logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Oneplus 13 Vs Iqoo 13: ಮುಂಬರುವ 2 ಸ್ಮಾರ್ಟ್‌ಫೋನ್‌ಗಳ 5 ಅಂಶಗಳ ಹೋಲಿಕೆ; ಒನ್‌ಪ್ಲಸ್‌ 13, ಐಕ್ಯೂಒಒ 13 ನಡುವಿನ ತುಲನೆ

OnePlus 13 vs iQOO 13: ಮುಂಬರುವ 2 ಸ್ಮಾರ್ಟ್‌ಫೋನ್‌ಗಳ 5 ಅಂಶಗಳ ಹೋಲಿಕೆ; ಒನ್‌ಪ್ಲಸ್‌ 13, ಐಕ್ಯೂಒಒ 13 ನಡುವಿನ ತುಲನೆ

Nov 25, 2024 06:21 PM IST

OnePlus 13 vs iQOO 13: ಒನ್‌ಪ್ಲಸ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ 13. ಇದು ಹೊಸ ಸ್ನ್ಯಾಪ್‌ಡ್ರ್ಯಾಗನ್‌ 8 ಎಲೈಟ್‌ ತಂತ್ರಜ್ಞಾನದೊಂದಿಗೆ ಆಗಮಿಸಲಿದೆ. ಈ ಕುರಿತು ಹೆಚ್ಚಿನ ವಿವರ ತಿಳಿಯೋಣ.

OnePlus 13 vs iQOO 13: ಒನ್‌ಪ್ಲಸ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ 13. ಇದು ಹೊಸ ಸ್ನ್ಯಾಪ್‌ಡ್ರ್ಯಾಗನ್‌ 8 ಎಲೈಟ್‌ ತಂತ್ರಜ್ಞಾನದೊಂದಿಗೆ ಆಗಮಿಸಲಿದೆ. ಈ ಕುರಿತು ಹೆಚ್ಚಿನ ವಿವರ ತಿಳಿಯೋಣ.
ಒನ್‌ಪ್ಲಸ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ 13. ಇದು ಹೊಸ ಸ್ನ್ಯಾಪ್‌ಡ್ರ್ಯಾಗನ್‌ 8 ಎಲೈಟ್‌ ತಂತ್ರಜ್ಞಾನದೊಂದಿಗೆ ಆಗಮಿಸಲಿದೆ. ಇದೇ ರೀತಿ ಐಕ್ಯೂಒಒದಲ್ಲಿ ಏನಿರಲಿದೆ. ಈ ಎರಡು ಫೋನ್‌ಗಳ ನಡುವೆ ಏನೇನು ವ್ಯತ್ಯಾಸ ಇರಲಿದೆ? 
(1 / 6)
ಒನ್‌ಪ್ಲಸ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ 13. ಇದು ಹೊಸ ಸ್ನ್ಯಾಪ್‌ಡ್ರ್ಯಾಗನ್‌ 8 ಎಲೈಟ್‌ ತಂತ್ರಜ್ಞಾನದೊಂದಿಗೆ ಆಗಮಿಸಲಿದೆ. ಇದೇ ರೀತಿ ಐಕ್ಯೂಒಒದಲ್ಲಿ ಏನಿರಲಿದೆ. ಈ ಎರಡು ಫೋನ್‌ಗಳ ನಡುವೆ ಏನೇನು ವ್ಯತ್ಯಾಸ ಇರಲಿದೆ? 
OnePlus 13 vs iQOO 13: ಈ ಎರಡು ಫೋನ್‌ಗಳ ಪರದೆ ಹೇಗಿರಬಹುದು? ಸಾಕಷ್ಟು ಜನರಿಗೆ ಈ ಕುತೂಹಲ ಇರಬಹುದು. ಒನ್‌ಪ್ಲಸ್‌ 13  ಸ್ಮಾರ್ಟ್‌ಫೋನ್‌ 6.82 ಇಂಚಿನ ಫ್ಲಾಟ್ ಕ್ಯೂಹೆಚ್‌ಡಿ + ಎಲ್ಟಿಪಿಒ ಒಎಲ್ಇಡಿ ಡಿಸ್‌ಪ್ಲೇ ಹೊಂದಿರಲಿದೆ. 120 ಹೆರ್ಟ್ಜ್ ರಿಫ್ರೆಶ್ ರೇಟ್ ಮತ್ತು 4500 ನಿಟ್ಸ್ ಪೀಕ್ ಬ್ರೈಟ್‌ನೆಸ್‌ ಹೊಂದಿರಲಿದೆ ಎಂದು ವದಂತಿಗಳಿವೆ. iQOO 13 ಸ್ಮಾರ್ಟ್‌ಫೋನ್‌ 6.82 ಇಂಚಿನ ಬಿಒಇ ಕ್ಯೂ 10 ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ. ಇದು  144 ಹೆರ್ಟ್ಜ್ ರಿಫ್ರೆಶ್  ಹೊಂದಿರುವ ಸೂಚನೆಯಿದೆ. 
(2 / 6)
OnePlus 13 vs iQOO 13: ಈ ಎರಡು ಫೋನ್‌ಗಳ ಪರದೆ ಹೇಗಿರಬಹುದು? ಸಾಕಷ್ಟು ಜನರಿಗೆ ಈ ಕುತೂಹಲ ಇರಬಹುದು. ಒನ್‌ಪ್ಲಸ್‌ 13  ಸ್ಮಾರ್ಟ್‌ಫೋನ್‌ 6.82 ಇಂಚಿನ ಫ್ಲಾಟ್ ಕ್ಯೂಹೆಚ್‌ಡಿ + ಎಲ್ಟಿಪಿಒ ಒಎಲ್ಇಡಿ ಡಿಸ್‌ಪ್ಲೇ ಹೊಂದಿರಲಿದೆ. 120 ಹೆರ್ಟ್ಜ್ ರಿಫ್ರೆಶ್ ರೇಟ್ ಮತ್ತು 4500 ನಿಟ್ಸ್ ಪೀಕ್ ಬ್ರೈಟ್‌ನೆಸ್‌ ಹೊಂದಿರಲಿದೆ ಎಂದು ವದಂತಿಗಳಿವೆ. iQOO 13 ಸ್ಮಾರ್ಟ್‌ಫೋನ್‌ 6.82 ಇಂಚಿನ ಬಿಒಇ ಕ್ಯೂ 10 ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ. ಇದು  144 ಹೆರ್ಟ್ಜ್ ರಿಫ್ರೆಶ್  ಹೊಂದಿರುವ ಸೂಚನೆಯಿದೆ. (iQOO China)
ಕ್ಯಾಮೆರಾ: ಒನ್‌ಪ್ಲಸ್‌ 13 ಟ್ರಿಪಲ್ ಕ್ಯಾಮೆರಾ ಸೆಟಪ್‌ ಜತೆ ಆಗಮಿಸುವ ನಿರೀಕ್ಷೆಯಿದೆ. ಇದು 50 ಎಂಪಿ ಮುಖ್ಯ ಕ್ಯಾಮೆರಾ, 3 ಎಕ್ಸ್ ಆಪ್ಟಿಕಲ್ ಜೂಮ್‌ನೊಂದಿಗೆ 50 ಎಂಪಿ ಟೆಲಿಫೋಟೋ ಲೆನ್ಸ್ ಮತ್ತು 50 ಎಂಪಿ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಒಳಗೊಂಡಿರಬಹುದು. ಐಕ್ಯೂಒಒ 13: ಇದು ಸೋನಿ ಐಎಂಎಕ್ಸ್ 921 ಸೆನ್ಸಾರ್ ಹೊಂದಿರುವ 50 ಎಂಪಿ ಮುಖ್ಯ ಕ್ಯಾಮೆರಾ, 50 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 3 ಎಕ್ಸ್ ಆಪ್ಟಿಕಲ್ ಜೂಮ್‌ನೊಂದಿಗೆ 50 ಎಂಪಿ ಟೆಲಿಫೋಟೋ ಲೆನ್ಸ್  ಹೊಂದಿರಲಿದೆ. ಮುಂಭಾಗದಲ್ಲಿ ಒನ್‌ಪ್ಲಸ್‌ನಲ್ಲಿ 32 ಎಂಪಿ ಕ್ಯಾಮೆರಾ ಮತ್ತು ಐಕ್ಯೂಒಒನಲ್ಲಿ 50 ಎಂಪಿ ಕ್ಯಾಮೆರಾ ಇರುವ ಸೂಚನೆಯಿದೆ. 
(3 / 6)
ಕ್ಯಾಮೆರಾ: ಒನ್‌ಪ್ಲಸ್‌ 13 ಟ್ರಿಪಲ್ ಕ್ಯಾಮೆರಾ ಸೆಟಪ್‌ ಜತೆ ಆಗಮಿಸುವ ನಿರೀಕ್ಷೆಯಿದೆ. ಇದು 50 ಎಂಪಿ ಮುಖ್ಯ ಕ್ಯಾಮೆರಾ, 3 ಎಕ್ಸ್ ಆಪ್ಟಿಕಲ್ ಜೂಮ್‌ನೊಂದಿಗೆ 50 ಎಂಪಿ ಟೆಲಿಫೋಟೋ ಲೆನ್ಸ್ ಮತ್ತು 50 ಎಂಪಿ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಒಳಗೊಂಡಿರಬಹುದು. ಐಕ್ಯೂಒಒ 13: ಇದು ಸೋನಿ ಐಎಂಎಕ್ಸ್ 921 ಸೆನ್ಸಾರ್ ಹೊಂದಿರುವ 50 ಎಂಪಿ ಮುಖ್ಯ ಕ್ಯಾಮೆರಾ, 50 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 3 ಎಕ್ಸ್ ಆಪ್ಟಿಕಲ್ ಜೂಮ್‌ನೊಂದಿಗೆ 50 ಎಂಪಿ ಟೆಲಿಫೋಟೋ ಲೆನ್ಸ್  ಹೊಂದಿರಲಿದೆ. ಮುಂಭಾಗದಲ್ಲಿ ಒನ್‌ಪ್ಲಸ್‌ನಲ್ಲಿ 32 ಎಂಪಿ ಕ್ಯಾಮೆರಾ ಮತ್ತು ಐಕ್ಯೂಒಒನಲ್ಲಿ 50 ಎಂಪಿ ಕ್ಯಾಮೆರಾ ಇರುವ ಸೂಚನೆಯಿದೆ. (OnePlus )
ಕಾರ್ಯಕ್ಷಮತೆ: ಒನ್‌ಪ್ಲಸ್‌ 13 ಮತ್ತು ಐಕ್ಯೂಒ 13 ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ನ್ಯಾಪ್‌ಡ್ರ್ಯಾನಗ್‌  8 ಎಲೈಟ್ ಎಸ್ಒಸಿ ಇರುವುದು ದೃಢವಾಗಿದೆ. ಇವೆರಡು ಸ್ಮಾರ್ಟ್‌ಫೋನ್‌ಗಳು ಸುಧಾರಿತ ಕಾರ್ಯಕ್ಷಮತೆಗಾಗಿ 16 ಜಿಬಿ LPDDR5X ರ್ಯಾಮ್ ಮತ್ತು 1 ಟಿಬಿ ಯುಎಫ್ಎಸ್ 4.0 ಸ್ಟೋರೇಜ್ ನೀಡಲಿದೆ ಎನ್ನಲಾಗುತ್ತಿದೆ. ಇವೆರಡ ಆಪರೇಟಿಂಗ್‌ ಸಿಸ್ಟಮ್‌ ಯಾವುದು ಇರಲಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಐಕ್ಯೂಒ 13 ಆಂಡ್ರಾಯ್ಡ್ 15 ಆಧರಿತ ಒರಿಜಿನ್ ಒಎಸ್ 5ನಲ್ಲಿ ಮತ್ತು ಒನ್ ಪ್ಲಸ್ 13 ಆಂಡ್ರಾಯ್ಡ್ 15 ಆಧರಿತ ಕಲರ್ ಓಎಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. 
(4 / 6)
ಕಾರ್ಯಕ್ಷಮತೆ: ಒನ್‌ಪ್ಲಸ್‌ 13 ಮತ್ತು ಐಕ್ಯೂಒ 13 ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ನ್ಯಾಪ್‌ಡ್ರ್ಯಾನಗ್‌  8 ಎಲೈಟ್ ಎಸ್ಒಸಿ ಇರುವುದು ದೃಢವಾಗಿದೆ. ಇವೆರಡು ಸ್ಮಾರ್ಟ್‌ಫೋನ್‌ಗಳು ಸುಧಾರಿತ ಕಾರ್ಯಕ್ಷಮತೆಗಾಗಿ 16 ಜಿಬಿ LPDDR5X ರ್ಯಾಮ್ ಮತ್ತು 1 ಟಿಬಿ ಯುಎಫ್ಎಸ್ 4.0 ಸ್ಟೋರೇಜ್ ನೀಡಲಿದೆ ಎನ್ನಲಾಗುತ್ತಿದೆ. ಇವೆರಡ ಆಪರೇಟಿಂಗ್‌ ಸಿಸ್ಟಮ್‌ ಯಾವುದು ಇರಲಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಐಕ್ಯೂಒ 13 ಆಂಡ್ರಾಯ್ಡ್ 15 ಆಧರಿತ ಒರಿಜಿನ್ ಒಎಸ್ 5ನಲ್ಲಿ ಮತ್ತು ಒನ್ ಪ್ಲಸ್ 13 ಆಂಡ್ರಾಯ್ಡ್ 15 ಆಧರಿತ ಕಲರ್ ಓಎಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. (Amazon)
ಬ್ಯಾಟರಿ: ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌ 100 ವ್ಯಾಟ್ ಸೂಪರ್‌ವುಕ್‌ರ್ವೂಕ್ ಫಾಸ್ಟ್ ಚಾರ್ಜಿಂಗ್ ಹೊಂದಿರಲಿದೆ. ಇದು  6000 ಎಂಎಎಚ್ ಬ್ಯಾಟರಿ ಹೊಂದಿರಲಿದೆ ಎಂದು ವದಂತಿಗಳು ಹೇಳಿವೆ. ಐಕ್ಯೂಒ 13 120 ವ್ಯಾಟ್ ಚಾರ್ಜಿಂಗ್ ಬೆಂಬಲದ ಜತೆಗೆ 6150 ಎಂಎಎಚ್ ಬ್ಯಾಟರಿ ಹೊಂದಿರುವ ಸೂಚನೆಗಳಿವೆ. 
(5 / 6)
ಬ್ಯಾಟರಿ: ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌ 100 ವ್ಯಾಟ್ ಸೂಪರ್‌ವುಕ್‌ರ್ವೂಕ್ ಫಾಸ್ಟ್ ಚಾರ್ಜಿಂಗ್ ಹೊಂದಿರಲಿದೆ. ಇದು  6000 ಎಂಎಎಚ್ ಬ್ಯಾಟರಿ ಹೊಂದಿರಲಿದೆ ಎಂದು ವದಂತಿಗಳು ಹೇಳಿವೆ. ಐಕ್ಯೂಒ 13 120 ವ್ಯಾಟ್ ಚಾರ್ಜಿಂಗ್ ಬೆಂಬಲದ ಜತೆಗೆ 6150 ಎಂಎಎಚ್ ಬ್ಯಾಟರಿ ಹೊಂದಿರುವ ಸೂಚನೆಗಳಿವೆ. (OnePlus)
ದರ ಎಷ್ಟಿರಬಹುದು: ಒನ್‌ಪ್ಲಸ್‌ 13 ಬೆಲೆ ಕಳೆದ ವರ್ಷದ ಒನ್‌ಪ್ಲಸ್‌ 12ಗಿಂತ 5,000 ರಿಂದ 10,000 ರೂ.ಗಳಷ್ಟು ದುಬಾರಿಯಾಗಿರುವ ಸೂಚನೆಯಿದೆ. ಅಂದರೆ, ಇದರ ದರ ಸುಮಾರು 70000 ರೂಪಾಯಿ ಇರಬಹುದು. ಐಕ್ಯೂಒಒ 13 ದರ ಸುಮಾರು  55,000 ರೂ. ಆಸುಪಾಸಿನಲ್ಲಿ ಇರಲಿದೆ.  
(6 / 6)
ದರ ಎಷ್ಟಿರಬಹುದು: ಒನ್‌ಪ್ಲಸ್‌ 13 ಬೆಲೆ ಕಳೆದ ವರ್ಷದ ಒನ್‌ಪ್ಲಸ್‌ 12ಗಿಂತ 5,000 ರಿಂದ 10,000 ರೂ.ಗಳಷ್ಟು ದುಬಾರಿಯಾಗಿರುವ ಸೂಚನೆಯಿದೆ. ಅಂದರೆ, ಇದರ ದರ ಸುಮಾರು 70000 ರೂಪಾಯಿ ಇರಬಹುದು. ಐಕ್ಯೂಒಒ 13 ದರ ಸುಮಾರು  55,000 ರೂ. ಆಸುಪಾಸಿನಲ್ಲಿ ಇರಲಿದೆ.  (iQOO)

    ಹಂಚಿಕೊಳ್ಳಲು ಲೇಖನಗಳು