logo
ಕನ್ನಡ ಸುದ್ದಿ  /  Sports  /  Cricket News In Kannada Ireland Reach Highest Test Score Vs Sri Lanka Paul Stirling And Curtis Campher Hit Century Jra

Sri Lanka vs Ireland: ಟೆಸ್ಟ್‌ ಕ್ರಿಕೆಟ್‌ ಇನ್ನಿಂಗ್ಸ್‌ನಲ್ಲಿ ಬೃಹತ್‌ ಮೊತ್ತ ಪೇರಿಸಿ ದಾಖಲೆ ಬರೆದ ಐರ್ಲೆಂಡ್‌

Jayaraj HT Kannada

Apr 25, 2023 08:25 PM IST

ಕರ್ಟಿಸ್ ಕ್ಯಾಂಫರ್ ಆಟದ ವೈಖರಿ

    • Sri Lanka vs Ireland 2nd Test: ಐರ್ಲೆಂಡ್ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲಿಸಿದೆ. ಈ ಹಿಂದೆ 1998ರಲ್ಲಿ ತಂಡವು ಪಾಕಿಸ್ತಾನದ ವಿರುದ್ಧ 339 ರನ್‌ ಗಳಿಸಿತ್ತು. ಇಂದು ಲಂಕಾ ವಿರುದ್ಧ ನಾಲ್ಕು ನೂರು ರನ್‌ಗಳ ಗಡಿ ದಾಟುವ ಮೂಲಕ ಕ್ರಿಕೆಟ್‌ ಶಿಶುಗಳು ತಮ್ಮ ಪ್ರದರ್ಶನ ಸುಧಾರಿಸಿಕೊಂಡಿದ್ದಾರೆ.
ಕರ್ಟಿಸ್ ಕ್ಯಾಂಫರ್ ಆಟದ ವೈಖರಿ
ಕರ್ಟಿಸ್ ಕ್ಯಾಂಫರ್ ಆಟದ ವೈಖರಿ (AFP)

ಉತ್ತಮ ಬ್ಯಾಟಿಂಗ್ ಪರಿಸ್ಥಿತಿ ಮತ್ತು ಶ್ರೀಲಂಕಾದ ದಣಿದ ಬೌಲಿಂಗ್ ದಾಳಿಯ ಸಂಪೂರ್ಣ ಲಾಭ ಗಳಿಸಿದ ಪ್ರವಾಸಿ ಐರ್ಲೆಂಡ್‌ ತಂಡವು, ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 492 ರನ್ ಪೇರಿಸುವ ಮೂಲಕ ಆತಿಥೇಯ ಶ್ರೀಲಂಕಾ ವಿರುದ್ಧ ಬಲಿಷ್ಠ ಇನ್ನಿಂಗ್ಸ್‌ ಕಟ್ಟಿದೆ.

ಟ್ರೆಂಡಿಂಗ್​ ಸುದ್ದಿ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಮಂಗಳವಾರ ಎರಡನೇ ಟೆಸ್ಟ್‌ನ ಎರಡನೇ ದಿನದಂದು ಸ್ಟಂಪ್‌ ವೇಳೆಗೆ ಶ್ರೀಲಂಕಾ ತಂಡವು ವಿಕೆಟ್‌ ನಷ್ಟವಿಲ್ಲದೆ 81 ರನ್‌ ಗಳಿಸಿದೆ. ಅದಕ್ಕೂ ಮೊದಲು ಮೊದಲ ಇನ್ನಿಂಗ್ಸ್‌ ಆಡಿದ ಐರ್ಲೆಂಡ್‌, ಭರ್ಜರಿ ಇನ್ನಿಂಗ್ಸ್‌ ಆಡಿತು. ಇದು ಐರ್ಲೆಂಡ್ ಪಾಲಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್. ಈ ಹಿಂದೆ 1998ರಲ್ಲಿ ಡಬ್ಲಿನ್‌ನಲ್ಲಿ ಪಾಕಿಸ್ತಾನದ ವಿರುದ್ಧ ತಂಡವು 339 ರನ್‌ ಗಳಿಸಿತ್ತು. ಇದು ತಂಡದ ಈ ಹಿಂದಿನ ಗರಿಷ್ಠ ಮೊತ್ತದ ದಾಖಲೆಯಾಗಿತ್ತು.‌ ಇಂದು ಲಂಕಾ ವಿರುದ್ಧ ನಾಲ್ಕು ನೂರು ರನ್‌ಗಳ ಗಡಿ ದಾಟುವ ಮೂಲಕ ಕ್ರಿಕೆಟ್‌ ಶಿಶುಗಳು ಬಲಿಷ್ಠ ಪ್ರದರ್ಶನ ನೀಡಿದ್ದಾರೆ.

ಎರಡನೇ ದಿನದಾಟದಲ್ಲಿ ಶ್ರೀಲಂಕಾದ ಬೌಲಿಂಗ್ ದಾಳಿಯು ನೀರಸವಾಗಿತ್ತು. ಪಂದ್ಯದ ಪ್ರಮುಖ ಅವಧಿಯಲ್ಲಿ ಸ್ಫೂರ್ತಿರಹಿತವಾಗಿ ಚೆಂಡು ಎಸೆದ ಲಂಕಾ ಬೌಲರ್‌ಗಳು, ಭಾರಿ ರನ್‌ ಬಿಟ್ಟುಕೊಟ್ಟರು. ಪರಿಸ್ಥಿತಿಯ ಸದ್ಬಳಕೆ ಮಾಡಿದ ಐರಿಶ್‌ ಬ್ಯಾಟರ್‌ಗಳು ರನ್‌ ಮಳೆ ಹರಿಸಿದರು. ಈ ನಡುವೆ ಪಾಲ್ ಸ್ಟಿರ್ಲಿಂಗ್ (103) ಮತ್ತು ಕರ್ಟಿಸ್ ಕ್ಯಾಂಫರ್ (111) ಇಬ್ಬರೂ ತಮ್ಮ ಚೊಚ್ಚಲ ಶತಕಗಳನ್ನು ಸಿಡಿಸಿದರು. ಆ ಮೂಲಕ ಅವರು ತಮ್ಮ ದೇಶದ ಕೆವಿನ್ ಒ ಬ್ರೇನ್ ಮತ್ತು ಲೋರ್ಕನ್ ಟಕ್ಕರ್ ಅವರ ಬಳಗ ಸೇರಿಕೊಂಡರು.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಶತಕ ಸಿಡಿಸಬಲ್ಲೆ ಎಂದು ನಂಬಿರಲಿಲ್ಲ. ವಿಶೇಷವಾಗಿ ಇಲ್ಲಿ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿರುವುದು ನನಗೆ ನಂಬಲಾಗುತ್ತಿಲ್ಲ" ಎಂದು ಶತಕದ ಬಳಿಕ ಸ್ಟಿರ್ಲಿಂಗ್ ಹೇಳಿದ್ದಾರೆ.

ವಿಶ್ವ ಫೆರ್ನಾಂಡೋ ಬೌಲಿಂಗ್ ದಾಳಿಗೆ ಟಕ್ಕರ್ 80 ರನ್ ‌ಗಳಿಸಿ ಔಟಾದರೂ, ಸ್ಟಿರ್ಲಿಂಗ್ ಮತ್ತು ಕ್ಯಾಂಫರ್ ಇಂದು ಪ್ರತಿದಾಳಿ ಮುಂದುವರೆಸಿದರು. ಊಟದ ವಿರಾಮದ ಅರ್ಧ ಗಂಟೆಯ ಮೊದಲು ಸ್ಟಿರ್ಲಿಂಗ್ ಶತಕ ಸಾಧನೆ ಮಾಡಿ ಔಟಾದರು.

181 ಎಸೆತಗಳನ್ನು ಎದುರಿಸಿದ ಅವರು ಒಂಬತ್ತು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ ಸಿಡಿಸಿದರು. ಸ್ಟಿರ್ಲಿಂಗ್ ಮತ್ತು ಕ್ಯಾಂಫರ್ ಆರನೇ ವಿಕೆಟ್‌ಗೆ 64 ರನ್‌ಗಳ ಜೊತೆಯಾಟ ನೀಡಿದರು.

ಕ್ಯಾಂಫರ್ ಮತ್ತು ಆಂಡಿ ಮೆಕ್‌ಬ್ರೈನ್ ಏಳನೇ ವಿಕೆಟ್‌ಗೆ 89 ರನ್ ಪೇರಿಸುವ ಮೂಲಕ ಶ್ರೀಲಂಕಾ ಬೌಲರ್‌ಗಳನ್ನು ಮತ್ತೆ ಕಾಡಿದರು. ಮ್ಯಾಕ್‌ಬ್ರೈನ್ 35 ರನ್‌ಗಳಿಗೆ ನಿರ್ಗಮಿಸಿದರು. ವಿಶ್ವ ಫೆರ್ನಾಂಡೋ ಅವರ ಎಸೆತದಲ್ಲಿ ದುಶನ್ ಹೇಮಂತ ಕ್ಯಾಚ್‌ಗೆ ಕ್ಯಾಚ್ ನೀಡಿ ಔಟಾದರು.

ಐರ್ಲೆಂಡ್ ಬೃಹತ್‌ ಮೊತ್ತಕ್ಕೆ ಪ್ರತಿಯಾಗಿ ಶ್ರೀಲಂಕಾ ತಂಡ ಕೂಡಾ ಉತ್ತಮ ಆರಂಭ ಪಡೆದಿದೆ. ನಿಶಾನ್ ಮದುಷ್ಕಾ ತಮ್ಮ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಜೇಯ 41 ರನ್ ಗಳಿಸಿದ್ದಾರೆ. ಇದೇ ವೇಳೆ ಶ್ರೀಲಂಕಾ ನಾಯಕ ದಿಮುತ್ ಕುರುನರತ್ನೆ 39 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು