logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Keerthy Suresh: ನೀಲಿ ಬಣ್ಣದ ಬ್ಲೇಜರ್‌ ಡ್ರೆಸ್‌ನಲ್ಲಿ ಮಹಾನಟಿ ಕೀರ್ತಿ ಸೌಂದರ್ಯ ಅನಾವರಣ; ಡ್ರೆಸ್‌ ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರಾ

Keerthy Suresh: ನೀಲಿ ಬಣ್ಣದ ಬ್ಲೇಜರ್‌ ಡ್ರೆಸ್‌ನಲ್ಲಿ ಮಹಾನಟಿ ಕೀರ್ತಿ ಸೌಂದರ್ಯ ಅನಾವರಣ; ಡ್ರೆಸ್‌ ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರಾ

Jan 09, 2024 07:32 PM IST

ಮುದ್ದು ಮುಖ, ಅರಳು ಕಂಗಳು, ತೊಂಡೆ ಹಣ್ಣಿನಂಥ ತುಟಿ, ದಾಳಿಂಬೆ ಕಾಳಿನಂತಹ ಹಲ್ಲುಗಳು ಈ ವರ್ಣನೆ ಮಹಾನಟಿ ಕೀರ್ತಿ ಸುರೇಶ್‌ಗೆ ಅತಿಯೋಶಕ್ತಿಯಲ್ಲ. ಸದಾ ಸ್ಟೈಲಿಶ್‌ ಉಡುಪುಗಳ ಮೂಲಕ ಗಮನ ಸೆಳೆಯುವ ಈ ಬೆಡಗಿ ಇದೀಗ ಆಕಾಶನೀಲಿ ಬಣ್ಣದ ಬ್ಲೇಜರ್‌ ಡ್ರೆಸ್‌ನಲ್ಲಿ ಮಿಂಚಿದ್ದಾರೆ.

ಮುದ್ದು ಮುಖ, ಅರಳು ಕಂಗಳು, ತೊಂಡೆ ಹಣ್ಣಿನಂಥ ತುಟಿ, ದಾಳಿಂಬೆ ಕಾಳಿನಂತಹ ಹಲ್ಲುಗಳು ಈ ವರ್ಣನೆ ಮಹಾನಟಿ ಕೀರ್ತಿ ಸುರೇಶ್‌ಗೆ ಅತಿಯೋಶಕ್ತಿಯಲ್ಲ. ಸದಾ ಸ್ಟೈಲಿಶ್‌ ಉಡುಪುಗಳ ಮೂಲಕ ಗಮನ ಸೆಳೆಯುವ ಈ ಬೆಡಗಿ ಇದೀಗ ಆಕಾಶನೀಲಿ ಬಣ್ಣದ ಬ್ಲೇಜರ್‌ ಡ್ರೆಸ್‌ನಲ್ಲಿ ಮಿಂಚಿದ್ದಾರೆ.
ಕಳೆದ ಶನಿವಾರ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್‌ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೊಸ ಫೋಟೊಗಳ ಗುಚ್ಛವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದ್ದರು. ನೀಲಿ ಬಣ್ಣದ ಹಾರ್ಟ್‌ ಇಮೋಜಿಯೊಂದಿಗೆ ಫೋಟೊಗಳನ್ನು ಹಂಚಿಕೊಂಡಿದ್ದರು. 
(1 / 7)
ಕಳೆದ ಶನಿವಾರ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್‌ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೊಸ ಫೋಟೊಗಳ ಗುಚ್ಛವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದ್ದರು. ನೀಲಿ ಬಣ್ಣದ ಹಾರ್ಟ್‌ ಇಮೋಜಿಯೊಂದಿಗೆ ಫೋಟೊಗಳನ್ನು ಹಂಚಿಕೊಂಡಿದ್ದರು. (Instagram/@keerthysureshofficial)
ಮಿಶ್ರು ಬ್ರಾಂಡ್‌ನ ಆಕಾಶ ನೀಲಿ ಬಣ್ಣದ ಬ್ಲೇಜರ್‌ ಡ್ರೆಸ್‌ ಧರಿಸಿದ್ದ ಕೀರ್ತಿಯ ಅಂದ ಇನ್ನಷ್ಟು ಅರಳಿತ್ತು. ಈ ಡ್ರೆಸ್‌ನ ಬೆಲೆ ಕೇಳಿದ್ರೆ ನೀವು ಮೂಗಿನ ಮೇಲೆ ಬೆರಳಿರಿಸುವುದು ಖಂಡಿತ. ಅಂದ ಹಾಗೆ ಈ ಡ್ರೆಸ್‌ನ ಬೆಲೆ 78,700 ರೂ.  
(2 / 7)
ಮಿಶ್ರು ಬ್ರಾಂಡ್‌ನ ಆಕಾಶ ನೀಲಿ ಬಣ್ಣದ ಬ್ಲೇಜರ್‌ ಡ್ರೆಸ್‌ ಧರಿಸಿದ್ದ ಕೀರ್ತಿಯ ಅಂದ ಇನ್ನಷ್ಟು ಅರಳಿತ್ತು. ಈ ಡ್ರೆಸ್‌ನ ಬೆಲೆ ಕೇಳಿದ್ರೆ ನೀವು ಮೂಗಿನ ಮೇಲೆ ಬೆರಳಿರಿಸುವುದು ಖಂಡಿತ. ಅಂದ ಹಾಗೆ ಈ ಡ್ರೆಸ್‌ನ ಬೆಲೆ 78,700 ರೂ.  (Instagram/@keerthysureshofficial)
ಸಾಂಪ್ರದಾಯಿಕ, ಪಾಶ್ಚಾತ್ಯ ಯಾವುದೇ ರೀತಿ ಉಡುಪಿನಲ್ಲೂ ಕೀರ್ತಿಯ ಸೌಂದರ್ಯ ಇಮ್ಮಡಿಯಾಗುವುದರಲ್ಲಿ ಎರಡು ಮಾತಿಲ್ಲ. ಸೀರೆ, ಜೀನ್ಸ್‌, ಸೂಟ್‌ ಎಲ್ಲದರಲ್ಲೂ ಆಕೆಯ ಅಂದ ದ್ವಿಗುಣಗೊಳ್ಳುತ್ತದೆ. ನಗುವಿನಲ್ಲೇ ಕೊಲ್ಲುವ ಈ ಬೆಡಗಿಗೆ ಈ ನೀಲಿ ಬಣ್ಣದ ಡ್ರೆಸ್‌ ಇನ್ನಷ್ಟು ಮುದ್ದಾಗಿ ಕಾಣುತ್ತಿತ್ತು. 
(3 / 7)
ಸಾಂಪ್ರದಾಯಿಕ, ಪಾಶ್ಚಾತ್ಯ ಯಾವುದೇ ರೀತಿ ಉಡುಪಿನಲ್ಲೂ ಕೀರ್ತಿಯ ಸೌಂದರ್ಯ ಇಮ್ಮಡಿಯಾಗುವುದರಲ್ಲಿ ಎರಡು ಮಾತಿಲ್ಲ. ಸೀರೆ, ಜೀನ್ಸ್‌, ಸೂಟ್‌ ಎಲ್ಲದರಲ್ಲೂ ಆಕೆಯ ಅಂದ ದ್ವಿಗುಣಗೊಳ್ಳುತ್ತದೆ. ನಗುವಿನಲ್ಲೇ ಕೊಲ್ಲುವ ಈ ಬೆಡಗಿಗೆ ಈ ನೀಲಿ ಬಣ್ಣದ ಡ್ರೆಸ್‌ ಇನ್ನಷ್ಟು ಮುದ್ದಾಗಿ ಕಾಣುತ್ತಿತ್ತು. (Instagram/@keerthysureshofficial)
ಅರ್ಗಾಂಝಾ ಬಟ್ಟೆಯಲ್ಲಿ ವಿನ್ಯಾಸಗೊಳಿಸಲಾದ ಈ ಉಡುಪಿಗೆ ಲ್ಯಾಪಲ್‌ ಕಾಲರ್‌ ಅಳವಡಿಸಲಾಗಿದೆ. ಡ್ರೆಸ್‌ನ ಮೇಲೆ ಅಲ್ಲಲ್ಲಿ ಹೂವಿನ ಚಿತ್ತಾರವಿದೆ. ಆಕ್ಕೆ ಈ ಬ್ಲೇಜರ್‌ಗೆ ಹೊಂದಿಕೆಯಾಗುವ ಚಾಂದೇರಿ ಟಾಪ್‌, ಪ್ಯಾಂಟ್‌ ಧರಿಸಿದ್ದರು. 
(4 / 7)
ಅರ್ಗಾಂಝಾ ಬಟ್ಟೆಯಲ್ಲಿ ವಿನ್ಯಾಸಗೊಳಿಸಲಾದ ಈ ಉಡುಪಿಗೆ ಲ್ಯಾಪಲ್‌ ಕಾಲರ್‌ ಅಳವಡಿಸಲಾಗಿದೆ. ಡ್ರೆಸ್‌ನ ಮೇಲೆ ಅಲ್ಲಲ್ಲಿ ಹೂವಿನ ಚಿತ್ತಾರವಿದೆ. ಆಕ್ಕೆ ಈ ಬ್ಲೇಜರ್‌ಗೆ ಹೊಂದಿಕೆಯಾಗುವ ಚಾಂದೇರಿ ಟಾಪ್‌, ಪ್ಯಾಂಟ್‌ ಧರಿಸಿದ್ದರು. (Instagram/@keerthysureshofficial)
ಸೆಲೆಬ್ರಿಟಿ ಫ್ಯಾಶನ್ ಸ್ಟೈಲಿಸ್ಟ್ ರಶ್ಮಿ ಅಂಗಾರ ವಶಿಷ್ಟ್ ಅವರು ಕೀರ್ತಿಯ ಈ ಲುಕ್‌ಗೆ ಸಹಾಯ ಮಾಡಿದ್ದರು. ಸಿಲ್ವರ್‌ ಸ್ಟಡ್‌ನ ಕಿವಿಯೋಲೆ, ಅದೇ ರೀತಿಯ ಬ್ರಾಸ್ಲೈಟ್‌ ಧರಿಸಿ ಸರಳ ಮೇಕಪ್‌ ಮಾಡಿಕೊಂಡಿದ್ದಾರೆ ಕೀರ್ತಿ. 
(5 / 7)
ಸೆಲೆಬ್ರಿಟಿ ಫ್ಯಾಶನ್ ಸ್ಟೈಲಿಸ್ಟ್ ರಶ್ಮಿ ಅಂಗಾರ ವಶಿಷ್ಟ್ ಅವರು ಕೀರ್ತಿಯ ಈ ಲುಕ್‌ಗೆ ಸಹಾಯ ಮಾಡಿದ್ದರು. ಸಿಲ್ವರ್‌ ಸ್ಟಡ್‌ನ ಕಿವಿಯೋಲೆ, ಅದೇ ರೀತಿಯ ಬ್ರಾಸ್ಲೈಟ್‌ ಧರಿಸಿ ಸರಳ ಮೇಕಪ್‌ ಮಾಡಿಕೊಂಡಿದ್ದಾರೆ ಕೀರ್ತಿ. (Instagram/@keerthysureshofficial)
ಮೇಕಪ್‌ ಕಲಾವಿದೆ ಅನಿಘಾ ಜೈನ್‌ ಸಲಹೆಯಂತೆ ನ್ಯೂಡ್‌ ಐಶಾಡೋ, ರೆಪ್ಪೆಯ ಕೂದಲುಗಳಿಗೆ ಮಸ್ಕರಾ, ಐಲೈನರ್‌, ಬೆರಿ ಬಣ್ಣದ ಲಿಪ್‌ಸ್ಟಿಕ್‌ ಹಚ್ಚಿದ್ದರು. 
(6 / 7)
ಮೇಕಪ್‌ ಕಲಾವಿದೆ ಅನಿಘಾ ಜೈನ್‌ ಸಲಹೆಯಂತೆ ನ್ಯೂಡ್‌ ಐಶಾಡೋ, ರೆಪ್ಪೆಯ ಕೂದಲುಗಳಿಗೆ ಮಸ್ಕರಾ, ಐಲೈನರ್‌, ಬೆರಿ ಬಣ್ಣದ ಲಿಪ್‌ಸ್ಟಿಕ್‌ ಹಚ್ಚಿದ್ದರು. (Instagram/@keerthysureshofficial)
ಕೂದಲು ಹಾರಾಡಿಸಿಕೊಂಡು ಮುದ್ದಾಗಿ ನಗುತ್ತಾ ಫೋಟೊಗೆ ಪೋಸ್‌ ಕೊಟ್ಟ ಕೀರ್ತಿ ನಗುವಿಗೆ ಅಭಿಮಾನಿಗಳು ಮೆಚ್ಚುಗೆ ಮಹಾಪೂರ ಹರಿಸಿದ್ದಾರೆ. 
(7 / 7)
ಕೂದಲು ಹಾರಾಡಿಸಿಕೊಂಡು ಮುದ್ದಾಗಿ ನಗುತ್ತಾ ಫೋಟೊಗೆ ಪೋಸ್‌ ಕೊಟ್ಟ ಕೀರ್ತಿ ನಗುವಿಗೆ ಅಭಿಮಾನಿಗಳು ಮೆಚ್ಚುಗೆ ಮಹಾಪೂರ ಹರಿಸಿದ್ದಾರೆ. (Instagram/@keerthysureshofficial)

    ಹಂಚಿಕೊಳ್ಳಲು ಲೇಖನಗಳು