logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wildlife Week: ವನ್ಯಜೀವಿ ಸಪ್ತಾಹಕ್ಕೆ ವನ್ಯ ಬದುಕು ಅನಾವರಣ: ಬೆಂಗಳೂರು ಅರಣ್ಯ ಅಧಿಕಾರಿ ಕಣ್ಣಲ್ಲಿ ವನ್ಯಲೋಕ

Wildlife Week: ವನ್ಯಜೀವಿ ಸಪ್ತಾಹಕ್ಕೆ ವನ್ಯ ಬದುಕು ಅನಾವರಣ: ಬೆಂಗಳೂರು ಅರಣ್ಯ ಅಧಿಕಾರಿ ಕಣ್ಣಲ್ಲಿ ವನ್ಯಲೋಕ

Oct 02, 2023 01:51 PM IST

ಅರಣ್ಯ ಇಲಾಖೆ( Forerst department)ಯಲ್ಲಿ ಮೂರು ದಶಕಕ್ಕೂ ಹೆಚ್ಚು ಕಾರ್ಯನಿರ್ವಹಿಸಿದ ಎಂ.ಎನ್‌.ಜಯಕುಮಾರ್‌ ಛಾಯಾಗ್ರಾಹಕರಾಗಿಯೂ ಜನಪ್ರಿಯ. ಅರಣ್ಯದೊಳಗಿನ ವನ್ಯಲೋಕವನ್ನುತಮ್ಮ ಕ್ಯಾಮರಾದ ಮೂಲಕ ವಿಭಿನ್ನವಾಗಿಯೇ ತೆರೆದಿಟ್ಟವರು. ಈಗ ಬೆಂಗಳೂರಿನ ಚಿತ್ರಕಲಾ ಪರಿಷತ್‌ ನಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಅವರ ಛಾಯಾಚಿತ್ರ ಪ್ರದರ್ಶನ ನಡೆಯುತ್ತಿದೆ. ಇಲ್ಲಿದೆ ಮಾಹಿತಿ

  • ಅರಣ್ಯ ಇಲಾಖೆ( Forerst department)ಯಲ್ಲಿ ಮೂರು ದಶಕಕ್ಕೂ ಹೆಚ್ಚು ಕಾರ್ಯನಿರ್ವಹಿಸಿದ ಎಂ.ಎನ್‌.ಜಯಕುಮಾರ್‌ ಛಾಯಾಗ್ರಾಹಕರಾಗಿಯೂ ಜನಪ್ರಿಯ. ಅರಣ್ಯದೊಳಗಿನ ವನ್ಯಲೋಕವನ್ನುತಮ್ಮ ಕ್ಯಾಮರಾದ ಮೂಲಕ ವಿಭಿನ್ನವಾಗಿಯೇ ತೆರೆದಿಟ್ಟವರು. ಈಗ ಬೆಂಗಳೂರಿನ ಚಿತ್ರಕಲಾ ಪರಿಷತ್‌ ನಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಅವರ ಛಾಯಾಚಿತ್ರ ಪ್ರದರ್ಶನ ನಡೆಯುತ್ತಿದೆ. ಇಲ್ಲಿದೆ ಮಾಹಿತಿ
ಕೋತಿಗಳ ಬದುಕುನಮ್ಮೂರಿನಲ್ಲೇ ಇರುವ ಕೋತಿಗಳು ಊರ ಜತೆಗೆ ಅರಣ್ಯದ ಸುತ್ತಲೂ ಸಿಗುತ್ತವೆ. ಗುಂಪಾಗಿಯ ಇರುವ ಈ ಕೋತಿಗಳ ಪ್ರಪಂಚ ಭಿನ್ನ. ಮರಿಗಳೊಂದಿಗೆ ಅಮ್ಮನಿಗಿದ್ದರೆ ಅದೇನೋ ಖುಷಿ.
(1 / 9)

ಬೆಟ್ಟಗಳಲ್ಲಿ ಬದುಕುವು ನೀಲಗಾಯ್‌ಗಳು ನಾಚಿಕೆ ಸ್ವಭಾವದ ಪ್ರಾಣಿಗಳು. ತಮಿಳುನಾಡಿನ ಊಟಿ ಸೇರಿದಂತೆ ಹಲವೆಡೆ ಇವುಗಳ ಬದುಕು ಸಾಗಿದೆ. 
(2 / 9)

ಗುಳ್ಳೆನರಿಗಳ ಪ್ರಪಂಚಕಾಡು ಬಿಟ್ಟು ಊರಿನ ಸುತ್ತಮುತ್ತಲೇ ಹೆಚ್ಚು ಕಳೆಯುವ ಗುಳ್ಳೆ ನರಿಗಳಿಗೆ ನಮ್ಮೂರಿನ ಕುರಿ ಮೇಕೆಗಳೇ ಆಹಾರ. ಉತ್ತರ ಕರ್ನಾಟಕದಲ್ಲಿ ಈಗಲೂ ಇವುಗಳ ಸಂಖ್ಯೆ ಅಧಿಕವಾಗಿಯೇ ಇದೆ. 
(3 / 9)

ಆನೆಗಳ ಸಂಸಾರಆನೆಗಳ ಸಂಘಜೀವಿಗಳು. ಒಂಟಿಯಾಗುವುದಕ್ಕಿಂತ ಗುಂಪಾಗಿಯೇ ಹೆಚ್ಚು ಇರುತ್ತವೆ. ಮೈಸೂರು ಜಿಲ್ಲೆ ಕಬಿನಿ ಹಿನ್ನೀರಿಗೆ ಹೋದರೆ ನಿಮಗೆ ಹಿಂಡು ಲೆಕ್ಕದಲ್ಲೇ ಕಾಡಾನೆಗಳು ಸಿಗುತ್ತವೆ. 
(4 / 9)

ಭರ್ಜರಿ ಊಟದ ಸಂತಸಸಿಂಹಗಳು ಹೀಗೆ ಬೇಟೆಯಾಡಿ ಊಟಕ್ಕೆ ಕುಳಿತರೆ ದಿನವಿಡೀ ಏಳುವುದಿಲ್ಲ. ಅದು ಹಗಲು ರಾತ್ರಿ ಯಾವುದಕ್ಕೂ ಲೆಕ್ಕಕ್ಕೆ ಇಲ್ಲ. ಗುಜರಾತ್‌ನ ಗಿರ್‌ನಲ್ಲಿ ಒಂದು ರಾತ್ರಿ ಊಟಕ್ಕೆ ಕುಳಿತ ಸಿಂಹದ ಜೋಡಿ..
(5 / 9)

ಕೂಸು ಮರಿಕರಡಿ ಮರಿಗಳು ಹೀಗೆ ತಾಯಿ ಮೇಲೆ ಏರಿ ಚಿನ್ನಾಟವಾಡುತ್ತಿದ್ದರೆ ಯಾರಿಗೆ ತಾನೇ ಖುಷಿಯಾವುದಿಲ್ಲ. ಬಳ್ಳಾರಿ ಜಿಲ್ಲೆಯ ದರೋಜಿ ಕರಡಿ ಧಾಮ ಸೇರಿದಂತೆ ಹಲವೆಡೆ ಕರಡಿ ಕುಟುಂಬಗಳು ನೆಲೆಸಿವೆ. 
(6 / 9)

ಘೇಂಡಾಗಳ ಲೋಕಅಸ್ಸಾಂನ ಕಾಝಿರಂಗ ವನ್ಯಧಾಮದಲ್ಲಿಯೇ ಬದುಕು ಕಟ್ಟಿಕೊಂಡಿರುವ ಶಕ್ತಿ ಶಾಲಿ ಘೇಂಡಾಮೃಗಗಳ ಬದುಕೇ ವಿಭಿನ್ನ, ಒಂಟಿ ಕೊಂಬಿನ ಘೇಂಡಾಗಳು ಸಿಗುವುದೂ ಅಪರೂಪ. ಇದು ಜೋಡಿ ಘೇಂಡಾಗಳ ಸಹಜ ಬದುಕಿನ ಕ್ಷಣ,
(7 / 9)

ಹುಲಿಗಳೆಂದರೆ ಕಾಡಿಗೆ ಗೌರವ ಭಾರತ ಮಾತ್ರವಲ್ಲದೇ ಕರ್ನಾಟಕದಲ್ಲೂ ಈಗ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಈ ರೀತಿ ಕುಟುಂಬದಲ್ಲಿರುವ ಹುಲಿಗಳನ್ನು ಸೆರೆ ಹಿಡಿಯುವ ಅವಕಾಶ ಛಾಯಾಗ್ರಾಹಕರಿಗೆ ಸಿಗುತ್ತದೆ. ಜಯಕುಮಾರ್‌ ಅವರ ಕಣ್ಣಿಗೆ ಸಿಕ್ಕ ಹುಲಿ ಪರಿವಾರ.
(8 / 9)

ಇವರೇ ಎಂ.ಎನ್‌.ಜಯಕುಮಾರ್‌. ಅರಣ್ಯ ಇಲಾಖೆಯಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದವರು. ತಮ್ಮ ಹವ್ಯಾಸವಾಗಿ ಛಾಯಾಗ್ರಹಣವನ್ನೂ ರೂಢಿಸಿಕೊಂಡು ದೊಡ್ಡ ಹೆಸರು ಮಾಡಿದವರು. ಈ ಬಾರಿ ವನ್ಯಜೀವಿ ಸಪ್ತಾಹಕ್ಕೆ ಬೆಂಗಳೂರಿನಲ್ಲಿ ತಮ್ಮ ಛಾಯಾಚಿತ್ರ ಪ್ರದರ್ಶನ ಆಯೋಜಿಸಿದ್ದಾರೆ
(9 / 9)

    ಹಂಚಿಕೊಳ್ಳಲು ಲೇಖನಗಳು