logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Asia Cup T20: ಸರಣಿಶ್ರೇಷ್ಠ ಪ್ರಶಸ್ತಿಗಾಗಿ ಈ ಐವರಲ್ಲಿ ತೀವ್ರ ಪೈಪೋಟಿ; ಭಾರತದಿಂದ ಯಾರು?

Asia Cup T20: ಸರಣಿಶ್ರೇಷ್ಠ ಪ್ರಶಸ್ತಿಗಾಗಿ ಈ ಐವರಲ್ಲಿ ತೀವ್ರ ಪೈಪೋಟಿ; ಭಾರತದಿಂದ ಯಾರು?

Aug 16, 2022 09:17 AM IST

ಇದೇ ತಿಂಗಳ 27ರಿಂದ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿ ನಡೆಯಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಟೂರ್ನಿಗೆ ಯುಎಇ ಆತಿಥ್ಯ ವಹಿಸುತ್ತಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಏಷ್ಯಾಕಪ್ ಮಹತ್ವ ಪಡೆದಿದೆ. ಇದರೊಂದಿಗೆ ಈ ಟೂರ್ನಿಯಲ್ಲಿ ಎಲ್ಲರ ಕಣ್ಣು ಕೆಲ ಆಟಗಾರರ ಮೇಲೆ ನೆಟ್ಟಿದೆ. ಏಕೆಂದರೆ ಈ ಕ್ರಿಕೆಟಿಗರಿಗೆ ತಮ್ಮ ಅಮೋಘ ಪ್ರದರ್ಶನದಿಂದ ಸರಣಿಶ್ರೇಷ್ಠ ಪ್ರಶಸ್ತಿ ಗೆಲ್ಲುವ ಅವಕಾಶವಿದೆ.

  • ಇದೇ ತಿಂಗಳ 27ರಿಂದ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿ ನಡೆಯಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಟೂರ್ನಿಗೆ ಯುಎಇ ಆತಿಥ್ಯ ವಹಿಸುತ್ತಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಏಷ್ಯಾಕಪ್ ಮಹತ್ವ ಪಡೆದಿದೆ. ಇದರೊಂದಿಗೆ ಈ ಟೂರ್ನಿಯಲ್ಲಿ ಎಲ್ಲರ ಕಣ್ಣು ಕೆಲ ಆಟಗಾರರ ಮೇಲೆ ನೆಟ್ಟಿದೆ. ಏಕೆಂದರೆ ಈ ಕ್ರಿಕೆಟಿಗರಿಗೆ ತಮ್ಮ ಅಮೋಘ ಪ್ರದರ್ಶನದಿಂದ ಸರಣಿಶ್ರೇಷ್ಠ ಪ್ರಶಸ್ತಿ ಗೆಲ್ಲುವ ಅವಕಾಶವಿದೆ.
ಪಾಕಿಸ್ತಾನದ ನಾಯಕ ಬಾಬರ್ ಅಜಮ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ತಮ್ಮ ಬ್ಯಾಟಿಂಗ್‌ನಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಕೆಲವೇ ಸಮಯದಲ್ಲಿ, ಬಾಬರ್ ಅವರನ್ನು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಹೋಲಿಸಲಾಯಿತು. ಬಾಬರ್ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗದೆ ಬ್ಯಾಟ್‌ ಬೀಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಏಷ್ಯಾಕಪ್ ಗೆಲ್ಲುವ ತವಕದಲ್ಲಿದೆ. 
(1 / 9)

26 ವರ್ಷದ ಬಾಬರ್ ಅಜಮ್, 74 ಟಿ20 ಪಂದ್ಯಗಳಿಂದ ಒಟ್ಟು 2,686 ರನ್ ಗಳಿಸಿದ್ದಾರೆ. ಇದಲ್ಲದೆ, ಅವರ ಸರಾಸರಿ 45ಕ್ಕಿಂತ ಹೆಚ್ಚಿದೆ. ಸದ್ಯ ಟಿ20 ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ನಡೆದ ವಿಶ್ವಕಪ್‌ನಲ್ಲಿ ಮೊಹಮ್ಮದ್ ರಿಜ್ವಾನ್ ಜೊತೆಗೂಡಿ ಭಾರತವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
(2 / 9)

ಮುಂಬರುವ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಉಳಿದ ತಂಡಗಳಿಗೆ ಭೀತಿ ಹುಟ್ಟಿಸಲಿದ್ದಾರೆ. ರಶೀದ್ ಅವರು ಅಫ್ಘಾನಿಸ್ತಾನವನ್ನು ಏಷ್ಯಾಕಪ್‌ಗೆ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಈಗಾಗಲೇ 62 ಟಿ20 ಪಂದ್ಯಗಳಲ್ಲಿ ಒಟ್ಟು 109 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
(3 / 9)

ಸದ್ಯ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಸೂರ್ಯ ಕುಮಾರ್ ಯಾದವ್ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡಿದಂದಿನಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಬಾಬರ್ ನಂತರ ಸೂರ್ಯಕುಮಾರ್ ಯಾದವ್ ಟಿ20 ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಪರ ಹೆಚ್ಚು ಭರವಸೆಯಲ್ಲಿರುವ ಆಟಗಾರ ಇವರೇ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ನಂತರ, ಏಷ್ಯಾ ಕಪ್‌ಗೆ ಮುಂಚಿತವಾಗಿ ನಡೆಯುತ್ತಿರುವ ಜಿಂಬಾಬ್ವೆ ಸರಣಿಗೆ ಸ್ಕೈಗೆ ವಿಶ್ರಾಂತಿ ನೀಡಲಾಗಿದೆ.
(4 / 9)

ಮುಂಬೈನಲ್ಲಿ ಜನಿಸಿದ ಸೂರ್ಯಕುಮಾರ್ ಯಾದವ್ 20 ಟಿ20 ಪಂದ್ಯಗಳಲ್ಲಿ ಒಟ್ಟು 672 ರನ್ ಗಳಿಸಿದ್ದಾರೆ. ಭಾರತ ತಂಡದಲ್ಲಿ 360 ಡಿಗ್ರಿ ಬ್ಯಾಟ್ಸ್ ಮನ್ ಎಂದೇ ಹೆಸರಾಗಿರುವ ಇವರು, ತಮ್ಮ ಬ್ಯಾಟಿಂಗ್ ಕೌಶಲ್ಯದಿಂದ ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಮುಂಬೈ ಇಂಡಿಯನ್ಸ್ ಆಟಗಾರನಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಅವಕಾಶವಿದೆ.
(5 / 9)

ಪಾಕಿಸ್ತಾನದ ಯುವ ವೇಗಿ ಶಾಹೀನ್ ಅಫ್ರಿದಿ ಇದೀಗ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಶಾಹೀನ್ ನಿರ್ಣಾಯಕ ವಿಕೆಟ್ ಪಡೆದು, ಭಾರತದ ವಿರುದ್ಧ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳಿಸಿದ್ದರು. ಶಾಹೀನ್ ಅಫ್ರಿದಿ ವಿಶ್ವದ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರು.
(6 / 9)

ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಅವರ ಸಾಮರ್ಥ್ಯವನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವಂತಿಲ್ಲ. ಹಸರಂಗ ಅವರ ಬೌಲಿಂಗ್ ಪ್ರತಿಭೆಯಿಂದ ಶ್ರೀಲಂಕಾ ಏಷ್ಯಾಕಪ್ ಗೆಲ್ಲುವ ಅವಕಾಶವಿದೆ. ಸ್ಪಿನ್ ಬೌಲಿಂಗ್ ಜೊತೆಗೆ ಕೆಳ ಕ್ರಮಾಂಕದಲ್ಲಿ ರನ್ ಗಳಿಸುವುದರಲ್ಲಿ ಅವರು ನಿಪುಣರು. ಆರ್‌ಸಿಬಿ ಪರ ಇವರು ಬ್ಯಾಟಿಂಗ್‌ನಲ್ಲಿ ಮೋಡಿ ಮಾಡದಿದ್ದರೂ, ಬೌಲಿಂಗ್‌ನಲ್ಲಿ ಟಾಪ್‌ ವಿಕೆಟ್‌ ಟೇಕರ್‌ ಆಗಿದ್ದರು.
(7 / 9)

ಹಸರಂಗಾ ಶ್ರೀಲಂಕಾ ಪರ ಇದುವರೆಗೆ 38 ಟಿ20 ಪಂದ್ಯಗಳನ್ನಾಡಿದ್ದು, 62 ವಿಕೆಟ್ ಪಡೆದಿದ್ದಾರೆ. ಜತೆಗೆ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು 382 ರನ್ ಗಳಿಸಿದ್ದಾರೆ.
(8 / 9)

ಏಷ್ಯಾಕಪ್ ಪಂದ್ಯಾವಳಿಯಲ್ಲಿ ಸರಣಿಶ್ರೇಷ್ಠ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿದೆ.
(9 / 9)
ಏಷ್ಯಾಕಪ್ ಪಂದ್ಯಾವಳಿಯಲ್ಲಿ ಸರಣಿಶ್ರೇಷ್ಠ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿದೆ.(all photo- instagram)

    ಹಂಚಿಕೊಳ್ಳಲು ಲೇಖನಗಳು