logo
ಕನ್ನಡ ಸುದ್ದಿ  /  ಕ್ರೀಡೆ  /  Cheteshwar Pujara: ಕೌಂಟಿ ಕ್ರಿಕೆಟ್‌ನಲ್ಲಿ ಸತತ ಶತಕ ಸಿಡಿಸಿದ ಪೂಜಾರಾ; ಡಬ್ಲ್ಯೂಟಿಸಿ ಫೈನಲ್‌ಗೂ ಮುನ್ನ ಆಸೀಸ್‌ಗೆ ಎಚ್ಚರಿಕೆ ಸಂದೇಶ

Cheteshwar Pujara: ಕೌಂಟಿ ಕ್ರಿಕೆಟ್‌ನಲ್ಲಿ ಸತತ ಶತಕ ಸಿಡಿಸಿದ ಪೂಜಾರಾ; ಡಬ್ಲ್ಯೂಟಿಸಿ ಫೈನಲ್‌ಗೂ ಮುನ್ನ ಆಸೀಸ್‌ಗೆ ಎಚ್ಚರಿಕೆ ಸಂದೇಶ

Jayaraj HT Kannada

May 06, 2023 06:34 PM IST

ಚೇತೇಶ್ವರ ಪೂಜಾರ

    • ಕೌಂಟಿ ಕ್ರಿಕೆಟ್‌ನಲ್ಲಿ ಸಸೆಕ್ಸ್‌ ತಂಡದ ಪರ ಚೇತೇಶ್ವರ ಪೂಜಾರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸತತ ಶತಕಗಳನ್ನು ಸಿಡಿಸುವ ಮೂಲಕ, ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತದ ಎದುರಾಳಿಯಾಗಿರುವ ಆಸ್ಟ್ರೇಲಿಯಾಗೆ ಎಚ್ಚರಿಕೆಯ ಕರೆಗಂಟೆ ನೀಡಿದ್ದಾರೆ.
ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ

ಭಾರತದಲ್ಲಿ ಈಗ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಬಗ್ಗೆಯೇ ಮಾತು ಹಾಗೂ ಚರ್ಚೆ. ಈ ನಡುವೆ ಭಾರತಕ್ಕಿಂತ ಸಾವಿರಾರು ಮೈಲುಗಳಷ್ಟು ದೂರದಲ್ಲಿ, ಭಾರತೀಯ ಆಟಗಾರನೊಬ್ಬ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಟೆಸ್ಟ್‌ ಕ್ರಿಕೆಟ್‌ಗೆ ಅಗತ್ಯವೆನಿಸಿದ ತಯಾರಿಯಲ್ಲಿ ತೊಡಗಿರುವ ಬ್ಯಾಟರ್‌, ಮೇಲಿಂದ ಮೇಲೆ ಶತಕಗಳನ್ನು ಸಿಡಿಸಿ ಮಿಂಚುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ಕೌಂಟಿ ಚಾಂಪಿಯನ್‌ಶಿಪ್ (County Championship) ಡಿವಿಷನ್ ಎರಡರಲ್ಲಿ ಸಸೆಕ್ಸ್‌ ತಂಡದ ನಾಯಕತ್ವ ವಹಿಸಿರುವ ಚೇತೇಶ್ವರ ಪೂಜಾರ, ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸತತ ಎರಡನೇ ಶತಕವನ್ನು ಗಳಿಸುವ ಮೂಲಕ, ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತದ ಎದುರಾಳಿಯಾಗಿರುವ ಆಸ್ಟ್ರೇಲಿಯಾಗೆ ಎಚ್ಚರಿಕೆಯ ಕರೆಗಂಟೆ ನೀಡಿದ್ದಾರೆ.

ಕಳೆದ ತಿಂಗಳ ಆರಂಭದಲ್ಲಿ ಸಸೆಕ್ಸ್ ಶಿಬಿರ ಸೇರಿಕೊಂಡ ಪೂಜಾರ, ಏಪ್ರಿಲ್ 6ರಂದು ಡರ್ಹಾಮ್ (Durham) ವಿರುದ್ಧದ ಆರಂಭಿಕ ಇನ್ನಿಂಗ್ಸ್‌ನಲ್ಲಿ 115 ರನ್ ಗಳಿಸಿದ್ದರು. ಆ ಬಳಿಕ ಏಪ್ರಿಲ್ 27ರಂದು ನಡೆದ ಪಂದ್ಯದಲ್ಲಿ ಗ್ಲೌಸೆಸ್ಟರ್‌ಶೈರ್ (Gloucestershire) ವಿರುದ್ಧ 151 ರನ್ ಸಿಡಿಸಿದರು. ಆ ನಂತರ ಕಳೆದ ಶುಕ್ರವಾರ, ವೋರ್ಸೆಸ್ಟರ್‌ಶೈರ್ ವಿರುದ್ಧದ ಪಂದ್ಯದಲ್ಲಿ ಸಸೆಕ್ಸ್ ಪರ ಪೂಜಾರ 189 ಎಸೆತಗಳಲ್ಲಿ 136 ರನ್ ಗಳಿಸಿದರು.‌ ಇದರಲ್ಲಿ 19 ಬೌಂಡರಿಗಳು ಮತ್ತು ಒಂದು ಆಕರ್ಷಕ ಸಿಕ್ಸರ್ ಕೂಡಾ ಸೇರಿದೆ.

ತಮ್ಮ ಅಮೋಘ ಪ್ರದರ್ಶನದ ನಡುವೆ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಸಾಧಾರಣ ದಾಖಲೆಯೊಂದನ್ನು ಬರೆದರು. ಈ ಸ್ವರೂಪದಲ್ಲಿ 19000 ರನ್ ಗಳಿಸಿದ ಆರನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಆ ಮೂಲಕ ದಿಗ್ಗಜ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಮತ್ತು ವಾಸಿಂ ಜಾಫರ್ ಅವರಿರುವ ಪಟ್ಟಿಯಲ್ಲಿ ಸ್ಥಾನ ಪಡೆದರು.

ಈ ಶತಕದ ಮೂಲಕ, ಪೂಜಾರ ಭಾರತದ ಶ್ರೇಷ್ಠ ಕ್ರಿಕೆಟಿಗ ವಿಜಯ್ ಹಜಾರೆ ಅವರ ಸಾಧನೆಯನ್ನು ಸರಿಗಟ್ಟಿದರು. ಬರೋಬ್ಬರಿ 60 ಪ್ರಥಮ ದರ್ಜೆ ಶತಕಗಳನ್ನು ಸಿಡಿಸುವ ಮೂಲಕ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಇವರಿಬ್ಬರೂ ಸದ್ಯ ಮೂರನೇ ಸ್ಥಾನದಲ್ಲಿ ನಿಂತಿದ್ದಾರೆ. ಬರೋಬ್ಬರಿ 81 ಶತಕಗಳೊಂದಿಗೆ ಸಚಿನ್ ಮತ್ತು ಗವಾಸ್ಕರ್ ಅಗ್ರಸ್ಥಾನದಲ್ಲಿದ್ದಾರೆ. ರಾಹುಲ್ ದ್ರಾವಿಡ್ 68 ಶತಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಪಂದ್ಯದಲ್ಲಿ ಪೂಜಾರ, ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ಜೊತೆಗೂ ಜೊತೆಯಾಟವಾಡಿದರು. ಇವರಿಬ್ಬರೂ ಡಬ್ಲ್ಯೂಟಿಸಿ ಫೈನಲ್‌ ಪಂದ್ಯದಲ್ಲಿ ಪರಸ್ಪರ ಎದುರಾಳಿಗಳಾಗಲಿದ್ದಾರೆ. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರೂ 61 ರನ್ ಗಳಿಸಿದರು. 57 ಎಸೆತಗಳಲ್ಲಿ 30 ರನ್ ಗಳಿಸಿದ ಸ್ಮಿತ್, ಜೋಶ್ ಟಂಗ್‌ ಎಸೆತದಲ್ಲಿ ಔಟಾದರು.

ಸದ್ಯ ಕೌಂಟಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ, ಮುಂಬರುವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೂ ಮುನ್ನ ತಮ್ಮ ಉತ್ತಮ್‌ ಫಾರ್ಮ್‌ ಅನ್ನು ಪೂಜಾರ ತೋರಿಸಿದ್ದಾರೆ. ಇದು ಆಸ್ಟ್ರೆಲಿಯಾಗೆ ಎಚ್ಚರಿಕೆಯ ಸಂದೇಶವಾಗಲಿದೆ.

ಮುಂದಿನ ಒಂದು ತಿಂಗಳ ಅವಧಿಯೊಳಗೆ, ಪೂಜಾರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೂನ್ 7ರಿಂದ ಇಂಗ್ಲೆಂಡ್‌ನ ದಿ ಓವಲ್‌ನಲ್ಲಿ ಪ್ರಾರಂಭವಾಗಲಿರುವ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

    ಹಂಚಿಕೊಳ್ಳಲು ಲೇಖನಗಳು