logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರಂಭಿಕ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿದ ಭಾರತ; ಉಳಿದ ಮೂರು ಪಂದ್ಯ ಗೆದ್ದರಷ್ಟೇ ಸೆಮಿಫೈನಲ್ ಆಸೆ ಜೀವಂತ

ಆರಂಭಿಕ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿದ ಭಾರತ; ಉಳಿದ ಮೂರು ಪಂದ್ಯ ಗೆದ್ದರಷ್ಟೇ ಸೆಮಿಫೈನಲ್ ಆಸೆ ಜೀವಂತ

Oct 05, 2024 09:46 AM IST

ICC Womens T20 World Cup 2024: ಮಹಿಳಾ ಟಿ20 ವಿಶ್ವಕಪ್ 2024 ಅಭಿಯಾನದ ಆರಂಭಿಕ ಪಂದ್ಯದಲ್ಲೇ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದೆ. ಆದರೆ ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

  • ICC Womens T20 World Cup 2024: ಮಹಿಳಾ ಟಿ20 ವಿಶ್ವಕಪ್ 2024 ಅಭಿಯಾನದ ಆರಂಭಿಕ ಪಂದ್ಯದಲ್ಲೇ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದೆ. ಆದರೆ ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ದುಬೈನಲ್ಲಿ ಅಕ್ಟೋಬರ್ 4ರ ಶುಕ್ರವಾರ ನಡೆದ ಮಹಿಳಾ ಟಿ 20 ವಿಶ್ವಕಪ್ 2024ರ ತನ್ನ ಆರಂಭಿಕ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 58 ರನ್​​ಗಳ ಹೀನಾಯ ಸೋಲನುಭವಿಸಿತು.
(1 / 5)
ದುಬೈನಲ್ಲಿ ಅಕ್ಟೋಬರ್ 4ರ ಶುಕ್ರವಾರ ನಡೆದ ಮಹಿಳಾ ಟಿ 20 ವಿಶ್ವಕಪ್ 2024ರ ತನ್ನ ಆರಂಭಿಕ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 58 ರನ್​​ಗಳ ಹೀನಾಯ ಸೋಲನುಭವಿಸಿತು.(AP)
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. 161 ರನ್​​ಗಳ ಗುರಿ ಬೆನ್ನತ್ತಿದ ಭಾರತ 19 ಓವರ್​​ಗಳಲ್ಲಿ 102 ರನ್​ಗಳಿಗೆ ಆಲೌಟ್ ಆಯಿತು.
(2 / 5)
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. 161 ರನ್​​ಗಳ ಗುರಿ ಬೆನ್ನತ್ತಿದ ಭಾರತ 19 ಓವರ್​​ಗಳಲ್ಲಿ 102 ರನ್​ಗಳಿಗೆ ಆಲೌಟ್ ಆಯಿತು.(AP)
ನ್ಯೂಜಿಲೆಂಡ್ ಉತ್ತಮ ಪ್ರದರ್ಶನ ನೀಡಿತು. ಸೋಫಿ ಡಿವೈನ್ 57 ರನ್ ಸಿಡಿಸಿ ಗಮನ ಸೆಳೆದರು. ಆ ಮೂಲಕ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ನೆರವಾದರು. ಭಾರತದ ಪರ ರೇಣುಕಾ ಸಿಂಗ್ 2 ವಿಕೆಟ್ ಪಡೆದು ಮಿಂಚಿದರು.
(3 / 5)
ನ್ಯೂಜಿಲೆಂಡ್ ಉತ್ತಮ ಪ್ರದರ್ಶನ ನೀಡಿತು. ಸೋಫಿ ಡಿವೈನ್ 57 ರನ್ ಸಿಡಿಸಿ ಗಮನ ಸೆಳೆದರು. ಆ ಮೂಲಕ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ನೆರವಾದರು. ಭಾರತದ ಪರ ರೇಣುಕಾ ಸಿಂಗ್ 2 ವಿಕೆಟ್ ಪಡೆದು ಮಿಂಚಿದರು.(AP)
ಭಾರತ ತಂಡವು ಬ್ಯಾಟಿಂಗ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಸ್ಮೃತಿ ಮಂಧಾನ, ಹರ್ಮನ್, ಶಫಾಲಿ, ಜೆಮಿಮಾ, ರಿಚಾ ಸೇರಿದಂತೆ ಎಲ್ಲರೂ ಸಹ ವೈಫಲ್ಯ ಅನುಭವಿಸಿದರು. ಹರ್ಮನ್ 15 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿದೆ.
(4 / 5)
ಭಾರತ ತಂಡವು ಬ್ಯಾಟಿಂಗ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಸ್ಮೃತಿ ಮಂಧಾನ, ಹರ್ಮನ್, ಶಫಾಲಿ, ಜೆಮಿಮಾ, ರಿಚಾ ಸೇರಿದಂತೆ ಎಲ್ಲರೂ ಸಹ ವೈಫಲ್ಯ ಅನುಭವಿಸಿದರು. ಹರ್ಮನ್ 15 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿದೆ.(AP)
ಸೋಲಿನ ಆರಂಭ ಕಂಡಿರುವ ಭಾರತ ತನ್ನ ಮುಂದಿನ ಪಂದ್ಯಗಳಲ್ಲಿ ಪಾಕಿಸ್ತಾನ (ಅ.6), ಶ್ರೀಲಂಕಾ (ಅ.9), ಆಸ್ಟ್ರೇಲಿಯಾ (13) ವಿರುದ್ಧ ಸೆಣಸಾಟ ನಡೆಸಲಿದೆ. ಉಳಿದ ಮೂರು ಪಂದ್ಯಗಳಲ್ಲೂ ಗೆದ್ದರೆ ಮಾತ್ರ ಸೆಮಿಫೈನಲ್ ಕನಸು ಜೀವಂತವಾಗಿರಲಿದೆ.
(5 / 5)
ಸೋಲಿನ ಆರಂಭ ಕಂಡಿರುವ ಭಾರತ ತನ್ನ ಮುಂದಿನ ಪಂದ್ಯಗಳಲ್ಲಿ ಪಾಕಿಸ್ತಾನ (ಅ.6), ಶ್ರೀಲಂಕಾ (ಅ.9), ಆಸ್ಟ್ರೇಲಿಯಾ (13) ವಿರುದ್ಧ ಸೆಣಸಾಟ ನಡೆಸಲಿದೆ. ಉಳಿದ ಮೂರು ಪಂದ್ಯಗಳಲ್ಲೂ ಗೆದ್ದರೆ ಮಾತ್ರ ಸೆಮಿಫೈನಲ್ ಕನಸು ಜೀವಂತವಾಗಿರಲಿದೆ.(AP)

    ಹಂಚಿಕೊಳ್ಳಲು ಲೇಖನಗಳು