logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Points Table: ಮಹಿಳಾ ಟಿ20 ವಿಶ್ವಕಪ್ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ದರ್ಬಾರ್; ಭಾರತಕ್ಕೆ ಯಾವ ಸ್ಥಾನ?

Points Table: ಮಹಿಳಾ ಟಿ20 ವಿಶ್ವಕಪ್ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ದರ್ಬಾರ್; ಭಾರತಕ್ಕೆ ಯಾವ ಸ್ಥಾನ?

Oct 09, 2024 05:00 PM IST

ICC Womens T20 World Cup 2024: ಮಹಿಳಾ ಟಿ20 ವಿಶ್ವಕಪ್ 2024ರ ಎ ಮತ್ತು ಬಿ ಗುಂಪಿಯನಲ್ಲಿ ಯಾವ ತಂಡಗಳು ಎಷ್ಟು ಪಂದ್ಯ ಗೆದ್ದಿವೆ. ಯಾವ ತಂಡಗಳು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿವೆ. ಇಲ್ಲಿದೆ ಮಾಹಿತಿ.

  • ICC Womens T20 World Cup 2024: ಮಹಿಳಾ ಟಿ20 ವಿಶ್ವಕಪ್ 2024ರ ಎ ಮತ್ತು ಬಿ ಗುಂಪಿಯನಲ್ಲಿ ಯಾವ ತಂಡಗಳು ಎಷ್ಟು ಪಂದ್ಯ ಗೆದ್ದಿವೆ. ಯಾವ ತಂಡಗಳು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿವೆ. ಇಲ್ಲಿದೆ ಮಾಹಿತಿ.
ನ್ಯೂಜಿಲೆಂಡ್ ವಿರುದ್ಧದ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡವು ಮಹಿಳಾ ಟಿ 20 ವಿಶ್ವಕಪ್​​ ಟೂರ್ನಿಯ ಪಾಯಿಂಟ್ಸ್ ಟೇಬಲ್​ನಲ್ಲಿ ನಂ.1 ಸ್ಥಾನಕ್ಕೆ ಏರಿದೆ. 'ಎ' ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಆಸೀಸ್​ ಆಡಿದ 2 ಪಂದ್ಯಗಳಲ್ಲಿ 4 ಅಂಕ ಗಳಿಸಿದೆ. ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿತ್ತು. ನೆಟ್ ರನ್ ರೇಟ್ ಪ್ರಸ್ತುತ +2.524.
(1 / 10)

ನ್ಯೂಜಿಲೆಂಡ್ ಸೋವು ಪಾಕಿಸ್ತಾನಕ್ಕೆ ದೊಡ್ಡ ಲಾಭ ತಂದುಕೊಟ್ಟಿತು. ಮೂರನೇ ಸ್ಥಾನದಲ್ಲಿದ್ದ ಪಾಕ್, ಲೀಗ್ ಟೇಬಲ್​ನಲ್ಲಿ 2ನೇ ಸ್ಥಾನಕ್ಕೆ ಜಿಗಿತ ಕಂಡಿತು. ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿತ್ತು. ಆದರೆ, 2ನೇ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಕಂಡಿತ್ತು. ಪಾಕ್ 2 ಪಂದ್ಯಗಳಲ್ಲಿ 2 ಅಂಕ ಗಳಿಸಿದ್ದು, ನೆಟ್ ರನ್ ರೇಟ್ +0.555.
(2 / 10)

ಲೀಗ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ವಿರುದ್ಧ ಸೋತ ನ್ಯೂಜಿಲೆಂಡ್, 3ನೇ ಸ್ಥಾನಕ್ಕೆ ಕುಸಿತ ಕಂಡಿತು. ಭಾರತ ತಂಡವನ್ನು ಸೋಲಿಸುವ ಮೂಲಕ ವಿಶ್ವಕಪ್ ಅಭಿಯಾನ ಪ್ರಾರಂಭಿಸಿದ ನ್ಯೂಜಿಲೆಂಡ್, 2 ಪಂದ್ಯಗಳಲ್ಲಿ 2 ಅಂಕ ಪಡೆದಿದೆ. ನೆಟ್ ರನ್ ರೇಟ್ -0.050 ಆಗಿದೆ.
(3 / 10)

ನ್ಯೂಜಿಲೆಂಡ್ ವಿರುದ್ಧ ಸೋತು, ಪಾಕಿಸ್ತಾನ ಎದುರು ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆದರೆ ಉಳಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರಷ್ಟೇ ತನ್ನ ಸೆಮಿಫೈನಲ್ ಕನಸು ಜೀವಂತವಾಗಿರಲಿದೆ. 2 ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ ಉತ್ತಮ ನೆಟ್ ರನ್​ ರೇಟ್ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿದೆ. ಟೀಮ್ ಇಂಡಿಯಾ ಆಡಿರುವ ಎರಡು ಪಂದ್ಯಗಳಲ್ಲಿ 2 ಅಂಕ ಗಳಿಸಿದ್ದು, ನೆಟ್ ರನ್ ರೇಟ್ ಪ್ರಸ್ತುತ -1.217.
(4 / 10)

'ಎ' ಗುಂಪಿನಲ್ಲಿ ಕೊನೆಯ ಸ್ಥಾನ ಗಳಿಸಿರುವ ಶ್ರೀಲಂಕಾ ತಂಡವು ಇನ್ನೂ ಖಾತೆ ತೆರೆದಿಲ್ಲ. ಆಡಿದ ಎರಡೂ ಪಂದ್ಯಗಳಲ್ಲೂ ಸೋಲು ಕಂಡಿದೆ. ಶ್ರೀಲಂಕಾ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ನೆಟ್ ರನ್ ರೇಟ್ ಪ್ರಸ್ತುತ -1.667.
(5 / 10)

ಇನ್ನು 'ಬಿ' ಗುಂಪಿನಲ್ಲಿ ಇಂಗ್ಲೆಂಡ್ 2 ಪಂದ್ಯಗಳಲ್ಲಿ 2 ಗೆದ್ದಿದ್ದು, 4 ಅಂಕ ಪಡೆದು ಅಗ್ರಸ್ಥಾನ ಪಡೆದಿದೆ. ಬಾಂಗ್ಲಾದೇಶ ಮತ್ತು ಸೌತ್ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ನೆಟ್​ರನ್​ ರೇಟ್ +0.653. 
(6 / 10)
ಇನ್ನು 'ಬಿ' ಗುಂಪಿನಲ್ಲಿ ಇಂಗ್ಲೆಂಡ್ 2 ಪಂದ್ಯಗಳಲ್ಲಿ 2 ಗೆದ್ದಿದ್ದು, 4 ಅಂಕ ಪಡೆದು ಅಗ್ರಸ್ಥಾನ ಪಡೆದಿದೆ. ಬಾಂಗ್ಲಾದೇಶ ಮತ್ತು ಸೌತ್ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ನೆಟ್​ರನ್​ ರೇಟ್ +0.653. (REUTERS)
ಇನ್ನು ಬಿ ಗುಂಪಿನಲ್ಲಿ ವೆಸ್ಟ್​ ಇಂಡೀಸ್ 2ನೇ ಸ್ಥಾನದಲ್ಲಿದೆ. ಆಡಿರುವ 2 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 1 ಸೋಲು ಕಂಡಿದೆ. ಸೌತ್ ಆಫ್ರಿಕಾ ವಿರುದ್ಧ ಸೋತು, ಸ್ಕಾಟ್ಲೆಂಡ್ ಎದುರು ಗೆಲುವು ಕಂಡಿದೆ. 2 ಅಂಕ ಪಡೆದಿದ್ದು, ನೆಟ್​ರನ್​ ರೇಟ್ +1.154.
(7 / 10)

ಬಿ ಗುಂಪಿನಲ್ಲಿ 3ನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ, 2ರಲ್ಲಿ 1 ಗೆಲುವು, 1 ಸೋಲು ಕಂಡಿದೆ. 2 ಅಂಕ ಪಡೆದಿದ್ದು, ನೆಟ್​ರನ್​ ರೇಟ್+0.245. 
(8 / 10)
ಬಿ ಗುಂಪಿನಲ್ಲಿ 3ನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ, 2ರಲ್ಲಿ 1 ಗೆಲುವು, 1 ಸೋಲು ಕಂಡಿದೆ. 2 ಅಂಕ ಪಡೆದಿದ್ದು, ನೆಟ್​ರನ್​ ರೇಟ್+0.245. (AP)
ಬಿ ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ತಂಡವು, 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 1 ಸೋಲು, 1 ಗೆಲುವು ಕಂಡಿದೆ. ಸ್ಕಾಟ್ಲೆಂಡ್ ವಿರುದ್ಧ ಗೆದ್ದು, ಇಂಗ್ಲೆಂಡ್ ಎದುರು ಸೋತಿದೆ. ನೆಟ್​ ರನ್ ರೇಟ್ -0.125.
(9 / 10)
ಬಿ ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ತಂಡವು, 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 1 ಸೋಲು, 1 ಗೆಲುವು ಕಂಡಿದೆ. ಸ್ಕಾಟ್ಲೆಂಡ್ ವಿರುದ್ಧ ಗೆದ್ದು, ಇಂಗ್ಲೆಂಡ್ ಎದುರು ಸೋತಿದೆ. ನೆಟ್​ ರನ್ ರೇಟ್ -0.125.(AP)
ಈ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿರುವ ಸ್ಕಾಟ್ಲೆಂಡ್, ಎರಡಕ್ಕೆ ಎರಡನ್ನೂ ಸೋತಿದೆ. ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸೋತಿದೆ. ನೆಟ್​​ ರನ್ ರೇಟ್ -1.897.
(10 / 10)

    ಹಂಚಿಕೊಳ್ಳಲು ಲೇಖನಗಳು