logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nannamma Super Star: ನನ್ನಮ್ಮ ಸೂಪರ್‌ಸ್ಟಾರ್‌ನಲ್ಲಿ ಬೆಳ್ಳುಳ್ಳಿ ಕಬಾಬ್‌, ವಿರಾಟ್‌ ಕೊಹ್ಲಿ; ಕನ್ನಡದ ಖಾನಾಧಿಪತಿಯಾದ ಕೋಳಿಪ್ರಿಯ ದುಷ್ಯಂತ

Nannamma Super Star: ನನ್ನಮ್ಮ ಸೂಪರ್‌ಸ್ಟಾರ್‌ನಲ್ಲಿ ಬೆಳ್ಳುಳ್ಳಿ ಕಬಾಬ್‌, ವಿರಾಟ್‌ ಕೊಹ್ಲಿ; ಕನ್ನಡದ ಖಾನಾಧಿಪತಿಯಾದ ಕೋಳಿಪ್ರಿಯ ದುಷ್ಯಂತ

Feb 19, 2024 01:21 PM IST

Nannamma super star season 3: ಕಲರ್ಸ್‌ ಕನ್ನಡದಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುವ ಸೃಜನ್‌ ಲೋಕೇಶ್‌ ನಡೆಸಿಕೊಡುವ ನನ್ನಮ್ಮ ಸೂಪರ್‌ಸ್ಟಾರ್‌ ರಿಯಾಲಿಟಿ ಶೋ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದೆ. ಭಾನುವಾರದ ಸಂಚಿಕೆಯಲ್ಲಿ ತಾಯಿ ಚೈತ್ರಾ ಮತ್ತು ಮಗ ದುಷ್ಯಂತನ ಪರ್ಫಾಮೆನ್ಸ್‌ ನೋಡಿ ಜನರು ನಕ್ಕುನಕ್ಕು ಸುಸ್ತಾಗಿದ್ದಾರೆ.

  • Nannamma super star season 3: ಕಲರ್ಸ್‌ ಕನ್ನಡದಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುವ ಸೃಜನ್‌ ಲೋಕೇಶ್‌ ನಡೆಸಿಕೊಡುವ ನನ್ನಮ್ಮ ಸೂಪರ್‌ಸ್ಟಾರ್‌ ರಿಯಾಲಿಟಿ ಶೋ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದೆ. ಭಾನುವಾರದ ಸಂಚಿಕೆಯಲ್ಲಿ ತಾಯಿ ಚೈತ್ರಾ ಮತ್ತು ಮಗ ದುಷ್ಯಂತನ ಪರ್ಫಾಮೆನ್ಸ್‌ ನೋಡಿ ಜನರು ನಕ್ಕುನಕ್ಕು ಸುಸ್ತಾಗಿದ್ದಾರೆ.
Nannamma super star season 3:  ನನ್ನಮ್ಮ ಸೂಪರ್‌ ಸ್ಟಾರ್‌ ಸೀಸನ್‌ 3ರಲ್ಲಿ ದುಷ್ಯಂತನನ್ನು ಆರಂಭದಿಂದಲೇ ಕೋಳಿಪ್ರಿಯ ಎಂಬಂತೆ ಬಿಂಬಿಸಲಾಗುತ್ತಿದೆ. ಇದಕ್ಕೆ ತಕ್ಕಂತೆ ನೃತ್ಯ ಮತ್ತು ಟಾಸ್ಕ್‌ ಮೂಲಕ ರಂಜಿಸಲಾಗುತ್ತಿದ್ದು, ಕಿರುತೆರೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. 
(1 / 10)

ಭಾನುವಾರದ ನನ್ನಮ್ಮ ಸೂಪರ್‌ಸ್ಟಾರ್‌ ಸಂಚಿಕೆಯಲ್ಲಿ ಬೆಳ್ಳುಳ್ಳಿ ಕಬಾಬ್‌,  ವಿರಾಟ್‌ ಕೊಹ್ಲಿ ಮುಂತಾದ ಪದಗಳೂ ಬಂದಿವೆ. ಇದೇ ಸಮಯದಲ್ಲಿ ರುಚಿಕರ ಚಿಕನ್‌ ಫುಡ್‌ಗಳೂ ಮೇಜಿನ ಮೇಲಿದ್ದು, ನಾನ್‌ವೆಜ್‌ ಪ್ರಿಯರ ಬಾಯಲ್ಲಿ ನೀರೂರಿಸಿದೆ.
(2 / 10)

ಮೊದಲಿಗೆ ಮಗ ದುಷ್ಯಂತ ಮತ್ತು ಅಮ್ಮ ಚೈತ್ರಾರನ್ನು ಒಳಗೊಂಡ ಡ್ಯಾನ್ಸ್‌ ತಂಡದಿಂದ ಡ್ಯಾನ್ಸ್‌ ಇತ್ತು. ಅಮ್ಮ ಕೋಳಿಯ ವೇಷ ಧರಿಸಿ ಡ್ಯಾನ್ಸ್‌ ಮಾಡಿದ್ದಾರೆ. ಚಿಕನ್‌ ಪ್ರಿಯ ದುಷ್ಯಂತ ಈ ಕೋಳಿಯ ವಿವಿಧ ರೆಸಿಪಿ ನೆನಪಿಸಿದ್ದಾನೆ. ಬೆಳ್ಳುಳ್ಳಿ ಕಬಾಬ್‌ ಹೆಸರನ್ನು ಹೇಳುತ್ತಾನೆ.
(3 / 10)

ಮೊದಲಿಗೆ ದುಷ್ಯಂತ ಹಸಿವಿನಲ್ಲಿರುವುದಾಗಿ ಹೇಳುತ್ತಾನೆ. ಡ್ಯಾನ್ಸ್‌ ತಂಡ ಬಾಳೆಹಣ್ಣು ಕೊಟ್ಟಾಗ ಬಿಸಾಕ್ತನೆ. ಲಾಲಿಪಪ್‌ ಕೊಟ್ಟಾಗ ಚಿಕನ್‌ ಲಾಲಿಪಪ್‌ ಬೇಕು ಅನ್ತಾನೆ. ಲಾಲಿಪಪ್‌ ಮಾಡಲು ಕೋಳಿಬೇಕು ಎನ್ನುತ್ತಾನೆ. ಅಮ್ಮ ಚೈತ್ರಾ ಕೋಳಿ ವೇಷದಲ್ಲಿ ಬರುತ್ತಾರೆ. ಕೊಕ್ಕೊ ಕೋಳಿಯೇ ಹಾಡಿಗೆ ಡ್ಯಾನ್ಸ್‌ ಮಾಡುತ್ತಾರೆ. 
(4 / 10)

ಬಳಿಕ ನಾಟಿಕೋಳಿ ಹಾಡು ಬರುತ್ತದೆ. ಬಾರೇ ನಾಟಿಕೋಳಿಯೇ ಹಾಡಿಗೆ ಡ್ಯಾನ್ಸ್‌ ಮಾಡುತ್ತಾರೆ. ಇದಾದ ಬಳಿಕ "ನಾನಿದನ್ನು ಕಚ್ಚಿಕಚ್ಚಿ ತಿನ್ಲಾ" ಎಂದು ದುಷ್ಯಂತ ಕೇಳುತ್ತಾನೆ. "ಕಚ್ಚಿಕಚ್ಚಿ ತಿನ್ಲ" ಹಾಡು ಬರುತ್ತದೆ. ಕೋಳಿ ಓಡುವಾಗ "ಬಿಡಬಿಡಬೇಡ" ಎಂಬ ಉಪೇಂದ್ರರ ಹಾಡು ಬರುತ್ತದೆ.  ಈ ಕೋಳಿ ಹಿಡಿಯಲು ಇನ್ನೊಂದು ಕೋಳಿ ಬೇಕು ಎಂದು ವಿರಾಟ್‌ ಕೊಹ್ಲಿಯ ಫೋಟೋ ಹಿಡಿದುಕೊಂಡಾಗ ಕೋಳಿ ಹಿಂದಕ್ಕೆ ಬರುತ್ತದೆ.  
(5 / 10)

ಇದಾದ ಬಳಿಕ ಕರುನಾಡ ಕೋಟ್ಯಾಧಿಪತಿಯನ್ನು ನೆನಪಿಸುವಂತೆ ಕನ್ನಡದ ಖಾನಾಧಿಪತಿ ಕ್ವಿಜ್‌ ಶೋ ನಡೆಯುತ್ತದೆ. ಈತನ ಮುಂದೆ ಐದು ಪ್ಲೇಟ್‌ ಇಟ್ಟು ಇವು ಏನಾಗಿರಬಹುದು ಎಂದು ಒಂದೊಂದು ಕಬಾಬ್‌, ಚಿಕನ್‌ ಫ್ರೈ, ಚಿಕನ್‌ ಗ್ರಿಲ್‌ ಇತ್ಯಾದಿಗಳನ್ನು ತೋರಿಸಲಾಗುತ್ತದೆ.
(6 / 10)

ಇಂಗ್ಲಿಷ್‌ನಲ್ಲಿ ತುಂಬಾ ಚಿಲ್ಡ್‌ ಆಗಿರುವ ಅಕ್ಷರ ಯಾವುದು? ಎಂಬ ಪ್ರಶ್ನೆಗೆ ಉತ್ತರಿಸಲು ದುಷ್ಯಂತನಿಗೆ ಆಗುವುದಿಲ್ಲ. ಕೊನೆಗೆ ಬಿ ಎನ್ನುವುದು ಸರಿಯುತ್ತರ, ಏಕೆಂದರೆ ಬಿ ಎನ್ನುವುದು ಎಸಿ ನಡುವೆ ಇದೆ ಎಂದು ತಮಾಷೆಯ ಉತ್ತರ ನೀಡಲಾಗುತ್ತದೆ.
(7 / 10)

ಸೋಮವಾರದಿಂದ ಭಾನುವಾರದವರೆಗೆ ಏಳು ದಿನ? ಭಾನುವಾರದಿಂದ ಸೋಮವಾರವಾಗಲು ಎಷ್ಟು ದಿನ ಇದೆ? ಎಂದು ಚಿಕನ್‌ ಲಾಲಿಪಪ್‌ ಪ್ರಶ್ನೆ ಕೇಳಲಾಗುತ್ತದೆ. ಇದಕ್ಕೆ ಸರಿಯುತ್ತರ ನೀಡುತ್ತಾನೆ ದುಷ್ಯಂತ್‌. 
(8 / 10)

ಇದಾದ ಬಳಿಕ ನಿನ್ನಮ್ಮನಿಗೆ ಅಪ್ಪ ಯಾವುದರಿಂದ ಹೊಡೆಯುತ್ತಾರೆ ಇತ್ಯಾದಿ ಪ್ರಶ್ನೆ ಕೇಳಲಾಗುತ್ತಿದೆ. ಕೊನೆಗೆ ದುಷ್ಯಂತನಿಗೆ ಭರ್ಜರಿ ಬಾಡೂಟ  ದೊರಕುತ್ತದೆ. ದುಷ್ಯಂತ ಮಾತ್ರವಲ್ಲದೆ ಇತರೆ ಸ್ಪರ್ಧಿಗಳೂ ವೀಕ್ಷಕರ ಗಮನ ಸೆಳೆದಿದ್ದಾರೆ. ನನ್ನಮ್ಮ ಸೂಪರ್‌ಸ್ಟಾರ್‌ ಸೀಸನ್‌ 3ಯಲ್ಲಿ ಸುಷ್ಮಾ ರಾವ್‌ ನಿರೂಪಕಿಯಾಗಿದ್ದಾರೆ. ತಾರಾ ಮತ್ತು ಅನುಪ್ರಭಾಕರ್‌ ಜಡ್ಜ್‌ ಆಗಿದ್ದಾರೆ.
(9 / 10)

ಕನ್ನಡದಲ್ಲಿ ಸಿನಿಮಾ ಸುದ್ದಿ, ಸಿನಿಮಾ ವಿಮರ್ಶೆ, ಒಟಿಟಿ ಸಿನಿಮಾ ಮತ್ತು ವೆಬ್‌ ಸರಣಿ, ಕನ್ನಡ ಧಾರಾವಾಹಿ, ರಿಯಾಲಿಟಿ ಶೋಗಳ ಮಾಹಿತಿ ಪಡೆಯಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಪ್ರತಿನಿತ್ಯ ಭೇಟಿ ನೀಡಿ. 
(10 / 10)

    ಹಂಚಿಕೊಳ್ಳಲು ಲೇಖನಗಳು