ್​ಆರ್​​ಹೆಚ್, ಗುಜರಾತ್​ಗೆ ನಿರಾಸೆ, ಡೆಲ್ಲಿ ಕ್ಯಾಪಿಟಲ್ಸ್ ಹೊರಕ್ಕೆ

May 16, 2024 11:02 PM IST

Sunrisers Hyderabad qualify: ಸನ್​ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ಮಳೆಯ ಕಾರಣದಿಂದ ರದ್ದುಗೊಂಡಿದೆ. ಇದರೊಂದಿಗೆ ಎಸ್​ಆರ್​​ಹೆಚ್​ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಿತು.

  • Sunrisers Hyderabad qualify: ಸನ್​ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ಮಳೆಯ ಕಾರಣದಿಂದ ರದ್ದುಗೊಂಡಿದೆ. ಇದರೊಂದಿಗೆ ಎಸ್​ಆರ್​​ಹೆಚ್​ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಿತು.
17ನೇ ಆವೃತ್ತಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ 66ನೇ ಪಂದ್ಯವು ಮಳೆಯಿಂದ ರದ್ದುಗೊಂಡಿತು. ಬಿಟ್ಟೂಬಿಡದೆ ಸುರಿದ ಮಳೆಯಿಂದ ಟಾಸ್​ ಪ್ರಕ್ರಿಯೆ ಜರುಗಲಿಲ್ಲ.
(1 / 8)
17ನೇ ಆವೃತ್ತಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ 66ನೇ ಪಂದ್ಯವು ಮಳೆಯಿಂದ ರದ್ದುಗೊಂಡಿತು. ಬಿಟ್ಟೂಬಿಡದೆ ಸುರಿದ ಮಳೆಯಿಂದ ಟಾಸ್​ ಪ್ರಕ್ರಿಯೆ ಜರುಗಲಿಲ್ಲ.(AP)
ಹೈದರಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​​ ಮೈದಾನದಲ್ಲಿ ನಡೆದ ಈ ಪಂದ್ಯವು ಒಂದೂ ಎಸೆತವನ್ನು ಕಾಣದೆ ರದ್ದುಗೊಂಡಿತು. ನಿಲ್ಲದ ಮುನ್ಸೂಚನೆ ಸಿಗದ ಕಾರಣ ಅಂಪೈರ್​ಗಳು ಉಭಯ ತಂಡಗಳ ನಾಯಕರನ್ನು ಪಂದ್ಯ ರದ್ದುಪಡಿಸುವ ಮಾಹಿತಿ ನೀಡಿದರು.
(2 / 8)
ಹೈದರಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​​ ಮೈದಾನದಲ್ಲಿ ನಡೆದ ಈ ಪಂದ್ಯವು ಒಂದೂ ಎಸೆತವನ್ನು ಕಾಣದೆ ರದ್ದುಗೊಂಡಿತು. ನಿಲ್ಲದ ಮುನ್ಸೂಚನೆ ಸಿಗದ ಕಾರಣ ಅಂಪೈರ್​ಗಳು ಉಭಯ ತಂಡಗಳ ನಾಯಕರನ್ನು ಪಂದ್ಯ ರದ್ದುಪಡಿಸುವ ಮಾಹಿತಿ ನೀಡಿದರು.(PTI)
ಪಂದ್ಯ ರದ್ದುಗೊಂಡು ಕಾರಣ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಯಿತು. ಇದರೊಂದಿಗೆ ಸನ್​ರೈಸರ್ಸ್​ ಹೈದರಾಬಾದ್​ ಅಧಿಕೃತವಾಗಿ ಪ್ಲೇಆಫ್​ ಪ್ರವೇಶಿಸಿತು. 
(3 / 8)
ಪಂದ್ಯ ರದ್ದುಗೊಂಡು ಕಾರಣ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಯಿತು. ಇದರೊಂದಿಗೆ ಸನ್​ರೈಸರ್ಸ್​ ಹೈದರಾಬಾದ್​ ಅಧಿಕೃತವಾಗಿ ಪ್ಲೇಆಫ್​ ಪ್ರವೇಶಿಸಿತು. (PTI)
ಎಸ್​ಆರ್​​ಹೆಚ್​​ ತಂಡವು 15 ಅಂಕಗಳೊಂದಿಗೆ ಪ್ಲೇಆಫ್​​ ಪ್ರವೇಶಿಸಿದರೆ, ಗೆಲುವಿನೊಂದಿಗೆ ಅಭಿಯಾನ ಮುಗಿಸುವ ಹುಮ್ಮಸ್ಸಿನಲ್ಲಿದ್ದ ಗುಜರಾತ್​ ಟೈಟಾನ್ಸ್​​ಗೆ ಭಾರಿ ನಿರಾಸೆಯಾಯಿತು.
(4 / 8)
ಎಸ್​ಆರ್​​ಹೆಚ್​​ ತಂಡವು 15 ಅಂಕಗಳೊಂದಿಗೆ ಪ್ಲೇಆಫ್​​ ಪ್ರವೇಶಿಸಿದರೆ, ಗೆಲುವಿನೊಂದಿಗೆ ಅಭಿಯಾನ ಮುಗಿಸುವ ಹುಮ್ಮಸ್ಸಿನಲ್ಲಿದ್ದ ಗುಜರಾತ್​ ಟೈಟಾನ್ಸ್​​ಗೆ ಭಾರಿ ನಿರಾಸೆಯಾಯಿತು.(PTI)
ಮತ್ತೊಂದೆಡೆ ಪ್ಲೇಆಫ್ ಪ್ರವೇಶಿಸಲು ಸಾಸಿವೆ ಕಾಳಷ್ಟು ಕನಸು ಹೊಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಅಧಿಕೃತವಾಗಿ ಹೊರಬಿತ್ತು. ಡೆಲ್ಲಿ 14 ಅಂಕ ಪಡೆದಿದ್ದು, ಮೈನಸ್ ನೆಟ್​ರನ್​ರೇಟ್ ಹೊಂದಿದೆ.
(5 / 8)
ಮತ್ತೊಂದೆಡೆ ಪ್ಲೇಆಫ್ ಪ್ರವೇಶಿಸಲು ಸಾಸಿವೆ ಕಾಳಷ್ಟು ಕನಸು ಹೊಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಅಧಿಕೃತವಾಗಿ ಹೊರಬಿತ್ತು. ಡೆಲ್ಲಿ 14 ಅಂಕ ಪಡೆದಿದ್ದು, ಮೈನಸ್ ನೆಟ್​ರನ್​ರೇಟ್ ಹೊಂದಿದೆ.(PTI)
ಗುಜರಾತ್ ಟೈಟಾನ್ಸ್ ತನ್ನ ಕೊನೆಯ ಪಂದ್ಯ ರದ್ದಾಗಿದ್ದು, ಟೂರ್ನಿಯಲ್ಲಿ ಒಟ್ಟು 12 ಅಂಕಗಳೊಂದಿಗೆ ಮುಗಿಸಿತು. ಲಕ್ನೋ ಸೂಪರ್ ಜೈಂಟ್ಸ್​​ ತಂಡಕ್ಕೂ ಅವಕಾಶ ಇದ್ದರೂ ಪ್ಲೇಆಫ್ ಪ್ರವೇಶ ಬಹುತೇಕ ಅನುಮಾನವಾಗಿದೆ. ಏಕೆಂದರೆ ರನ್​ರೇಟ್ ಮೈಸನ್​ ಇದೆ.
(6 / 8)
ಗುಜರಾತ್ ಟೈಟಾನ್ಸ್ ತನ್ನ ಕೊನೆಯ ಪಂದ್ಯ ರದ್ದಾಗಿದ್ದು, ಟೂರ್ನಿಯಲ್ಲಿ ಒಟ್ಟು 12 ಅಂಕಗಳೊಂದಿಗೆ ಮುಗಿಸಿತು. ಲಕ್ನೋ ಸೂಪರ್ ಜೈಂಟ್ಸ್​​ ತಂಡಕ್ಕೂ ಅವಕಾಶ ಇದ್ದರೂ ಪ್ಲೇಆಫ್ ಪ್ರವೇಶ ಬಹುತೇಕ ಅನುಮಾನವಾಗಿದೆ. ಏಕೆಂದರೆ ರನ್​ರೇಟ್ ಮೈಸನ್​ ಇದೆ.(AP)
ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್​ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಿದ್ದರೆ, ಉಳಿದ ಒಂದು ಸ್ಥಾನಕ್ಕೆ ಆರ್​ಸಿಬಿ ಮತ್ತು ಸಿಎಸ್​​ಕೆ ನಡುವೆ ಪೈಪೋಟಿ ಏರ್ಪಟ್ಟಿದೆ.
(7 / 8)
ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್​ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಿದ್ದರೆ, ಉಳಿದ ಒಂದು ಸ್ಥಾನಕ್ಕೆ ಆರ್​ಸಿಬಿ ಮತ್ತು ಸಿಎಸ್​​ಕೆ ನಡುವೆ ಪೈಪೋಟಿ ಏರ್ಪಟ್ಟಿದೆ.(PTI)
ಆರ್​ಸಿಬಿ ಪ್ಲೇಆಫ್ ಪ್ರವೇಶಿಸಲು 18.1 ಓವರ್​​ಗಳಲ್ಲಿ ಚೇಸ್ ಮಾಡಬೇಕು ಅಥವಾ 18 ರನ್​ಗಳಿಂದ ಗೆದ್ದರಷ್ಟೆ ಪ್ಲೇಆಫ್ ಪ್ರವೇಶಿಸಲು ಸಾಧ್ಯವಾಗುತ್ತದೆ. ಆದರೆ ಸಿಎಸ್​ಕೆ ಗೆದ್ದರೆ ಸಾಕು ಪ್ಲೇಆಫ್​ ಪ್ರವೇಶಿಸಲಿದೆ. ಒಂದು ವೇಳೆ ಆರ್​ಸಿಬಿ 18ಕ್ಕಿಂತ ಕಡಿಮೆ ರನ್​ಗಳಿಂದ ಜಯಿಸಿದರೂ ಸಿಎಸ್​ಕೆ ಪ್ಲೇಆಫ್​ಗೆ ಲಗ್ಗೆ ಇಡಲಿದೆ.
(8 / 8)
ಆರ್​ಸಿಬಿ ಪ್ಲೇಆಫ್ ಪ್ರವೇಶಿಸಲು 18.1 ಓವರ್​​ಗಳಲ್ಲಿ ಚೇಸ್ ಮಾಡಬೇಕು ಅಥವಾ 18 ರನ್​ಗಳಿಂದ ಗೆದ್ದರಷ್ಟೆ ಪ್ಲೇಆಫ್ ಪ್ರವೇಶಿಸಲು ಸಾಧ್ಯವಾಗುತ್ತದೆ. ಆದರೆ ಸಿಎಸ್​ಕೆ ಗೆದ್ದರೆ ಸಾಕು ಪ್ಲೇಆಫ್​ ಪ್ರವೇಶಿಸಲಿದೆ. ಒಂದು ವೇಳೆ ಆರ್​ಸಿಬಿ 18ಕ್ಕಿಂತ ಕಡಿಮೆ ರನ್​ಗಳಿಂದ ಜಯಿಸಿದರೂ ಸಿಎಸ್​ಕೆ ಪ್ಲೇಆಫ್​ಗೆ ಲಗ್ಗೆ ಇಡಲಿದೆ.(PTI)

    ಹಂಚಿಕೊಳ್ಳಲು ಲೇಖನಗಳು