logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pv Sindhu: 28ನೇ ವರ್ಷಕ್ಕೆ ಕಾಲಿಟ್ಟ ಚಿನ್ನದ ಹುಡುಗಿ; ಪಿವಿ ಸಿಂಧು ದಾಖಲೆಗಳು ಒಂದೆರಡಲ್ಲ

PV Sindhu: 28ನೇ ವರ್ಷಕ್ಕೆ ಕಾಲಿಟ್ಟ ಚಿನ್ನದ ಹುಡುಗಿ; ಪಿವಿ ಸಿಂಧು ದಾಖಲೆಗಳು ಒಂದೆರಡಲ್ಲ

Jul 06, 2023 11:47 AM IST

PV Sindhu birthday : ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬುಧವಾರ (ಜುಲೈ 5) ತಮ್ಮ 28ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಓಲಿಂಪಿಕ್‌ ಪದಕ ವಿಜೇತೆ ಸಿಂಧು ವಿಶ್ವದ ಅತ್ಯಂತ ಪ್ರಸಿದ್ಧ ಬ್ಯಾಡ್ಮಿಂಟನ್ ತಾರೆ. ಅಲ್ಲದೆ ಶ್ರೀಮಂತ ಆಟಗಾರ್ತಿ ಕೂಡಾ ಹೌದು.

  • PV Sindhu birthday : ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬುಧವಾರ (ಜುಲೈ 5) ತಮ್ಮ 28ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಓಲಿಂಪಿಕ್‌ ಪದಕ ವಿಜೇತೆ ಸಿಂಧು ವಿಶ್ವದ ಅತ್ಯಂತ ಪ್ರಸಿದ್ಧ ಬ್ಯಾಡ್ಮಿಂಟನ್ ತಾರೆ. ಅಲ್ಲದೆ ಶ್ರೀಮಂತ ಆಟಗಾರ್ತಿ ಕೂಡಾ ಹೌದು.
1995ರಲ್ಲಿ ಸಿಂಧು ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಜನಿಸಿದರು. ಅವರು 2011ರಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದರು. ಅಂದಿನಿಂದ, ಸಿಂಧು ದೇಶದ ಪ್ರಮುಖ ಮಹಿಳಾ ಅಥ್ಲೀಟ್‌ಗಳಲ್ಲಿ ಒಬ್ಬರಾಗಿದ್ದಾರೆ. ಬ್ಯಾಡ್ಮಿಂಟನ್‌ನ ಬಹುತೇಕ ಎಲ್ಲಾ ಪ್ರಮುಖ ಟೂರ್ನಿಗಳಲ್ಲೂ ಸಿಂಧು ಪದಕಗಳನ್ನು ಗೆದ್ದಿದ್ದಾರೆ.
(1 / 7)

ಸಿಂಧು ಹಲವು ಪ್ರಮುಖ ಟೂರ್ನಿಗಳನ್ನು ಗೆದ್ದಿದ್ದಾರೆ. ಅದರಲ್ಲಿ 2016ರ ರಿಯೊ ಒಲಿಂಪಿಕ್ಸ್ ಮತ್ತು 2020 ಟೋಕಿಯೊ ಒಲಿಂಪಿಕ್ಸ್ ಅವರ ಹಾಗೂ ದೇಶದ ಪಾಲಿಗೆ ತುಂಬಾ ವಿಶೇಷ.  2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದರೆ, 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟರು. ಎರಡು ಒಲಿಂಪಿಕ್ಸ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆ ಸಿಂಧು ಅವರದ್ದು.
(2 / 7)

2019ರಲ್ಲಿ ಬಾಸೆಲ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಚಿನ್ನದ ಪದಕ ಗೆದ್ದರು. ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
(3 / 7)

2013 ಮತ್ತು 2014ರಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗಳಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದರ ನಂತರ, 2017 ಮತ್ತು 2018 ರಲ್ಲಿ ಬೆಳ್ಳಿ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಆ ಮೂಲಕ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 5 ಪದಕಗಳನ್ನು ಗೆದ್ದಿದ್ದಾರೆ.
(4 / 7)

ಸಿಂಧು ಏಷ್ಯನ್ ಗೇಮ್ಸ್‌ನಲ್ಲೂ ಎರಡು ಪದಕ ಗೆದ್ದಿದ್ದಾರೆ. 2018ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು. ಅದಕ್ಕೂ  ಹಿಂದೆ 2014ರಲ್ಲಿ ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
(5 / 7)

ಪಿವಿ ಸಿಂಧು ಸ್ವಿಸ್ ಓಪನ್, ಸಿಂಗಾಪುರ್ ಓಪನ್ ಮತ್ತು ಸೈಯದ್ ಮೋದಿ ಇಂಟರ್‌ನ್ಯಾಶನಲ್‌ನಂತಹ ಹಲವು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಟೂರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
(6 / 7)

ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ನ ಶ್ರೇಯಾಂಕದಲ್ಲಿ ಸಿಂಧು ಎರಡನೇ ಸ್ಥಾನದಲ್ಲಿದ್ದಾರೆ. ಅವರು ಏಪ್ರಿಲ್ 2017ರಲ್ಲಿ ಈ ಶ್ರೇಯಾಂಕ ಪಡೆದರು. 
(7 / 7)
ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ನ ಶ್ರೇಯಾಂಕದಲ್ಲಿ ಸಿಂಧು ಎರಡನೇ ಸ್ಥಾನದಲ್ಲಿದ್ದಾರೆ. ಅವರು ಏಪ್ರಿಲ್ 2017ರಲ್ಲಿ ಈ ಶ್ರೇಯಾಂಕ ಪಡೆದರು. (Photos- PV Sindhu Instagram)

    ಹಂಚಿಕೊಳ್ಳಲು ಲೇಖನಗಳು