logo
ಕನ್ನಡ ಸುದ್ದಿ  /  Sports  /  Cricket News Rcb Wicket Keeper Dinesh Karthik Set To Resume Commentary Duties For Icc Wtc Final 2023 Prs

Dinesh Karthik: ಐಪಿಎಲ್ ಬಳಿಕ ಮತ್ತೆ ಕಾಮೆಂಟರಿಯತ್ತ ದಿನೇಶ್​ ಕಾರ್ತಿಕ್; ಡಬ್ಲ್ಯುಟಿಸಿ ಫೈನಲ್​ನಲ್ಲಿ ದಿಗ್ಗಜರೊಂದಿಗೆ ವೀಕ್ಷಕ ವಿವರಣೆ

Prasanna Kumar P N HT Kannada

Jun 01, 2023 02:23 PM IST

ಮತ್ತೆ ಕಾಮೆಂಟೇಟರ್​ನತ್ತ ವಾಲಿದ ದಿನೇಶ್​ ಕಾರ್ತಿಕ್​

    • ICC WTC Final 2023: ಸ್ಪರ್ಧಾತ್ಮಕ ಕ್ರಿಕೆಟ್​​ನಿಂದ ದಿನೇಶ್​ ಕಾರ್ತಿಕ್​ (Dinesh Karthik) ದೂರ ಉಳಿದಿದ್ದಾರೆ. ಕೇವಲ ಐಪಿಎಲ್​ನಲ್ಲಿ (IPL 2023) ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಇದೀಗ ಐಪಿಎಲ್​ ಮುಗಿದ ಬೆನ್ನಲ್ಲೇ ಮತ್ತೆ ಕಾಮೆಂಟ್ರಿ ಮಾಡಲು ರೆಡಿಯಾಗಿದ್ದಾರೆ.
ಮತ್ತೆ ಕಾಮೆಂಟೇಟರ್​ನತ್ತ ವಾಲಿದ ದಿನೇಶ್​ ಕಾರ್ತಿಕ್​
ಮತ್ತೆ ಕಾಮೆಂಟೇಟರ್​ನತ್ತ ವಾಲಿದ ದಿನೇಶ್​ ಕಾರ್ತಿಕ್​

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​ (IPL 2023) ಮುಗಿದಿದೆ. ಲೀಗ್​ನಲ್ಲಿ ಕಣಕ್ಕಿಳಿದ ಆಟಗಾರರು, ರಾಷ್ಟ್ರೀಯ ಸೇವೆಗಳತ್ತ ಮರಳುತ್ತಿದ್ದಾರೆ. ಅದರಂತೆ ಟೀಮ್​ ಇಂಡಿಯಾ (Team India) ಆಟಗಾರರು ಕೂಡ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕಾಗಿ (ICC World Test Championship Final 2023) ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಡಬ್ಲ್ಯುಟಿಸಿ ಫೈನಲ್​ಗೆ ಆಯ್ಕೆಯಾದ ತಂಡವು, ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಿದ್ದು, ಆಟಗಾರರು ನೆಟ್ಸ್​​ನಲ್ಲಿ ನಿರತರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಅದೇ ರೀತಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವಿಕೆಟ್​ ಕೀಪರ್ ದಿನೇಶ್​ ಕಾರ್ತಿಕ್​ (RCB Wicket Keeper Dinesh Karthik) ಕೂಡ ಇಂಗ್ಲೆಂಡ್​ಗೆ ತೆರಳಿದ್ದಾರೆ. ಆದರೆ ಈ ಆಡಲು ಅಲ್ಲ. ಬದಲಾಗಿ ಕಾಮೆಂಟೇಟರ್​ ಆಗಿ ಎಂಬುದು ವಿಶೇಷ. ಸ್ಪರ್ಧಾತ್ಮಕ ಕ್ರಿಕೆಟ್​​ನಿಂದ ದಿನೇಶ್​ ಕಾರ್ತಿಕ್​ ದೂರ ಉಳಿದಿದ್ದಾರೆ. ಕೇವಲ ಐಪಿಎಲ್​ನಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಇದೀಗ ಐಪಿಎಲ್​ ಮುಗಿದ ಬೆನ್ನಲ್ಲೇ ಮತ್ತೆ ಕಾಮೆಂಟ್ರಿ ಮಾಡಲು ರೆಡಿಯಾಗಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದಲ್ಲಿ ದಿನೇಶ್​ ಕಾರ್ತಿಕ್​ ಕಾಮೆಂಟೇಟರ್ ಆಗಿ ಕಣಕ್ಕಿಳಿಯಲಿದ್ದಾರೆ. ಈ ಹಿಂದೆಯೇ ಕಾಮೆಂಟೇಟರ್​ ಆಗಿದ್ದ ದಿನೇಶ್​ ಕಾರ್ತಿಕ್​, ಐಪಿಎಲ್​ನಲ್ಲಿ ಮಾತ್ರ ಮುಂದುವರೆದಿದ್ದಾರೆ. 15ನೇ ಆವೃತ್ತಿಯ ಐಪಿಎಲ್​ನಲ್ಲಿ ನೀಡಿದ್ದ ಬೊಂಬಾಟ್​ ಪ್ರದರ್ಶನಕ್ಕೆ ಭಾರತ ತಂಡದಲ್ಲಿ ಮತ್ತೊಮ್ಮೆ ಅವಕಾಶ ಸಿಕ್ಕಿತ್ತು. ಆದರೆ ಈ ಬಾರಿ ಅತ್ಯಂತ ಕಳಪೆ ಆಟಗಾರನಾಗಿ ಹೊರ ಹೊಮ್ಮಿದ್ದಾರೆ.

ಫುಲ್ ಟೈಮ್​ ಕಾಮೆಂಟ್ರಿ ಮಾಡು ಎಂದಿದ್ದ ನೆಟ್ಟಿಗರು

ಈ ಬಾರಿಯ 16ನೇ ಐಪಿಎಲ್​ನಲ್ಲಿ ಆರ್​ಸಿಬಿ ಪರ 13 ಇನಿಂಗ್ಸ್​ಗಳಲ್ಲಿ ಕಣಕ್ಕಿಳಿದಿದ್ದರು. ಆದರೆ, ದಿನೇಶ್ ಕಾರ್ತಿಕ್ ಕಲೆ ಹಾಕಿದ್ದು ಕೇವಲ 140 ರನ್ ಮಾತ್ರ. ಈ ಕಳಪೆ ಬ್ಯಾಟಿಂಗ್ ಕಾರಣ, ನೀವು ಫುಲ್ ಟೈಮ್ ಕಾಮೆಂಟೇಟರ್ ಆಗುವುದೇ ಉತ್ತಮ ಎಂದು ಡಿಕೆಯನ್ನು ಟ್ರೋಲ್ ಮಾಡಿದ್ದರು ನೆಟ್ಟಿಗರು. ಇದೀಗ ಐಪಿಎಲ್ ಮುಗಿದ ಬೆನ್ನಲ್ಲೇ ಡಿಕೆ ಕಾಮೆಂಟೇಟರ್​ ಆಗಿ ಮತ್ತೆ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ.

ಕಾಮೆಂಟರಿ ಪ್ಯಾನಲ್​​ನಲ್ಲಿ ದಿಗ್ಗಜರ ಸಮಾಗಮ

ಇಂಗ್ಲೆಂಡ್‌ನಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಫ್​ ಫೈನಲ್​ ಪಂದ್ಯಕ್ಕೆ ಕಾಮೆಂಟರಿ ಫ್ಯಾನಲ್​ ವಿಭಾಗವನ್ನು ಪ್ರಕಟಿಸಲಾಗಿದೆ. ಫೈನಲ್‌ಗಾಗಿ ಕಾಮೆಂಟರಿ ಪ್ಯಾನೆಲ್‌ನಲ್ಲಿ ರಿಕಿ ಪಾಂಟಿಂಗ್, ಮ್ಯಾಥ್ಯೂ ಹೇಡನ್, ಜಸ್ಟಿನ್ ಲ್ಯಾಂಗರ್, ಸುನಿಲ್ ಗವಾಸ್ಕರ್, ರವಿಶಾಸ್ತ್ರಿ, ನಾಸರ್ ಹುಸೇನ್ ಮತ್ತು ಕುಮಾರ್ ಸಂಗಕ್ಕಾರ ಅವರಂತಹ ದಿಗ್ಗೆಜರ ಜೊತೆಗೆ ದಿನೇಶ್​ ಕಾರ್ತಿಕ್ ಹೆಸರು ಕೂಡ ಇದೆ.

ಡಬ್ಲ್ಯುಟಿಸಿ ಫೈನಲ್​ ಯಾವಾಗ?

10 ವರ್ಷಗಳ ನಂತರ ಐಸಿಸಿ ಟ್ರೋಫಿಯ (ICC Trophy) ಕನಸಿನಲ್ಲಿರುವ ಟೀಮ್​ ಇಂಡಿಯಾ, ಜೂನ್​ 7ರಿಂದ ಆರಂಭವಾಗುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ (India vs Australia) ಸೆಣಸಾಟ ನಡೆಸಲಿದೆ. ಇಂಗ್ಲೆಂಡ್​ನ ಓವಲ್​ ಮೈದಾನದಲ್ಲಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ದಿನೇಶ್​ ಕಾರ್ತಿಕ್​ ಕಾಮೆಂಟೇಟರ್ ಆಗಿ ಕಾರ್ಯನಿರ್ಹಹಿಸಲಿದ್ದಾರೆ.

ಕಳೆದ ಆವೃತ್ತಿಯಲ್ಲೂ ಡಿಕೆ ಕಾಮೆಂಟೇಟರ್​​

2021ರಲ್ಲಿ ನಡೆದ ಮೊದಲ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳು (India vs New Zealand) ಮುಖಾಮುಖಿಯಾಗಿದ್ದವು. ಈ ಫೈನಲ್​ ಪಂದ್ಯಕ್ಕೂ ದಿನೇಶ್​ ಕಾರ್ತಿಕ್ (Dinesh Karthik)​ ಕಾಮೆಂಟೇಟರ್​ ಆಗಿ ಕಾರ್ಯನಿರ್ಹಸಿದ್ದರು. ಆದರೆ ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲನುಭವಿಸಿತ್ತು. ನ್ಯೂಜಿಲೆಂಡ್​ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು. ಅಂದು ವಿರಾಟ್​ ಕೊಹ್ಲಿ (Virat Kohli) ನಾಯಕನಾಗಿದ್ದರು.

    ಹಂಚಿಕೊಳ್ಳಲು ಲೇಖನಗಳು