logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tamilnadu Rain Updates: ತಮಿಳುನಾಡಿನಲ್ಲಿ ಫೆಂಗಲ್‌ ಚಂಡಮಾರುತದ ಅಬ್ಬರ, ದಾಖಲೆಯ ಮಳೆ, ಕೆರೆ ಕೋಡಿ ಬಿದ್ದು ಕೊಚ್ಚಿ ಹೋದ ಬಸ್‌ಗಳು

Tamilnadu Rain Updates: ತಮಿಳುನಾಡಿನಲ್ಲಿ ಫೆಂಗಲ್‌ ಚಂಡಮಾರುತದ ಅಬ್ಬರ, ದಾಖಲೆಯ ಮಳೆ, ಕೆರೆ ಕೋಡಿ ಬಿದ್ದು ಕೊಚ್ಚಿ ಹೋದ ಬಸ್‌ಗಳು

Dec 02, 2024 04:50 PM IST

Tamilnadu Rain Updates: ಫೆಂಗಲ್‌ ಚಂಡಮಾರುತದ ಪ್ರಭಾವ ತಮಿಳುನಾಡಿನಲ್ಲಿ ತಗ್ಗಿದರೂ ಇನ್ನೂ ಮಳೆ ಮುಂದುವರಿದಿದೆ. ದಾಖಲೆಯ ಮಳೆ ಬಿದ್ದಿದ್ದರಿಂದ ಏಳೆಂಟು ಜಿಲ್ಲೆಗಳಲ್ಲಿ ಭಾರೀ ಹಾನಿಯಾಗಿದೆ. ಇದರ ಚಿತ್ರನೋಟ ಇಲ್ಲಿದೆ.

  • Tamilnadu Rain Updates: ಫೆಂಗಲ್‌ ಚಂಡಮಾರುತದ ಪ್ರಭಾವ ತಮಿಳುನಾಡಿನಲ್ಲಿ ತಗ್ಗಿದರೂ ಇನ್ನೂ ಮಳೆ ಮುಂದುವರಿದಿದೆ. ದಾಖಲೆಯ ಮಳೆ ಬಿದ್ದಿದ್ದರಿಂದ ಏಳೆಂಟು ಜಿಲ್ಲೆಗಳಲ್ಲಿ ಭಾರೀ ಹಾನಿಯಾಗಿದೆ. ಇದರ ಚಿತ್ರನೋಟ ಇಲ್ಲಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈನಲ್ಲಿ ಐತಿಹಾಸಿಕ ಮಳೆ. ಎಲ್ಲ ಕೆರೆ, ಕೊಳಗಳು ತುಂಬಿ ತುಳುಕುತ್ತಿವೆ.  ಉತ್ತಂಗರೈನಲ್ಲಿ ಭಾರೀ ಕೆರೆ ಕೋಡಿ ಬಿದ್ದು ಬಸ್ ಸ್ಟಾಂಡ್ ನಲ್ಲಿದ್ದ ಬಸ್‌ ಹಾಗೂ ಇತರೆ ವಾಹನ ಕೊಚ್ಚಿ ಹೋಗಿವೆ.  ಸೇಲಂನಿಂದ ತಿರುಪತ್ತೂರ್ ಕಡೆ ಹೋಗುವ ಹೆದ್ದಾರಿಯ ಪ್ರಸ್ತುತ ಪರಿಸ್ಥಿತಿ ಹೀಗಿದೆ.
(1 / 8)
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈನಲ್ಲಿ ಐತಿಹಾಸಿಕ ಮಳೆ. ಎಲ್ಲ ಕೆರೆ, ಕೊಳಗಳು ತುಂಬಿ ತುಳುಕುತ್ತಿವೆ.  ಉತ್ತಂಗರೈನಲ್ಲಿ ಭಾರೀ ಕೆರೆ ಕೋಡಿ ಬಿದ್ದು ಬಸ್ ಸ್ಟಾಂಡ್ ನಲ್ಲಿದ್ದ ಬಸ್‌ ಹಾಗೂ ಇತರೆ ವಾಹನ ಕೊಚ್ಚಿ ಹೋಗಿವೆ.  ಸೇಲಂನಿಂದ ತಿರುಪತ್ತೂರ್ ಕಡೆ ಹೋಗುವ ಹೆದ್ದಾರಿಯ ಪ್ರಸ್ತುತ ಪರಿಸ್ಥಿತಿ ಹೀಗಿದೆ.(pti)
ಎರಡು ದಿನದಿಂದ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಸುರಿದ ಭಾರೀ ಮಳೆಯ ನಂತರ ಪಾಂಡಿಯನ್ ನಗರ ಪ್ರದೇಶವು ಪ್ರವಾಹಕ್ಕೆ ಒಳಗಾದ ನೋಟ ಹೀಗಿದೆ.
(2 / 8)
ಎರಡು ದಿನದಿಂದ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಸುರಿದ ಭಾರೀ ಮಳೆಯ ನಂತರ ಪಾಂಡಿಯನ್ ನಗರ ಪ್ರದೇಶವು ಪ್ರವಾಹಕ್ಕೆ ಒಳಗಾದ ನೋಟ ಹೀಗಿದೆ.(pti)
ಭಾರೀ ಮಳೆಯ ಪರಿಣಾಮವಾಗಿ ಜಲಾವೃತಗೊಂಡ ಕೃಷ್ಣಗಿರಿ-ಕುಪ್ಪಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರು ಸಂಚರಿಸುತ್ತಿರುವ ಸನ್ನಿವೇಶ.
(3 / 8)
ಭಾರೀ ಮಳೆಯ ಪರಿಣಾಮವಾಗಿ ಜಲಾವೃತಗೊಂಡ ಕೃಷ್ಣಗಿರಿ-ಕುಪ್ಪಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರು ಸಂಚರಿಸುತ್ತಿರುವ ಸನ್ನಿವೇಶ.(The Hindu)
ಊಟಿ ನಗರದ ರೈಲ್ವೆ ನಿಲ್ದಾಣದ ರಸ್ತೆ ಭಾರೀ ಮಳೆಯಿಂದ ಜಲಾವೃತಗೊಂಡಿತ್ತು. ಇದೇ ವೇಳೆ ರಸ್ತೆಯಲ್ಲಿ ಹೊರಟಿದ್ದ ಸವಾರ ನೀರಿನ ಸುಳಿಗೆ ಸಿಲುಕಿದ್ದ. ಆತನನ್ನು ರಕ್ಷಿಸಲಾಯಿತು.
(4 / 8)
ಊಟಿ ನಗರದ ರೈಲ್ವೆ ನಿಲ್ದಾಣದ ರಸ್ತೆ ಭಾರೀ ಮಳೆಯಿಂದ ಜಲಾವೃತಗೊಂಡಿತ್ತು. ಇದೇ ವೇಳೆ ರಸ್ತೆಯಲ್ಲಿ ಹೊರಟಿದ್ದ ಸವಾರ ನೀರಿನ ಸುಳಿಗೆ ಸಿಲುಕಿದ್ದ. ಆತನನ್ನು ರಕ್ಷಿಸಲಾಯಿತು.
ಕೃಷ್ಣಗಿರಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಉತ್ತಂಗರೈ ಬಳಿಯ ಪೋಚಂಪಲ್ಲಿ ಪೊಲೀಸ್ ಠಾಣೆ ಜಲಾವೃತಗೊಂಡಿದೆ. ಸೋಮವಾರ ಪೋಚಂಪಳ್ಳಿಯಲ್ಲಿ ದಾಖಲೆಯ 250 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.
(5 / 8)
ಕೃಷ್ಣಗಿರಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಉತ್ತಂಗರೈ ಬಳಿಯ ಪೋಚಂಪಲ್ಲಿ ಪೊಲೀಸ್ ಠಾಣೆ ಜಲಾವೃತಗೊಂಡಿದೆ. ಸೋಮವಾರ ಪೋಚಂಪಳ್ಳಿಯಲ್ಲಿ ದಾಖಲೆಯ 250 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.
ವೆಲ್ಲೂರಿನ ಪಾಲಾರ್ ನದಿಗೆ ಅಡ್ಡಲಾಗಿರುವ ವಿರಿಂಜಿಪುರಂ ಕಾಸ್‌ವೇ ಮೇಲೆ ಸೋಮವಾರ ಪ್ರವಾಹದ ನೀರು ಉಕ್ಕಿ ಹರಿಯುತ್ತಿದೆ. 
(6 / 8)
ವೆಲ್ಲೂರಿನ ಪಾಲಾರ್ ನದಿಗೆ ಅಡ್ಡಲಾಗಿರುವ ವಿರಿಂಜಿಪುರಂ ಕಾಸ್‌ವೇ ಮೇಲೆ ಸೋಮವಾರ ಪ್ರವಾಹದ ನೀರು ಉಕ್ಕಿ ಹರಿಯುತ್ತಿದೆ. 
ಭಾರೀ ಮಳೆಯ ಕಾರಣದಿಂದ ಹಲವಾರು ಹೆದ್ದಾರಿಗಳಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ ವಿಚಕ್ಷಣೆ ಮಾಡಲಾಗುತ್ತಿದೆ.
(7 / 8)
ಭಾರೀ ಮಳೆಯ ಕಾರಣದಿಂದ ಹಲವಾರು ಹೆದ್ದಾರಿಗಳಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ ವಿಚಕ್ಷಣೆ ಮಾಡಲಾಗುತ್ತಿದೆ.
ತಮಿಳುನಾಡಿನ  ತಿರುವಣ್ಣಾಮಲೈ ನಗರದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
(8 / 8)
ತಮಿಳುನಾಡಿನ  ತಿರುವಣ್ಣಾಮಲೈ ನಗರದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

    ಹಂಚಿಕೊಳ್ಳಲು ಲೇಖನಗಳು