logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೆಬನಾನ್‌ನಲ್ಲಿ ಪೇಜರ್‌, ವಾಕಿಟಾಕಿ, ಸೋಲಾರ್‌ ವಸ್ತುಗಳ ಸ್ಪೋಟದಿಂದ 32 ಮಂದಿ ಸಾವು; ಹೀಗಿತ್ತು ಸ್ಪೋಟದ ತೀವ್ರತೆಯ ನೋಟ

ಲೆಬನಾನ್‌ನಲ್ಲಿ ಪೇಜರ್‌, ವಾಕಿಟಾಕಿ, ಸೋಲಾರ್‌ ವಸ್ತುಗಳ ಸ್ಪೋಟದಿಂದ 32 ಮಂದಿ ಸಾವು; ಹೀಗಿತ್ತು ಸ್ಪೋಟದ ತೀವ್ರತೆಯ ನೋಟ

Sep 19, 2024 12:33 PM IST

ಹಲವು ದೇಶಗಳಲ್ಲಿ ಯುದ್ದ ಭೀತಿ ಇರುವಾಗಲೇ ಲೆಬನಾನ್ ನಲ್ಲಿ ಮೂರು ದಿನಗಳಿಂದ ಸರಣಿ ಸ್ಪೋಟ ಸಂಭವಿಸುತ್ತಲೇ ಇವೆ. ಇದರಿಂದ ಹಲವರು ಮೃತಪಟ್ಟು, ಗಾಯಗೊಂಡವರ ಸಂಖ್ಯೆಯೂ ಅಧಿಕವಾಗಿದೆ.

  • ಹಲವು ದೇಶಗಳಲ್ಲಿ ಯುದ್ದ ಭೀತಿ ಇರುವಾಗಲೇ ಲೆಬನಾನ್ ನಲ್ಲಿ ಮೂರು ದಿನಗಳಿಂದ ಸರಣಿ ಸ್ಪೋಟ ಸಂಭವಿಸುತ್ತಲೇ ಇವೆ. ಇದರಿಂದ ಹಲವರು ಮೃತಪಟ್ಟು, ಗಾಯಗೊಂಡವರ ಸಂಖ್ಯೆಯೂ ಅಧಿಕವಾಗಿದೆ.
ಲೆಬನಾನ್‌ ದೇಶದಲ್ಲಿ ಸರಣಿ ಸ್ಪೋಟ ಸಂಭವಿಸಿದೆ. ಸಾರ್ವಜನಿಕ ಸ್ಥಳಗಳು, ಮಾಲ್‌ಗಳಲ್ಲಿಯೇ ಪೇಜರ್‌, ಸೋಲಾರ್‌ ಪೆನಲ್‌ಗಳ ಸ್ಪೋಟದಿಂದ ಭಾರೀ ಸಾವು ನೋವುಗಳು ಸಂಭವಿಸಿವೆ.
(1 / 7)

ವಿಶೇಷವಾಗಿ ಪೇಜರ್‌ಗಳ ಬಳಕೆ ಇರುವ ಲೆಬನಾನ್‌ನಲ್ಲಿ ಸ್ಪೋಟಕ್ಕೆ ಬಳಸಿಕೊಳ್ಳಲಾಯಿತೇ ಎನ್ನುವ ಅನುಮಾನವಿದ್ದು, ತನಿಖೆಗೆ ಆದೇಶಿಸಲಾಗಿದೆ.
(2 / 7)

ಲೆಬನಾನ್‌ನ  ಬೈರೂತ್ ಸೇರಿದಂತೆ ಹಲವು ಕಡೆಗಳಲ್ಲಿ ಪೇಜರ್, ವಾಕಿ ಟಾಕಿ, ಸೋಲಾರ್ ಉಪಕರಣಗಳ ಸ್ಫೋಟ ಸಂಭವಿಸಿದೆ. ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಇದರಲ್ಲಿ  32 ಮಂದಿ ಮೃತಪಟ್ಟಿದ್ದು 3,250ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ.
(3 / 7)

ಏಕ ಕಾಲಕ್ಕೆ ಹಲವು ಕಡೆಗಳಲ್ಲಿ ಸೋಲಾರ್‌ ಪೆನಲ್‌, ವಾಕಿ ಟಾಕಿಗಳು ಸ್ಪೋಟಗೊಂಡಿದ್ದು, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
(4 / 7)

ಪೇಜರ್‌ಗಳನ್ನು ಗುರಿಯಾಗಿಟ್ಟುಕೊಂಡು ಉಗ್ರ ಸಂಘಟನೆಗಳು ದಾಳಿ ಮಾಡಿರಬೇಕು ಎನ್ನುವುದು ಪ್ರಾಥಮಿಕ ತನಿಖೆಯಿಂದ ದೊರೆತ ಮಾಹಿತಿ.
(5 / 7)

ಗಾಯಗೊಂಡಿರುವ ಜನರು ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಲೆಬನಾನ್ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
(6 / 7)

ಮೂರು ದಿನದಿಂದ ಹೊಸ ಸ್ಫೋಟಗಳು ಅಲ್ಲಲ್ಲಿ ಸಂಭವಿಸುತ್ತಿರುವುದು ಜನರನ್ನು ಮತ್ತಷ್ಟು ಕಂಗಾಲಾಗಿಸಿವೆ. ಘಟನೆ ಬಳಿಕ ಹಿಜ್ಬುಲ್ಲಾ ಮತ್ತು ಇಸ್ರೇಲ್‌ ನಡುವೆ ಯುದ್ಧದ ಭೀತಿಯೂ ಅಧಿಕವಾಗಿದೆ.
(7 / 7)

    ಹಂಚಿಕೊಳ್ಳಲು ಲೇಖನಗಳು