logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wtc Points Table: ನ್ಯೂಜಿಲೆಂಡ್ ಮಣಿಸಿದ ಶ್ರೀಲಂಕಾ, ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ

WTC Points Table: ನ್ಯೂಜಿಲೆಂಡ್ ಮಣಿಸಿದ ಶ್ರೀಲಂಕಾ, ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ

Sep 24, 2024 06:45 AM IST

WTC Points Table 2023-2025: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ 2023-25 ಪಾಯಿಂಟ್ಸ್ ಟೇಬಲ್​​ನಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್​​​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಶ್ರೀಲಂಕಾ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ, ಕಿವೀಸ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

  • WTC Points Table 2023-2025: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ 2023-25 ಪಾಯಿಂಟ್ಸ್ ಟೇಬಲ್​​ನಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್​​​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಶ್ರೀಲಂಕಾ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ, ಕಿವೀಸ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
WTC Points Table: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಭರ್ಜರಿ ಗೆಲುವು ಸಾಧಿಸಿದೆ. ಇದು ಡಬ್ಲ್ಯುಟಿಸಿ ಪಾಯಿಂಟ್ಸ್​ ಟೇಬಲ್​​​ನಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಈ ಪಂದ್ಯವನ್ನು ಗೆದ್ದ ಶ್ರೀಲಂಕಾ ಮೂರನೇ ಸ್ಥಾನಕ್ಕೆ ಜಿಗಿದರೆ, ನ್ಯೂಜಿಲೆಂಡ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಹಾಗಾದರೆ ಅಗ್ರ ಎರಡು ಸ್ಥಾನಗಳನ್ನು ಯಾವ ತಂಡಗಳು ಅಲಂಕರಿಸಿವೆ? ಯಾವ ತಂಡ, ಎಷ್ಟನೇ ಸ್ಥಾನ ಪಡೆದಿದೆ? ಇಲ್ಲಿದೆ ವಿವರ.
(1 / 5)
WTC Points Table: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಭರ್ಜರಿ ಗೆಲುವು ಸಾಧಿಸಿದೆ. ಇದು ಡಬ್ಲ್ಯುಟಿಸಿ ಪಾಯಿಂಟ್ಸ್​ ಟೇಬಲ್​​​ನಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಈ ಪಂದ್ಯವನ್ನು ಗೆದ್ದ ಶ್ರೀಲಂಕಾ ಮೂರನೇ ಸ್ಥಾನಕ್ಕೆ ಜಿಗಿದರೆ, ನ್ಯೂಜಿಲೆಂಡ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಹಾಗಾದರೆ ಅಗ್ರ ಎರಡು ಸ್ಥಾನಗಳನ್ನು ಯಾವ ತಂಡಗಳು ಅಲಂಕರಿಸಿವೆ? ಯಾವ ತಂಡ, ಎಷ್ಟನೇ ಸ್ಥಾನ ಪಡೆದಿದೆ? ಇಲ್ಲಿದೆ ವಿವರ.
ಗಾಲೆ ಟೆಸ್ಟ್​​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಶ್ರೀಲಂಕಾ 12 ಅಂಕಗಳನ್ನು ಗಳಿಸಿದೆ. ಲಂಕಾ 8 ಪಂದ್ಯಗಳಿಂದ ಶೇ 50 ಗೆಲುವಿನ ಶೇಕಡಾವಾರು ಹೊಂದಿದ್ದು, 48 ಅಂಕ ಗಳಿಸಿದೆ. ಈ ಪಂದ್ಯಕ್ಕೂ ಮುನ್ನ 4ನೇ ಸ್ಥಾನದಲ್ಲಿದ್ದ ಸಿಂಹಳೀಯರು, ಇದೀಗ 3ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.
(2 / 5)
ಗಾಲೆ ಟೆಸ್ಟ್​​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಶ್ರೀಲಂಕಾ 12 ಅಂಕಗಳನ್ನು ಗಳಿಸಿದೆ. ಲಂಕಾ 8 ಪಂದ್ಯಗಳಿಂದ ಶೇ 50 ಗೆಲುವಿನ ಶೇಕಡಾವಾರು ಹೊಂದಿದ್ದು, 48 ಅಂಕ ಗಳಿಸಿದೆ. ಈ ಪಂದ್ಯಕ್ಕೂ ಮುನ್ನ 4ನೇ ಸ್ಥಾನದಲ್ಲಿದ್ದ ಸಿಂಹಳೀಯರು, ಇದೀಗ 3ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.(AFP)
ಆದರೆ ಶ್ರೀಲಂಕಾ ವಿರುದ್ಧ ಸೋತ ನಂತರ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ ಪಾಯಿಂಟ್ಸ್ ಟೇಬಲ್​ನಲ್ಲಿ 1 ಸ್ಥಾನ ಕುಸಿದಿದೆ. ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿರುವ ಕಿವೀಸ್, 42.85 ಗೆಲುವಿನ ಶೇಕಡಾವಾರಿನೊಂದಿಗೆ 36 ಅಂಕ ಸಂಪಾದಿಸಿದೆ.
(3 / 5)
ಆದರೆ ಶ್ರೀಲಂಕಾ ವಿರುದ್ಧ ಸೋತ ನಂತರ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ ಪಾಯಿಂಟ್ಸ್ ಟೇಬಲ್​ನಲ್ಲಿ 1 ಸ್ಥಾನ ಕುಸಿದಿದೆ. ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿರುವ ಕಿವೀಸ್, 42.85 ಗೆಲುವಿನ ಶೇಕಡಾವಾರಿನೊಂದಿಗೆ 36 ಅಂಕ ಸಂಪಾದಿಸಿದೆ.(AP)
ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿದೆ. ಭಾನುವಾರ (ಸೆಪ್ಟೆಂಬರ್ 22) ಬಾಂಗ್ಲಾದೇಶ ವಿರುದ್ಧ ಚೆನ್ನೈ ಟೆಸ್ಟ್ ಗೆಲ್ಲುವ ಮೂಲಕ ಭಾರತ ಅಮೂಲ್ಯ 12 ಅಂಕಗಳನ್ನು ಗಳಿಸಿದೆ. ಇದರ ಪರಿಣಾಮ ಭಾರತದ ಗೆಲುವಿನ ಶೇಕಡಾವಾರು 71.67ಕ್ಕೆ ತಲುಪಿದೆ. ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು, 10 ಪಂದ್ಯಗಳಲ್ಲಿ 90 ಅಂಕ, ಶೇ 62.5ರಷ್ಟು ಗೆಲುವನ್ನು ಹೊಂದಿದೆ.
(4 / 5)
ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿದೆ. ಭಾನುವಾರ (ಸೆಪ್ಟೆಂಬರ್ 22) ಬಾಂಗ್ಲಾದೇಶ ವಿರುದ್ಧ ಚೆನ್ನೈ ಟೆಸ್ಟ್ ಗೆಲ್ಲುವ ಮೂಲಕ ಭಾರತ ಅಮೂಲ್ಯ 12 ಅಂಕಗಳನ್ನು ಗಳಿಸಿದೆ. ಇದರ ಪರಿಣಾಮ ಭಾರತದ ಗೆಲುವಿನ ಶೇಕಡಾವಾರು 71.67ಕ್ಕೆ ತಲುಪಿದೆ. ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು, 10 ಪಂದ್ಯಗಳಲ್ಲಿ 90 ಅಂಕ, ಶೇ 62.5ರಷ್ಟು ಗೆಲುವನ್ನು ಹೊಂದಿದೆ.(PTI)
ಡಬ್ಲ್ಯುಟಿಸಿ ಟೇಬಲ್​​ನಲ್ಲಿ ಇಂಗ್ಲೆಂಡ್ 5ನೇ ಸ್ಥಾನದಲ್ಲಿದ್ದು, 16 ಪಂದ್ಯಗಳಲ್ಲಿ ಶೇ 42.19ರಷ್ಟು ಗೆಲುವಿನ ಪ್ರಮಾಣ ಹೊಂದಿದೆ. ಜೊತೆಗೆ 81 ಅಂಕ ಪಡೆದಿದೆ. 6ನೇ ಸ್ಥಾನದಲ್ಲಿರುವ ಬಾಂಗ್ಲಾದೇಶ, 7 ಪಂದ್ಯಗಳಿಂದ 33 ಅಂಕ ಮತ್ತು ಗೆಲುವಿನ ಶೇಕಡಾವಾರು 39.29 ಹೊಂದಿದೆ. ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಕ್ರಮವಾಗಿ ಏಳನೇ, ಎಂಟನೇ ಮತ್ತು ಒಂಬತ್ತನೇ ಸ್ಥಾನದಲ್ಲಿವೆ.
(5 / 5)
ಡಬ್ಲ್ಯುಟಿಸಿ ಟೇಬಲ್​​ನಲ್ಲಿ ಇಂಗ್ಲೆಂಡ್ 5ನೇ ಸ್ಥಾನದಲ್ಲಿದ್ದು, 16 ಪಂದ್ಯಗಳಲ್ಲಿ ಶೇ 42.19ರಷ್ಟು ಗೆಲುವಿನ ಪ್ರಮಾಣ ಹೊಂದಿದೆ. ಜೊತೆಗೆ 81 ಅಂಕ ಪಡೆದಿದೆ. 6ನೇ ಸ್ಥಾನದಲ್ಲಿರುವ ಬಾಂಗ್ಲಾದೇಶ, 7 ಪಂದ್ಯಗಳಿಂದ 33 ಅಂಕ ಮತ್ತು ಗೆಲುವಿನ ಶೇಕಡಾವಾರು 39.29 ಹೊಂದಿದೆ. ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಕ್ರಮವಾಗಿ ಏಳನೇ, ಎಂಟನೇ ಮತ್ತು ಒಂಬತ್ತನೇ ಸ್ಥಾನದಲ್ಲಿವೆ.(PTI)

    ಹಂಚಿಕೊಳ್ಳಲು ಲೇಖನಗಳು