logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೂಲಾ ನಕ್ಷತ್ರ ವಿಶೇಷ ದಿನದಂದು ಮಗಳು ಆದ್ಯಾ ಜೊತೆ ಕನಕದುರ್ಗಾ ದೇವಾಲಯಕ್ಕೆ ಭೇಟಿ ನೀಡಿದ ಆಂಧ್ರ ಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್‌

ಮೂಲಾ ನಕ್ಷತ್ರ ವಿಶೇಷ ದಿನದಂದು ಮಗಳು ಆದ್ಯಾ ಜೊತೆ ಕನಕದುರ್ಗಾ ದೇವಾಲಯಕ್ಕೆ ಭೇಟಿ ನೀಡಿದ ಆಂಧ್ರ ಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್‌

Oct 09, 2024 01:41 PM IST

Pawan Kalyan In Durga Temple: ಇತ್ತೀಚೆಗೆ ತಿರುಪತಿ ತೆರಳಿದ್ದ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌, ಈಗ ಆಂಧ್ರ ಪ್ರದೇಶದ ಇಂದ್ರಕೀಲಾದ್ರಿಯಲ್ಲಿರುವ ಸರಸ್ವತಿ ದೇವಿ ಅಲಂಕಾರದಲ್ಲಿರುವ ಕನಕ ದುರ್ಗೆಯ ದರ್ಶನ ಪಡೆದಿದ್ದಾರೆ. ದೇವಿಯ ಜನ್ಮ ನಕ್ಷತ್ರ ಮೂಲಾ ನಕ್ಷತ್ರದ ದಿನದಂದು ಪವನ್, ಪುತ್ರಿ ಆದ್ಯಾ ಕೊನಿಡೇಲಾ ಜೊತೆ ಕನಕ ದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಇಂದ್ರಕೀಲಾದ್ರಿಯಲ್ಲಿ ಕನಕದುರ್ಗಾ ದೇವಿಯ ದರ್ಶನದ ನಂತರ, ಪವನ್‌ ಕಲ್ಯಾಣ್‌ಗೆ ವೈದಿಕ ಆಶೀರ್ವಾದ ನೀಡುತ್ತಿರುವ ದೇವಸ್ಥಾನದ ಅರ್ಚಕರು. ಪ್ರಾಯಶ್ಚಿತ್ತ ದೀಕ್ಷೆ ಅಂಗವಾಗಿ ಪವನ್‌ ಕಲ್ಯಾಣ್‌ ಈ ದೇಗುಲಕ್ಕೆ ಭೇಟಿ ನೀಡಿದ್ದರು. 
(1 / 8)

ದೇವಿ ದರ್ಶನ ನಂತರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ  ಆಂಧ್ರ ಪ್ರದೇಶ ಗೃಹ ಸಚಿವೆ ಅನಿತಾ ಅಮ್ಮನವರ ಭಾವಚಿತ್ರವನ್ನು ಅರ್ಪಿಸಿದರು. 
(2 / 8)

ತಿರುಪತಿ ಲಡ್ಡು ಪ್ರಸಾದ ವಿವಾದದ ನಂತರ ಪವನ್‌ ಕಲ್ಯಾಣ್‌ ಪ್ರಾಯಶ್ಚಿತ್ತ ದೀಕ್ಷೆ ಪಡೆದಿದ್ದರು. ಕಳೆದ ವಾರ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಪವನ್‌ ಕಲ್ಯಾಣ್‌ ತಿರುಮಲ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದರು. 
(3 / 8)

ಮಗಳು (ಮಾಜಿ ಪತ್ನಿ ರೇಣು ದೇಸಾಯಿ ಪುತ್ರಿ) ಆದ್ಯಾ ಕೊನಿಡೇಲ ಜೊತೆ ದೇವಿಯ ಫೋಟೋ ಸ್ವೀಕರಿಸುತ್ತಿರುವ ಪವನ್‌ ಕಲ್ಯಾಣ್‌
(4 / 8)

ಬುಧವಾರ ಬೆಳಗಿನ ಜಾವವೇ ದೇವಸ್ಥಾನಕ್ಕೆ ಭಕ್ತಸಾಗರ ಹರಿದು ಬಂದಿತ್ತು. ವಿಜಯವಾಡದಲ್ಲಿರುವ ಕನಕದುರ್ಗಾ ದೇವಸ್ಥಾನ ಜಿಲ್ಲೆಯಲ್ಲೇ ಅತ್ಯಂತ ಪ್ರಸಿದ್ಧ ದೇವಾಲಯವಾಗಿದ್ದು, ದೇವಿ ದರ್ಶನಕ್ಕಾಗಿ ಭಕ್ತರು ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. 
(5 / 8)

ದೇವಸ್ತಾನದ ಆಡಳಿತ ಮಂಡಳಿ ಭಕ್ತರಿಗೆ ದೇವಿ ದರ್ಶನ ಪಡೆಯಲು ಎಲ್ಲಾ ವ್ಯವಸ್ಥೆ ಮಾಡಿತ್ತು. ಕನಕದುರ್ಗೆಯ ಜನ್ಮದಿನದಂದು ಇಂದ್ರಕಿಲಾದ್ರಿಯ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
(6 / 8)

ಸರಸ್ವತಿ ದೇವಿಯ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಕನಕ ದುರ್ಗಾ ದೇವಿ
(7 / 8)
ಸರಸ್ವತಿ ದೇವಿಯ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಕನಕ ದುರ್ಗಾ ದೇವಿ
ಜನ ಸಂದಣಿ ನಡುವೆಯೂ ಭಕ್ತರು ತಾಳ್ಮೆಯಿಂದ ನಿಂತು ದೇವಿಯ ದರ್ಶನ ಪಡೆದರು. ಪವನ್‌ ಕಲ್ಯಾಣ್‌ ನೋಡಲು ದೇವಸ್ಥಾನದ ಸುತ್ತ ಮುತ್ತ ಅಭಿಮಾನಿಗಳು ನೆರೆದಿದ್ದರು. 
(8 / 8)

    ಹಂಚಿಕೊಳ್ಳಲು ಲೇಖನಗಳು