logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಸ್ಟ್ರೇಲಿಯಾ ವಿರುದ್ಧ 4ನೇ ಟಿ20 ಪಂದ್ಯ ಗೆದ್ದು ಪಾಕಿಸ್ತಾನ ದಾಖಲೆ ಅಳಿಸಿ ಹಾಕಿದ ಟೀಮ್ ಇಂಡಿಯಾ

ಆಸ್ಟ್ರೇಲಿಯಾ ವಿರುದ್ಧ 4ನೇ ಟಿ20 ಪಂದ್ಯ ಗೆದ್ದು ಪಾಕಿಸ್ತಾನ ದಾಖಲೆ ಅಳಿಸಿ ಹಾಕಿದ ಟೀಮ್ ಇಂಡಿಯಾ

Dec 22, 2023 04:53 PM IST

India vs Australia: 4ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ ಭಾರತ, ವಿಶ್ವದಾಖಲೆಯೊಂದನ್ನು ಬರೆದಿದೆ. ಆ ಮೂಲಕ ಪಾಕಿಸ್ತಾನ ತಂಡವನ್ನು ಹಿಂದಿಕ್ಕಿದೆ.

  • India vs Australia: 4ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ ಭಾರತ, ವಿಶ್ವದಾಖಲೆಯೊಂದನ್ನು ಬರೆದಿದೆ. ಆ ಮೂಲಕ ಪಾಕಿಸ್ತಾನ ತಂಡವನ್ನು ಹಿಂದಿಕ್ಕಿದೆ.
ಆಸ್ಟ್ರೇಲಿಯಾ ಎದುರಿನ 4ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. 20 ರನ್​ಗಳ ಜಯ ದಾಖಲಿಸಿದ ಯಂಗ್ ಇಂಡಿಯಾ, ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ (3-1 ಅಂತರ) ವಶಪಡಿಸಿಕೊಂಡಿದೆ.
(1 / 6)
ಆಸ್ಟ್ರೇಲಿಯಾ ಎದುರಿನ 4ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. 20 ರನ್​ಗಳ ಜಯ ದಾಖಲಿಸಿದ ಯಂಗ್ ಇಂಡಿಯಾ, ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ (3-1 ಅಂತರ) ವಶಪಡಿಸಿಕೊಂಡಿದೆ.(AFP)
ಕಾಂಗರೂ ಪಡೆಯನ್ನು ಮಕಾಡೆ ಮಲಗಿಸಿದ ಮೆನ್ ಇನ್ ಬ್ಲೂ, ವಿಶ್ವ ದಾಖಲೆಯೊಂದನ್ನು ಬರೆದಿದೆ. ಅಲ್ಲದೆ, ಪಾಕಿಸ್ತಾನ ತಂಡದ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದೆ.
(2 / 6)
ಕಾಂಗರೂ ಪಡೆಯನ್ನು ಮಕಾಡೆ ಮಲಗಿಸಿದ ಮೆನ್ ಇನ್ ಬ್ಲೂ, ವಿಶ್ವ ದಾಖಲೆಯೊಂದನ್ನು ಬರೆದಿದೆ. ಅಲ್ಲದೆ, ಪಾಕಿಸ್ತಾನ ತಂಡದ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದೆ.(PTI)
4ನೇ ಟಿ20ಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿತು. ರಿಂಕು ಸಿಂಗ್ 46, ಋತುರಾಜ್ ಗಾಯಕ್ವಾಡ್ 37, ಜಿತೇಶ್ ಶರ್ಮಾ 35 ರನ್ ಸಿಡಿಸಿದರು.
(3 / 6)
4ನೇ ಟಿ20ಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿತು. ರಿಂಕು ಸಿಂಗ್ 46, ಋತುರಾಜ್ ಗಾಯಕ್ವಾಡ್ 37, ಜಿತೇಶ್ ಶರ್ಮಾ 35 ರನ್ ಸಿಡಿಸಿದರು.(BCCI-X)
175 ರನ್​ಗಳ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ, 20 ರನ್​ಗಳಿಂದ ಶರಣಾಯಿತು. 20 ಓವರ್​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 154 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ಅಕ್ಷರ್ ಪಟೇಲ್ 3 ವಿಕೆಟ್ ಪಡೆದು ಮಿಂಚಿದರು.
(4 / 6)
175 ರನ್​ಗಳ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ, 20 ರನ್​ಗಳಿಂದ ಶರಣಾಯಿತು. 20 ಓವರ್​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 154 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ಅಕ್ಷರ್ ಪಟೇಲ್ 3 ವಿಕೆಟ್ ಪಡೆದು ಮಿಂಚಿದರು.(BCCI)
ಭಾರತ ಈ ಗೆಲುವಿನೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಮೊದಲ ತಂಡ ಎನಿಸಿಕೊಂಡಿದೆ. ಪಾಕಿಸ್ತಾನ ತಂಡದ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿ ಮುಂದೆ ಸಾಗಿದೆ.
(5 / 6)
ಭಾರತ ಈ ಗೆಲುವಿನೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಮೊದಲ ತಂಡ ಎನಿಸಿಕೊಂಡಿದೆ. ಪಾಕಿಸ್ತಾನ ತಂಡದ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿ ಮುಂದೆ ಸಾಗಿದೆ.(PTI)
ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡ 136 ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನ ತಂಡವು 135 ಟಿ20 ಪಂದ್ಯಗಳಲ್ಲಿ ಜಯಿಸಿದೆ. ಇದೀಗ ಭಾರತ ಮುಂದೆ ಸಾಗಿದೆ. 102 ಟಿ20 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಗೆದ್ದಿದೆ.
(6 / 6)
ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡ 136 ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನ ತಂಡವು 135 ಟಿ20 ಪಂದ್ಯಗಳಲ್ಲಿ ಜಯಿಸಿದೆ. ಇದೀಗ ಭಾರತ ಮುಂದೆ ಸಾಗಿದೆ. 102 ಟಿ20 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಗೆದ್ದಿದೆ.(AFP)

    ಹಂಚಿಕೊಳ್ಳಲು ಲೇಖನಗಳು