logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  World Elephant Day: ಆನೆಗಳು ಒಂಟಿತನ ಇಷ್ಟಪಡಲ್ಲ, ಹೆಣ್ಣು ಆನೆಯೇ ಗುಂಪಿಗೆ ಯಜಮಾನಿ; ಆನೆ ಸಾಮ್ರಾಜ್ಯದ ಕುರಿತ ಕುತೂಹಲಕಾರಿ ಮಾಹಿತಿಯಿದು

World Elephant Day: ಆನೆಗಳು ಒಂಟಿತನ ಇಷ್ಟಪಡಲ್ಲ, ಹೆಣ್ಣು ಆನೆಯೇ ಗುಂಪಿಗೆ ಯಜಮಾನಿ; ಆನೆ ಸಾಮ್ರಾಜ್ಯದ ಕುರಿತ ಕುತೂಹಲಕಾರಿ ಮಾಹಿತಿಯಿದು

Aug 12, 2024 05:30 AM IST

ಆಗಸ್ಟ್‌ 12 ರಂದು ಪ್ರತಿವರ್ಷ ವಿಶ್ವ ಆನೆಗಳ ದಿನ ಆಚರಿಸಲಾಗುತ್ತದೆ. ಆನೆಗಳ ಮಹತ್ವ ಹಾಗೂ ಅವುಗಳ ರಕ್ಷಣೆಯ ಪ್ರಾಮುಖ್ಯವನ್ನು ತಿಳಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆನೆಗಳ ದಿನದ ಸಂದರ್ಭ ಆನೆ ಸಾಮ್ರಾಜ್ಯದ ಸಾಮಾಜಿಕ ಬದುಕಿನ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಯಿದು.

  • ಆಗಸ್ಟ್‌ 12 ರಂದು ಪ್ರತಿವರ್ಷ ವಿಶ್ವ ಆನೆಗಳ ದಿನ ಆಚರಿಸಲಾಗುತ್ತದೆ. ಆನೆಗಳ ಮಹತ್ವ ಹಾಗೂ ಅವುಗಳ ರಕ್ಷಣೆಯ ಪ್ರಾಮುಖ್ಯವನ್ನು ತಿಳಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆನೆಗಳ ದಿನದ ಸಂದರ್ಭ ಆನೆ ಸಾಮ್ರಾಜ್ಯದ ಸಾಮಾಜಿಕ ಬದುಕಿನ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಯಿದು.
ಮನುಷ್ಯ ಸಂಘಜೀವಿ ಎಂಬ ಮಾತಿದೆ. ಆದರೆ ಮನುಷ್ಯ ಮಾತ್ರವಲ್ಲ, ಆನೆಗಳು ಕೂಡ ಸಂಘಜೀವಿಗಳು. ಇವು ಎಂದಿಗೂ ಒಂದಾಗಿ ಅಂದರೆ ಗುಂಪಿನಲ್ಲಿ ಬದುಕಲು ಇಷ್ಟಪಡುತ್ತವೆ. ರಕ್ಷಣೆ ಹಾಗೂ ಉಳಿವಿನ ಕಾರಣದಿಂದ ಮಾತ್ರವಲ್ಲ, ಭಾವನಾತ್ಮಕ ಕಾರಣಗಳಿಂದಲೂ ಆನೆಗಳು ಗುಂಪಾಗಿ ಬದುಕಲು ಇಷ್ಟಪಡುತ್ತವೆ. 
(1 / 8)

ಕೌಟುಂಬಿಕ ಪ್ರಾಮುಖ್ಯತೆ: ಆನೆಗಳು ಹಿಂಡಿನಲ್ಲಿ ಬದುಕುತ್ತವೆ. ಆದರೆ ಈ ಹಿಂಡಿಗೆ ಹೆಣ್ಣು ಆನೆಯೇ ಯಜಮಾನಿ. ಆನೆಗಳಲ್ಲಿ ಮಾತೃಪ್ರಧಾನ ಕುಟುಂಬವಿರುತ್ತದೆ. ಆನೆಗಳು 6 ರಿಂದ 20 ಸದಸ್ಯರನ್ನು ಹೊಂದಿದೆ ಗುಂಪಿನಲ್ಲಿರುತ್ತವೆ. ಹೆಣ್ಣು ಆನೆ ಜೀವನಪೂರ್ತಿ ತನ್ನ ಗುಂಪನ್ನು ಕಾಯುವ ಕೆಲಸ ಮಾಡುತ್ತದೆ. 
(2 / 8)

12 ರಿಂದ 15 ವರ್ಷಗಳ ನಡುವಿನ ಪ್ರೌಢಾವಸ್ಥೆಯನ್ನು ತಲುಪಿದ ನಂತರ ಗಂಡು ಆನೆಗಳು ಸ್ವಾತಂತ್ರ್ಯರಾಗುತ್ತವೆ. ನಂತರ ಅವು ತಮ್ಮ ಹಿಂಡಿನಿಂದ ದೂರಾಗುತ್ತವೆ. ಕಡಿಮೆ ಸಂಖ್ಯೆ ಇರುವ ಗಂಡುಮನೆಗಳ ಗುಂಪು ಸೇರುತ್ತವೆ. ಆಗ ಗಂಡು ಆನೆಗಳ ಗುಂಪು ಹಾಗೂ ಹೆಣ್ಣು ಆನೆಗಳ ಗುಂಪು ಪ್ರತ್ಯೇಕವಾಗುತ್ತದೆ. ಇವು ಅಪರೂಪಕ್ಕೆ ಭೇಟಿಯಾಗುತ್ತವೆ. ಈ ಭೇಟಿ ಸಂತಾನೋತ್ಪತ್ತಿಗೆ ಸೀಮಿತವಾಗಿದೆ. 
(3 / 8)

ಹೆಣ್ಣು ಆನೆಗಳು ಭವಿಷ್ಯದ ಪೀಳಿಗೆಯನ್ನು ಬೆಳೆಸುವ ಮತ್ತು ಅವುಗಳನ್ನು ಪೋಷಿಸುವತ್ತ ಗಮನ ಹರಿಸಿದರೆ ಗಂಡು ಆನೆಗಳು ರಕ್ಷಣೆಯ ಮಾಡುವ ಕೆಲಸ ಮಾಡುತ್ತವೆ. ಆದರೆ 30 ವರ್ಷ ಕಡಿಮೆ ಇರುವ ಆನೆಗಳನ್ನು ಹಿರಿಯ ಆನೆಗಳು ಹೊಡೆದು ಓಡಿಸುತ್ತವೆ. ಹಾಗಾಗಿ ಇದು ಸಂಗಾತಿಯನ್ನು ಹುಡುಕಿಕೊಳ್ಳಲು ಕಷ್ಟಪಡಬೇಕಾಗುತ್ತದೆ.
(4 / 8)

ಆನೆಗಳು ತಮಗೆ ಅವಶ್ಯವಿರುವ ಸಂಪನ್ಮೂಲ ಸೀಮಿತವಾಗಿದ್ದರೆ ತಮ್ಮ ಹಿಂಡನ್ನು ವಿಭಜನೆ ಮಾಡುತ್ತವೆ. ಅಂತಹ ಸಂದರ್ಭದಲ್ಲಿ ತಮ್ಮನ್ನು ಉಳಿಸಿಕೊಳ್ಳಲು ಪ್ರತ್ಯೇಕ ಕುಟುಂಬಗಳನ್ನಾಗಿ ಮಾಡಿಕೊಳ್ಳುತ್ತವೆ. ಈ ಸಣ್ಣ ಗುಂಪುಗಳು ತಳೀಯವಾಗಿ ಸಂಬಂಧಿಸಿವೆ ಮತ್ತು ಇದನ್ನು ಬಾಂಡ್‌ ಗುಂಪು ಎಂದು ಕರೆಯಲಾಗುತ್ತದೆ. 
(5 / 8)

ಆನೆ ಕುಲ: ಆನೆ ಹಿಂಡಿನ ಗಾತ್ರವು ಅವುಗಳಿಗೆ ಲಭ್ಯವಿರುವ ಸಂಪನ್ಮೂಲಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುತ್ತದೆ. ಆಹಾರ ಮತ್ತು ನೀರು ಸುಲಭವಾಗಿ ಮತ್ತು ಸ್ಥಿರವಾಗಿ ಲಭ್ಯವಿದ್ದಾಗ, ಸಾಮಾನ್ಯವಾಗಿ ಶುಷ್ಕ ಋತುವಿನ ಮನೆಯ ವ್ಯಾಪ್ತಿಯನ್ನು ಹಂಚಿಕೊಳ್ಳುವ ಆನೆಗಳು ಕುಲಗಳೆಂದು ಕರೆಯಲ್ಪಡುವ ದೊಡ್ಡ ಗುಂಪುಗಳಲ್ಲಿ ಸೇರಿಕೊಳ್ಳುತ್ತವೆ. 
(6 / 8)

ಆನೆಗಳಲ್ಲಿ ಜಬುಲಾನಿ ಆನೆಗಳ ಹಿಂಡು ಭಿನ್ನವಾಗಿರುತ್ತವೆ. ಜಬುಲಾನಿ ಹಿಂಡಿನ ಹೆಣ್ಣು ಮತ್ತು ಗಂಡುಗಳು ಸಾಮರಸ್ಯದಿಂದ ಒಟ್ಟಿಗೆ ವಾಸಿಸುತ್ತವೆ. 
(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(8 / 8)

    ಹಂಚಿಕೊಳ್ಳಲು ಲೇಖನಗಳು