logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sandalwood Love Story: ಲವ್‌ ಮಾಡಿ ಮದುವೆಯಾದ ಚಂದನವನದ ಚೆಂದದ ಜೋಡಿಗಳು; ಸ್ಯಾಂಡಲ್‌ವುಡ್‌ನಲ್ಲಿ ಪ್ರೀತಿ ಗೀತಿ ಇತ್ಯಾದಿ

Sandalwood Love story: ಲವ್‌ ಮಾಡಿ ಮದುವೆಯಾದ ಚಂದನವನದ ಚೆಂದದ ಜೋಡಿಗಳು; ಸ್ಯಾಂಡಲ್‌ವುಡ್‌ನಲ್ಲಿ ಪ್ರೀತಿ ಗೀತಿ ಇತ್ಯಾದಿ

Feb 14, 2024 08:44 AM IST

Valentine’s Day 2024: ಸ್ಯಾಂಡಲ್‌ವುಡ್‌ನಲ್ಲಿ ಪ್ರೀತಿಸಿ ಮದುವೆಯಾದ ಸಾಕಷ್ಟು ಜೋಡಿಗಳಿವೆ. ಸಹ ನಟ, ಸಹ ನಟಿ ಜತೆಗೆ ಪ್ರೇಮಾಂಕುರವಾಗಿ ಮದುವೆಯಾದ ಎಷ್ಟೋ ಸೆಲೆಬ್ರಿಟಿಗಳಿದ್ದಾರೆ. ಆ ಪೈಕಿ ಆಯ್ದ ಕೆಲವು ಜೋಡಿಗಳು ಹೀಗಿವೆ.

  • Valentine’s Day 2024: ಸ್ಯಾಂಡಲ್‌ವುಡ್‌ನಲ್ಲಿ ಪ್ರೀತಿಸಿ ಮದುವೆಯಾದ ಸಾಕಷ್ಟು ಜೋಡಿಗಳಿವೆ. ಸಹ ನಟ, ಸಹ ನಟಿ ಜತೆಗೆ ಪ್ರೇಮಾಂಕುರವಾಗಿ ಮದುವೆಯಾದ ಎಷ್ಟೋ ಸೆಲೆಬ್ರಿಟಿಗಳಿದ್ದಾರೆ. ಆ ಪೈಕಿ ಆಯ್ದ ಕೆಲವು ಜೋಡಿಗಳು ಹೀಗಿವೆ.
ಬಣ್ಣದ ಲೋಕದಲ್ಲಿ ನೂರಾರು ಕಲರ್‌ಫುಲ್‌ ಜೋಡಿಗಳು ಪ್ರೀತಿಸಿ ಮದುವೆಯಾಗಿವೆ. ಆ ಘಮ ಸ್ಯಾಂಡಲ್‌ವುಡ್‌ನಲ್ಲಿಯೂ ತುಸು ಹೆಚ್ಚೇ. ಇಲ್ಲಿದೆ ನೋಡಿ ಸ್ಯಾಂಡಲ್‌ವುಡ್‌ ಪ್ರೇಮ್‌ಕಹಾನಿ. 
(1 / 10)

ಉಪೇಂದ್ರ- ಪ್ರಿಯಾಂಕಾ: ತೆಲುಗಿನ ರಾ ಹೆಸರಿನ ಸಿನಿಮಾ ಶೂಟಿಂಗ್‌ ವೇಳೆ ಈ ಇಬ್ಬರ ಮುಖಾಮುಖಿಯಾಯ್ತು. ಸ್ನೇಹ ಪ್ರೀತಿಯಾಗಿ ಬದಲಾಯ್ತು. ಅದಾದ ಬಳಿಕ 2003ರಲ್ಲಿ ಈ ಜೋಡಿಯ ಕಲ್ಯಾಣವೂ ನೆರವೇರಿತು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. 
(2 / 10)

ಸುಮಲತಾ ಅಂಬರೀಶ್‌: 1994ರಲ್ಲಿ ನ್ಯೂ ಡೆಲ್ಲಿ ಸಿನಿಮಾ ಶೂಟಿಂಗ್‌ ಸಮಯದಲ್ಲಿ ಸುಮಲತಾ ಮತ್ತು ಅಂಬರೀಶ್‌ ನಡುವೆ ಪ್ರೇಮಾಂಕುರವಾಗಿತ್ತು. 1987ರಲ್ಲಿ ಈ ಜೋಡಿಯ ಮದುವೆಯಾಗಿತ್ತು. 
(3 / 10)

ಶಂಕರ್‌ನಾಗ್-‌ ಅರುಂಧತಿ ನಾಗ್‌: ರಂಗಭೂಮಿಯಿಂದಲೂ ಶಂಕರ್‌ನಾಗ್‌ ಮತ್ತು ಅರುಂಧತಿ ನಾಗ್‌ ನಡುವೆ ಒಂದು ಸ್ನೇಹವಿತ್ತು. ಆ ಸ್ನೇಹವೇ ಪ್ರೀತಿಗೆ ತಿರುಗಿ, 1980ರಲ್ಲಿ ಸಪ್ತಪದಿ ತುಳಿದಿದ್ದರು ಈ ಜೋಡಿ. 
(4 / 10)

ಅನಂತ್‌ ನಾಗ್‌- ಗಾಯಿತ್ರಿ: ಸ್ಯಾಂಡಲ್‌ವುಡ್‌ನ್‌ ಆನ್‌ ಸ್ಕ್ರೀನ್‌ ಬೆಸ್ಟ್‌ ಜೋಡಿಯಾಗಿದ್ದ ಅನಂತ್‌ ನಾಗ್‌ ಮತ್ತು ಗಾಯಿತ್ರಿ ಇಬ್ಬರದ್ದೂ ಲವ್‌ ಮ್ಯಾರೇಜ್. 1987ರಲ್ಲಿ ಈ ಜೋಡಿ ಬಾಳ ಬಂಧನಕ್ಕೆ ಬಲಗಾಲಿರಿಸಿತ್ತು. ‌ 
(5 / 10)

ಅರ್ಜುನ್‌ ಸರ್ಜಾ- ಆಶಾ ರಾಣಿ: ಸಿನಿಮಾ ಶೂಟಿಂಗ್‌ ಸಮಯದಲ್ಲಿ ಆಶಾ ರಾಣಿಗೆ ನಟ ಅರ್ಜುನ್‌ ಸರ್ಜಾ ಪ್ರಪೋಸ್‌ ಮಾಡಿದ್ದರು. ಅತ್ತ ಕಡೆಯಿಂದಲೂ ಗ್ರೀನ್‌ ಸಿಗ್ನಲ್‌ ಸಿಕ್ಕಿತ್ತು. 1988ರಲ್ಲಿ ಈ ಜೋಡಿಯ ಮದುವೆಯಾಗಿತ್ತು. 
(6 / 10)

ಮೇಘನಾ ರಾಜ್-‌ ಚಿರು ಸರ್ಜಾ: ಮೇಘನಾ ರಾಜ್‌ ಮತ್ತು ಚಿರಂಜೀವಿ ಸರ್ಜಾ ಸಹ ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿ. ಆಟಗಾರ ಸಿನಿಮಾ ಸಮಯದಲ್ಲಿ ಸ್ನೇಹದ ಮೂಲಕ ಶುರುವಾಗಿದ್ದ ಇವರ ಸಾಂಗತ್ಯ, 2018ರಲ್ಲಿ ಮದುವೆ ಮೂಲಕ ಇವರಿಬ್ಬರು ಒಂದಾಗಿದ್ದರು. 
(7 / 10)

ಯಶ್‌ -‌ ರಾಧಿಕಾ ಪಂಡಿತ್: ಕಿರುತೆರೆಯಿಂದಲೇ ಒಟ್ಟಿಗೆ ಚಿತ್ರರಂಗಕ್ಕೆ ಬಂದ ಈ ಜೋಡಿ, ಒಟ್ಟಿಗೆ ಹಲವು ಸಿನಿಮಾಗಳಲ್ಲೂ ನಟಿಸಿತು  2016ರಲ್ಲಿ ಈ ಜೋಡಿಯ ಮದುವೆಯಾಯ್ತು
(8 / 10)

ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​: ಸ್ಯಾಂಡಲ್‌ವುಡ್‌ನ ಡಾರ್ಲಿಂಗ್‌ ಜೋಡಿ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಅವರದ್ದು. ಈ ಜೋಡಿಯೂ ಪ್ರೀತಿಸಿ ಮದುವೆಯಾಗಿದೆ. 2021ರಲ್ಲಿ ಬಾಳಬಂಧನಕ್ಕೆ ಕಾಲಿರಿಸಿತ್ತು. 
(9 / 10)

ದಿಗಂತ್-‌ ಐಂದ್ರಿತಾ ರೇ: ಮನಸಾರೆ ಸಿನಿಮಾ ಸಮಯದಲ್ಲಿ ಈ ಜೋಡಿಯ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. 2018ರಲ್ಲಿ ಈ ಜೋಡಿ ಬಾಳ ಬಂಧನಕ್ಕೆ ಕಾಲಿರಿಸಿತು.  
(10 / 10)

    ಹಂಚಿಕೊಳ್ಳಲು ಲೇಖನಗಳು