ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಾಟ್ಸ್‌ಆಪ್‌ ಅಪ್ಡೇಟ್; ಇಂಟರ್‌ನೆಟ್ ಇಲ್ದೇ ವಾಟ್ಸ್‌ಆಪ್‌ನಲ್ಲಿ ಪಕ್ಕದವರ ಜೊತೆಗೆ ಫೈಲ್ ಶೇರ್ ಮಾಡಬಹುದು!

ವಾಟ್ಸ್‌ಆಪ್‌ ಅಪ್ಡೇಟ್; ಇಂಟರ್‌ನೆಟ್ ಇಲ್ದೇ ವಾಟ್ಸ್‌ಆಪ್‌ನಲ್ಲಿ ಪಕ್ಕದವರ ಜೊತೆಗೆ ಫೈಲ್ ಶೇರ್ ಮಾಡಬಹುದು!

Apr 23, 2024 09:12 PM IST

ವಾಟ್ಸ್ಆಪ್‌ ಬಳಕೆದಾರರ ಗಮನಕ್ಕೆ; ಇಂಟರ್‌ನೆಟ್ ಇಲ್ಲದೇ ಇದ್ರೂ ಪಕ್ಕದಲ್ಲಿರುವ ವಾಟ್ಸ್‌ಆಪ್ ಬಳಕೆದಾರರ ಜೊತೆಗೆ ಫೈಲ್ ಶೇರ್ ಮಾಡಬಹುದು. ಇಂಥದ್ದೊಂದು ಹೊಸ ಫೀಚರ್‌ನ ಪರೀಕ್ಷೆ ನಡೆಯುತ್ತಿದ್ದು, ಶೀಘ್ರವೇ ಬಳಕೆಗೆ ಸಿಗಬಹುದು. ವಾಟ್ಸ್‌ಅಪ್ ಅಪ್ಡೇಟ್ ಏನಿದೆ - ಇಲ್ಲಿದೆ ವಿವರ. 

ವಾಟ್ಸ್‌ಆಪ್‌ ತನ್ನ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಮಹತ್ವದ ಅಪ್ಡೇಟ್‌ಗಳೊಂದಿಗೆ ಬಳಕೆದಾರರ ಅನುಕೂಲ ಹೆಚ್ಚಿಸಲು ಸಜ್ಜಾಗಿದೆ. ಇಂತಹ ಸಂಭಾವ್ಯ ಹೊಸ ಫೀಚರ್‌ಗಳ ಪೈಕಿ ಇಂಟರ್‌ನೆಟ್ ಸಂಪರ್ಕ ಇಲ್ಲದೇ ಇದ್ದರೂ, ಸ್ಥಳೀಯ ನೆಟ್‌ವರ್ಕ್‌ ಬಳಸಿಕೊಂಡು ಫೈಲ್ ಶೇರ್ ಮಾಡಲು ವಾಟ್ಸ್‌ಆಪ್ ಅನುವು ಮಾಡಿಕೊಡಲಿದೆ ಎಂಬುದು ಗಮನಸೆಳಯುವ ಅಂಶ. 
(1 / 7)
ವಾಟ್ಸ್‌ಆಪ್‌ ತನ್ನ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಮಹತ್ವದ ಅಪ್ಡೇಟ್‌ಗಳೊಂದಿಗೆ ಬಳಕೆದಾರರ ಅನುಕೂಲ ಹೆಚ್ಚಿಸಲು ಸಜ್ಜಾಗಿದೆ. ಇಂತಹ ಸಂಭಾವ್ಯ ಹೊಸ ಫೀಚರ್‌ಗಳ ಪೈಕಿ ಇಂಟರ್‌ನೆಟ್ ಸಂಪರ್ಕ ಇಲ್ಲದೇ ಇದ್ದರೂ, ಸ್ಥಳೀಯ ನೆಟ್‌ವರ್ಕ್‌ ಬಳಸಿಕೊಂಡು ಫೈಲ್ ಶೇರ್ ಮಾಡಲು ವಾಟ್ಸ್‌ಆಪ್ ಅನುವು ಮಾಡಿಕೊಡಲಿದೆ ಎಂಬುದು ಗಮನಸೆಳಯುವ ಅಂಶ. (Pixels)
ಸ್ಥಳೀಯ ನೆಟ್‌ವರ್ಕ್ ಮೂಲಕ ಫೈಲ್‌ಗಳನ್ನು ಹಂಚಿಕೊಳ್ಳುವ ಸಾಮರ್ಥ್ಯವನ್ನು ಹಿಂದೆ ಉಲ್ಲೇಖಿಸಲಾಗಿತ್ತು. ಅಪ್ಲಿಕೇಶನ್‌ ಇನ್‌ಸ್ಟಾಲ್ ಮಾಡುವಾಗ ಕಂಡುಬಂದ ಸ್ಕ್ರೀನ್‌ನ ಹೊಸ ಸ್ಕ್ರೀನ್‌ಶಾಟ್‌ಗಳು ಈ ಫೀಚರ್‌ಗಳನ್ನು ಸಕ್ರಿಯಗೊಳಿಸಲು ಅಗತ್ಯವಿರುವ ನಿರ್ದಿಷ್ಟ ಅನುಮತಿಗಳ ಮೇಲೆ ಬೆಳಕು ಚೆಲ್ಲಿವೆ. 
(2 / 7)

ಈ ಸ್ಕ್ರೀನ್ ಶಾಟ್‌ಗಳು ವಾಟ್ಸ್‌ಆಪ್‌ನ ಆಂಡ್ರಾಯ್ಡ್ ಬೇಟಾ ವರ್ಷನ್‌ 2.24.9.22 ರಲ್ಲಿ ಇದ್ದು, ಸೆಲ್ಯುಲಾರ್ ಡೇಟಾ ಅಥವಾ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲದೇ ಹತ್ತಿರದಲ್ಲಿರುವ ವಾಟ್ಸ್‌ಆಪ್‌ ಬಳಕೆದಾರರೊಂದಿಗೆ ಫೋಟೋಗಳು ಮತ್ತು ಡಾಕ್ಯುಮೆಂಟ್‌ಗಳಂತಹ ವಿವಿಧ ರೀತಿಯ ಫೈಲ್‌ಗಳನ್ನು ಶೇರ್ ಮಾಡುವ ವಿಧಾನದ ಪ್ರಯೋಗ ನಡೆದಿದೆ ಎಂದು ಡಬ್ಲ್ಯುಎಬೇಟಾ ಇನ್ಫೋ ವರದಿ ಹೇಳಿದೆ. 
(3 / 7)

ಸ್ಕ್ರೀನ್‌ಶಾಟ್‌ ಇಮೇಜ್‌ ಗಮನಿಸಿದರೆ,  ಸ್ಥಳೀಯ ನೆಟ್‌ವರ್ಕ್‌ನಲ್ಲಿ ಫೈಲ್ ಹಂಚಿಕೆಯನ್ನು ಸುಲಭಗೊಳಿಸಲು ಹತ್ತಿರದ ಬಳಕೆದಾರರ ಜೊತೆಗೆ ಡಿಸ್ಕವರ್‌ ಅನ್ನು ಬಳಕೆದಾರರು ಆಯ್ಕೆ ಮಾಡಬೇಕಾಗುತ್ತದೆ ಎಂದು ತೋರುತ್ತದೆ.
(4 / 7)

ಮುಖ್ಯವಾಗಿ, ಬಳಕೆದಾರರು ಯಾವುದೇ ಸಮಯದಲ್ಲಿ ಈ ಅನುಮತಿಗಳನ್ನು ಹಿಂತೆಗೆದುಕೊಳ್ಳುವ ಅವಕಾಶ ತಮ್ಮ ಬಳಿಯೇ ಉಳಿಸಿಕೊಳ್ಳುತ್ತಾರೆ. ವಾಟ್ಸ್‌ಆಪ್‌ ಸಂದೇಶಗಳಂತೆಯೇ, ಈ ವಿಧಾನದ ಮೂಲಕ ಫೈಲ್ ಹಂಚಿಕೆಯು ಅಂತ್ಯದಿಂದ ಕೊನೆಯವರೆಗೆ ಎನ್‌ಕ್ರಿಪ್ಟ್ ಆಗಿರುತ್ತದೆ, ಪ್ರಕ್ರಿಯೆಯ ಉದ್ದಕ್ಕೂ ಬಳಕೆದಾರರ ಡೇಟಾದ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.
(5 / 7)

ವಾಟ್ಸ್‌ಆಪ್‌ ತನ್ನ ಬಳಕೆದಾರರು ಅವರ ಕಾಂಟ್ಯಾಕ್ಟ್‌ಗಳಿಗೆ ಟಿಪ್ಪಣಿ (ನೋಟ್‌) ಸೇರಿಸುವ ಫೀಚರ್‌ ಅನ್ನು ಕೂಡ ಪರಿಚಯಿಸಲು ಸಿದ್ಧತೆ ನಡೆಸಿದೆ. ಆಂಡ್ರಾಯ್ಡ್‌ ಬೀಟಾ ಆವೃತ್ತಿ, 2.24.9.17 ರಲ್ಲಿ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಟಿಪ್ಪಣಿಗಳಿಗಾಗಿ ಹೊಸ ಫೀಲ್ಡ್ ಅನ್ನು ಪರಿಚಯಿಸಿತು. ಇದು ವೈಯಕ್ತಿಕ ಉಲ್ಲೇಖಕ್ಕಾಗಿ ತಮ್ಮ ಸಂಪರ್ಕಗಳ ಬಗ್ಗೆ ತಿಳಿದುಕೊಳ್ಳಲು ನೆರವಾಗುವ ಮಾಹಿತಿಯನ್ನು ಸೇರಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.
(6 / 7)

ಈ ಎರಡೂ ಫೀಚರ್‌ಗಳು ಬಳಕೆದಾರರ ಬಳಕೆಗೆ ಯಾವಾಗ ಲಭ್ಯ ಎಂಬ ವಿವರ ಬಹಿರಂಗವಾಗಿಲ್ಲ. ಆದಾಗ್ಯೂ, ಇದು ಪರೀಕ್ಷಾರ್ಥ ಬಳಕೆಯ ವೇಳೆ ಬಳಕೆದಾರರು ನೀಡುವ ಹಿಮ್ಮಾಹಿತಿ ಆಧರಿಸಿ ಅಪ್ಲಿಕೇಶನ್‌ನಲ್ಲಿ ಸೇರ್ಪಡೆಯಾಗಲಿದೆ. 
(7 / 7)

    ಹಂಚಿಕೊಳ್ಳಲು ಲೇಖನಗಳು