logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಹಿಳಾ ಹಾಕಿ ಚಾಂಪಿಯನ್ಸ್ ಟ್ರೋಫಿ 2024: ಜಪಾನ್ ವಿರುದ್ಧ 3-0 ಅಂತರದ ಗೆದ್ದ ಭಾರತ ಸೆಮಿಫೈನಲ್​ಗೆ ಲಗ್ಗೆ

ಮಹಿಳಾ ಹಾಕಿ ಚಾಂಪಿಯನ್ಸ್ ಟ್ರೋಫಿ 2024: ಜಪಾನ್ ವಿರುದ್ಧ 3-0 ಅಂತರದ ಗೆದ್ದ ಭಾರತ ಸೆಮಿಫೈನಲ್​ಗೆ ಲಗ್ಗೆ

Nov 18, 2024 12:55 PM IST

India vs Japan: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಕೊನೆ ಲೀಗ್ ಪಂದ್ಯದಲ್ಲಿ ಭಾರತ 3-0 ಗೋಲುಗಳಿಂದ ಜಪಾನ್ ತಂಡವನ್ನು ಮಣಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿತು.

  • India vs Japan: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಕೊನೆ ಲೀಗ್ ಪಂದ್ಯದಲ್ಲಿ ಭಾರತ 3-0 ಗೋಲುಗಳಿಂದ ಜಪಾನ್ ತಂಡವನ್ನು ಮಣಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿತು.
ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ (ಎಸಿಟಿ) ಹಾಕಿ ಟೂರ್ನಮೆಂಟ್​​ನ ಕೊನೆಯ ಲೀಗ್ ಪಂದ್ಯದಲ್ಲಿ ಜಪಾನ್ ತಂಡವನ್ನು 3-0 ಗೋಲುಗಳಿಂದ ಸೋಲಿಸಿದ ಹಾಲಿ ಚಾಂಪಿಯನ್ ಭಾರತ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆದಿದೆ.
(1 / 7)

ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿ ಉತ್ತಮ ಫಾರ್ಮ್​​ನಲ್ಲಿದ್ದ ದೀಪಿಕಾ, 47 ಮತ್ತು 48 ನೇ ನಿಮಿಷಗಳಲ್ಲಿ ಗೋಲುಗಳನ್ನು ಗಳಿಸಿ ಗಮನ ಸೆಳೆದರು. ಉಪನಾಯಕಿ ನವನೀತ್ ಕೌರ್ 37ನೇ ನಿಮಿಷದಲ್ಲಿ ಗೋಲ್ ಬಾರಿಸಿ ಭಾರತ ತಂಡದ ಖಾತೆ ತೆರೆದರು.
(2 / 7)

ಇದರೊಂದಿಗೆ ಭಾರತ ಆಡಿರುವ 5 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಚೀನಾ (12 ಅಂಕ) 2ನೇ ಸ್ಥಾನದಲ್ಲಿದೆ. ನವೆಂಬರ್​ 19ರ ಮಂಗಳವಾರ ನಡೆಯಲಿರುವ ಸೆಮಿಫೈನಲ್​​ನಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿರುವ ಜಪಾನ್ ತಂಡವನ್ನು ಎದುರಿಸಲಿದ್ದು, ಚೀನಾ ತಂಡವು ಮೂರನೇ ಸ್ಥಾನದಲ್ಲಿರುವ ಮಲೇಷ್ಯಾ ತಂಡವನ್ನು ಎದುರಿಸಲಿದೆ.
(3 / 7)

ಟೂರ್ನಿಯ ಅಗ್ರ ಸ್ಕೋರರ್ ಆಗಿರುವ ದೀಪಿಕಾ ಈವರೆಗೆ 4 ಫೀಲ್ಡ್ ಗೋಲು, ಪೆನಾಲ್ಟಿ ಕಾರ್ನರ್​​ಗಳಿಂದ 5 ಗೋಲುಗಳು ಮತ್ತು ಪೆನಾಲ್ಟಿ ಸ್ಟ್ರೋಕ್​ನಿಂದ ಒಂದು ಗೋಲು ಸೇರಿದಂತೆ ಒಟ್ಟು 10 ಗೋಲು ಗಳಿಸಿದ್ದಾರೆ.
(4 / 7)

ಎಂಟನೇ ನಿಮಿಷದಲ್ಲಿ ಭಾರತೀಯರು ಸತತ ಪೆನಾಲ್ಟಿ ಕಾರ್ನರ್ ಪಡೆಯಿತು. ಆದರೆ, ಗೋಲುಗಳಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ. 25ನೇ ನಿಮಿಷದಲ್ಲಿ ಆತಿಥೇಯರು ನಾಲ್ಕನೇ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದರು. ಆದರೆ ಮತ್ತೆ ಅವರು ಅವಕಾಶದ ಲಾಭ ಪಡೆಯಲು ವಿಫಲರಾದರು.
(5 / 7)

37ನೇ ನಿಮಿಷದಲ್ಲಿ ನವನೀತ್ ಗಳಿಸಿದ ಗೋಲಿನಿಂದ ಭಾರತ ಮೇಲುಗೈ ಸಾಧಿಸಿತು. 47ನೇ ನಿಮಿಷದಲ್ಲಿ ಭಾರತ ಸತತ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೆದ್ದುಕೊಂಡಿತು ಮತ್ತು ಸ್ಟಾರ್ ಡ್ರ್ಯಾಗ್ ಫ್ಲಿಕರ್ ದೀಪಿಕಾ ಪ್ರಬಲ ಡ್ರಾಗ್ ಫ್ಲಿಕ್ ಮೂಲಕ ಖಾತೆ ತೆರೆದರು.
(6 / 7)

ಭಾರತ ತಂಡದ ಜೊತೆಗೆ ಮಲೇಷ್ಯಾ 2-0 ಗೋಲುಗಳಿಂದ ಥಾಯ್ಲೆಂಡ್ ತಂಡವನ್ನು ಸೋಲಿಸಿದರೆ, ಚೀನಾ ದಕ್ಷಿಣ ಕೊರಿಯಾವನ್ನು ಅದೇ ಅಂತರದಿಂದ ಸೋಲಿಸಿತು.
(7 / 7)

    ಹಂಚಿಕೊಳ್ಳಲು ಲೇಖನಗಳು