logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Basavanna Tourism: ಬಸವಣ್ಣನ ಪ್ರವಾಸ ತಾಣಗಳು, ಜನ್ಮ ಸ್ಥಳ ಬಸವನ ಬಾಗೇವಾಡಿಯ ಸ್ಮಾರಕ, ವಸ್ತು ಸಂಗ್ರಹಾಲಯ ಹೇಗಿವೆ ನೋಡಿ

Basavanna Tourism: ಬಸವಣ್ಣನ ಪ್ರವಾಸ ತಾಣಗಳು, ಜನ್ಮ ಸ್ಥಳ ಬಸವನ ಬಾಗೇವಾಡಿಯ ಸ್ಮಾರಕ, ವಸ್ತು ಸಂಗ್ರಹಾಲಯ ಹೇಗಿವೆ ನೋಡಿ

May 08, 2024 09:31 PM IST

Vishwaguru Basavanna ಕರ್ನಾಟಕದಲ್ಲಿ ವಿಶ್ವಗುರು ಬಸವಣ್ಣನವರ ನಂಟು ಇರುವ ಹಲವು ಊರುಗಳಿವೆ. ಇದರಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ( Basavana Bagewadi) ಪ್ರಮುಖವಾದದ್ದು. ಇಲ್ಲಿ ರೂಪಿಸಿರುವ ಸ್ಮಾರಕ ಬಸವಣ್ಣನವರ ಹುಟ್ಟು ಬದುಕಿನ ಚಿತ್ರಣ ಕಟ್ಟಿಕೊಡುತ್ತದೆ. ಅದರ ಚಿತ್ರ ನೋಟ ಹೀಗಿದೆ. 

  • Vishwaguru Basavanna ಕರ್ನಾಟಕದಲ್ಲಿ ವಿಶ್ವಗುರು ಬಸವಣ್ಣನವರ ನಂಟು ಇರುವ ಹಲವು ಊರುಗಳಿವೆ. ಇದರಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ( Basavana Bagewadi) ಪ್ರಮುಖವಾದದ್ದು. ಇಲ್ಲಿ ರೂಪಿಸಿರುವ ಸ್ಮಾರಕ ಬಸವಣ್ಣನವರ ಹುಟ್ಟು ಬದುಕಿನ ಚಿತ್ರಣ ಕಟ್ಟಿಕೊಡುತ್ತದೆ. ಅದರ ಚಿತ್ರ ನೋಟ ಹೀಗಿದೆ. 
ವಿಜಯಪುರದಿಂದ 40  ಕಿ.ಮಿ ದೂರದಲ್ಲಿರುವ ಬಸವನಬಾಗೇವಾಡಿ ಬಸವಣ್ಣನವರ ಜನ್ಮಸ್ಥಳ. ಅಲ್ಲಿನ ಸ್ಮಾರಕ ಆಕರ್ಷಕ. ಇಲ್ಲಿಗೆ ಬಸ್‌ ಹಾಗೂ ರೈಲಿನ ವ್ಯವಸ್ಥೆಯೂ ಇದೆ.
(1 / 8)

ಹಲವಾರು ವರ್ಷಗಳ ಹಿಂದೆಯೇ ಇಲ್ಲಿ ಬಸವ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಕಟ್ಟಡದ ಒಳ ಹೊಕ್ಕರೆ ಬಸವಣ್ಣನವರ ಜೀವನ ಗಾಥೆಯನ್ನು ಕಲೆಯಲ್ಲಿ ವೀಕ್ಷಿಸಬಹುದು.
(2 / 8)

ಬಸವಣ್ಣ ಬಾಲಕನಾಗಿ ನಂತರ ಪ್ರಬುದ್ದವಾಗಿ ಬೆಳೆದ ಚಿತ್ರಗಳು ಬಸವನಬಾಗೇವಾಡಿ ಸ್ಮಾರಕದಲ್ಲಿ ಗಮನ ಸೆಳೆಯುತ್ತದೆ.
(3 / 8)

ತಾಯಿ ಮಾದಲಾಂಬಿಕಾ ತನ್ನ ತಂದೆ ಮಾದಿರಾಜನ ಸನ್ನಿಧಿಯಲ್ಲಿ ಶಿಶು ಬಸವನನ್ನು ತಮ್ಮ ಕುಟುಂಬದ ಗುರುಗಳಿಗೆ ತೋರಿಸುತ್ತಾ, ಈ ಸ್ಥಳದಲ್ಲಿ ಅಸ್ತಿತ್ವದಲ್ಲಿದ್ದ ತಮ್ಮ ಮನೆಯಲ್ಲಿ ನವಜಾತ ಶಿಶುವನ್ನು ಆಶೀರ್ವದಿಸುತ್ತಿರುವುದನ್ನು ಕಾಣಬಹುದು.
(4 / 8)

ಬಾಲಕ ಬಸವಣ್ಣನಿಗೆ ಸಂಗಮೇಶ್ವರ ದೇಗುಲದಲ್ಲಿ ಗುರುಗಳಾದ ಜಟದೇವ ,ಮುನಿಗಳು ಧಾರ್ಮಿಕ ಪಾಠವನ್ನ ಹೇಳಿಕೊಡುವ ಸನ್ನಿವೇಶ.
(5 / 8)

ಬಸವಣ್ಣ ಜನಿಸಿದ್ದು ಅಕ್ಷಯ ತೃತೀಯದಂದು. ಇದನ್ನು ಬಿಂಬಿಸುವ ವಿಶಿಷ್ಟ ಕಲೆಯನ್ನು ಬಸವ ಸ್ಮಾರಕದಲ್ಲಿ ರೂಪಿಸಿರುವುದು ವಿಶೇಷ.
(6 / 8)

ಬಾಲಕ ಬಸವಣ್ಣ ಉಪನಯನ ಮಾಡಿಸಿಕೊಳ್ಳಲು ನಯವಾಗಿ ತಿರಸ್ಕರಿಸಿ ಅಕ್ಕ ನಾಗಮ್ಮ ಹಾಗೂ ಭಾವ ಶಿವದೇವನೊಂದಿಗೆ ಹೊರಡುವ ಸನ್ನಿವೇಶ ಚಿತ್ರಣ.
(7 / 8)

ವಚನಗಳನ್ನು ರಚಿಸುವ ಸಂಬಂಧ ಬಾಲಕ ಬಸವಣ್ಣ ಗುರುಗಳೊಂದಿಗೆ ಚರ್ಚಿಸುವ ಸನ್ನಿವೇಶ.
(8 / 8)
ವಚನಗಳನ್ನು ರಚಿಸುವ ಸಂಬಂಧ ಬಾಲಕ ಬಸವಣ್ಣ ಗುರುಗಳೊಂದಿಗೆ ಚರ್ಚಿಸುವ ಸನ್ನಿವೇಶ.

    ಹಂಚಿಕೊಳ್ಳಲು ಲೇಖನಗಳು