logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rishabh Pant: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಟೀಂ ಇಂಡಿಯಾದ ರಿಷಬ್ ಪಂತ್, ಅಕ್ಷರ್ ಪಟೇಲ್

Rishabh Pant: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಟೀಂ ಇಂಡಿಯಾದ ರಿಷಬ್ ಪಂತ್, ಅಕ್ಷರ್ ಪಟೇಲ್

Nov 03, 2023 02:46 PM IST

ಟೀಂ ಇಂಡಿಯಾದ ವಿಕೆಟ್ ಕೀಪರ್ ಕಂ ಬ್ಯಾಟರ್ ರಿಷಬ್ ಪಂತ್ ಮತ್ತು ಅಕ್ಷರ್ ಪಟೇಲ್ ತಿರುಪತಿಗೆ ಭೇಟಿ ನೀಡಿದ್ದು, ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.

ಟೀಂ ಇಂಡಿಯಾದ ವಿಕೆಟ್ ಕೀಪರ್ ಕಂ ಬ್ಯಾಟರ್ ರಿಷಬ್ ಪಂತ್ ಮತ್ತು ಅಕ್ಷರ್ ಪಟೇಲ್ ತಿರುಪತಿಗೆ ಭೇಟಿ ನೀಡಿದ್ದು, ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.
ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಟೀಂ ಇಂಡಿಯಾದ ಬ್ಯಾಟರ್ ರಿಷಬ್ ಪಂತ್ ಇವತ್ತು (ನವೆಂಬರ್ 3, ಶುಕ್ರವಾರ) ತಿರುಪತಿಯ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿದ್ದು, ವೆಂಕಟೇಶ್ವರ ದರ್ಶನ ಪಡೆದಿದ್ದಾರೆ. ರಿಷಬ್ ಪಂತ್ ಜೊತೆಗೆ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರ ಅಕ್ಷರ್ ಪಟೇಲ್ ಕೂಡ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. 
(1 / 5)

ರಿಷಬ್ ಪಂತ್ ಕಳೆದ 2022ರಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಹಲವು ತಿಂಗಳುಗಳಿಂದ ಕ್ರಿಕೆಟ್‌ನಿಂದ ದೂರ ಉಳಿದ್ದಾರೆ. ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅವರು ಸದ್ಯದಲ್ಲಿ ಕ್ರಿಕೆಟ್‌ಗೆ ವಾಪಸ್ ಆಗಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. 
(2 / 5)
ರಿಷಬ್ ಪಂತ್ ಕಳೆದ 2022ರಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಹಲವು ತಿಂಗಳುಗಳಿಂದ ಕ್ರಿಕೆಟ್‌ನಿಂದ ದೂರ ಉಳಿದ್ದಾರೆ. ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅವರು ಸದ್ಯದಲ್ಲಿ ಕ್ರಿಕೆಟ್‌ಗೆ ವಾಪಸ್ ಆಗಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. (PTI)
ವಿಶ್ವಕಪ್‌ಗೆ ಆಯ್ಕೆಯಾಗಿದ್ದ ಅಕ್ಷರ್ ಪಟೇಲ್ ಗಾಯದ ಸಮಸ್ಯೆಯಿಂದ ಕೊನೆಯ ಕ್ಷಣದಲ್ಲಿ ತಂಡದಿದ್ದ ಹಿಂದೆ ಸರಿಯುವಂತಾಯಿತು. ಅಕ್ಷರ್ ಅವರ ಸ್ಥಾನಕ್ಕೆ ಆರ್ ಅಶ್ವಿನ್ ಬಂದರು. ಪ್ರಸ್ತುತ ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
(3 / 5)
ವಿಶ್ವಕಪ್‌ಗೆ ಆಯ್ಕೆಯಾಗಿದ್ದ ಅಕ್ಷರ್ ಪಟೇಲ್ ಗಾಯದ ಸಮಸ್ಯೆಯಿಂದ ಕೊನೆಯ ಕ್ಷಣದಲ್ಲಿ ತಂಡದಿದ್ದ ಹಿಂದೆ ಸರಿಯುವಂತಾಯಿತು. ಅಕ್ಷರ್ ಅವರ ಸ್ಥಾನಕ್ಕೆ ಆರ್ ಅಶ್ವಿನ್ ಬಂದರು. ಪ್ರಸ್ತುತ ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (AP)
ಅಕ್ಷರ್ ಪಟೇಲ್ ಟೀಂ ಇಂಡಿಯಾ ಪರ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 23 ಇನ್ನಿಂಗ್ಸ್‌ಗಳಿಂದ 50 ವಿಕೆಟ್ ಪಡೆದಿದ್ದಾರೆ. 1 ಬಾರಿ 10, 5 ಬಾರಿ 5 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. 54 ಏಕದಿನ ಪಂದ್ಯಗಳನ್ನು ಆಡಿ 59 ವಿಕೆಟ್ ಗಳಿಸಿದ್ದಾರೆ. 45 ಟಿ20 ಪಂದ್ಯಗಳಿಂದ 39 ವಿಕೆಟ್ ಉರುಳಿಸಿದ್ದಾರೆ.
(4 / 5)
ಅಕ್ಷರ್ ಪಟೇಲ್ ಟೀಂ ಇಂಡಿಯಾ ಪರ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 23 ಇನ್ನಿಂಗ್ಸ್‌ಗಳಿಂದ 50 ವಿಕೆಟ್ ಪಡೆದಿದ್ದಾರೆ. 1 ಬಾರಿ 10, 5 ಬಾರಿ 5 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. 54 ಏಕದಿನ ಪಂದ್ಯಗಳನ್ನು ಆಡಿ 59 ವಿಕೆಟ್ ಗಳಿಸಿದ್ದಾರೆ. 45 ಟಿ20 ಪಂದ್ಯಗಳಿಂದ 39 ವಿಕೆಟ್ ಉರುಳಿಸಿದ್ದಾರೆ.(AP)
ರಿಷಬ್ ಪಂತ್ ಟೀಂ ಇಂಡಿಯಾ ಪರ 33 ಟೆಸ್ಟ್ ಪಂದ್ಯಗಳಿಂದ 2,271 ರನ್ ಬಾರಿಸಿದ್ದಾರೆ. ಇದರಲ್ಲಿ 11 ಅರ್ಧ ಶತಕಗಳು ಹಾಗೂ 5 ಶತಕಗಳು ಸೇರಿವೆ. 30 ಏಕದಿನ ಪಂದ್ಯಗಳಿಂದ 865 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ, 5 ಅರ್ಧ ಶತಕಗಳು ಸೇರಿವೆ. 66 ಟಿ20 ಪಂದ್ಯಗಳಿಂದ 987 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧ ಶತಕಗಳಿವೆ.
(5 / 5)

    ಹಂಚಿಕೊಳ್ಳಲು ಲೇಖನಗಳು