logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಅಪೇಕ್ಷಾ ಜೈದೇವ್‌ ಮದುವೆ ಶುಭಾರಂಭ; ಮಲ್ಲಿಯ ಹುಡುಕಾಟದಲ್ಲಿ ಭೂಮಿಕಾ, ನಿಮ್ಮ ಅತ್ತೆ ಎರಡು ತಲೆ ಹಾವು ಅಂದ್ರು ಫ್ಯಾನ್ಸ್‌

Amruthadhaare: ಅಪೇಕ್ಷಾ ಜೈದೇವ್‌ ಮದುವೆ ಶುಭಾರಂಭ; ಮಲ್ಲಿಯ ಹುಡುಕಾಟದಲ್ಲಿ ಭೂಮಿಕಾ, ನಿಮ್ಮ ಅತ್ತೆ ಎರಡು ತಲೆ ಹಾವು ಅಂದ್ರು ಫ್ಯಾನ್ಸ್‌

Feb 20, 2024 01:25 PM IST

Amruthadhaare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಇಂದಿನ (ಫೆಬ್ರವರಿ 20) ಎಪಿಸೋಡ್‌ನಲ್ಲಿ ಮಲ್ಲಿ ಇಲ್ಲಿ ಇರಲೇ ಇಲ್ಲ ಎಂದು ಸಾಧಿಸಲು ಶಕುಂತಲಾ ದೇವಿ ಪ್ರಯತ್ನಿಸುತ್ತಾರೆ. ಭೂಮಿಕಾ ಸತ್ಯದ ಹುಡುಕಾಟದಲ್ಲಿದ್ದಾಳೆ. ಇದೇ ಸಮಯದಲ್ಲಿ ಜೈದೇವ್‌-ಅಪೇಕ್ಷಾ ಶುಭವಿವಾಹ ಶುಭಾರಂಭಗೊಂಡಿದೆ.

  • Amruthadhaare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಇಂದಿನ (ಫೆಬ್ರವರಿ 20) ಎಪಿಸೋಡ್‌ನಲ್ಲಿ ಮಲ್ಲಿ ಇಲ್ಲಿ ಇರಲೇ ಇಲ್ಲ ಎಂದು ಸಾಧಿಸಲು ಶಕುಂತಲಾ ದೇವಿ ಪ್ರಯತ್ನಿಸುತ್ತಾರೆ. ಭೂಮಿಕಾ ಸತ್ಯದ ಹುಡುಕಾಟದಲ್ಲಿದ್ದಾಳೆ. ಇದೇ ಸಮಯದಲ್ಲಿ ಜೈದೇವ್‌-ಅಪೇಕ್ಷಾ ಶುಭವಿವಾಹ ಶುಭಾರಂಭಗೊಂಡಿದೆ.
Amruthadhaare Serial Today Episode: ಅಮೃತಧಾರೆ ಸೀರಿಯಲ್‌ನಲ್ಲಿ ಒಂದೆಡೆ ಮದುವೆ ಸಂಭ್ರಮ ಮತ್ತು ಇನ್ನೊಂದೆಡೆ ಜೈದೇವ್‌ನಿಂದ ಅನ್ಯಾಯಕ್ಕೆ ಒಳಗಾದ ಮಲ್ಲಿಯ ಹುಡುಕಾಟ.  ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಇಂದಿನ (ಫೆಬ್ರವರಿ 20) ಎಪಿಸೋಡ್‌ನಲ್ಲಿ ಮಲ್ಲಿ ಇಲ್ಲಿ ಇರಲೇ ಇಲ್ಲ ಎಂದು ಸಾಧಿಸಲು ಶಕುಂತಲಾ ದೇವಿ ಪ್ರಯತ್ನಿಸುತ್ತಾರೆ. ಭೂಮಿಕಾ ಸತ್ಯದ ಹುಡುಕಾಟದಲ್ಲಿದ್ದಾಳೆ. ಇದೇ ಸಮಯದಲ್ಲಿ ಜೈದೇವ್‌-ಅಪೇಕ್ಷಾ ಶುಭವಿವಾಹ ಶುಭಾರಂಭಗೊಂಡಿದೆ.  ಸತ್ಯದ ಹುಡುಕಾಟದಲ್ಲಿರೋ ಭೂಮಿಯ ನಿರ್ಧಾರವೇನು? ಎಂದು ಝೀ ಕನ್ನಡ ಹೊಸ ಪ್ರಮೋ ಬಿಡುಗಡೆ ಮಾಡಿದೆ.
(1 / 9)

ಅಮೃತಧಾರೆ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಏನೇನೂ ಕಥೆ ಇರಲಿದೆ ಎಂದು ಝೀ ಕನ್ನಡದ ಹೊಸ ಪ್ರಮೋದಿಂದ ತಿಳಿದುಬಂದಿದೆ. ಕೆಲಸದಾಳು ತಾತಾನ ಮೊಮ್ಮಗಳು ಮಲ್ಲಿ ಬಸುರಾಗಲು ಜೈದೇವ್‌ ಕಾರಣ ಎಂಬ ಸತ್ಯ ಭೂಮಿಕಾ, ಶಕುಂತಲಾದೇವಿಗೆ ಈಗಾಗಲೇ ಗೊತ್ತಾಗಿದೆ. ಇದೇ ಸಮಯದಲ್ಲಿ ಖತರ್ನಾಕ್‌ ಐಡಿಯಾ ಮಾಡಿರುವ ಶಕುಂತಲಾದೇವಿ ಕೆಲಸಗಾರರ ಕ್ವಾಟ್ರಸ್‌ನಲ್ಲಿ ಮಲ್ಲಿ ಎಂಬ ಯುವತಿಯೇ ಇರಲಿಲ್ಲ ಎಂದು ಸಾಧಿಸಲು ಯತ್ನಿಸುತ್ತಾರೆ. 
(2 / 9)

ಕೆಲಸಗಾರರನ್ನೆಲ್ಲ ಕರೆದು ಇಲ್ಲಿ ಮಲ್ಲಿ ಎಂಬ ಯುವತಿ ಇದ್ದಾಳ ಎಂದು ವಿಚಾರಣೆ ನಡೆಸುತ್ತಾರೆ. ಮೊದಲೇ ಹೇಳಿಕೊಟ್ಟಂತೆ ಎಲ್ಲರೂ ಇರಲಿಲ್ಲ ಎಂದು ಹೇಳುತ್ತಾರೆ. ಆದರೆ, ಒಬ್ಬಳು ಮಾತ್ರ ಮಲ್ಲಿ ಎಂಬ ಯುವತಿ ಇದ್ದಳು ಎಂದು ಹೇಳುವ ಮೂಲಕ ಭೂಮಿಕಾಳ ನೆರವಿಗೆ ಬರುತ್ತಾಳೆ.
(3 / 9)

ಜೈದೇವ್‌ನಿಂದ ಬಸುರಿಯಾದ ಮಲ್ಲಿ ಎಂಬ ಯುವತಿಯೇ ಇಲ್ಲ ಎಂದು ನಂಬಿಸಲು ಯತ್ನಿಸುವ ಮೂಲಕ ಶಕುಂತಲಾ ದೇವಿ ತನ್ನ ಮಗನ ಮದುವೆಗೆ ಇದ್ದ ವಿಘ್ನ ನಿವಾರಿಸಲು ಪ್ರಯತ್ನಿಸುತ್ತಾಳೆ. ಇದೇ ಸಂದರ್ಭದಲ್ಲಿ ಭೂಮಿಕಾ ಸತ್ಯದ ಹುಡುಕಾಟ ನಡೆಸುತ್ತಾಳೆ. 
(4 / 9)

ಇದೇ ಸಮಯದಲ್ಲಿ ಅಪೇಕ್ಷಾ ಮತ್ತು ಜೈದೇವ್‌ ವಿವಾಹದ ಕಾರ್ಯಕ್ರಮಗಳು ಆರಂಭವಾಗಿರುವ ಸೂಚನೆಯು ಅಮೃತಧಾರೆ ಸೀರಿಯಲ್‌ನ ಪ್ರಮೋದಿಂದ ತಿಳಿದುಬಂದಿದೆ. ಅದ್ಧೂರಿ ಕಾರಿನಲ್ಲಿ ಮದುಮಗ ಇಳಿದುಬರುವುದು ಕಾಣಿಸಿದೆ. ಮದುಮಗ ಜೈದೇವ್‌ಗೆ ಆರತಿ ಬೆಳಗುವ ಸಂದರ್ಭದಲ್ಲಿ ಭೂಮಿಕಾಳ ಕಣ್ಣಲ್ಲಿ ರೋಷ, ಅನುಮಾನ ಕಾಣಿಸಿದೆ. 
(5 / 9)

ಅಮೃತಧಾರೆ ಸೀರಿಯಲ್‌ನ ಈ ಸಂಚಿಕೆಯ ಕುರಿತು ಪ್ರೇಕ್ಷಕರೂ ಸಾಕಷ್ಟು ಕುತೂಹಲಗೊಂಡಿರುವುದು ಸೋಷಿಯಲ್‌ ಮೀಡಿಯಾ ಕಾಮೆಂಟ್‌ನಿಂದ ತಿಳಿದುಕೊಳ್ಳಬಹುದು. ಸಾಕಷ್ಟು ಜನರು  ಈ ಸಂಚಿಕೆ ಕುರಿತು ಕಾಮೆಂಟ್‌ ಮಾಡಿದ್ದಾರೆ. 
(6 / 9)

ಒಂದು ಹೆಣ್ಣಿಗೆ ಅನ್ಯಾಯ ಆಗೋಕೆ ಬಿಡೋಲ್ಲ ಇದಕ್ಕೆ ಡುಮ್ಮ ಸರ್ ಭೂಮಿ ಜೊತೆ ಇರಬೇಕು ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಭೂಮಿಕಾ ನಿನ್ನ ಅತ್ತೆ ಎರಡು ತಲೆ ಹಾವು .... ಭೂಮಿಕಾಗೆ ಗೊತ್ತಾಗುವ ಹಾಗೆ ಮಾಡಿ.... ಗುಂಡು ಅಮ್ಮ ನ ಕತೆ ಕೂಡ ಬರಲಿ  ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.  
(7 / 9)

"ಎಲ್ಲರಿಗೂ ಈ ಮೊದಲೇ ಹೇಳುವ ಮೂಲಕ ಮಲ್ಲಿ ಇರಲಿಲ್ಲ ಎಂದು ಹೇಳಿಸಿರ್ತಾರೆ.  ಕೊನೆಗೆ ಒಬ್ಬಳು ಊರಿಂದ ಬಂದು ನಿಜ ಹೇಳಿರ್ತಾಳೆ" ಎಂದು ಒಬ್ಬರು ಮುಂದೇನಾಗಬಹುದು ಎಂದು ಊಹಿಸಿ ಕಾಮೆಂಟ್‌ ಮಾಡಿದ್ದಾರೆ. ಭೂಮಿಯ ಈ ಸತ್ಯದ ಹುಡುಕಾಟದಲ್ಲಿ ಅವಳಿಗೆ ಜಯ ಸಿಗಲಿ. ಸತ್ಯ ಮೇವ ಜಯತೆೇ. ಜೈದೇವ್ ಕರ್ಮ ಯಾರನ್ನು ಸುಮ್ಮನೇ ಬಿಡುವುದಿಲ್ಲ ಕಾಲಾಯ ತಸ್ಮಯೇ ನಮಃ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿರುವುದು ನೋಡಿದರೆ ಅಮೃತಧಾರೆಯ ಇಂದಿನ ಸಂಚಿಕೆಯ ಕುರಿತು ಸಾಕಷ್ಟು ಜನರು ಕುತೂಹಲಗೊಂಡಿರುವಂತೆ ಕಾಣಿಸುತ್ತದೆ. 
(8 / 9)

ಅಮೃತಧಾರೆ, ಬೃಂದಾವನ, ಸೀತಾರಾಮಾ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನ ಪ್ರತಿದಿನದ ಕಥೆಗಳನ್ನು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದೆ. ಪ್ರತಿನಿತ್ಯ ಎಚ್‌ಟಿ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ.
(9 / 9)

    ಹಂಚಿಕೊಳ್ಳಲು ಲೇಖನಗಳು