logo
ಕನ್ನಡ ಸುದ್ದಿ  /  ಕ್ರೀಡೆ  /  Test Cricket: ಟಿ20 ಲೀಗ್​​​ಗಳ ಹಾವಳಿಯಿಂದ ಐಸಿಯು ಸೇರಿದ್ದ 146 ವರ್ಷಗಳ ಟೆಸ್ಟ್ ಕ್ರಿಕೆಟ್​ಗೆ ಜೀವ ತುಂಬಿದ್ದೇ ಟೆಸ್ಟ್ ಚಾಂಪಿಯನ್​ಶಿಪ್!

Test Cricket: ಟಿ20 ಲೀಗ್​​​ಗಳ ಹಾವಳಿಯಿಂದ ಐಸಿಯು ಸೇರಿದ್ದ 146 ವರ್ಷಗಳ ಟೆಸ್ಟ್ ಕ್ರಿಕೆಟ್​ಗೆ ಜೀವ ತುಂಬಿದ್ದೇ ಟೆಸ್ಟ್ ಚಾಂಪಿಯನ್​ಶಿಪ್!

Prasanna Kumar P N HT Kannada

Jun 07, 2023 06:19 AM IST

ಟೆಸ್ಟ್​ ಕ್ರಿಕೆಟ್​​​​ಗೆ ಮರುಜನ್ಮ ಕೊಟ್ಟ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​

    • WTC Final 2023: ಟೆಸ್ಟ್​ ಕ್ರಿಕೆಟ್ (Test Cricket)​ ಇತಿಹಾಸವೇನು? ಟಿ20 ಕ್ರಿಕೆಟ್​ಗಳ ಹಾವಳಿಯಿಂದ ನಿಜವಾಗಲೂ ಟೆಸ್ಟ್​ ಕ್ರಿಕೆಟ್​​ ವಿನಾಶದತ್ತ ಮರಳಿತ್ತೇ? 146 ವರ್ಷಗಳ ಇತಿಹಾಸ ಇರುವ ಟೆಸ್ಟ್​​​​​ ಕ್ರಿಕೆಟ್​​ ಮತ್ತೆ ಪುನರ್​ಜನ್ಮ ಪಡೆಯಲು ಕಾರಣವೇನು? ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಯಿಂದ ಲಾಭ ಇದೆಯೇ? ಈ ಎಲ್ಲವಕ್ಕೂ ಇಲ್ಲಿದೆ ಉತ್ತರ. 
ಟೆಸ್ಟ್​ ಕ್ರಿಕೆಟ್​​​​ಗೆ ಮರುಜನ್ಮ ಕೊಟ್ಟ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​
ಟೆಸ್ಟ್​ ಕ್ರಿಕೆಟ್​​​​ಗೆ ಮರುಜನ್ಮ ಕೊಟ್ಟ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​

ಕ್ರಿಕೆಟ್​​​, ಅದರಲ್ಲೂ ಟೆಸ್ಟ್​ ಕ್ರಿಕೆಟ್ (Test Cricket)​ ಒಂದು ಪರಂಪರೆ. ದಶಕಗಳ ಇತಿಹಾಸ. ಕ್ರಿಕೆಟ್​​​ನ ಜೀವಾಳ. ಅದೊಂದು ಮಹೋನ್ನತ ಕಾವ್ಯ. ಮನೋಜ್ಞ ಸಾಹಿತ್ಯ. ಆಟದ ನಿಜವಾದ ಗಮ್ಮತ್ತು ಇರುವುದೇ ಟೆಸ್ಟ್​ನಲ್ಲಿ ಎಂಬುದು ವಿಶೇಷ. ತುಂಬಾ ದೂರ ಏನಲ್ಲ, ಕೇವಲ 19 ವರ್ಷಗಳ ಹಿಂದಷ್ಟೇ ಸುಂದರ, ರಮಣೀಯ ಕಾವ್ಯ ಎನಿಸಿದ ಟೆಸ್ಟ್ ಕ್ರಿಕೆಟ್​ಗೆ,​​ ತನ್ನ ಅವನತಿಯ ವಾಸನೆ ಮೂಗಿಗೆ ಬಡಿಯಿತು.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಯಾಕಂದರೆ, 2004ರ ಜುಲೈ 15ರಂದು ಆಗಿದ್ದು, ಇಂಗ್ಲೆಂಡ್​​ನಲ್ಲಿ ಮತ್ತೊಂದು ಮನ್ವಂತರ. ಟಿ20 ಕ್ರಿಕೆಟ್ (T20 Cricket)​ ಜನನ. ಒಂದೇ ವರ್ಷ ಅಂದರೆ, 2005ರ ಫೆಬ್ರವರಿ 17ರಂದು ಅಂತಾರಾಷ್ಟ್ರೀಯ ಮಟ್ಟಕ್ಕೂ ಇದು ಅಂಬೆಗಾಲು ಇಟ್ಟಿತು. ಆಕರ್ಷಿಸಿತು. ಇಲ್ಲಿಂದ ಶುರುವಾಯಿತು ನೋಡಿ, ಟೆಸ್ಟ್​ ಕ್ರಿಕೆಟ್​ನ ಅಧಃಪತನ. ಅದಕ್ಕೂ ಮೊದಲ ಏಕದಿನ ಕ್ರಿಕೆಟ್​​ ಇತ್ತಾದರೂ, ಜನರಿಗೆ ಈ ಪಾಟಿ ವ್ಯಾಮೋಹ ಅಂಟಿರಲಿಲ್ಲ.

146 ವರ್ಷಗಳ ಇತಿಹಾಸ

146 ವರ್ಷಗಳ (1877ರಲ್ಲಿ ಮೊದಲ ಅಂತಾರಾಷ್ಟ್ರೀಯ ಟೆಸ್ಟ್​ ಪಂದ್ಯ) ಚರಿತ್ರೆ ಹೊಂದಿರುವ ಟೆಸ್ಟ್ ಕ್ರಿಕೆಟ್​​ ಪರಂಪರೆಯನ್ನೇ ನೆಲಕಚ್ಚುವಂತೆ ಮಾಡಿತು ಅಂಬೆಗಾಲಿಟ್ಟ ಟಿ20 ಕ್ರಿಕೆಟ್​​. ಟೆಸ್ಟ್​​​ ಜೀವವನ್ನು ಏಕ್​​ದಮ್​​ ತೆಗೆಯಲಿಲ್ಲವಾದರೂ, ನಿಧಾನವಾಗಿ ಉಸಿರುಗಟ್ಟಿಸಿತು. ಹೇಗೋ ಜೀವ ಉಳಿಸಿಕೊಂಡಿದ್ದ ಪ್ರತಿಭಾವಂತ ಕ್ರಿಕೆಟಿಗರ ಉತ್ಪದನಾ ಕಾರ್ಖಾನೆಯು 2007 ಮತ್ತು 2008ರ ಬಳಿಕ ಐಸಿಯು ಸಂಪೂರ್ಣ ಸೇರಿತು.

ಕಾರಣ, ಟಿ20 ವಿಶ್ವಕಪ್ (T20 World Cup)​ ಮತ್ತು ಶ್ರೀಮಂತ ಲೀಗ್​ ಐಪಿಎಲ್ (IPL)​. ಇವು ಪ್ರೇಕ್ಷಕರನ್ನು ಹೊಸ ಲೋಕಕ್ಕೆ ಕೊಂಡೊಯ್ದವು. ಅಸಲಿ ಕ್ರಿಕೆಟ್​ ಅಂದರೆ ಇದು ಎನ್ನುವಷ್ಟರ ಮಟ್ಟಿಗೆ ಹುಚ್ಚು ಎಬ್ಬಿಸಿದವು. ಚುಟಕು ಕ್ರಿಕೆಟ್​ಗಳ ವಿಜೃಂಭಣೆಯಲ್ಲಿ ಟೆಸ್ಟ್​ ಕ್ರಿಕೆಟ್​ ಕಳೆದುಹೋಯಿತು. ಮುಳುಗುವ ಹಡಗಂತಾಯಿತು. ಆದರೆ, ಈ ಮುಳುಗುವ ತೆಪ್ಪವನ್ನು ಮೇಲೆತ್ತಿ ಜೀವ ಕೊಟ್ಟಿದ್ದೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್.

ಟೆಸ್ಟ್​ಗೆ ಮರುಜನ್ಮ

20 ಓವರ್​​ಗಳ, 50 ಓವರ್​ಗಳ ವಿಶ್ವಕಪ್​ಗಳ ವ್ಯಾಮೋಹಕ್ಕೆ ಬಲಿ ಆಗಲು ಐಸಿಯುನಲ್ಲಿದ್ದ ಟೆಸ್ಟ್ ಕ್ರಿಕೆಟ್‌ಗೆ ಜೀವ ಕೊಟ್ಟಿದ್ದೇ ಟೆಸ್ಟ್ ಚಾಂಪಿಯನ್​ಶಿಪ್. ಅಂದದ ಆಟದ ವೈಭವ ಮರಳಿ ಪಡೆಯುತ್ತಿದೆ. ಟೆಸ್ಟ್​ ಕ್ರಿಕೆಟ್​​​ ಆಟದ ಗಮ್ಮತ್ತು ಹೇಗಿದೆ ಎಂಬುದನ್ನು ತೋರಿಸಿದೆ. ಅದಕ್ಕಿದ್ದ ಶ್ರೀಮಂತಿಕೆಯನ್ನು ಮತ್ತೆ ಪಡೆಯುತ್ತಿದೆ. ಇತಿಹಾಸದಲ್ಲಿ ಮತ್ತೊಂದು ಸುದೀರ್ಘ ಕಾವ್ಯ ರಚಿಸಲು ಹೊಸ ಹೆಜ್ಜೆ ಇಡುತ್ತಿದೆ.

ಟೆಸ್ಟ್​ ಕ್ರಿಕೆಟ್​ ಮರು ಜನ್ಮ ಪಡೆದಿದೆ. ಕಳೆದ ನಾಲ್ಕು ವರ್ಷಗಳಿಂದ ಟಿ20 ಕ್ರಿಕೆಟ್​ ಲೀಗ್​​​ಗಳ ವ್ಯಾಮೋಹದ ನಡುವೆಯೂ ಹೋರಾಡಿದ ಟೆಸ್ಟ್, ಈಗ ಭದ್ರವಾಗಿ ನೆಲೆಯೂರುತ್ತಿದೆ. ಟಿ20 ಲೀಗ್ಸ್​​ ಟೆಸ್ಟ್​​ ಕ್ರಿಕೆಟ್​ಗೆ ಮಾರಕ ಎಂಬ ಚರ್ಚೆಗಳು ಅಂದು ನಡೆದಿದ್ವು. ಅದಾಗಲೇ ಕೆಲವೇ ಗಂಟೆಗಳಲ್ಲಿ ಫಲಿತಾಂಶ ಸಿಗುವ ಚುಟುಕು ಕ್ರಿಕೆಟ್​​​ ಕಡೆಗೆ ವಾಲಿದ್ದರು. ಅಂದು ಹೆಚ್ಚು ಮಂದಿಗೆ ಬೇಡವಾಗಿದ್ದ ಟೆಸ್ಟ್​ ಕ್ರಿಕೆಟ್, ಈಗ ಅವರಿಗೆ ಅಚ್ಚುಮೆಚ್ಚು.

ಇದೇ ನಿಜವಾದ ಕ್ರಿಕೆಟ್​​

ಟೆಸ್ಟ್​ ಕ್ರಿಕೆಟ್​ ಎಂಬುದು ಪ್ರತಿಭಾವಂತ ಕ್ರಿಕೆಟಿಗರನ್ನು ಉತ್ಪಾದಿಸುವ ಕೇಂದ್ರ. ಆಟದಲ್ಲಿ ತಾಳ್ಮೆ, ಸಂಯಮವನ್ನೂ ಕಲಿಸುತ್ತದೆ. ಇದು ಆಟಕ್ಕೆ ಅಷ್ಟೇ ಸೀಮಿತವಲ್ಲ, ಜೀವನಕ್ಕೂ ಅನ್ವಯವಾಗುತ್ತದೆ. ಬೌಲರ್​​ ಮತ್ತು ಬ್ಯಾಟ್ಸ್​ಮನ್​ ನಡುವಿನ ಅಂತರಂಗದ ಯುದ್ಧ. ಪರಿಪೂರ್ಣ ಆಟಗಾರ ಎನಿಸಿಕೊಳ್ಳುವು ಟೆಸ್ಟ್​ ಕ್ರಿಕೆಟ್​​​ನಿಂದ ಮಾತ್ರ ಸಾಧ್ಯ. ಆದರೆ, ಆಟಕ್ಕಿಂತ ವ್ಯವದಾನವೇ ಮುಖ್ಯ. ಇದೇ ಕಾರಣಕ್ಕೆ ಆಟಗಾರರಿಗೂ ತುಂಬಾ ಪ್ರೀತಿ.

ಕ್ರಿಕೆಟ್‌ ಭಂಡಾರದಲ್ಲಿ ಏಕದಿನ ಮತ್ತು ಟಿ20 ಪಂದ್ಯಗಳು ಸೇರ್ಪಡೆ ಬಳಿಕ ಬೌಲರ್ ಮತ್ತು ಬ್ಯಾಟ್ಸ್‌ಮನ್‌ಗಳೂ ಎಲ್ಲ ಬಗೆಯ ಕ್ರಿಕೆಟ್ಟಿಗೂ ಹೊಂದಿಕೊಳ್ಳುವುದನ್ನು ಕಲಿಯುವ ಅಗತ್ಯ ಎದುರಾಗಿದೆ. ಇದರಿಂದ ಒಟ್ಟಾರೆ ಆಟದ ತಂತ್ರಗಾರಿಕೆ, ರಣತಂತ್ರಗಳ ಮೇಲೆ ಪರಿಣಾಮ ಬೀರುತ್ತದೆ. ಕಿರಿಕಿರಿ ಉಂಟಾಗುತ್ತಿದೆ. ಆದರೆ, ಎಷ್ಟೇ ಲೀಗ್​ಗಳು ಜನ್ಮ ಪಡೆದರೂ, ಆಟಗಾರರ ಪಾಲಿಗೆ ಇದೇ ನಿಜವಾದ ಕ್ರಿಕೆಟ್​​ ಮಾದರಿ.

ಕ್ರಿಕೆಟಿಗರಿಗೂ ಟೆಸ್ಟ್​ ಇಷ್ಟ

ವಿರಾಟ್​ ಕೊಹ್ಲಿ ಒಂದು ಮಾತನ್ನು ಹೇಳಿದ್ದರು, ಟೆಸ್ಟ್​​​ ಆಡುವುದು ಎಂದರೆ ತುಂಬಾ ಪ್ರೀತಿ. ಒಬ್ಬ ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದು ಹೇಳಿದ್ದರು. ದಿಗ್ಗಜ ಕ್ರಿಕೆಟಿಗರೇ ಟೆಸ್ಟ್​ ಈಸ್​ ದ ಬೆಸ್ಟ್​​ ಎಂದು ಹೇಳಿದ್ದಾರೆ. ಈ ಸ್ವರೂಪದಿಂದ ಮಾನಸಿಕ ಮತ್ತು ದೈಹಿಕವಾಗಿ ಫಿಟ್​ ಆಗಬಹುದು. ಟೆಸ್ಟ್​ ಕ್ರಿಕೆಟ್​​ ಹೊರತುಪಡಿಸಿ ವಿಶ್ವದ ಯಾವ ಕ್ರೀಡೆಯೂ 5 ದಿನಗಳ ಕಾಲ ನಡೆಯಲ್ಲ ಎಂಬುದು ವಿಶೇಷ.

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​.. ಇದು ಉಗಮಗೊಂಡಿದ್ದು 2019ರಲ್ಲಿ. ಎರಡು ವರ್ಷಗಳ ಕಾಲ ನಡೆಯುವ ಸುದೀರ್ಘ ಟೂರ್ನಿ. ಸದ್ಯ ಎರಡನೇ ಆವೃತ್ತಿಯ ಕೊನೆಯ ಹಂತಕ್ಕೆ ಬಂದು ನಿಂತಿದೆ. ಜೂನ್ ಇಡೀ ವಿಶ್ವವೇ ಕಾದು ಕುಳಿತಿದೆ. ಜೂನ್​ 7ರಿಂದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು, ಎದುರಾಗುತ್ತಿವೆ. ಇದು 2ನೇ ಆವೃತ್ತಿಯ ಫೈನಲ್​ ಪಂದ್ಯ.

ಡಬ್ಲ್ಯುಟಿಸಿ ಇತಿಹಾಸ

2019ರಿಂದ 2021ರವರೆಗೂ ಮೊದಲ ಆವೃತ್ತಿ ನಡೆದಿತ್ತು. ಇಲ್ಲೂ ಭಾರತ ಫೈನಲ್​ ಪ್ರವೇಶಿಸಿದ್ದು ಇತಿಹಾಸ. ದುರದೃಷ್ಟವಶಾತ್​, ಟ್ರೋಫಿ ನಮ್ಮದಾಗಲಿಲ್ಲ. ನ್ಯೂಜಿಲೆಂಡ್ ಗೆದ್ದು ಚಾಂಪಿಯನ್​ ಆಯಿತು. ಈಗ ಮತ್ತೊಂದು ಅಗ್ನಿಪರೀಕ್ಷೆಗೆ ಭಾರತ ಸಜ್ಜಾಗಿದೆ. ಪ್ರಶಸ್ತಿ ಗೆದ್ದು ಕ್ರಿಕೆಟ್​ ಇತಿಹಾಸದಲ್ಲಿ ಯಾರೂ ಬರೆಯದ ದಾಖಲೆ ಬರೆಯಲು ಹೊರಟಿದೆ. ಸದ್ಯ ಇದು ಬೋರಿಂಗ್ ಕ್ರಿಕೆಟ್​ ಎಂದವರ ಮನಸ್ಸನ್ನೂ ಬದಲಿಸಿದೆ.

ಟಿ20, ಏಕದಿನ ಹಾವಳಿ ನಡುವೆ ಅಳಿವಿನಂಚಿಗೆ ಸಿಲುಕಿದ್ದ ಟೆಸ್ಟ್​ ಕ್ರಿಕೆಟ್​ ಉಳಿಸುವ ಸಲುವಾಗಿಯೇ ಐಸಿಸಿ, ಟೆಸ್ಟ್​ ಚಾಂಪಿಯನ್​ಶಿಪ್ ಅನ್ನು ಆರಂಭಿಸಿದೆ. ಟೆಸ್ಟ್ ಕ್ರಿಕೆಟ್ ಆಟಗಾರರ ಮನೋಧರ್ಮ ಮತ್ತು ಮೈದಾನದಲ್ಲಿ ಅವರ ಕ್ರಿಯಾಶೀಲತೆಯನ್ನು ಹೇಳುತ್ತದೆ. ಟೆಸ್ಟ್ ಕ್ರಿಕೆಟ್‌ಗೆ ಆಟಗಾರರು ಉತ್ತಮ ಸ್ಥಿತಿಯಲ್ಲಿರಬೇಕು. ಕೌಶಲ್ಯವನ್ನು ಹೆಚ್ಚಿಸುತ್ತದೆ. ವಿಭಿನ್ನ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಿದೆ.

ಹೆಚ್ಚಾಯ್ತು ಮಂದಹಾಸ

ಭಾರತದಲ್ಲಿ ಹಾಕಿ ರಾಷ್ಟ್ರೀಯ ಕ್ರೀಡೆಯಾದರೂ, ಆರಾಧಿಸುವುದು ಮಾತ್ರ ಕ್ರಿಕೆಟ್​ ಆಟವನ್ನು. ಗಲ್ಲಿಯಿಂದ ದಿಲ್ಲಿವರೆಗೂ, ಕಿರಿಯರಿಂದ ಹಿರಿಯರವರೆಗೂ ಕ್ರಿಕೆಟ್ ಆಟವು​​ ಬೆಲೆ ಕಟ್ಟಲಾಗದ ಪ್ರೀತಿ, ಅಭಿಮಾನ ಗಳಿಸಿದೆ. ಜನರ ಜೀವನದ ಒಂದು ಭಾಗವಾಗಿದೆ. ನಿಧಾನವಾಗಿ ಟೆಸ್ಟ್​​ ಕ್ರಿಕೆಟ್​ ಮೇಲೆ ಪ್ರೀತಿ ಬೆಳೆಯುತ್ತಿದೆ. ಇದು ಟೆಸ್ಟ್​ ಕ್ರಿಕೆಟ್​​ ಪ್ರೇಮಿಗಳಲ್ಲಿ ಮಂದಹಾಸ ಹೆಚ್ಚಿಸಿದೆ.

ಉಳಿಸಿ ಬೆಳೆಸಿ

ಗಣನೀಯವಾಗಿ ಸಿಗುತ್ತಿರುವ ದುಡ್ಡು, ಪಂದ್ಯದ ಗೆಲುವಿನಿಂದ ಸಿಗುತ್ತಿದ್ದ ರೋಚಕತೆ, ಪರಿಶುದ್ಧ ಶುದ್ಧ ಸಂಭ್ರಮದ ಸ್ಥಾನವನ್ನು ಕಿತ್ತುಕೊಂಡಿದೆ. ಇಂದು ಪ್ರತಿಯೊಂದೂ ಹಣದಿಂದ ಖರೀದಿಸುವ ಕನಸುಗಳೇ ಆಗಿವೆ. ಹಾಗಾಗಿ ಈಗಷ್ಟೇ ಚಿಗುರೊಡೆದ ಹಸಿರುಲ್ಲಿನಂತೆ, ಟೆಸ್ಟ್​ ಕ್ರಿಕೆಟ್​​​ ಅನ್ನು ಸದಾ ಹಚ್ಚ ಹಸಿರಿನಂತೆ ನೋಡಿಕೊಳ್ಳಬೇಕು. ಉಳಿಸಿ ಬೆಳೆಸಬೇಕು. ಈ ಟೇಸ್ಟೀ ಟೆಸ್ಟ್​ ಹೀಗೆಯೇ ಇರಲು ಐಸಿಸಿ ಕೂಡ ಹೊಸ ಹೊಸ ಪ್ರಯೋಗಕ್ಕೆ ಮುಂದಾಗಬೇಕು. ಆಗ ಮಾತ್ರ ನಮ್ಮೊಂದಿಗೆ ಟೆಸ್ಟ್​​ ಜೀವಂತವಾಗಿ ಉಸಿರಾಡಲು ಸಾಧ್ಯ.

    ಹಂಚಿಕೊಳ್ಳಲು ಲೇಖನಗಳು