logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಾರ್ನರ್​, ಫಿಂಚ್ ಹಿಂದಿಕ್ಕಿದ ವಿರಾಟ್; ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ಶತಕ ಸಿಡಿಸಿದವರ ಪೈಕಿ ಕೊಹ್ಲಿಗೆ ಬಾಬರ್ ನಂತರ ಸ್ಥಾನ

ವಾರ್ನರ್​, ಫಿಂಚ್ ಹಿಂದಿಕ್ಕಿದ ವಿರಾಟ್; ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ಶತಕ ಸಿಡಿಸಿದವರ ಪೈಕಿ ಕೊಹ್ಲಿಗೆ ಬಾಬರ್ ನಂತರ ಸ್ಥಾನ

Apr 07, 2024 01:46 PM IST

Most Hundreds in T20 Cricket : ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಅವರು ಡೇವಿಡ್ ವಾರ್ನರ್, ಆರೋನ್ ಫಿಂಚ್ ಅವರನ್ನು ಹಿಂದಿಕ್ಕಿದ್ದಾರೆ.

  • Most Hundreds in T20 Cricket : ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಅವರು ಡೇವಿಡ್ ವಾರ್ನರ್, ಆರೋನ್ ಫಿಂಚ್ ಅವರನ್ನು ಹಿಂದಿಕ್ಕಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಚುಟುಕು ಕ್ರಿಕೆಟ್​​ನಲ್ಲಿ ಅತ್ಯಧಿಕ ಸೆಂಚುರಿ ಬಾರಿಸಿದವರ ಪೈಕಿ ವಿರಾಟ್ ವಿಶ್ವದ 3ನೇ ಬ್ಯಾಟ್ಸ್​ಮನ್ ಎನಿಸಿದ್ದಾರೆ.
(1 / 7)

ಇದರೊಂದಿಗೆ ಆಸ್ಟ್ರೇಲಿಯಾ ಡೇವಿಡ್ ವಾರ್ನರ್​ ಮತ್ತು ಆರೋನ್ ಫಿಂಚ್, ಮೈಕಲ್ ಕ್ಲಿಂಗರ್ ಮತ್ತು ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿದ್ದಾರೆ. ಈ ಮೂವರು ತಲಾ 8 ಶತಕ ಸಿಡಿಸಿದ್ದರೆ, ಕೊಹ್ಲಿ ಇವರನ್ನು ದಾಟಿ 9ನೇ ಸೆಂಚುರಿ ದಾಖಲಿಸಿದ್ದಾರೆ.
(2 / 7)

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 72 ಎಸೆತಗಳಲ್ಲಿ ಅಜೇಯ 113 ರನ್ ಬಾರಿಸಿದ್ದರು. ಅವರ ಇನ್ನಿಂಗ್ಸ್​​​ನಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್​​ಗಳನ್ನು ಒಳಗೊಂಡಿತ್ತು. ಸ್ಟ್ರೈಕ್​ರೇಟ್ 156.94. ಆದರೆ, ಇದು ಐಪಿಎಲ್ ಇತಿಹಾಸದಲ್ಲಿ ನಿಧಾನಗತಿಯ ಶತಕವಾಗಿದ್ದು, 67 ಎಸೆತಗಳಲ್ಲಿ ಶತಕ ಗಳಿಸಿದರು.
(3 / 7)

ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಸಿಡಿಸಿದವರ ಪೈಕಿ ವೆಸ್ಟ್​ ಇಂಡೀಸ್​ನ ಕ್ರಿಸ್​ಗೇಲ್ ಅಗ್ರಸ್ಥಾನದಲ್ಲಿದ್ದಾರೆ. ಚುಟುಕು ಕ್ರಿಕೆಟ್​​​ನಲ್ಲಿ ಅವರ ಶತಕಗಳ ಸಂಖ್ಯೆ 22. ಒಟ್ಟು 463 ಪಂದ್ಯಗಳಲ್ಲಿ (455 ಇನ್ನಿಂಗ್ಸ್) 22 ಶತಕ, 88 ಅರ್ಧಶತಕ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ ಅಜೇಯ 175 ಆಗಿದೆ. ಸರಾಸರಿ 36.22 ಆಗಿದೆ. ಸ್ಟ್ರೈಕ್ ರೇಟ್ 144.75.
(4 / 7)

ವಿರಾಟ್ ಕೊಹ್ಲಿಗಿಂತ ಮೊದಲು ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಬಾಬರ್​ ಅಜಮ್ ಇದ್ದಾರೆ. ಟಿ20ಯಲ್ಲಿ ಹೆಚ್ಚು ಶತಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, 290 ಪಂದ್ಯಗಳಲ್ಲಿ (280 ಇನ್ನಿಂಗ್ಸ್) 11 ಶತಕ ಗಳಿಸಿದ್ದಾರೆ. ಅವರ ಸರಾಸರಿ 44.28 ಆಗಿದೆ. ಸ್ಟ್ರೈಕ್ ರೇಟ್ 129.32.. ಒಟ್ಟು ಅರ್ಧಶತಕಗಳ ಸಂಖ್ಯೆ 87. ಗರಿಷ್ಠ ಸ್ಕೋರ್ 122 ರನ್.
(5 / 7)

ವಿರಾಟ್ ಕೊಹ್ಲಿ ಅಂತಾರರಾಷ್ಟ್ರೀಯ ಟಿ20 ಮತ್ತು ಐಪಿಎಲ್​ ಒಟ್ಟು 381 ಪಂದ್ಯಗಳನ್ನು (364 ಇನ್ನಿಂಗ್ಸ್) ಆಡಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅವರ ಒಟ್ಟು ಶತಕಗಳ ಸಂಖ್ಯೆ 9. ಅಜೇಯ 122 ರನ್ ಗಳಿಸಿರುವುದು ಗರಿಷ್ಠ ಸ್ಕೋರ್.
(6 / 7)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
(7 / 7)
ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

    ಹಂಚಿಕೊಳ್ಳಲು ಲೇಖನಗಳು