Year in review 2022: ರಾಣಿ ಎಲಿಜಬೆತ್ ಸಾವಿನಿಂದ ಉಕ್ರೇನ್ ಯುದ್ಧದವರೆಗೆ; ಜಾಗತಿಕ ಚಿತ್ತ ಹರಿದ ಪ್ರಮುಖ ಘಟನೆಗಳಿವು
Dec 31, 2022 09:17 PM IST
ಹೊಸ ವರ್ಷಕ್ಕೆ ಜಗತ್ತು ಸಿದ್ಧವಾಗಿದೆ. 2022 ಇಂದಿಗೆ ಮುಗಿಯುತ್ತಿದ್ದು, ಈ ವರ್ಷವು ಜಾಗತಿಕವಾಗಿ ಮಹತ್ವದ ಘಟನಾವಳಿಗಳಿಗೆ ಸಾಕ್ಷಿಯಾಯ್ತು. ಫೆಬ್ರವರಿ 24ರಂದು ರಷ್ಯಾವು ಉಕ್ರೇನ್ ಮೇಲೆ ಆಕ್ರಮಣ ಮಾಡಿತು. ಇದು ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಚೋದಿಸಿತು. ಫೆಬ್ರವರಿಯಲ್ಲಿ ಆರಂಭವಾದ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಡಿಸೆಂಬರ್ 18ರವರೆಗೆ 428 ಮಕ್ಕಳು ಸೇರಿದಂತೆ ಒಟ್ಟು 6,826 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ (OHCHR) ಕಚೇರಿ ಮಾಹಿತಿ ನೀಡಿದೆ. ಕೋವಿಡ್ 19 ಮತ್ತು ಉಕ್ರೇನ್ ಯುದ್ಧದ ಆರ್ಥಿಕ ಪರಿಣಾಮಗಳಿಂದ ಜಗತ್ತು ತತ್ತರಿಸುತ್ತಿರುವ ನಡುವೆ, ಭಾರತದ ನೆರೆಯ ಶ್ರೀಲಂಕಾ ತನ್ನ ಆರ್ಥಿಕ ಬಿಕ್ಕಟ್ಟು ಎದುರಿಸಿತು. ಇದು ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಲಂಕಾ ಅಧ್ಯಕ್ಷ ಮತ್ತು ಪ್ರಧಾನಿ ನಿವಾಸದ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು. ಅತ್ತ ಪಾಕಿಸ್ತಾನ ಕೂಡಾ ಹಣದುಬ್ಬರದಿಂದ ತತ್ತರಿಸಿತು. ಅಲ್ಲದೆ ಸೆಪ್ಟೆಂಬರ್ ತಿಂಗಳಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ, ಪಾಕ್‌ನಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಅತ್ತ ಯುನೈಟೆಡ್ ಕಿಂಗ್‌ಡಮ್ ರಾಣಿ ಎಲಿಜಬೆತ್ IIರ ನಿಧನಕ್ಕೆ ಜಗತ್ತು ಶೋಕ ವ್ಯಕ್ತಪಡಿಸಿತು. ಆ ಬೆನ್ನಲ್ಲೇ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗುವ ಮೂಲಕ ಭಾರತದಲ್ಲಿ ಹೆಚ್ಚು ಸುದ್ದಿಯಾದರು. ಮಹ್ಸಾ ಅಮಿನಿಯ ಮರಣದ ನಂತರ ಇರಾನಿಯನ್ನರು ದೇಶದಾದ್ಯಂತ ಹಿಜಾಬ್ ವಿರೋಧಿ ಪ್ರತಿಭಟನೆಗಳನ್ನು ಪ್ರಾರಂಭಿಸಿದರು... ಹೀಗೆ 202ರಲ್ಲಿಜಾಗತಿಕವಾಗಿ ಸುದ್ದಿಯಾದ ಪ್ರಮುಖ ಘಟನೆಗಳ ವಿವರ ಇಲ್ಲಿವೆ.