logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೆಜೆಂಡ್ಸ್ ಲೀಗ್​ ಫೈನಲ್​ಗೇರಲು ಭಾರತಕ್ಕೆ ಒಂದೇ ಹೆಜ್ಜೆ ಬಾಕಿ; ಇಂಡೋ-ಆಸೀಸ್ ಸೆಮಿಫೈನಲ್ ವೀಕ್ಷಿಸುವುದೇಗೆ?

ಲೆಜೆಂಡ್ಸ್ ಲೀಗ್​ ಫೈನಲ್​ಗೇರಲು ಭಾರತಕ್ಕೆ ಒಂದೇ ಹೆಜ್ಜೆ ಬಾಕಿ; ಇಂಡೋ-ಆಸೀಸ್ ಸೆಮಿಫೈನಲ್ ವೀಕ್ಷಿಸುವುದೇಗೆ?

Jul 12, 2024 04:32 PM IST

Indian Champions vs Australia Champions: ವಿಶ್ವ ಚಾಂಪಿಯನ್​ಶಿಪ್​ ಲೆಜೆಂಡ್ಸ್ ಲೀಗ್​​​ನಲ್ಲಿ ಭಾರತ ಚಾಂಪಿಯನ್ಸ್ ಮತ್ತು ಆಸ್ಟ್ರೇಲಿಯಾ ಚಾಂಪಿಯನ್ಸ್ ನಡುವಿನ ಸೆಮಿಫೈನಲ್ ಪಂದ್ಯವನ್ನು ಯಾವಾಗ, ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ವಿವರ.

  • Indian Champions vs Australia Champions: ವಿಶ್ವ ಚಾಂಪಿಯನ್​ಶಿಪ್​ ಲೆಜೆಂಡ್ಸ್ ಲೀಗ್​​​ನಲ್ಲಿ ಭಾರತ ಚಾಂಪಿಯನ್ಸ್ ಮತ್ತು ಆಸ್ಟ್ರೇಲಿಯಾ ಚಾಂಪಿಯನ್ಸ್ ನಡುವಿನ ಸೆಮಿಫೈನಲ್ ಪಂದ್ಯವನ್ನು ಯಾವಾಗ, ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ವಿವರ.
ವಿಶ್ವ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್​​ ಲೀಗ್-2024ರ 2ನೇ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಚಾಂಪಿಯನ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಗೆದ್ದ ತಂಡವು ಫೈನಲ್​ಗೆ ಅರ್ಹತೆ ಪಡೆದುಕೊಳ್ಳಲಿದೆ.
(1 / 7)

ನಾರ್ಥಾಂಪ್ಟನ್ ಕೌಂಟಿ ಗ್ರೌಂಡ್​​ನಲ್ಲಿ ಇಂಡೋ-ಆಸೀಸ್ ಸೆಮಿಫೈನಲ್ ನಡೆಯಲಿದೆ. ಇಂದು ರಾತ್ರಿ 9 ಗಂಟೆಗೆ ನಡೆಯುವ ಪಂದ್ಯದ ನೇರ ಪ್ರಸಾರ ವೀಕ್ಷಿಸುವುದೇಗೆ? ಇಲ್ಲಿದೆ ವಿವರ. 8.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.
(2 / 7)

ಇಂದು ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ಮತ್ತು ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯ ನಾರ್ಥಾಂಪ್ಟನ್ ಕೌಂಟಿ ಗ್ರೌಂಡ್​​ನಲ್ಲೇ ನಡೆಯಲಿದೆ. ಮೊದಲ ಸೆಮಿಫೈನಲ್ ಸಂಜೆ 5 ಗಂಟೆಗೆ ಆರಂಭವಾಗಲಿದೆ. ಸಂಜೆ 4:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.
(3 / 7)

ವಿಶ್ವ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್ ಲೀಗ್​​​ನ ಎರಡೂ ಸೆಮಿಫೈನಲ್ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​​​ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಹೆಚ್​​ಡಿ, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ ಈ ಪಂದ್ಯ ಪ್ರಸಾರವಾಗಲಿದೆ.
(4 / 7)

ಭಾರತದಲ್ಲಿ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡುವ ಹಕ್ಕುಗಳನ್ನು ಫ್ಯಾನ್ ಕೋಡ್ ಹೊಂದಿದೆ. ಆದ್ದರಿಂದ, ಆಟವನ್ನು ಫ್ಯಾನ್​ಕೋಡ್ ಅಪ್ಲಿಕೇಶನ್ ಮತ್ತು ವೆಬ್​ಸೈಟ್​ನಲ್ಲಿ ನೋಡಬಹುದು. ಮೊಬೈಲ್​​ನಲ್ಲಿ ಆಟವನ್ನು ಉಚಿತವಾಗಿ ನೋಡಲು ಸಾಧ್ಯವಿಲ್ಲ. 
(5 / 7)

ಭಾರತ ಚಾಂಪಿಯನ್ಸ್ ತಂಡ: ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಗುರ್ಕೀರತ್ ಮನ್, ರಾಹುಲ್ ಶರ್ಮಾ, ನಮನ್ ಓಜಾ, ರಾಹುಲ್ ಶುಕ್ಲಾ, ಆರ್ಪಿ ಸಿಂಗ್, ವಿನಯ್ ಕುಮಾರ್, ಧವಳ್ ಕುಲಕರ್ಣಿ, ಸೌರಭ್ ತಿವಾರಿ, ಅನುರೀತ್ ಸಿಂಗ್, ಪವನ್ ನೇಗಿ.
(6 / 7)

ಲೀಗ್ ಪಂದ್ಯದಲ್ಲಿ ಭಾರತೀಯ ಚಾಂಪಿಯನ್ಸ್, ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ 23 ರನ್​ಗಳಿಂದ ಸೋತಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಭಾರತ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಶಕ್ತವಾಯಿತು. ಯೂಸುಫ್ ಪಠಾಣ್ 78 ರನ್ ಸಿಡಿಸಿ ಔಟಾದರು.
(7 / 7)

    ಹಂಚಿಕೊಳ್ಳಲು ಲೇಖನಗಳು