logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ಯಾರಿಸ್ ಒಲಿಂಪಿಕ್ಸ್ ನಂತರ ಆಂಡಿ ಮರ್ರೆ ನಿವೃತ್ತಿ; ಬ್ರಿಟನ್ ಆಟಗಾರನ ಒಲಿಂಪಿಕ್ಸ್ ದಾಖಲೆಯ ಬಗ್ಗೆ ತಿಳಿಯಿರಿ

ಪ್ಯಾರಿಸ್ ಒಲಿಂಪಿಕ್ಸ್ ನಂತರ ಆಂಡಿ ಮರ್ರೆ ನಿವೃತ್ತಿ; ಬ್ರಿಟನ್ ಆಟಗಾರನ ಒಲಿಂಪಿಕ್ಸ್ ದಾಖಲೆಯ ಬಗ್ಗೆ ತಿಳಿಯಿರಿ

Jul 24, 2024 05:25 PM IST

Andy Murray: ಬ್ರಿಟನ್‌ನ ಆಂಡಿ ಮರ್ರೆ ಅವರು ಪ್ಯಾರಿಸ್ ಒಲಿಂಪಿಕ್ಸ್​ ನಂತರ ಟೆನಿಸ್​​ ಕ್ರೀಡೆಯಿಂದ ನಿವೃತ್ತಿ ಹೊಂದುವುದಾಗಿ ಜುಲೈ 23ರಂದು ಮಂಗಳವಾರ ಪ್ರಕಟಿಸಿದ್ದಾರೆ.

  • Andy Murray: ಬ್ರಿಟನ್‌ನ ಆಂಡಿ ಮರ್ರೆ ಅವರು ಪ್ಯಾರಿಸ್ ಒಲಿಂಪಿಕ್ಸ್​ ನಂತರ ಟೆನಿಸ್​​ ಕ್ರೀಡೆಯಿಂದ ನಿವೃತ್ತಿ ಹೊಂದುವುದಾಗಿ ಜುಲೈ 23ರಂದು ಮಂಗಳವಾರ ಪ್ರಕಟಿಸಿದ್ದಾರೆ.
ಎರಡು ಬಾರಿಯ ಒಲಿಂಪಿಕ್ಸ್​ ಪುರುಷರ ಸಿಂಗಲ್ಸ್ ಚಾಂಪಿಯನ್ ಆಂಡಿ ಮರ್ರೆ ಅವರು ಪ್ಯಾರಿಸ್ ಒಲಿಂಪಿಕ್ಸ್ ನಂತರ ತಮ್ಮ ವೃತ್ತಿಜೀವನ ಕೊನೆಗೊಳಿಸುವುದಾಗಿ ಜುಲೈ 23ರ ಮಂಗಳವಾರ ಖಚಿತಪಡಿಸಿದ್ದಾರೆ. ತಮ್ಮ ವಿದಾಯ ಖಚಿತಪಡಿಸುವ ಮೂಲಕ ಫ್ಯಾನ್ಸ್​ಗೆ ಶಾಕ್ ನೀಡಿದ್ದಾರೆ.
(1 / 6)
ಎರಡು ಬಾರಿಯ ಒಲಿಂಪಿಕ್ಸ್​ ಪುರುಷರ ಸಿಂಗಲ್ಸ್ ಚಾಂಪಿಯನ್ ಆಂಡಿ ಮರ್ರೆ ಅವರು ಪ್ಯಾರಿಸ್ ಒಲಿಂಪಿಕ್ಸ್ ನಂತರ ತಮ್ಮ ವೃತ್ತಿಜೀವನ ಕೊನೆಗೊಳಿಸುವುದಾಗಿ ಜುಲೈ 23ರ ಮಂಗಳವಾರ ಖಚಿತಪಡಿಸಿದ್ದಾರೆ. ತಮ್ಮ ವಿದಾಯ ಖಚಿತಪಡಿಸುವ ಮೂಲಕ ಫ್ಯಾನ್ಸ್​ಗೆ ಶಾಕ್ ನೀಡಿದ್ದಾರೆ.
'ನನ್ನ ಕೊನೆಯ ಟೆನಿಸ್ ಪಂದ್ಯಾವಳಿಗಾಗಿ ಪ್ಯಾರಿಸ್‌ಗೆ ಆಗಮಿಸಿದ್ದೇನೆ' ಎಂದು 37 ವರ್ಷದ ಮರ್ರೆ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜುಲೈ 27ರಿಂದ ರೋಲ್ಯಾಂಡ್ ಗ್ಯಾರೋಸ್‌ನ ಕ್ಲೇ ಕೋರ್ಟ್‌ನಲ್ಲಿ ಟೆನಿಸ್ ಪಂದ್ಯಗಳು ಪ್ರಾರಂಭವಾಗಲಿವೆ.
(2 / 6)
'ನನ್ನ ಕೊನೆಯ ಟೆನಿಸ್ ಪಂದ್ಯಾವಳಿಗಾಗಿ ಪ್ಯಾರಿಸ್‌ಗೆ ಆಗಮಿಸಿದ್ದೇನೆ' ಎಂದು 37 ವರ್ಷದ ಮರ್ರೆ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜುಲೈ 27ರಿಂದ ರೋಲ್ಯಾಂಡ್ ಗ್ಯಾರೋಸ್‌ನ ಕ್ಲೇ ಕೋರ್ಟ್‌ನಲ್ಲಿ ಟೆನಿಸ್ ಪಂದ್ಯಗಳು ಪ್ರಾರಂಭವಾಗಲಿವೆ.(REUTERS)
ಆಂಡಿ ಮರ್ರೆ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ಗೆದಿದ್ದರು. ರೋಜರ್ ಫೆಡರರ್ ಅವರನ್ನು ಮೂರು ನೇರ ಸೆಟ್​ಗಳಿಂದ ಸೋಲಿಸಿದ್ದರು. 
(3 / 6)
ಆಂಡಿ ಮರ್ರೆ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ಗೆದಿದ್ದರು. ರೋಜರ್ ಫೆಡರರ್ ಅವರನ್ನು ಮೂರು ನೇರ ಸೆಟ್​ಗಳಿಂದ ಸೋಲಿಸಿದ್ದರು. (REUTERS)
2016ರಲ್ಲಿ ರಿಯೊ ಡಿ ಜನೈರೊದಲ್ಲಿ ತನ್ನ ಪ್ರಶಸ್ತಿ ಉಳಿಸಿಕೊಂಡರು. ಫೈನಲ್​​ನಲ್ಲಿ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರನ್ನು ಸೋಲಿಸಿ ಸತತ ಎರಡನೇ ಚಿನ್ನ ಗೆದ್ದಿದ್ದರು.
(4 / 6)
2016ರಲ್ಲಿ ರಿಯೊ ಡಿ ಜನೈರೊದಲ್ಲಿ ತನ್ನ ಪ್ರಶಸ್ತಿ ಉಳಿಸಿಕೊಂಡರು. ಫೈನಲ್​​ನಲ್ಲಿ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರನ್ನು ಸೋಲಿಸಿ ಸತತ ಎರಡನೇ ಚಿನ್ನ ಗೆದ್ದಿದ್ದರು.(REUTERS)
ಒಲಿಂಪಿಕ್ಸ್​ನಲ್ಲಿ ಬ್ರಿಟನ್​​ಗಾಗಿ ಸ್ಪರ್ಧಿಸುವುದು ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ಕೊನೆಯ ಬಾರಿಗೆ ದೇಶವನ್ನು ಪ್ರತಿನಿಧಿಸಲು ಹೆಮ್ಮೆಪಡುತ್ತೇನೆ ಎಂದಿದ್ದಾರೆ.
(5 / 6)
ಒಲಿಂಪಿಕ್ಸ್​ನಲ್ಲಿ ಬ್ರಿಟನ್​​ಗಾಗಿ ಸ್ಪರ್ಧಿಸುವುದು ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ಕೊನೆಯ ಬಾರಿಗೆ ದೇಶವನ್ನು ಪ್ರತಿನಿಧಿಸಲು ಹೆಮ್ಮೆಪಡುತ್ತೇನೆ ಎಂದಿದ್ದಾರೆ.(REUTERS)
2019ರಲ್ಲಿ ಸೊಂಟದ ಶಸ್ತ್ರಚಿಕಿತ್ಸೆ ಮತ್ತು ನಂತರ ಹಲವು ಗಾಯಗಳ ಸಮಸ್ಯೆಗೆ ಸಿಲುಕಿದರು. ಅವರು ಈ ತಿಂಗಳು ನಡೆದ ವಿಂಬಲ್ಡನ್‌ನಲ್ಲಿ ಸಿಂಗಲ್ಸ್‌ ವಿಭಾಗದಿಂದ ಹಿಂದೆ ಸರಿದರು.
(6 / 6)
2019ರಲ್ಲಿ ಸೊಂಟದ ಶಸ್ತ್ರಚಿಕಿತ್ಸೆ ಮತ್ತು ನಂತರ ಹಲವು ಗಾಯಗಳ ಸಮಸ್ಯೆಗೆ ಸಿಲುಕಿದರು. ಅವರು ಈ ತಿಂಗಳು ನಡೆದ ವಿಂಬಲ್ಡನ್‌ನಲ್ಲಿ ಸಿಂಗಲ್ಸ್‌ ವಿಭಾಗದಿಂದ ಹಿಂದೆ ಸರಿದರು.(AFP)

    ಹಂಚಿಕೊಳ್ಳಲು ಲೇಖನಗಳು