KL Rahul Troll: ಇಂಗ್ಲೆಂಡ್ ಟೆಸ್ಟ್ ಅನ್ನು T20 ರೀತಿ ಆಡ್ತಿದೆ, ನೀವ್ಯಾಕೆ ಟೆಸ್ಟ್ ಥರ T20 ಆಡ್ತೀರಿ; ಕೆಎಲ್ ರಾಹುಲ್ಗೆ ಟ್ರೋಲ್ ಬಿಸಿ
Apr 20, 2023 08:01 AM IST
ಕೆಎಲ್ ರಾಹುಲ್
- ರಾಜಸ್ಥಾನ್ ರಾಯಲ್ಸ್ (Rajasthan Royals) ಎದುರಿನ ಪಂದ್ಯದಲ್ಲಿ ನಿಧಾನವಾಗಿ ಬ್ಯಾಟ್ ಬೀಸಿದ ಕೆಎಲ್ ರಾಹುಲ್ ವಿರುದ್ಧ ಫ್ಯಾನ್ಸ್ ಟ್ರೋಲ್ (KL Rahul Troll) ಮಾಡುತ್ತಿದ್ದಾರೆ. ಎರಡು ಜೀವದಾನ ಸಿಕ್ಕರೂ ಅದರ ಲಾಭ ಪಡೆಯದ ರಾಹುಲ್, 32 ಎಸೆತಗಳಲ್ಲಿ 39 ರನ್ ಗಳಿಸಿದರು. ಹಾಗಾಗಿ ಲಕ್ನೋ ತಂಡದ ನಾಯಕ ಟ್ರೋಲ್ ಬಿಸಿ ಎದುರಿಸುತ್ತಿದ್ದಾರೆ.
ಜೈಪುರದ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೂಪರ್ ಗೆಲುವು ದಾಖಲಿಸಿದೆ. ಅದ್ಭುತ ಆರಂಭದ ನಡುವೆಯೂ ಸಂಜು ಪಡೆಯ ಗೆಲುವಿನ ಲೆಕ್ಕಾಚಾರ ಅಂತಿಮ ಹಂತದಲ್ಲಿ ಬದಲಾಯಿತು. ಪರಿಣಾಮ ರಾಜಸ್ಥಾನ್ 10 ರನ್ಗಳಿಂದ ಶರಣಾಯಿತು. KL ರಾಹುಲ್ ನೇತೃತ್ವದ ತಂಡ 155 ರನ್ ಗುರಿ ನೀಡಿತ್ತು. ಲಕ್ನೋ ಗೆದ್ದು ಅಂಕಪಟ್ಟಿಯಲ್ಲಿ 2 ಅಂಕ ಹೆಚ್ಚಿಸಿಕೊಂಡಿದೆ. ಇದರ ನಡುವೆಯೂ ನಾಯಕ ಕೆಎಲ್ ರಾಹುಲ್ ಭಾರಿ ಟ್ರೋಲ್ಗೆ ಗುರಿಯಾಗಿದ್ದಾರೆ.
ಬೆನ್ಸ್ಟೋಕ್ಸ್ ನಾಯಕನಾಗಿ ನೇಮಕಗೊಂಡ ನಂತರ ಇಂಗ್ಲೆಂಡ್ ಕ್ರಿಕೆಟ್ ತಂಡವು ಟೆಸ್ಟ್ ಕ್ರಿಕೆಟ್ ಆಡುವ ವಿಧಾನವನ್ನು ಬದಲಾಯಿಸಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ‘ಬಝ್ಬಾಲ್’ ಹೆಸರಿನ ಮೂಲಕ ಟೆಸ್ಟ್ಗಳಲ್ಲೂ ಮನರಂಜನೆ ನೀಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲೂ ಟಿ20 ವಾತಾವರಣ ನಿರ್ಮಿಸಿದ್ದಾರೆ. ಆದರೆ, ಕೆಎಲ್ ರಾಹುಲ್ ಇದಕ್ಕೆ ಸಂಪೂರ್ಣ ತದ್ವಿರುದ್ಧವಾಗಿ ಆಡುತ್ತಿದ್ದಾರೆ ಎಂದು ಫ್ಯಾನ್ಸ್ ಗರಂ ಆಗಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಎದುರು ಸ್ಲೋ ಇನ್ನಿಂಗ್ಸ್
ಏಪ್ರಿಲ್ 19ರಂದು ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್, ನಿಧಾನಗತಿ ಇನ್ನಿಂಗ್ಸ್ ಕಟ್ಟಿದರು. ಒಂದೊಂದು ರನ್ ಗಳಿಸಲು ತಿಣುಕಾಡಿದರು. ಬೌಲರ್ಗಳ ಎದುರು ಪರದಾಡಿದರು. ಕಣಕ್ಕಿಳಿದ ಮೊದಲ ಓವರ್ನಲ್ಲೇ ಮೇಡಿನ್ ಮಾಡಿದರು. ಬಳಿಕ ಒಂದು ಬಾಲ್, ಒಂದು ರನ್ ಗಳಿಸಿದರು. 32 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರು. ಸ್ಟ್ರೇಕ್ರೇಟ್ ಇದ್ದದ್ದು 121 ಅಷ್ಟೆ. ಇದು ಒಂದು ಇನ್ನಿಂಗ್ಸ್ಗೆ ಸೀಮಿತ ಅಲ್ಲ, ಟೂರ್ನಿಯಲ್ಲಿ ಆಡಿದ 6 ಪಂದ್ಯಗಳಲ್ಲೂ ಇದೇ ಫಜೀತಿ.
ಫ್ಯಾನ್ಸ್ ಟ್ರೋಲ್
ಇಂಗ್ಲೆಂಡ್ ತಂಡವು ಟೆಸ್ಟ್ ಕ್ರಿಕೆಟ್ ಅನ್ನು ಟಿ20ಯಂತೆ ಬ್ಯಾಟ್ ಬೀಸುತ್ತಿದೆ. ಆದರೆ ನೀವ್ಯಾಕೆ ಹೊಡಿಬಡಿ ಆಟ ಟಿ20 ಕ್ರಿಕೆಟ್ನಲ್ಲಿ ಟೆಸ್ಟ್ನಂತೆ ಬ್ಯಾಟ್ ಬೀಸುತ್ತೀದ್ದೀರಾ? ಫ್ಯಾನ್ಸ್ ಪ್ರಶ್ನೆ ಮಾಡುತ್ತಿದ್ದಾರೆ. ಕಳೆದೊಂದು ವರ್ಷದಲ್ಲಿ ರಾಹುಲ್ ಚುಟುಕು ಫಾರ್ಮೆಟ್ನಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ನೀಡಿಲ್ಲ. ಸ್ಟ್ರೈಕ್ರೇಟ್ ಕೂಡ ತೀವ್ರ ಕುಸಿಯುತ್ತಿದೆ. ಐಪಿಎಲ್ನಲ್ಲಿ ಸ್ಟ್ರೈಕ್ರೇಟ್ ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದ್ದ ಫ್ಯಾನ್ಸ್ಗೆ ಭಾರಿ ನಿರಾಸೆಯಾಗಿದೆ.
ಸೇಡು ತೀರಿಸಿಕೊಳ್ಳುತ್ತಿದ್ದೀರಾ?
ಒಂದು ತಿಂಗಳ ಹಿಂದೆ ಮುಗಿದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ರಾಹುಲ್ ಅಟ್ಟರ್ಫ್ಲಾಪ್ ಶೋ ನೀಡಿದ್ದರು. ಮೊದಲೆರಡು ಪಂದ್ಯಗಳಲ್ಲಿ ತೀವ್ರ ಕಳಪೆ ಪ್ರದರ್ಶನ ನೀಡಿದ ರಾಹುಲ್ ಉಳಿದೆರಡು ಪಂದ್ಯಗಳಲ್ಲಿ ಬೆಂಚ್ಗೆ ಸೀಮಿತರಾದರು. ಇದನ್ನೇ ವಿಚಾರವಾಗಿ ಕಾಲೆಳೆದಿರುವ ಅಂದು ಆಡಿಸಲಿಲ್ಲ ಎಂಬ ಕಾರಣಕ್ಕೆ ಐಪಿಎಲ್ನಲ್ಲಿ ಟೆಸ್ಟ್ ಆಟಗಾರನನ್ನು ಹೊರ ತರುತ್ತಿದ್ದೀರಾ? ಆ ಮೂಲಕ ಸೇಡು ತೀರಿಸಿಕೊಳ್ಳುತ್ತಿದ್ದೀರಾ? ಮತ್ತೆ ಆಯ್ಕೆಯಾಗುವ ನಿರೀಕ್ಷೆಯಲ್ಲಿ ಹೀಗೆ ಬ್ಯಾಟ್ ಮಾಡುತ್ತಿದ್ದೀರಾ ಎಂದು ಟೀಕಿಸಿದ್ದಾರೆ.
ಸ್ಟ್ರೈಕ್ರೇಟ್ ಅಂಕಿ-ಅಂಶ ನೋಡಿ
ಈ ಆವೃತ್ತಿಯ ಐಪಿಎಲ್ನಲ್ಲಿ ರಾಹುಲ್ ಪ್ರದರ್ಶನವು ಟೆಸ್ಟ್ಗಿಂತ ಕಳಪೆಯಾಗಿದೆ . ಇದರಲ್ಲಿ ಯಾವುದೇ ಸಂದೇಹವಿಲ್ಲ. ಅದಕ್ಕೆ ಈ ಅಂಕಿ ಅಂಶಗಳೇ ಅದಕ್ಕೆ ಸಾಕ್ಷಿ. T20 ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಮಾಡುವ ಯಾವುದೇ ತಂಡಕ್ಕೆ ಮೊದಲ ಪವರ್ ಪ್ಲೇ (ಮೊದಲ 6 ಓವರ್ಗಳು) ನಿರ್ಣಾಯಕವಾಗಿದೆ. ವೀರಾವೇಷದ ಬ್ಯಾಟ್ ಬೀಸಿದರೆ, ಬ್ಯಾಟ್ಸ್ಮನ್ಗಳು ಬೃಹತ್ ಸ್ಕೋರ್ ಗಳಿಸಲು ಸಾಧ್ಯವಾಗುತ್ತದೆ.
ಆದರೆ, ಟೆಸ್ಟ್ ಕ್ರಿಕೆಟ್ನಂತೆ ಬ್ಯಾಟ್ ಬೀಸಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 12 ಎಸೆತಗಳಲ್ಲಿ 8 ರನ್ ಗಳಿಸಿದ್ದರು. ಸ್ಟ್ರೈಕ್ರೇಟ್ 66.67 ಇತ್ತು. ಚೆನ್ನೈ ಎದರು 111.11ರ ಸ್ಟ್ರೈಕ್ರೇಟ್ನಲ್ಲಿ 18 ಎಸೆತಗಳಲ್ಲಿ 20 ರನ್ ಗಳಿಸಿದ್ದರು. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 31 ಎಸೆತಗಳಲ್ಲಿ 35 ರನ್ (ಸ್ಟ್ರೈಕ್ ರೇಟ್ 112.90). ಆರ್ಸಿಬಿ ಎದುರು 20 ಎಸೆತಗಳಲ್ಲಿ 18 ರನ್ (ಸ್ಟ್ರೈಕ್ ರೇಟ್ 90), ಪಂಜಾಬ್ ವಿರುದ್ಧ 56 ಎಸೆತಗಳಲ್ಲಿ 74 ರನ್ ಆದರೆ ಸ್ಟ್ರೈಕ್ ರೇಟ್ 132.14 ಮಾತ್ರ.