logo
ಕನ್ನಡ ಸುದ್ದಿ  /  Sports  /  Bengaluru Fc Beat Mumbai City Fc On Penalties Enter Final Of Isl

Indian Super League: ಮುಂಬೈ ಸಿಟಿ ಎಫ್‌ಸಿಯನ್ನು ಮಣಿಸಿ ಫೈನಲ್ ಪ್ರವೇಶಿಸಿದ ಬೆಂಗಳೂರು ಎಫ್‌ಸಿ

HT Kannada Desk HT Kannada

Mar 13, 2023 10:44 AM IST

ಬೆಂಗಳೂರು ಎಫ್‌ಸಿ ನಾಯಕ ಮತ್ತು ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು

    • 2018ರ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರು ತಂಡವು ಐಎಸ್‌ಎಲ್‌ ಫೈನಲ್ ಪ್ರವೇಶಿಸಿದೆ. ಅಲ್ಲದೆ ಎರಡನೇ ಬಾರಿ ಟೈಟಲ್‌ ಗೆಲ್ಲಲು ಸಜ್ಜಾಗಿದೆ.
ಬೆಂಗಳೂರು ಎಫ್‌ಸಿ ನಾಯಕ ಮತ್ತು ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು
ಬೆಂಗಳೂರು ಎಫ್‌ಸಿ ನಾಯಕ ಮತ್ತು ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು

ಇಂಡಿಯನ್ ಸೂಪರ್ ಲೀಗ್ (ISL) 2022-23ರ ಸೀಸನ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ (Mumbai City FC)ಯನ್ನು ಮಣಿಸಿದ ಬೆಂಗಳೂರು ಎಫ್‌ಸಿ (Bengaluru FC) ಫೈನಲ್‌ ಪ್ರವೇಶಿಸಿದೆ. ಭಾರತದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು (Gurpreet Singh Sandhu) ಅವರು ಮುಂಬೈನ ನಿರ್ಣಾಯಕ ಪೆನಾಲ್ಟಿಯನ್ನು ತಡೆದು ಪಂದ್ಯದಲ್ಲಿ ಹೀರೋ ಆಗಿ ಹೊರಹೊಮ್ಮಿದರು.

ಟ್ರೆಂಡಿಂಗ್​ ಸುದ್ದಿ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

D Gukesh Profile: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಡಿ ಗುಕೇಶ್ ಯಾರು? ಚೆನ್ನೈ ಹುಡುಗನ ಜೀವನಗಾಥೆ

D Gukesh: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ ಡಿ ಗುಕೇಶ್; ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಆಟಗಾರ

ಬೆಂಗಳೂರಿನಲ್ಲಿ ನಡೆದ ಸೆಮಿ ಫೈನಲ್‌ ಪಂದ್ಯದಲ್ಲಿ, ಸಂದೇಶ್ ಜಿಂಗನ್ ಅವರು ಬೆಂಗಳೂರು ಎಫ್‌ಸಿಗೆ ಪೆನಾಲ್ಟಿಯಲ್ಲಿ ಜಯ ತಂದುಕೊಟ್ಟರು. ಮುಂಬೈ ತಂಡವು ಪಂದ್ಯದ ಪೂರ್ಣ ಸಮಯದಲ್ಲಿ 2-1 ಗೋಲುಗಳಿಂದ ಮುಂದಿದ್ದರೂ ಸಹ, ಮುಂಬೈನಲ್ಲಿ 1-0 ಅಂತರದಲ್ಲಿ ಜಯಗಳಿಸಿದ ಬೆಂಗಳೂರು ತಂಡದ ಗೋಲು ಅಂತಿಮವಾಗಿ ನಿರ್ಣಾಯಕವಾಯಿತು.

2018ರ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರು ತಂಡವು ಐಎಸ್‌ಎಲ್‌ ಫೈನಲ್ ಪ್ರವೇಶಿಸಿದೆ. ಇದೇ ವೇಳೆ ಮಾಜಿ ಚಾಂಪಿಯನ್‌ ಮುಂಬೈ ಸಿಟಿ ಅವರ 2020-21 ಋತುವಿನಿಂದ ಗೆಲುವನ್ನು ಪುನರಾವರ್ತಿಸುವ ಆಸೆಗೆ ಬೆಂಗಳೂರು ತಣ್ಣೀರೆರಚಿತು.

ಕಳೆದ ಮಾರ್ಚ್ 7ರಂದು ಮುಂಬೈನಲ್ಲಿ ನಡೆದ ಮೊದಲ ಹಂತದ ಸೆಮಿಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ ಲೀಗ್ ಶೀಲ್ಡ್ ವಿಜೇತ ಮುಂಬೈ ಸಿಟಿ ಎಫ್‌ಸಿಯನ್ನು 1-0 ಗೋಲುಗಳಿಂದ ಸೋಲಿಸಿತ್ತು. ಹೀಗಾಗಿ ನಿನ್ನೆಯ ಸೆಮಿ ಫೈನಲ್‌ನ ಪೂರ್ಣ ಅವಧಿಯಲ್ಲಿ ಹೆಚ್ಚುವರಿ ಸಮಯದ ನಂತರ ಮುಂಬೈ ಸಿಟಿ ಎಫ್‌ಸಿಯು 2-1ರಿಂದ ಮುನ್ನಡೆ ಸಾಧಿಸಿತು. ಆದರೆ ಮಾರ್ಚ್ 7ರಂದು ಮುಂಬೈನಲ್ಲಿ ನಡೆದ ಮೊದಲ ಹಂತದ ಸೆಮಿಫೈನಲ್‌ನ ಫಲಿತಾಂಶವನ್ನು ಸೇರಿಸಿದ ಬಳಿಕ ಫಲಿತಾಂಶವು 2-2ರಿಂದ ಟೈ ಆಯ್ತು. ಅಂದರೆ ಮೊದಲ ಸೆಮಿಫೈನಲ್‌ನ 1-0 ಗೋಲು ಮತ್ತು ನಿನ್ನೆಯ ಪಂದ್ಯದ 1-2 ಗೋಲುಗಳನ್ನು ಸೇರಿಸಿದಾಗ 2-2ರಿಂದ ಟೈ ಆಯ್ತು. ಹೀಗಾಗಿ ಟೈ ಬ್ರೇಕರ್‌ ನಡೆಸಲಾಯ್ತು. ಬೆಂಗಳೂರು ಎಫ್‌ಸಿಯು ಟೈ-ಬ್ರೇಕರ್ ಅನ್ನು ಗೆದ್ದಿದ್ದರಿಂದ ಸಂಧು ಆಟದ ಪ್ರಾರಂಭದಲ್ಲಿ ಮತ್ತು ಶೂಟೌಟ್‌ನ ಕೊನೆಯಲ್ಲಿ ಪೆನಾಲ್ಟಿಗಳನ್ನು ಉಳಿಸಿದರು.

ಒಟ್ಟು 16 ಪೆನಾಲ್ಟಿಗಳನ್ನು ಗಳಿಸಿದ ನಂತರ, ಮೆಹ್ತಾಬ್ ಸಿಂಗ್ ಅವರ ಹೊಡೆತವನ್ನು ಉಳಿಸಿದ ಸಂಧು ಬೆಂಗಳೂರಿಗೆ ಮುನ್ನಡೆ ತಂಡದುಕೊಟ್ಟರು. ಆ ಬಳಿಕ ಸಂದೇಶ್ ಜಿಂಗನ್ ಅವರು ಗೆಲುವಿನ ಕಿಕ್ ಮಾಡಿ ಶೂಟೌಟ್‌ನಲ್ಲಿ ಬೆಂಗಳೂರಿಗೆ 9-8 ಅಂತರದ ಗೆಲುವನ್ನು ತಂದುಕೊಟ್ಟರು. ಆ ಮೂಲಕ ತಂಡವು ಐಎಸ್‌ಎಲ್‌ ಫೈನಲ್‌ಗೆ ಲಗ್ಗೆ ಹಾಕಿತು.

ಶನಿವಾರ ನಡೆಯಲಿರುವ ISL ಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡವು ಎಟಿಕೆ ಮೋಹನ್ ಬಗಾನ್ (ATK Mohun Bagan) ಅಥವಾ ಹೈದರಾಬಾದ್ ಎಫ್‌ಸಿ (Hyderabad FC) ತಂಡವನ್ನು ಎದುರಿಸಲಿದೆ.

ಈವರೆಗೆ ಒಂದು ಬಾರಿ ಕಪ್‌ ಗೆದ್ದಿರುವ ಬೆಂಗಳೂರು ತಂಡವು ಮತ್ತೊಂದು ಬಾರಿ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದೆ. ಈ ಬಾರಿ ಮತ್ತೆ ಫೈನಲ್‌ ಪ್ರವೇಶಿಸಿರುವ ತಂಡವು, ಚಾಂಪಿಯನ್‌ ಆಗುವ ಗುರಿ ಹೊಂದಿದೆ. ಪಂದ್ಯವು ಮಾರ್ಚ್‌ 18ರ ಶನಿವಾರ ಸಂಜೆ 7.30ಕ್ಕೆ ನಡೆಯಲಿದೆ.

    ಹಂಚಿಕೊಳ್ಳಲು ಲೇಖನಗಳು