IPL 2023 Prize Money: ಚಾಂಪಿಯನ್ ಸಿಎಸ್ಕೆಗೆ 20 ಕೋಟಿ; ರನ್ನರ್ಅಪ್, ಆರೆಂಜ್, ಪರ್ಪಲ್ ಕ್ಯಾಪ್ ಗೆದ್ದವರಿಗೆ ಸಿಕ್ಕಿದ್ದೆಷ್ಟು ಬಹುಮಾನ?
May 30, 2023 06:30 AM IST
ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್
- ಈ ಆವೃತ್ತಿಯ ಚಾಂಪಿಯನ್ ಹಾಗೂ ರನ್ನರ್ ಅಪ್ ಸೇರಿದಂತೆ ವಿವಿಧ ಪ್ರಶಸ್ತಿ ಗೆದ್ದಿರುವ ಆಟಗಾರರಿಗೆ ಬಹುಮಾನ ಮೊತ್ತ (IPL 2023 Prize Money) ವಿತರಿಸಲಾಗಿದೆ. ಹಾಗಾದರೆ ಯಾರಿಗೆಷ್ಟು ಬಹುಮಾನದ ಮೊತ್ತ ಸಿಕ್ಕಿದೆ ಎಂಬುದನ್ನು ಈ ಮುಂದೆ ನೋಡೋಣ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 16ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಚೆನ್ನೈ ಐದನೇ ಬಾರಿ ಟ್ರೋಫಿ ಗೆದ್ದುಕೊಂಡು ಚರಿತ್ರೆ ಬರೆದಿದೆ. ಆದರೆ ಸತತ 2ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಕನಸಿನಲ್ಲಿದ್ದ ಹಾರ್ದಿಕ್ ಪಡೆ ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡಿದೆ.
ಪಂದ್ಯ ಮುಗಿದ ಬೆನ್ನಲ್ಲೇ ಈ ಆವೃತ್ತಿಯ ಚಾಂಪಿಯನ್ ಹಾಗೂ ರನ್ನರ್ ಅಪ್ ಸೇರಿದಂತೆ ವಿವಿಧ ಪ್ರಶಸ್ತಿ ಗೆದ್ದಿರುವ ಆಟಗಾರರಿಗೆ ಬಹುಮಾನ ಮೊತ್ತ (IPL 2023 Prize Money) ವಿತರಿಸಲಾಗಿದೆ. ಹಾಗಾದರೆ ಯಾರಿಗೆಷ್ಟು ಬಹುಮಾನದ ಮೊತ್ತ ಸಿಕ್ಕಿದೆ ಎಂಬುದನ್ನು ಈ ಮುಂದೆ ನೋಡೋಣ.
ಬಹುಮಾನದ ಮೊತ್ತ ಹೀಗಿದೆ!
- ವಿಜೇತ (ಚೆನ್ನೈ ಸೂಪರ್ ಕಿಂಗ್ಸ್) ತಂಡಕ್ಕೆ 20
- ರನ್ನರ್ಅಪ್ (ಗುಜರಾತ್ ಟೈಟಾನ್ಸ್) ತಂಡಕ್ಕೆ 13 ಕೋಟಿ
- 3ನೇ ಸ್ಥಾನ (ಮುಂಬೈ ಇಂಡಿಯನ್ಸ್) ತಂಡಕ್ಕೆ 7 ಕೋಟಿ
- 4ನೇ ಸ್ಥಾನ (ಲಕ್ನೋ ಸೂಪರ್ ಜೈಂಟ್ಸ್) ತಂಡಕ್ಕೆ 6.5 ಕೋಟಿ
- ಆರೆಂಜ್ ಕ್ಯಾಪ್ (ಶುಭ್ಮನ್ ಗಿಲ್) 15 ಲಕ್ಷ
- ಪರ್ಪಲ್ ಕ್ಯಾಪ್ (ಮೊಹಮ್ಮದ್ ಶಮಿ) 15 ಲಕ್ಷ
- ಅತ್ಯಂತ ಮೌಲ್ಯಯುತ ಆಟಗಾರ (ಶುಭ್ಮನ್ ಗಿಲ್) 12 ಲಕ್ಷ
- ಫೇರ್ ಪ್ಲೇ ಅವಾರ್ಡ್ (ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ) 10 ಲಕ್ಷ
- ಉದಯೋನ್ಮುಖ ಆಟಗಾರ (ಯಶಸ್ವಿ ಜೈಸ್ವಾಲ್) 20 ಲಕ್ಷ
- ಈ ಆವೃತ್ತಿಯ ಬೆಸ್ಟ್ ಕ್ಯಾಚ್ (ರಶೀದ್ ಖಾನ್) 10 ಲಕ್ಷ
- ಸೂಪರ್ ಸ್ಟ್ರೈಕರ್ ಅವಾರ್ಡ್ (ಗ್ಲೇನ್ ಮ್ಯಾಕ್ಸ್ವೆಲ್) 10 ಲಕ್ಷ
- ಪ್ಲೇಯರ್ ಆಫ್ ದಿ ಮ್ಯಾಚ್ (ಡೆವೋನ್ ಕಾನ್ವೆ) 1 ಲಕ್ಷ
- ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ (ಫಾಫ್ ಡು ಪ್ಲೆಸಿಸ್) 12 ಲಕ್ಷ
2008-09ರಲ್ಲಿ ಪ್ರಶಸ್ತಿ ಮೊತ್ತ ಹೀಗಿತ್ತು
ಈ ಶ್ರೀಮಂತ ಲೀಗ್ ಮೊದಲ ಎರಡು ಸೀಸನ್ಗಳಲ್ಲಿ ವಿಜೇತ ತಂಡವು 4.8 ಕೋಟಿ ರೂಪಾಯಿಗಳನ್ನು ಪಡೆದರೆ, ರನ್ನರ್ ಅಪ್ ತಂಡವು 2.4 ಕೋಟಿ ರೂಪಾಯಿ ಪಡೆಯುತ್ತಿತ್ತು.
ರನ್ ಹೊಳೆ ಹರಿಸುತ್ತಿರುವ ಶುಭ್ಮನ್ರನ್ನು ಭಾರತದ ಬ್ಯಾಟಿಂಗ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ (Sachin Tendulkar), ವಿರಾಟ್ ಕೊಹ್ಲಿ (Virat Kohli) ಅವರ ಉತ್ತಾರಾಧಿಕಾರಿ ಎಂದು ಕರೆಯಲಾಗುತ್ತಿದೆ. ಇದಕ್ಕೂ ಮೊದಲು ಸಚಿನ್ vs ಕೊಹ್ಲಿ ಎಂಬ ಚರ್ಚೆಗಳು ನಡೆಯುತ್ತಿದ್ದವು. ಪ್ರಸ್ತುತ ಕೊಹ್ಲಿ vs ಗಿಲ್ ಎಂಬ ಚರ್ಚೆಗಳು ಜೋರಾಗಿವೆ. ಮಾಜಿ ಕ್ರಿಕೆಟರ್ಗಳು ಕೊಹ್ಲಿಗೆ ಗಿಲ್ರನ್ನು ಹೋಲಿಸುತ್ತಿದ್ದಾರೆ. ತನ್ನನ್ನು ದಿಗ್ಗಜರಿಗೆ ಹೋಲಿಸುತ್ತಿರುವ ಕುರಿತು ಶುಭ್ಮನ್ ಗಿಲ್, ಮೌನ ಮುರಿದಿದ್ದಾರೆ. ಇದರ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.