logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಫೋನ್‌ ಎಸ್‌ಇ 4 ಬಿಡುಗಡೆಗೆ ಮುನ್ನವೇ ಈ ಕಡಿಮೆ ದರದ ಆಪಲ್‌ ಫೋನ್‌ ಬಗ್ಗೆ 5 ವಿಚಾರ ತಿಳಿದುಕೊಳ್ಳಿ

ಐಫೋನ್‌ ಎಸ್‌ಇ 4 ಬಿಡುಗಡೆಗೆ ಮುನ್ನವೇ ಈ ಕಡಿಮೆ ದರದ ಆಪಲ್‌ ಫೋನ್‌ ಬಗ್ಗೆ 5 ವಿಚಾರ ತಿಳಿದುಕೊಳ್ಳಿ

Oct 07, 2024 02:46 PM IST

iPhone SE 4: ಮುಂದಿನ ವರ್ಷ ಮಾರ್ಚ್‌ ತಿಂಗಳಲ್ಲಿ ಆಪಲ್‌ ಕಂಪನಿಯ ಮಧ್ಯಮ ಶ್ರೇಣಿಯ ಪ್ರಬಲ ಐಫೋನ್‌ ಆಗಿ ಎಸ್‌ಇ 4 ಬಿಡುಗಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ. ತುಂಬಾ ದುಬಾರಿ ದರ ಕೊಟ್ಟು ಐಫೋನ್‌ ಖರೀದಿಸಲು ಬಯಸದವರಿಗೆ ಇದು ಸೂಕ್ತವಾಗಲಿದೆ. ಇದರ ದರ 50 ಸಾವಿರ ರೂಪಾಯಿಗಿಂತ ಕಡಿಮೆ ಇರುವ ಸೂಚನೆಗಳಿವೆ.

ಮಾರ್ಚ್ 2025ರಲ್ಲಿ ಐಫೋನ್ ಎಸ್ಇ 4 ಬಿಡುಗಡೆಯಾಗುವ ಸೂಚನೆಗಳಿವೆ. ಇದರ ಕುರಿತು ಸಾಕಷ್ಟು ವದಂತಿ ಹರಿದಾಡುತ್ತಿದೆ. ಇದು ಇತ್ತೀಚೆಗೆ ಬಿಡುಗಡೆಯಾದ ಐಫೋನ್‌ 16ರ ವಿನ್ಯಾಸವನ್ನೇ ಅಳವಡಿಸಿಕೊಂಡಿರಬಹುದು. ಫೇಸ್‌ ಐಡಿ ಇರುವ ಒಎಲ್‌ಇಡಿ ಡಿಸ್‌ಪ್ಲೇ, ಹೋಮ್‌ ಬಟನ್‌ ತೆಗೆದುಹಾಕುವ ಆಲ್‌ ಸ್ಕ್ರೀನ್‌ನೋಟವನ್ನು ಹೊಂದಿರುವ ಸೂಚನೆಯಿದೆ. ಇದರಿಂದ ಐಫೋನ್‌ನ ಪರದೆಯು 4.7 ಇಂಚು ಬದಲು  6.06 ಇಂಚಿಗೆ ತಲುಪಿಸಲು ನೆರವಾಗಲಿದೆ ಎನ್ನಲಾಗಿದೆ.
(1 / 5)
ಮಾರ್ಚ್ 2025ರಲ್ಲಿ ಐಫೋನ್ ಎಸ್ಇ 4 ಬಿಡುಗಡೆಯಾಗುವ ಸೂಚನೆಗಳಿವೆ. ಇದರ ಕುರಿತು ಸಾಕಷ್ಟು ವದಂತಿ ಹರಿದಾಡುತ್ತಿದೆ. ಇದು ಇತ್ತೀಚೆಗೆ ಬಿಡುಗಡೆಯಾದ ಐಫೋನ್‌ 16ರ ವಿನ್ಯಾಸವನ್ನೇ ಅಳವಡಿಸಿಕೊಂಡಿರಬಹುದು. ಫೇಸ್‌ ಐಡಿ ಇರುವ ಒಎಲ್‌ಇಡಿ ಡಿಸ್‌ಪ್ಲೇ, ಹೋಮ್‌ ಬಟನ್‌ ತೆಗೆದುಹಾಕುವ ಆಲ್‌ ಸ್ಕ್ರೀನ್‌ನೋಟವನ್ನು ಹೊಂದಿರುವ ಸೂಚನೆಯಿದೆ. ಇದರಿಂದ ಐಫೋನ್‌ನ ಪರದೆಯು 4.7 ಇಂಚು ಬದಲು  6.06 ಇಂಚಿಗೆ ತಲುಪಿಸಲು ನೆರವಾಗಲಿದೆ ಎನ್ನಲಾಗಿದೆ.(X.com/MajinBuOfficial)
ಐಫೋನ್ ಎಸ್ಇ 4  ಎನ್ನುವುದು ಯುಎಸ್‌ಬಿ ಸಿ ಪೋರ್ಟ್‌ ಹೊಂದಿರುವ ಆಪಲ್‌ನ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಆಗಿರಲಿದೆ. ಈಗ ಎಲ್ಲಾ ಐಫೋನ್‌ಗಳಿಗೆ ಯುಎಸ್‌ಬಿ ಸಿ ಚಾರ್ಜಿಂಗ್‌ ಇವೆ. ಐಫೋನ್ ಎಸ್ಇ 4 ಬಿಡುಗಡೆಯ ಬಳಿಕ ಯುಎಸ್‌ಬಿ ಸಿ ಚಾರ್ಜರ್‌ ಹೊಂದಿರುವ ಮೊದಲ ಮತ್ತು ಏಕೈಕ ಮಧ್ಯಮ ಶ್ರೇಣಿಯ ಆಪಲ್‌ ಐಫೋನ್‌ ಇದಾಗಲಿದೆ.
(2 / 5)

ಐಫೋನ್ ಎಸ್ಇ 4 ಆಪಲ್ ಇಂಟೆಲಿಜೆನ್ಸ್  ಹೊಂದಿರುವ ಕಂಪನಿಯ ಕಂಪನಿಯ ಮೊದಲ ಫೋನ್ ಆಗಲಿದೆ. ಕಳೆದ ತಿಂಗಳು ಆಪಲ್ ಗ್ಲೋಟೈಮ್ ಈವೆಂಟ್‌ನಲ್ಲಿ ಬಿಡುಗಡೆಯಾದ ಐಫೋನ್ 16 ಸರಣಿಯೊಂದಿಗೆ ಆಪಲ್ ಇಂಟೆಲಿಜೆನ್ಸ್ ಪಾದಾರ್ಪಣೆ ಮಾಡುವ ನಿರೀಕ್ಷೆಯಿತ್ತು. ಆದರೆ, ಎಐ ಸೂಟ್‌ ವಿಳಂಬವಾಗಿದೆ. ಇದು ಐಒಎಸ್ 18.1ನಲ್ಲಿ ಆಗಮಿಸಲಿದೆ. 
(3 / 5)
ಐಫೋನ್ ಎಸ್ಇ 4 ಆಪಲ್ ಇಂಟೆಲಿಜೆನ್ಸ್  ಹೊಂದಿರುವ ಕಂಪನಿಯ ಕಂಪನಿಯ ಮೊದಲ ಫೋನ್ ಆಗಲಿದೆ. ಕಳೆದ ತಿಂಗಳು ಆಪಲ್ ಗ್ಲೋಟೈಮ್ ಈವೆಂಟ್‌ನಲ್ಲಿ ಬಿಡುಗಡೆಯಾದ ಐಫೋನ್ 16 ಸರಣಿಯೊಂದಿಗೆ ಆಪಲ್ ಇಂಟೆಲಿಜೆನ್ಸ್ ಪಾದಾರ್ಪಣೆ ಮಾಡುವ ನಿರೀಕ್ಷೆಯಿತ್ತು. ಆದರೆ, ಎಐ ಸೂಟ್‌ ವಿಳಂಬವಾಗಿದೆ. ಇದು ಐಒಎಸ್ 18.1ನಲ್ಲಿ ಆಗಮಿಸಲಿದೆ. (Ming-Chi Kuo)
ಆಪಲ್ ಇಂಟೆಲಿಜೆನ್ಸ್ ಕಾರ್ಯನಿರ್ವಹಿಸಲು ಕನಿಷ್ಠ 8 ಜಿಬಿ ರಾಮ್ ಅಗತ್ಯವಿದೆ. ಐಫೋನ್ ಎಸ್ಇ 4 ಆಪಲ್ ಇಂಟೆಲಿಜೆನ್ಸ್ ಪಡೆದರೆ ಅದು 8 ಜಿಬಿ  ರಾಮ್‌ ಕೂಡ ಹೊಂದಿರಲಿದೆ. ಹೊಸ ವಿನ್ಯಾಸ, ಶಕ್ತಿಯುತ ಚಿಪ್‌ ಸೆಟ್‌, ಒಎಲ್ಇಡಿ ಡಿಸ್‌ಪ್ಲೇ, ಸುಧಾರಿತ ಆಪಲ್ ಇಂಟೆಲಿಜೆನ್ಸ್  ಫೀಚರ್‌ಗಳಿಂದ ಐಫೋನ್ ಎಸ್ಇ 4 ಖರೀದಿಗೆ ಉತ್ತಮ ಆಯ್ಕೆಯಾಗಬಲ್ಲದು.
(4 / 5)
ಆಪಲ್ ಇಂಟೆಲಿಜೆನ್ಸ್ ಕಾರ್ಯನಿರ್ವಹಿಸಲು ಕನಿಷ್ಠ 8 ಜಿಬಿ ರಾಮ್ ಅಗತ್ಯವಿದೆ. ಐಫೋನ್ ಎಸ್ಇ 4 ಆಪಲ್ ಇಂಟೆಲಿಜೆನ್ಸ್ ಪಡೆದರೆ ಅದು 8 ಜಿಬಿ  ರಾಮ್‌ ಕೂಡ ಹೊಂದಿರಲಿದೆ. ಹೊಸ ವಿನ್ಯಾಸ, ಶಕ್ತಿಯುತ ಚಿಪ್‌ ಸೆಟ್‌, ಒಎಲ್ಇಡಿ ಡಿಸ್‌ಪ್ಲೇ, ಸುಧಾರಿತ ಆಪಲ್ ಇಂಟೆಲಿಜೆನ್ಸ್  ಫೀಚರ್‌ಗಳಿಂದ ಐಫೋನ್ ಎಸ್ಇ 4 ಖರೀದಿಗೆ ಉತ್ತಮ ಆಯ್ಕೆಯಾಗಬಲ್ಲದು.(AppleTrack)
ಆಪಲ್ ಇಂಟೆಲಿಜೆನ್ಸ್ ಕಾರ್ಯನಿರ್ವಹಿಸಲು ಕನಿಷ್ಠ 8 ಜಿಬಿ ರಾಮ್ ಅಗತ್ಯವಿದೆ. ಐಫೋನ್ ಎಸ್ಇ 4 ಆಪಲ್ ಇಂಟೆಲಿಜೆನ್ಸ್ ಪಡೆದರೆ ಅದು 8 ಜಿಬಿ  ರಾಮ್‌ ಕೂಡ ಹೊಂದಿರಲಿದೆ. ಹೊಸ ವಿನ್ಯಾಸ, ಶಕ್ತಿಯುತ ಚಿಪ್‌ ಸೆಟ್‌, ಒಎಲ್ಇಡಿ ಡಿಸ್‌ಪ್ಲೇ, ಸುಧಾರಿತ ಆಪಲ್ ಇಂಟೆಲಿಜೆನ್ಸ್  ಫೀಚರ್‌ಗಳಿಂದ ಐಫೋನ್ ಎಸ್ಇ 4 ಖರೀದಿಗೆ ಉತ್ತಮ ಆಯ್ಕೆಯಾಗಬಲ್ಲದು.
(5 / 5)
ಆಪಲ್ ಇಂಟೆಲಿಜೆನ್ಸ್ ಕಾರ್ಯನಿರ್ವಹಿಸಲು ಕನಿಷ್ಠ 8 ಜಿಬಿ ರಾಮ್ ಅಗತ್ಯವಿದೆ. ಐಫೋನ್ ಎಸ್ಇ 4 ಆಪಲ್ ಇಂಟೆಲಿಜೆನ್ಸ್ ಪಡೆದರೆ ಅದು 8 ಜಿಬಿ  ರಾಮ್‌ ಕೂಡ ಹೊಂದಿರಲಿದೆ. ಹೊಸ ವಿನ್ಯಾಸ, ಶಕ್ತಿಯುತ ಚಿಪ್‌ ಸೆಟ್‌, ಒಎಲ್ಇಡಿ ಡಿಸ್‌ಪ್ಲೇ, ಸುಧಾರಿತ ಆಪಲ್ ಇಂಟೆಲಿಜೆನ್ಸ್  ಫೀಚರ್‌ಗಳಿಂದ ಐಫೋನ್ ಎಸ್ಇ 4 ಖರೀದಿಗೆ ಉತ್ತಮ ಆಯ್ಕೆಯಾಗಬಲ್ಲದು.(IceUniverse)

    ಹಂಚಿಕೊಳ್ಳಲು ಲೇಖನಗಳು