logo
ಕನ್ನಡ ಸುದ್ದಿ  /  ಕ್ರೀಡೆ  /  Ipl Trophy: ಐಪಿಎಲ್​ ಟ್ರೋಫಿ ಮೇಲಿರುವ ಸಂಸ್ಕೃತ ಶ್ಲೋಕದ ಅರ್ಥವೇನು; ಈ ವಾಕ್ಯಕ್ಕೂ 1983ರ ಏಕದಿನ ವಿಶ್ವಕಪ್​ಗೂ ಇದೆ ನಂಟು

IPL Trophy: ಐಪಿಎಲ್​ ಟ್ರೋಫಿ ಮೇಲಿರುವ ಸಂಸ್ಕೃತ ಶ್ಲೋಕದ ಅರ್ಥವೇನು; ಈ ವಾಕ್ಯಕ್ಕೂ 1983ರ ಏಕದಿನ ವಿಶ್ವಕಪ್​ಗೂ ಇದೆ ನಂಟು

Prasanna Kumar P N HT Kannada

May 28, 2023 09:57 PM IST

ಐಪಿಎಲ್​ ಟ್ರೋಫಿ ಮೇಲಿದೆ ಯತ್ರ ಪ್ರತಿಭಾ ಅವ್‌ಸರ ಪ್ರಪ್ನೋತಿಹಿ ಎಂಬ ಸಂಸ್ಕೃತ ಶ್ಲೋಕ

    • ಚೆನ್ನೈ ಮತ್ತು ಗುಜರಾತ್​ ತಂಡಗಳು (CSK vs GT Final) ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಐಪಿಎಲ್​ ಫೈನಲ್​ನಲ್ಲಿ ಈ ಬಾರಿ ಯಾರು ಕಪ್ ಗೆಲ್ಲಲಿದ್ದಾರೆ ಎಂಬ ಕುತೂಹಲವೂ ಜೋರಾಗಿದೆ. ಇದರ ನಡುವೆ ಟ್ರೋಫಿಯಲ್ಲಿ (IPL Trophy) ಬರೆದಿರುವ ಸಂಸ್ಕೃತ ಶ್ಲೋಕ ಕುರಿತು ಭಾರಿ ಟ್ರೆಂಡಿಂಗ್​ ಆಗುತ್ತಿದೆ. ಅದರ ಅರ್ಥವೇನು ಎಂಬುದು ಕೂಡ ಕುತೂಹಲ ಮೂಡಿದೆ.
ಐಪಿಎಲ್​ ಟ್ರೋಫಿ ಮೇಲಿದೆ ಯತ್ರ ಪ್ರತಿಭಾ ಅವ್‌ಸರ ಪ್ರಪ್ನೋತಿಹಿ ಎಂಬ ಸಂಸ್ಕೃತ ಶ್ಲೋಕ
ಐಪಿಎಲ್​ ಟ್ರೋಫಿ ಮೇಲಿದೆ ಯತ್ರ ಪ್ರತಿಭಾ ಅವ್‌ಸರ ಪ್ರಪ್ನೋತಿಹಿ ಎಂಬ ಸಂಸ್ಕೃತ ಶ್ಲೋಕ

16ನೇ ಆವೃತ್ತಿಯ ಐಪಿಎಲ್​ ಫೈನಲ್​ ಪಂದ್ಯಕ್ಕೆ (IPL Final 2023) ಮಳೆ ಅಡ್ಡಿಪಡಿಸಿದೆ. ಇವತ್ತು ಸಾಧ್ಯವಾಗದಿದ್ದರೂ ನಾಳೆ ಮೀಸಲು ದಿನದಂದು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಚೆನ್ನೈ ಮತ್ತು ಗುಜರಾತ್​ ತಂಡಗಳು (CSK vs GT Final) ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈ ಬಾರಿ ಯಾರು ಕಪ್ ಗೆಲ್ಲಲಿದ್ದಾರೆ ಎಂಬ ಕುತೂಹಲವೂ ಜೋರಾಗಿದೆ. ಇದರ ನಡುವೆ ಐಪಿಎಲ್​ ಟ್ರೋಫಿಯಲ್ಲಿ (IPL Trophy) ಬರೆದಿರುವ ಸಂಸ್ಕೃತ ಶ್ಲೋಕ ಕುರಿತು ಭಾರಿ ಟ್ರೆಂಡಿಂಗ್​ ಆಗುತ್ತಿದೆ. ಅದರ ಅರ್ಥವೇನು ಎಂಬುದು ಕೂಡ ಕುತೂಹಲ ಮೂಡಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಪ್ರತಿ ಆವೃತ್ತಿಯಲ್ಲೂ ಈ ಟ್ರೋಫಿ ಪಡೆಯಲು ಎಲ್ಲಾ ತಂಡಗಳ ನಡುವೆ ಭಾರಿ ಪೈಪೋಟಿ ಏರ್ಪಡುತ್ತದೆ. 2008ರಲ್ಲಿ ನಡೆದ ಐಪಿಎಲ್‌ನ ಮೊದಲ ಆವೃತ್ತಿಯಿಂದ ಹಿಡಿದು ಇಲ್ಲಿವರೆಗೂ ಟ್ರೋಫಿ ಎಲ್ಲಾ ತಂಡಗಳ ನಡುವೆಯೂ ಸ್ಪರ್ಧೆ ಕಡಿಮೆಯಾಗಿದ್ದೇ ಇಲ್ಲ. ಮತ್ತೊಂದು ವಿಶೇಷ ಎಂದರೆ 2008ರ ಐಪಿಎಲ್​ ಟ್ರೋಫಿಯು ಈಗಿನದಕ್ಕಿಂತ ಭಿನ್ನವಾಗಿತ್ತು.

2008ರ ಮೊದಲ ಸೀಸನ್​ನಲ್ಲಿ ಟ್ರೋಫಿಯ ಆಕಾರವು ಭಾರತದ ನಕ್ಷೆಯ ರೂಪದಲ್ಲಿತ್ತು. ಸೀಸನ್​​ಗಳು ಬದಲಾದಂತೆ ಟ್ರೋಫಿಯಲ್ಲೂ ಮಾರ್ಪಾಡು ಆಯಿತು. ನಂತರ ಶೀರ್ಷಿಕೆ, ಪ್ರಾಯೋಜಕತ್ವದಿಂದ ಟ್ರೋಫಿ ಬದಲಾಗುತ್ತಲೇ ಬರುತ್ತಿದೆ. ಹಾಲಿ ಟೂರ್ನಿಯಲ್ಲಿ ಟಾಟಾ ಶೀರ್ಷಿಕೆ ಪ್ರಾಯೋಜಕತ್ವ ಹೊಂದಿದೆ. ಟ್ರೋಫಿಗೆ ಪ್ರಾಯೋಜಕತ್ವದ ಬದಲಾಗುತ್ತಿದ್ದರೂ, ಟ್ರೋಫಿ ಮೇಲಿರುವ ಸಂಸ್ಕೃತದ ಶ್ಲೋಕ ಮಾತ್ರ ಬದಲಾಗುತ್ತಿಲ್ಲ.

ಸದ್ಯ ನೂತನ ಟ್ರೋಫಿಯ ಮೇಲೆ ಸಂಸ್ಕೃತದಲ್ಲಿ ಶ್ಲೋಕವನ್ನು ಬರೆಯಲಾಗಿದೆ. ಇದು ಯುವ ಕ್ರಿಕೆಟಿಗರನ್ನು ಸಾಕಷ್ಟ ಪ್ರೇರೇಪಿಸುತ್ತದೆ. 'ಯತ್ರ ಪ್ರತಿಭಾ ಅವ್‌ಸರ ಪ್ರಪ್ನೋತಿಹಿ' (Yatra Pratibha Avsara Prapnotihi) ಎಂಬ ಸಂಸ್ಕೃತ ಶ್ಲೋಕವನ್ನು ಟ್ರೋಫಿಯ ಮೇಲೆ ಬರೆಯಲಾಗಿದೆ. 

ಇದರ ಅರ್ಥ

ಇದರ ಅರ್ಥ, ಪ್ರತಿಭೆಗಳಿಗೆ ಅವಕಾಶಗಳು ಸಿಕ್ಕೇ ಸಿಗುತ್ತವೆ ಅಥವಾ ಎಲ್ಲಿ ಪ್ರತಿಭೆಗಳಿದ್ದ ಕಡೆ, ಅವಕಾಶವೂ ಇದ್ದೇ ಇರುತ್ತದೆ ಎಂದು. ಇದನ್ನು ಸ್ಪೂರ್ತಿಯಾಗಿಟ್ಟುಕೊಂಡು ಟ್ರೋಫಿ ಮೇಲೆ ಕೆತ್ತಲಾಗಿದೆ. ಭಾರತ 1983ರಲ್ಲಿ ಗೆದ್ದ ಏಕದಿನ ವಿಶ್ವಕಪ್​​​ ಮೇಲೂ 'ಯತ್ರ ಪ್ರತಿಭಾ ಅವ್‌ಸರ ಪ್ರಪ್ನೋತಿಹಿ' ಎಂದು ಸಂಸ್ಕೃತ ಶ್ಲೋಕವನ್ನು ಬರೆಯಲಾಗಿತ್ತು.

1983ರ ಏಕದಿನ ವಿಶ್ವಕಪ್​​ಗೂ ಇದೆ ನಂಟು

1983ರಲ್ಲಿ ಟೀಮ್​ ಇಂಡಿಯಾ ಲಂಡನ್​ಗೆ ಏಕದಿನ ವಿಶ್ವಕಪ್​ ಆಡಲು ತೆರಳಿತ್ತು. ಆದರೆ ಆಗ ಅತ್ಯಂತ ಕೀಳು ಮಟ್ಟದಲ್ಲಿ ನೋಡಲಾಗಿತ್ತು. ಅಪಮಾನ ಕೂಡ ಮಾಡಲಾಗಿತ್ತು. ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ಮೀಡಿಯಾಗಳಂತೂ ಸವಾಲುಗಳನ್ನೂ ಹಾಕಿದ್ದವು. ಇದಕ್ಕೂ ಮೊದಲು ಚಾಂಪಿಯನ್​ ಆಗುವ ವಿಶ್ವಾಸವು ಭಾರತಕ್ಕೂ ಇರಲಿಲ್ಲ. ಆದರೆ ಅಪಮಾನದ ಸವಾಲನ್ನು ಮೆಟ್ಟಿ ನಿಂತ ಕಪಿಲ್​ ದೇವ್​ ನೇತೃತ್ವದ ಭಾರತ ತಂಡ ವಿಶ್ವಕಪ್​ ಗೆದ್ದು ಚರಿತ್ರೆ ಸೃಷ್ಟಿಸಿತ್ತು.

ಈ ಏಕದಿನ ವಿಶ್ವಕಪ್​ ಮೇಲೆ 'ಯತ್ರ ಪ್ರತಿಭಾ ಅವ್‌ಸರ ಪ್ರಪ್ನೋತಿಹಿ' ಎಂದು ಕೆತ್ತಲಾಗಿತ್ತು. ಇದೇ ಬರಹವನ್ನು ಮಿಲಿಯನ್​ ಡಾಲರ್ ಟೂರ್ನಿಯ ಟ್ರೋಫಿಯಲ್ಲಿಯೂ ಬರೆಸಲಾಗಿದೆ. ದೇಶೀಯ ಹಾಗೂ ಸ್ಥಳೀಯ ಆಟಗಾರರ ಪ್ರತಿಭೆಯನ್ನು ಅನಾವರಣಗೊಳಿಸಲು ಇರುವಂತ ಅತ್ಯುತ್ತಮ ವೇದಿಕೆ ಇದಾಗಿದೆ. ಈ ಲೀಗ್​ನಿಂದ ಸಾಕಷ್ಟು ಕ್ರಿಕೆಟಿಗರು ಬೆಳಕಿಗೆ ಬಂದು ವಿಶ್ವದ ನಂಬರ್​ವನ್​ ಆಟಗಾರರಾಗಿಯೂ ಮೆರೆದಾಡುತ್ತಿದ್ದಾರೆ. ಇದೇ ಕಾರಣದಿಂದ ಕಪ್​ ಮೇಲೆ ಕೆತ್ತಿರುವ ಶ್ಲೋಕ ಅರ್ಥಪೂರ್ಣವಾಗಿದೆ.

ಐಪಿಎಲ್​​ನಲ್ಲಿ​ ಪ್ರಶಸ್ತಿ ಗೆದ್ದ ತಂಡಗಳು

  • ಮುಂಬೈ ಇಂಡಿಯನ್ಸ್​​ 5 ಬಾರಿ ಚಾಂಪಿಯನ್​
  • ಚೆನ್ನೈ ಸೂಪರ್ ಕಿಂಗ್ಸ್​ 4 ಬಾರಿ ಚಾಂಪಿಯನ್​
  • ಕೋಲ್ಕತ್ತಾ ನೈಟ್​ ರೈಡರ್ಸ್​​ 2 ಬಾರಿ ಚಾಂಪಿಯನ್​
  • ಗುಜರಾತ್ ಟೈಟಾನ್ಸ್​ 1 ಬಾರಿ ಚಾಂಪಿಯನ್​
  • ರಾಜಸ್ಥಾನ್​ ರಾಯಲ್ಸ್​ 1 ಬಾರಿ ಚಾಂಪಿಯನ್​
  • ಡೆಕ್ಕನ್‌ ಚಾರ್ಜಸ್ 1 ಬಾರಿ ಚಾಂಪಿಯನ್​
  • ಸನ್​ರೈಸರ್ಸ್​ ಹೈದರಾಬಾದ್​ 1 ಬಾರಿ ಚಾಂಪಿಯನ್​

    ಹಂಚಿಕೊಳ್ಳಲು ಲೇಖನಗಳು