logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೂಲಬೆಲೆ 10 ಲಕ್ಷ, ಹರಾಜಾಗಿದ್ದು 2 ಕೋಟಿಗೆ; ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಯುವ ಆಟಗಾರ್ತಿಗೆ ಜಾಕ್​ಪಾಟ್

ಮೂಲಬೆಲೆ 10 ಲಕ್ಷ, ಹರಾಜಾಗಿದ್ದು 2 ಕೋಟಿಗೆ; ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಯುವ ಆಟಗಾರ್ತಿಗೆ ಜಾಕ್​ಪಾಟ್

Dec 22, 2023 04:43 PM IST

Women's Premier League 2024: ಮಹಿಳಾ ಪ್ರೀಮಿಯರ್ ಲೀಗ್​ನ ಮಿನಿ ಹರಾಜಿನಲ್ಲಿ ದಾಖಲೆಯ 2 ಕೋಟಿಗೆ ಸೇಲ್​ ಆಗುವ ಮೂಲಕ ಭಾರತದ ಕಾಶ್ವೀ ಗೌತಮ್ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

  • Women's Premier League 2024: ಮಹಿಳಾ ಪ್ರೀಮಿಯರ್ ಲೀಗ್​ನ ಮಿನಿ ಹರಾಜಿನಲ್ಲಿ ದಾಖಲೆಯ 2 ಕೋಟಿಗೆ ಸೇಲ್​ ಆಗುವ ಮೂಲಕ ಭಾರತದ ಕಾಶ್ವೀ ಗೌತಮ್ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಭಾರತದ ಕಾಶ್ವೀ ಗೌತಮ್ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಗುಜರಾತ್ ಜೈಂಟ್ಸ್ 2 ಕೋಟಿ ರೂಪಾಯಿಗೆ ಖರೀದಿಸಿತು. ಆ ಮೂಲಕ ಕೆಲವೇ ನಿಮಿಷಗಳಲ್ಲಿ 1.3 ಕೋಟಿಗೆ ಸೇಲ್​ ಆಗಿದ್ದ ವೃಂದಾ ದಿನೇಶ್​ ಅವರ ದಾಖಲೆ ಮುರಿದರು.
(1 / 5)

ಮೊದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾಶ್ವೀ ಅವರ ಮೇಲೇ 15 ಲಕ್ಷಕ್ಕೆ ಬಿಡ್ ಮಾಡಿತು. ನಂತರ ಆರ್​ಸಿಬಿ ಮತ್ತು ಗುಜರಾತ್​ ನಡುವೆ ಫೈಟ್​ ನಡೆಯಿತು. ಗುಜರಾತ್​ 2 ಕೋಟಿಗೆ ಖರೀದಿಸಿತು. ಕಾಶ್ವೀ ಮೂಲ ಬೆಲೆ 10 ಲಕ್ಷ ಹೊಂದಿದ್ದರು. ಫ್ರಾಂಚೈಸಿಗಳ ಪೈಪೋಟಿಯಿಂದ 2 ಕೋಟಿವರೆಗೂ ಏರಿಕೆ ಕಂಡಿತು.
(2 / 5)

2020ರಲ್ಲಿ ದೇಶೀಯ ಕ್ರಿಕೆಟ್​ನ ಅಂಡರ್​-19 ಟೂರ್ನಿಯಲ್ಲಿ ಅತ್ಯಮೋಘ ಪ್ರದರ್ಶನ ನೀಡಿದ್ದ ಕಾಶ್ವೀ, ಅರುಣಾಚಲ ಪ್ರದೇಶ ವಿರುದ್ಧ ಚಂಡೀಗಢವನ್ನು ಪ್ರತಿನಿಧಿಸಿದ್ದರು. ಹ್ಯಾಟ್ರಿಕ್ ಸೇರಿದಂತೆ ಎದುರಾಳಿ ತಂಡದ ಎಲ್ಲಾ 10 ವಿಕೆಟ್​ ಪಡೆದ ಸಾಧನೆ ಮಾಡಿರುವ ಕಾಶ್ವೀ, ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಈಗಲೂ ದೇಶೀಯ ಕ್ರಿಕೆಟ್​ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.
(3 / 5)

ಆಂಧ್ರದ ಕೆಎಸ್‌ಆರ್‌ಎಂ ಕಾಲೇಜು ಮೈದಾನದಲ್ಲಿ ನಡೆದ ಅರುಣಾಚಲ ಪ್ರದೇಶದ ವಿರುದ್ಧದ ಪಂದ್ಯದಲ್ಲಿ ಕಾಶ್ವೀ ಗೌತಮ್ ಚಂಡೀಗಢದ ಪರ ಈ ಸಾಧನೆ ಮಾಡಿದ್ದರು. 14ನೇ ವಯಸ್ಸಿನಲ್ಲಿ ಕ್ರೀಡೆಗೆ ಬಂದ ಕಾಶ್ವೀ, ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಡಬ್ಲ್ಯುಪಿಎಲ್​ ಆರಂಭಕ್ಕೂ ಮುನ್ನ ಮಹಿಳಾ T20 ಚಾಲೆಂಜ್‌ನ ಭಾಗವೂ ಆಗಿದ್ದರು.
(4 / 5)

ದೇಶೀಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕಾಶ್ವೀ, ಡಬ್ಲ್ಯುಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದರು. ಈ ವರ್ಷ ಮಹಿಳಾ ಟಿ20 ಟ್ರೋಫಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 12 ವಿಕೆಟ್‌ ಉರುಳಿಸಿದ್ದಾರೆ. 4.14ರ ಎಕಾನಮಿ ಬೌಲಿಂಗ್​ನಲ್ಲಿ ಎದುರಾಳಿಗೆ ಕಂಟಕವಾಗಿದ್ದಾರೆ. ಅಂಡರ್-23 ತಂಡದ ಭಾಗವಾಗಿ ಹಾಂಗ್​ಕಾಂಗ್‌ನಲ್ಲಿ ನಡೆದ ಉದಯೋನ್ಮುಖ ಮಹಿಳಾ ಏಷ್ಯಾಕಪ್​ನಲ್ಲೂ ಚಾಂಪಿಯನ್ ಭಾರತ ತಂಡದ ಭಾಗವಾಗಿದ್ದರು. ಈಕೆ ಭುವನೇಶ್ವರ್ ಕುಮಾರ್​ ಅಭಿಮಾನಿ.
(5 / 5)

    ಹಂಚಿಕೊಳ್ಳಲು ಲೇಖನಗಳು