logo
ಕನ್ನಡ ಸುದ್ದಿ  /  Sports  /  Cricket News Don T Know Why Josh Hazlewood Is Playing Ipl He Is Not Preparing For Test Series Says Michael Clarke Prs

Clarke on Hazlewood: ದೇಶಕ್ಕಿಂತ ಐಪಿಎಲ್​ನಲ್ಲಿ ಸಿಗುವ ದುಡ್ಡೇ ಮುಖ್ಯವಾಯ್ತಾ; ಆರ್​ಸಿಬಿ ಆಟಗಾರನ ವಿರುದ್ಧ ಆಸಿಸ್​ ಮಾಜಿ ಕ್ರಿಕೆಟಿಗ ಕಿಡಿ

Prasanna Kumar P N HT Kannada

May 10, 2023 09:00 AM IST

ಮೈಕಲ್​ ಕ್ಲಾರ್ಕ್​​, ಜೋಶ್​ ಹೇಜಲ್​ವುಡ್​

    • ಜೂನ್​​​ ತಿಂಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು, ಪ್ರಮುಖ ಸರಣಿಗಳನ್ನು ಆಡಲಿದೆ. ಜೂನ್​​ 7ರಿಂದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಮತ್ತು ಇಂಗ್ಲೆಂಡ್​ ಎದುರಿನ ಆ್ಯಷಸ್​ ಸರಣಿ ಆಡಲಿದೆ. ಆಸ್ಟ್ರೇಲಿಯಾದ ಆಟಗಾರರು ಕೂಡ ಈ ಪ್ರತಿಷ್ಠಿತ ಟೆಸ್ಟ್​ ಸರಣಿಗಳಿಗಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.
ಮೈಕಲ್​ ಕ್ಲಾರ್ಕ್​​, ಜೋಶ್​ ಹೇಜಲ್​ವುಡ್​
ಮೈಕಲ್​ ಕ್ಲಾರ್ಕ್​​, ಜೋಶ್​ ಹೇಜಲ್​ವುಡ್​

ಬಿಸಿಸಿಐ (BCCI) ಕನಸಿನ ಕೂಸು ಇಂಡಿಯನ್​ ಪ್ರೀಮಿಯರ್​ ಲೀಗ್​​​ನಲ್ಲಿ (Indian Premier League) ಕಣಕ್ಕಿಳಿಯುವುದು ವಿಶ್ವದ ಎಲ್ಲಾ ಕ್ರಿಕೆಟಿಗರ ಕನಸು. ದೇಶ-ವಿದೇಶ ಆಟಗಾರರಿಗೆ ಒಮ್ಮೆ ಈ ಲೀಗ್​ ಆಡಿದರೆ ಸಾಕು ಎನ್ನುವ ರೀತಿ ಕಾಯುತ್ತಿದ್ದಾರೆ. ಹಾಗಾಗಿ ಬೇರೆ ಬೇರೆ ಕ್ರಿಕೆಟ್​ ಮಂಡಳಿಗಳ ಆಟಗಾರರು ಐಪಿಎಲ್​ ಅನ್ನು ವಿರೋಧಿಸಿದ್ದೂ ಇದೆ.

ಟ್ರೆಂಡಿಂಗ್​ ಸುದ್ದಿ

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್​ ಲೀಗ್​​ ಐಪಿಎಲ್ (IPL 2023)​.. ಇಷ್ಟೊಂದು ಜನಪ್ರಿಯತೆ ಪಡೆದಿರುವ ಈ ಲೀಗ್​​ನಲ್ಲಿ ಒಮ್ಮೆಯಾದರೂ ಆಡಬೇಕು ಎನ್ನುವುದು ಪ್ರತಿಯೊಬ್ಬ ಕ್ರಿಕೆಟಿಗನ ಆಸೆ. ಈ ಎರಡು ತಿಂಗಳ ಹಬ್ಬದಲ್ಲಿ ಐಸಿಸಿ ಟೂರ್ನಮೆಂಟ್​ಗಳು (ICC Tournaments) ನಡೆಯುವುದಿಲ್ಲ ಎಂಬುದು ವಿಶೇಷ.

ಇದೀಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕಲ್ ಕ್ಲಾರ್ಕ್ (Australia Former Cricketer Michael Clarke)​​ ತಮ್ಮ ದೇಶದ ಆಟಗಾರನೊಬ್ಬನನ್ನು, ದೇಶಕ್ಕಿಂತ ದುಡ್ಡೇ ಮುಖ್ಯವಾಯ್ತಾ ಎಂದು ಪ್ರಶ್ನಿಸಿದ್ದಾರೆ. ಎಲ್ಲಾ ಕ್ರಿಕೆಟಿಗರಂತೆ ಆಸ್ಟ್ರೇಲಿಯಾ ಕ್ರಿಕೆಟಿಗರು (Australia Cricketer) ಸಹ ಐಪಿಎಲ್​ನ ಭಾಗವಾಗಿದ್ದಾರೆ.

ಮಿಲಿಯನ್​ ಡಾಲರ್ ಟೂರ್ನಿ ಆಡ್ತಿರುವ ಆಸ್ಟ್ರೇಲಿಯಾ ಆಟಗಾರ ಮೇಲೆ​ ಕಿಡಿ ಕಾರಿದ ಮೈಕಲ್​ ಕ್ಲಾರ್ಕ್, ದೇಶದ ಅಭಿಮಾನಕ್ಕಿಂತ ಐಪಿಎಲ್​ನ ಹಣವೇ ಮುಖ್ಯವಾಯ್ತಾ ಎಂದು ಪ್ರಶ್ನಿಸಿದ್ದಾರೆ. ಹೇಜಲ್​ವುಡ್​, ಕ್ಯಾಮರೂನ್​ ಗ್ರೀನ್ ಮತ್ತು ಡೇವಿಡ್​​ ವಾರ್ನರ್ ಕೂಡ ಐಪಿಎಲ್ ಆಡುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾಗೆ ಮುಂದಿನ ತಿಂಗಳಿಂದ ಪ್ರಮುಖ 2 ಸವಾಲುಗಳಿವೆ. ಭಾರತದ ಎದುರು ಜೂನ್​ 7ರಿಂದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್ (ICC World Test Championship Final 2023)​​​​​ ಪಂದ್ಯದಲ್ಲಿ ನಡೆಯಲಿದೆ. ಫೈನಲ್​ ಬಳಿಕ ಇಂಗ್ಲೆಂಡ್​ ವಿರುದ್ಧ ಆ್ಯಶಸ್​ ಸರಣಿಯನ್ನು (Aus vs Eng Ashes Series 2023) ಆಡಲಿದೆ.

ಪ್ರತಿಷ್ಠಿತ ಆ್ಯಷಸ್​ ಸಿರೀಸ್​ ಆಸ್ಟ್ರೇಲಿಯಾಗೆ ಒಂದು ವಿಶ್ವಕಪ್​ಗೆ ಸಮ. ಹಾಗಾಗಿ ಆಸ್ಟ್ರೇಲಿಯಾ ಆಟಗಾರರು, ಈಗಿನಿಂದಲೇ ಸಮರಾಭ್ಯಾಸದಲ್ಲಿ ತೊಡಗಿದ್ದಾರೆ. ಪ್ಯಾಟ್​ ಕಮಿನ್ಸ್​, ಸ್ಟೀವ್​ ಸ್ಮಿತ್​, ಟ್ರಾವಿಸ್​ ಹೆಡ್​, ಉಸ್ಮಾನ್​ ಖವಾಜ ಸೇರಿದಂತೆ ಪ್ರಮುಖ ಆಟಗಾರರು ಸತತ ಪರಿಶ್ರಮ ಹಾಕುತ್ತಿದ್ದಾರೆ.

ಆಸಿಸ್​​ ಕೆಲ ಆಟಗಾರರು ಸದ್ಯ ಐಪಿಎಲ್ ನಲ್ಲಿ ಆಡುತ್ತಿರುವುದಕ್ಕೆ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಮೈಕಲ್ ಕ್ಲಾರ್ಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೇಗಿ ಜೋಶ್​ ಹೇಜಲ್‌ವುಡ್ ಐಪಿಎಲ್‌ನಲ್ಲಿ ಏಕೆ ಆಡ್ತಿದ್ದಾರೆ ಎಂಬುದು ನನಗೆ ಅರ್ಥವಾಗ್ತಿಲ್ಲ ಎಂದು ಕ್ಲಾರ್ಕ್ ಕಿಡಿ ಕಾರಿದ್ದಾರೆ.

ಡಬ್ಲ್ಯುಟಿಸಿ ಫೈನಲ್‌, ಆ್ಯಶಸ್​ ಸರಣಿಗಾಗಿ ಆಸೀಸ್ ಆಟಗಾರರೆಲ್ಲಾ ತಯಾರಿ ನಡೆಸುತ್ತಿದ್ದಾರೆ. ಆದರೆ ಹೇಜಲ್​ವುಡ್ ಮಾತ್ರ ಐಪಿಎಲ್ ಆಡುವುದನ್ನು ತಪ್ಪಿಸಿಕೊಳ್ಳುತ್ತಿಲ್ಲ. ಜೋಶ್​​​ ಹೇಜಲ್​​ವುಡ್​ ಅವರು ಬಿಸಿಸಿಐಗೆ ಐಪಿಎಲ್​​​ ಆಡಲ್ಲ ಎನ್ನುವ ಧೈರ್ಯ ಇಲ್ಲದ ಕಾರಣ ಆಡುತ್ತಿದ್ದಾರೆ ಎನ್ನುತ್ತಾರೆ ಕ್ಲಾರ್ಕ್​

ಐಪಿಎಲ್​ ಆಟಗಾರರಿಗಿಂತಲೂ ಹೆಚ್ಚಿನದಾಗಿ ಹೇಜಲ್​ವುಡ್​ ಬೌಲಿಂಗ್​​​ ಮಾಡುತ್ತಿದ್ದಾರೆ. ಮೂರು, ನಾಲ್ಕು ಓವರ್​ಗಳು ಮಾಡಿದರೆ, ಬೌಲಿಂಗ್​ ಅಭ್ಯಾಸ ಆಗುವುದಿಲ್ಲ. ಇಂಜುರಿ ಬಳಿಕ ಫಿಟ್​ ಆಗದಿದ್ದರೂ ಕಣಕ್ಕಿಳಿದಿದ್ದಾರೆ. ಮತ್ತೆ ಗಾಯದ ಸಮಸ್ಯೆಗೆ ತುತ್ತಾದರೆ, ದೇಶದ ಪರ ಯಾರು ಆಡುತ್ತಾರೆ ಎಂದು ಕೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು