logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Year In Review 2022: ಈ ವರ್ಷ ಜಾಗತಿಕ ಮಟ್ಟದಲ್ಲಿ ಘಟಿಸಿದ ಐದು ಅನಿರೀಕ್ಷಿತ ವಿದ್ಯಮಾನಗಳಿವು

Year in review 2022: ಈ ವರ್ಷ ಜಾಗತಿಕ ಮಟ್ಟದಲ್ಲಿ ಘಟಿಸಿದ ಐದು ಅನಿರೀಕ್ಷಿತ ವಿದ್ಯಮಾನಗಳಿವು

Dec 21, 2022 10:03 PM IST

ಹೊಸ ವರ್ಷ ಇನ್ನೇನು ಹತ್ತಿರ ಬರುತ್ತಿದೆ. 2022ಕ್ಕೆ ವಿದಾಯ ಹೇಳುವ ದಿನಗಳು ಬಂದುಬಿಟ್ಟಿದೆ. ಈ ವರ್ಷ ಜಾಗತಿಕ ಮಟ್ಟದಲ್ಲಿ ಹಲವು ಅನಿರೀಕ್ಷಿತ ವಿದ್ಯಮಾನಗಳು ನಡೆದಿವೆ. ವಿಶ್ವಾದ್ಯಂತ ಈ ವರ್ಷ ಘಟಿಸಿದ ಪ್ರಮುಖ ಐದು ಅನಿರೀಕ್ಷಿತ ಘಟನೆಗಳು ಹೀಗಿವೆ. ಇನ್ನೂ ಹಲವು ಪ್ರಮುಖ ಬೆಳವಣಿಗೆಗಳು ವಿಶ್ವದಲ್ಲಿ ನಡೆದಿದ್ದು, ಇಲ್ಲಿ ಅಗ್ರ ಐದು ಅಂಶಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ(ಭಾರತ ಹೊರತಾಗಿ).

  • ಹೊಸ ವರ್ಷ ಇನ್ನೇನು ಹತ್ತಿರ ಬರುತ್ತಿದೆ. 2022ಕ್ಕೆ ವಿದಾಯ ಹೇಳುವ ದಿನಗಳು ಬಂದುಬಿಟ್ಟಿದೆ. ಈ ವರ್ಷ ಜಾಗತಿಕ ಮಟ್ಟದಲ್ಲಿ ಹಲವು ಅನಿರೀಕ್ಷಿತ ವಿದ್ಯಮಾನಗಳು ನಡೆದಿವೆ. ವಿಶ್ವಾದ್ಯಂತ ಈ ವರ್ಷ ಘಟಿಸಿದ ಪ್ರಮುಖ ಐದು ಅನಿರೀಕ್ಷಿತ ಘಟನೆಗಳು ಹೀಗಿವೆ. ಇನ್ನೂ ಹಲವು ಪ್ರಮುಖ ಬೆಳವಣಿಗೆಗಳು ವಿಶ್ವದಲ್ಲಿ ನಡೆದಿದ್ದು, ಇಲ್ಲಿ ಅಗ್ರ ಐದು ಅಂಶಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ(ಭಾರತ ಹೊರತಾಗಿ).
ಕೋವಿಡ್‌ ಅಂತ್ಯಗೊಂಡು, ಸಾಕಷ್ಟು ಏರಿಳಿತಗಳನ್ನು ಕಂಡ 2022 ಇನ್ನೇನು ಕೊನೆಗೊಳ್ಳಲಿದೆ. ಈ ವರ್ಷವೂ ಸಿಹಿ ಕಹಿ ಘಟನೆಗಳು ಸಮನಾಗಿ ನಡೆದಿವೆ. ಆರ್ಥಿಕ ಬಿಕ್ಕಟ್ಟಿನಿಂದ ಹಿಡಿದು ರಾಜಕೀಯ ಮುಖ್ಯಾಂಶಗಳವರೆಗೆ, 2022ರಲ್ಲಿ ಇಡೀ ಜಗತ್ತಿನ ಚಿತ್ತವನ್ನು ತನ್ನತ್ತ ಸೆಳೆದ ಪ್ರಮುಖ ಘಟನೆಗಳು ಹೀಗಿವೆ ನೋಡಿ.
(1 / 6)
ಕೋವಿಡ್‌ ಅಂತ್ಯಗೊಂಡು, ಸಾಕಷ್ಟು ಏರಿಳಿತಗಳನ್ನು ಕಂಡ 2022 ಇನ್ನೇನು ಕೊನೆಗೊಳ್ಳಲಿದೆ. ಈ ವರ್ಷವೂ ಸಿಹಿ ಕಹಿ ಘಟನೆಗಳು ಸಮನಾಗಿ ನಡೆದಿವೆ. ಆರ್ಥಿಕ ಬಿಕ್ಕಟ್ಟಿನಿಂದ ಹಿಡಿದು ರಾಜಕೀಯ ಮುಖ್ಯಾಂಶಗಳವರೆಗೆ, 2022ರಲ್ಲಿ ಇಡೀ ಜಗತ್ತಿನ ಚಿತ್ತವನ್ನು ತನ್ನತ್ತ ಸೆಳೆದ ಪ್ರಮುಖ ಘಟನೆಗಳು ಹೀಗಿವೆ ನೋಡಿ.(File Photos)
ಯುಕೆಯು ತನ್ನ ಮೊದಲ ಭಾರತೀಯ ಮೂಲದ ಪ್ರಧಾನಿಯನ್ನು ಪಡೆಯಿತು. 2022ರ ಅಕ್ಟೋಬರ್ 25ರಂದು ಕಿಂಗ್ ಚಾರ್ಲ್ಸ್ III ಅವರು ಸರ್ಕಾರವನ್ನು ರಚಿಸಲು ಕೇಳಿಕೊಂಡ ಬೆನ್ನಲ್ಲೇ, ರಿಷಿ ಸುನಕ್ ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನ ಮಂತ್ರಿಯಾದರು.
(2 / 6)
ಯುಕೆಯು ತನ್ನ ಮೊದಲ ಭಾರತೀಯ ಮೂಲದ ಪ್ರಧಾನಿಯನ್ನು ಪಡೆಯಿತು. 2022ರ ಅಕ್ಟೋಬರ್ 25ರಂದು ಕಿಂಗ್ ಚಾರ್ಲ್ಸ್ III ಅವರು ಸರ್ಕಾರವನ್ನು ರಚಿಸಲು ಕೇಳಿಕೊಂಡ ಬೆನ್ನಲ್ಲೇ, ರಿಷಿ ಸುನಕ್ ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನ ಮಂತ್ರಿಯಾದರು.(Bloomberg)
ಫುಟ್ಬಾಲ್‌ ಅಂದ್ರೆ ನೆನಪಾಗುವ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತೊರೆದಿದ್ದು, ಕ್ರೀಡಾ ಕ್ಷೇತ್ರದ ದೊಡ್ಡ ಬೆಳವಣಿಗೆ. ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ನವೆಂಬರ್ 23ರಂದು ಮ್ಯಾಂಚೆಸ್ಟರ್ ಯುನೈಟೆಡ್ ತೊರೆದರು. 37 ವರ್ಷದ ಸ್ಟ್ರೈಕರ್ ಈಗ ಹೊಸ ಕ್ಲಬ್‌ಗಾಗಿ ಹುಡುಕಾಟದಲ್ಲಿದ್ದಾರೆ.
(3 / 6)
ಫುಟ್ಬಾಲ್‌ ಅಂದ್ರೆ ನೆನಪಾಗುವ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತೊರೆದಿದ್ದು, ಕ್ರೀಡಾ ಕ್ಷೇತ್ರದ ದೊಡ್ಡ ಬೆಳವಣಿಗೆ. ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ನವೆಂಬರ್ 23ರಂದು ಮ್ಯಾಂಚೆಸ್ಟರ್ ಯುನೈಟೆಡ್ ತೊರೆದರು. 37 ವರ್ಷದ ಸ್ಟ್ರೈಕರ್ ಈಗ ಹೊಸ ಕ್ಲಬ್‌ಗಾಗಿ ಹುಡುಕಾಟದಲ್ಲಿದ್ದಾರೆ.(REUTERS)
ಟ್ವಿಟರ್ ಖರೀದಿಸಿದ ಎಲೋನ್ ಮಸ್ಕ್‌: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್, ಟ್ವಿಟರ್ ಅನ್ನು ಖರೀದಿಸಲು ಬಯಸುವುದಾಗಿ ಏಪ್ರಿಲ್ 14ರಂದು ಹೇಳಿದ್ದರು. ಸಾಮಾಜಿಕ ಮಾಧ್ಯಮ ಜಾಲವನ್ನು ಖರೀದಿಸಲು 44 ಬಿಲಿಯನ್‌ ಡಾಲರ್‌ ಒಪ್ಪಂದವನ್ನು ಅಂತಿಮಗೊಳಿಸಿದ ಬಳಿಕ, ಅಂತಿಮವಾಗಿ ಅಧಿಕೃತವಾಗಿ ಕಂಪನಿಯ ನಿಯಂತ್ರಣವನ್ನು ಪಡೆದರು.
(4 / 6)
ಟ್ವಿಟರ್ ಖರೀದಿಸಿದ ಎಲೋನ್ ಮಸ್ಕ್‌: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್, ಟ್ವಿಟರ್ ಅನ್ನು ಖರೀದಿಸಲು ಬಯಸುವುದಾಗಿ ಏಪ್ರಿಲ್ 14ರಂದು ಹೇಳಿದ್ದರು. ಸಾಮಾಜಿಕ ಮಾಧ್ಯಮ ಜಾಲವನ್ನು ಖರೀದಿಸಲು 44 ಬಿಲಿಯನ್‌ ಡಾಲರ್‌ ಒಪ್ಪಂದವನ್ನು ಅಂತಿಮಗೊಳಿಸಿದ ಬಳಿಕ, ಅಂತಿಮವಾಗಿ ಅಧಿಕೃತವಾಗಿ ಕಂಪನಿಯ ನಿಯಂತ್ರಣವನ್ನು ಪಡೆದರು.(AP)
ರಾಣಿ ಎಲಿಜಬೆತ್ ಸಾವು: ಬ್ರಿಟನ್‌ ರಾಣಿ ಎಲಿಜಬೆತ್ II, ಸುದೀರ್ಘ ಸೇವೆ ಸಲ್ಲಿಸಿದ ಬ್ರಿಟಿಷ್ ರಾಣಿ. ಇವರು ಸೆಪ್ಟೆಂಬರ್ 8ರಂದು ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ನಿಧನರಾದರು.
(5 / 6)
ರಾಣಿ ಎಲಿಜಬೆತ್ ಸಾವು: ಬ್ರಿಟನ್‌ ರಾಣಿ ಎಲಿಜಬೆತ್ II, ಸುದೀರ್ಘ ಸೇವೆ ಸಲ್ಲಿಸಿದ ಬ್ರಿಟಿಷ್ ರಾಣಿ. ಇವರು ಸೆಪ್ಟೆಂಬರ್ 8ರಂದು ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ನಿಧನರಾದರು.(AFP)
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು: ಶ್ರೀಲಂಕಾವು ಸುಮಾರು ಒಂದು ವರ್ಷದಿಂದ ಗಗನಕ್ಕೇರುತ್ತಿರುವ ಹಣದುಬ್ಬರದೊಂದಿಗೆ ಹೋರಾಡುತ್ತಿದೆ. ಕಳೆದ ಏಳು ದಶಕಗಳಲ್ಲಿ ದ್ವೀಪರಾಷ್ಟ್ರದ ಕೆಟ್ಟ ಆರ್ಥಿಕ ಬಿಕ್ಕಟ್ಟಿ ಇದಾಗಿದೆ. ಈ ವರ್ಷ ಇದರಿಂದಾಗಿ ರಾಜಕೀಯ ಬಿಕ್ಕಟ್ಟು ಕೂಡಾ ಎದುರಾಯಿತು.
(6 / 6)
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು: ಶ್ರೀಲಂಕಾವು ಸುಮಾರು ಒಂದು ವರ್ಷದಿಂದ ಗಗನಕ್ಕೇರುತ್ತಿರುವ ಹಣದುಬ್ಬರದೊಂದಿಗೆ ಹೋರಾಡುತ್ತಿದೆ. ಕಳೆದ ಏಳು ದಶಕಗಳಲ್ಲಿ ದ್ವೀಪರಾಷ್ಟ್ರದ ಕೆಟ್ಟ ಆರ್ಥಿಕ ಬಿಕ್ಕಟ್ಟಿ ಇದಾಗಿದೆ. ಈ ವರ್ಷ ಇದರಿಂದಾಗಿ ರಾಜಕೀಯ ಬಿಕ್ಕಟ್ಟು ಕೂಡಾ ಎದುರಾಯಿತು.(File Image)

    ಹಂಚಿಕೊಳ್ಳಲು ಲೇಖನಗಳು