logo
ಕನ್ನಡ ಸುದ್ದಿ  /  Sports  /  Bengaluru: A Female Athlete Who Was Taking A Bath Captured A Video Of A Volleyball Player

Bengaluru: ಸ್ನಾನ ಮಾಡ್ತಿದ್ದ ಮಹಿಳಾ ಅಥ್ಲೀಟ್​ ವಿಡಿಯೋ ಸೆರೆಹಿಡಿದ ವಾಲಿಬಾಲ್​ ಆಟಗಾರ್ತಿ!

HT Kannada Desk HT Kannada

Mar 30, 2023 06:35 PM IST

ಖಾಸಗಿ ವಿಡಿಯೋ ಸೆರೆ

  • ಆಟಗಾರ್ತಿ ಖಾಸಗಿ ವಿಡಿಯೋ ಸೆರೆ ಹಿಡಿದ ಘಟನೆಗೆ ಸಂಬಂಧಿಸಿ ಐಪಿಸಿ ಸೆಕ್ಷನ್ 354, ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ಮೊಬೈಲ್ ಪರಿಶೀಲಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಖಾಸಗಿ ವಿಡಿಯೋ ಸೆರೆ
ಖಾಸಗಿ ವಿಡಿಯೋ ಸೆರೆ (USA Today)

ಮಹಿಳಾ ಕ್ರೀಡಾಪಟುವೊಬ್ಬಳು​​​​ ಸ್ನಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ವಾಲಿಬಾಲ್​ ಆಟಗಾರ್ತಿಯೊಬ್ಬಳು ಆಕೆಯ ಖಾಸಗಿ ವಿಡಿಯೋ ಸೆರೆ ಹಿಡಿದಿರುವ ಘಟನೆ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (Sports Authority of India​) ನಡೆಸಿದೆ. ಈ ಘಟನೆ ಕುರಿತು ಡೇಕ್ವಾಂಡೋ ಆಟಗಾರ್ತಿ ತನ್ನ ಖಾಸಗಿ ವಿಡಿಯೋ ಸೆರೆ ಹಿಡಿದ ವಾಲಿಬಾಲ್​ ಆಟಗಾರ್ತಿ ವಿರುದ್ಧ ಜ್ಞಾನಭಾರತಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

D Gukesh Profile: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಡಿ ಗುಕೇಶ್ ಯಾರು? ಚೆನ್ನೈ ಹುಡುಗನ ಜೀವನಗಾಥೆ

ಇಬ್ಬರು ಅಥ್ಲೀಟ್​​ಗಳು ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲೇ ತರಬೇತಿ ಪಡೆಯುತ್ತಿದ್ದಾರೆ. ಈ ಘಟನೆಯು ಸೋಮವಾರ ರಾತ್ರಿ ಜರುಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಟೇಕ್ವಾಂಡೋ ಆಟಗಾರ್ತಿ ಅಭ್ಯಾಸ ಮುಗಿದ ಬಳಿಕ ರೂಮ್​ಗೆ ಬಂದಿದ್ದರು. ಬಳಿಕ ಸ್ನಾನಕ್ಕೆ ಹೋಗಿದ್ದರು. ಆದರೆ ಇದೇ ಸಮಯದಲ್ಲಿ ವಾಲಿಬಾಲ್‌ ಆಟಗಾರ್ತಿ ಕದ್ದು ಆಕೆಯ ಖಾಸಗಿ ವಿಡಿಯೋವನ್ನು ಸೆರೆಹಿಡಿದಿದ್ದಳು.

ವಿಷಯ ತಿಳಿಯುತ್ತಿದ್ದಂತೆ ಸಂತ್ರಸ್ತೆಯು ಆರೋಪಿಯ ಮೊಬೈಲ್ ಫೋನ್ ಅನ್ನು ಒಡೆದು ಹಾಕಿದ್ದಾರೆ. ಇದರ ಬೆನ್ನಲ್ಲೇ ಘಟನೆ ಕುರಿತು ಸಂತ್ರಸ್ತೆ ದೂರನ್ನೂ ದಾಖಲಿಸಿರುವ ಬಗ್ಗೆ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಬಿ.ನಿಂಬರಗಿ ಮಾಹಿತಿ ನೀಡಿದ್ದಾರೆ. ಐಪಿಸಿ ಸೆಕ್ಷನ್ 354, ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಮೊಬೈಲ್ ಪರಿಶೀಲಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.

ವಿಡಿಯೋ ರೆಕಾರ್ಡ್ ಆಗುತ್ತಿದ್ದ ಸಮಯದಲ್ಲಿ ಟೇಕ್ವಾಂಡೋ ಆಟಗಾರ್ತಿ ಗಾಬರಿಯಾಗಿದ್ದಾಳೆ. ಇದನ್ನು ಪ್ರಶ್ನಿಸಿದ ಆಕೆ ರೆಕಾರ್ಡ್ ಮಾಡಿದ್ದ ಮೊಬೈಲ್ ಅನ್ನು ಒಡೆದು ಹಾಕಿದ್ದಾಳೆ. ಈ ವಿಡಿಯೋ ಬೇರೆಯವರಿಗೆ ಕಳುಹಿಸುವ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ದೂರಿನಲ್ಲೂ ಉಲ್ಲೇಖಿಸಿದ್ದಾರೆ. ಸದ್ಯ ಆ ಮೊಬೈಲ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಚಂಡೀಗಢದಲ್ಲಿ ಇದೇ ರೀತಿಯ ಘಟನೆಯೊಂದು ಕಳೆದ ವರ್ಷ ನಡೆದಿತ್ತು. ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಯುವತಿಯ ಖಾಸಗಿ ವಿಡಿಯೋಗಳನ್ನು, ಅವರ ಮಹಿಳಾ ಸಹಪಾಠಿಗಳೇ ರೆಕಾರ್ಡ್​​​ ಮಾಡಿ ತಮ್ಮ ಬಾಯ್‌ಫ್ರೆಂಡ್‌ಗೆ ಕಳಿಸುತ್ತಿದ್ದರ ಕುರಿತು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಳಿಕ ಅವರನ್ನು ಅಮಾನತು ಸಹ ಮಾಡಲಾಗಿತ್ತು.

ಕ್ರೀಡೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳು!

GPS ಫಿಟ್‌ನೆಸ್ ಟ್ರ್ಯಾಕಿಂಗ್ ಸಾಧನ ಧರಿಸಿ IPL ಆಡಲಿರುವ ಟೀಮ್​ ಇಂಡಿಯಾ ಆಟಗಾರರು, ಕಾರಣ ಇಲ್ಲಿದೆ!

ವಿಶ್ವದ ಅತಿ ದೊಡ್ಡ ಕ್ರಿಕೆಟ್ ಲೀಗ್ ಐಪಿಎಲ್ (IPL) ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಈ ಲೀಗ್‌ನಲ್ಲಿ ಟೀಮ್​​​​ ಇಂಡಿಯಾ ಆಟಗಾರರು (Team India Players) ಮತ್ತು ವಿಶ್ವದ ದಿಗ್ಗಜ ಕ್ರಿಕೆಟಿಗರು ಪೈಪೋಟಿ ಏರ್ಪಡಲಿದೆ. ಆದರೆ, ಈ ಧನಾಧನ್ ಲೀಗ್‌ನಲ್ಲಿ ವಿಶೇಷ ಸಾಧನ ಧರಿಸಿ ಭಾರತೀಯ ಆಟಗಾರರು ಮೈದಾನ ಪ್ರವೇಶಿಸುವಂತೆ ಬಿಸಿಸಿಐ (BCCI) ಖಡಕ್​ ಎಚ್ಚರಿಕೆ ಸಹ ನೀಡಿದೆ. ಫಿಟ್​ನೆಸ್​ ಮೇಲ್ವಿಚಾರಣೆ ನಡೆಸುವ ಸಲುವಾಗಿ ಟೀಮ್​ ಇಂಡಿಯಾ ಆಟಗಾರರು ಜಿಪಿಎಸ್ ಫಿಟ್‌ನೆಸ್ ಟ್ರ್ಯಾಕಿಂಗ್ ಸಾಧನ (GPS Fitness Tracking Device) ಧರಿಸಿಯೇ ಅಂಗಳಕ್ಕಿಳಿಯುವಂತೆ ಬಿಸಿಸಿಐ ಸೂಚಿಸಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreyas Iyer: ಶಸ್ತ್ರಚಿಕಿತ್ಸೆ ಮುಂದೂಡಿ, ಬೆಂಗಳೂರಿನ ಎನ್​ಸಿಎಗೆ ಬಂದ​ ಅಯ್ಯರ್

ಗಾಯದ ಸಮಸ್ಯೆಯಿಂದ ಐಪಿಎಲ್​​​​​ ಟೂರ್ನಿಗೆ ದೂರ ಉಳಿದಿರುವ ಶ್ರೇಯಸ್ ಈಗ ನೇರವಾಗಿ ಬೆಂಗಳೂರು ತಲುಪಿದ್ದಾರೆ. ಬೆನ್ನು ನೋವಿನಿಂದಾಗಿ ಭಾರತ-ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಮುಂಬೈಕರ್​, ಚಿಕಿತ್ಸೆಗಾಗಿ ಸಿಲಿಕಾನ್ ಸಿಟಿಗೆ ಬಂದಿಳಿದಿದ್ದಾರೆ. ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಶ್ರೇಯಸ್ ಫಿಟ್ ಆಗಲು ಬಯಸಿದ್ದು, ಶಸ್ತ್ರಚಿಕಿತ್ಸೆಯನ್ನೇ ಮುಂದೂಡಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್​ಸಿಎ) ಬಂದಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು