logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tilaka: ಹಣೆ ಮೇಲೆ ಏಕೆ ತಿಲಕ ಹಚ್ಚಬೇಕು? ಗಂಧ, ಕುಂಕುಮ, ಅರಿಶಿನ ತಿಲಕದ ಮಹತ್ವ ಹೀಗಿದೆ

Tilaka: ಹಣೆ ಮೇಲೆ ಏಕೆ ತಿಲಕ ಹಚ್ಚಬೇಕು? ಗಂಧ, ಕುಂಕುಮ, ಅರಿಶಿನ ತಿಲಕದ ಮಹತ್ವ ಹೀಗಿದೆ

Dec 03, 2023 08:03 PM IST

Tilaka on forehead: ಹಣೆಯ ಮೇಲೆ ತಿಲಕವನ್ನು ಇಡುವ ಸಂಪ್ರದಾಯವು ಹಿಂದೂ ಧರ್ಮದಲ್ಲಿ ಪ್ರಾಚೀನ ಕಾಲದಿಂದಲೂ ಇದೆ. ತಿಲಕವನ್ನು ಏಕೆ ಹಚ್ಚಬೇಕು? ಗಂಧ, ಕುಂಕುಮ, ಅರಿಶಿನ ತಿಲಕದ ಮಹತ್ವವೇನು? ನೋಡೋಣ ಬನ್ನಿ..

  • Tilaka on forehead: ಹಣೆಯ ಮೇಲೆ ತಿಲಕವನ್ನು ಇಡುವ ಸಂಪ್ರದಾಯವು ಹಿಂದೂ ಧರ್ಮದಲ್ಲಿ ಪ್ರಾಚೀನ ಕಾಲದಿಂದಲೂ ಇದೆ. ತಿಲಕವನ್ನು ಏಕೆ ಹಚ್ಚಬೇಕು? ಗಂಧ, ಕುಂಕುಮ, ಅರಿಶಿನ ತಿಲಕದ ಮಹತ್ವವೇನು? ನೋಡೋಣ ಬನ್ನಿ..
ತಿಲಕವನ್ನು ಇಡುವುದು ಕೇವಲ ಸೌಂದರ್ಯದ ಆಕರ್ಷಣೆ ಎಂದರೆ ತಪ್ಪಾಗುತ್ತದೆ. ಇದು ಆಧ್ಯಾತ್ಮಿಕತೆ ಜೊತೆ ಸಂಬಂಧ ಹೊಂದಿದೆ. ಇದು ಮೂರನೇ ಕಣ್ಣು ಅಥವಾ ಅಗ್ನಿ ಚಕ್ರವನ್ನು ಪ್ರತಿನಿಧಿಸುತ್ತದೆ. ಚರಣೆಗಳು, ಪ್ರಾರ್ಥನೆಗಳು ಮತ್ತು ಧ್ಯಾನದ ಸಮಯದಲ್ಲಿ ದೈವಿಕ ಶಕ್ತಿಗಳೊಂದಿಗೆ ಸಂಪರ್ಕವನ್ನು ಬೆಳೆಸುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ ಏಕಾಗ್ರತೆ ಮತ್ತು ಗಮನವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ದುಷ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಪರಿಗಣಿಸಲಾಗಿದೆ. (istockphoto)
(1 / 5)

ಗಂಧ/ಚಂದನ ತಿಲಕ : ಶ್ರೀಗಂಧದ ತಿಲಕವನ್ನು ಹಣೆಯ ಮೇಲೆ ಹಚ್ಚುವುದರಿಂದ ತಂಪಾದ ಭಾವನೆ ಮೂಡುತ್ತದೆ. ಏಕಾಗ್ರತೆಗೆ ಸಹಾಯ ಮಾಡುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ತಲೆನೋವಿನಿಂದ ಪರಿಹಾರವನ್ನು ನೀಡುತ್ತದೆ. ಆಧ್ಯಾತ್ಮಿಕ ಅನುಭವವನ್ನು ಹೆಚ್ಚಿಸುತ್ತದೆ. 
(2 / 5)

ಕುಂಕುಮ ತಿಲಕ: ಇದು ಮುಖದ ಸೌಂದರ್ಯ ಮಾತ್ರ ಹೆಚ್ಚಿಸುವುದಿಲ್ಲ. ಆಂತರಿಕ ಸೌಂದರ್ಯ ಮತ್ತು ಧೈರ್ಯವನ್ನೂ ಹೆಚ್ಚಿಸುತ್ತದೆ. ಇದು ನಮ್ಮ ಅತೀಂದ್ರಿಯ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ದೈವಿಕ ಶಕ್ತಿಯನ್ನು ಆಕರ್ಷಿಸುತ್ತದೆ. 
(3 / 5)

ಅರಿಶಿನ ತಿಲಕ: ಇದು  ಚರ್ಮವನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ದೇವತೆಗಳ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ. 
(4 / 5)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(5 / 5)

    ಹಂಚಿಕೊಳ್ಳಲು ಲೇಖನಗಳು