logo
ಕನ್ನಡ ಸುದ್ದಿ  /  ಕ್ರೀಡೆ  /  Ramiz Raja: ಇದು ಡಬ್ಲ್ಯೂಟಿಸಿ ಫೈನಲ್; ಮೊದಲ ದಿನ ಕಳಪೆ ಪ್ರದರ್ಶನ ನೀಡಿದ ಭಾರತವನ್ನು ಎಚ್ಚರಿಸಿದ ರಮೀಜ್

Ramiz Raja: ಇದು ಡಬ್ಲ್ಯೂಟಿಸಿ ಫೈನಲ್; ಮೊದಲ ದಿನ ಕಳಪೆ ಪ್ರದರ್ಶನ ನೀಡಿದ ಭಾರತವನ್ನು ಎಚ್ಚರಿಸಿದ ರಮೀಜ್

Jayaraj HT Kannada

Jun 08, 2023 02:45 PM IST

ರಮೀಜ್ ರಾಜಾ, ರೋಹಿತ್ ಶರ್ಮಾ

    • WTC Final 2023: ಡಬ್ಲ್ಯೂಟಿಸಿ ಫೈನಲ್ ಪಂದ್ಯದಲ್ಲಿ ಹೆಡ್ ಮತ್ತು ಸ್ಮಿತ್ ಜೊತೆಯಾಟ ಕಂಡು ಭಾರತೀಯ ಬೌಲರ್‌ಗಳು ಸುಸ್ತಾದರು. ಹೀಗಾಗಿ ಮಹತ್ವದ ಪಂದ್ಯಕ್ಕೆ ರೋಹಿತ್ ಶರ್ಮಾ ಬಳಗದ ಬೌಲರ್‌ಗಳು ಸರಿಯಾದ ಸಿದ್ಧತೆ ನಡೆಸಿಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ರಮೀಜ್ ರಾಜಾ ಹೇಳಿದ್ದಾರೆ.
ರಮೀಜ್ ರಾಜಾ, ರೋಹಿತ್ ಶರ್ಮಾ
ರಮೀಜ್ ರಾಜಾ, ರೋಹಿತ್ ಶರ್ಮಾ (File/AP)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ (World Test Championship final) ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭ ನಿರಾಶಾದಾಯಕವಾಗಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯಾ, ಮೊದಲ ದಿನದಾಟದ ಅಂತ್ಯಕ್ಕೆ 327 ರನ್ ಕಲೆಹಾಕಿತು. ಇಂಗ್ಲೆಂಡ್‌ನ ದಿ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಡಬ್ಲ್ಯೂಟಿಸಿ ಫೈನಲ್‌ (WTC final) ಪಂದ್ಯದಲ್ಲಿ, ಆಸ್ಟ್ರೇಲಿಯಾ ತಂಡವು ನಿಯಂತ್ರಣ ಸಾಧಿಸಿದೆ. ಟ್ರಾವಿಸ್ ಹೆಡ್ ಮತ್ತು ಸ್ಟೀವ್‌ ಸ್ಮಿತ್‌ ಭರ್ಜರಿ ದ್ವಿಶತಕದ ಜೊತೆಯಾಟದೊಂದಿಗೆ ತಂಡವನ್ನು ಬೃಹತ್‌ ಮೊತ್ತದತ್ತ ಮುನ್ನಡೆಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಟ್ರಾವಿಸ್ ಹೆಡ್ ಕೇವಲ 106 ಎಸೆತಗಳ ನೆರವಿನಿಂದ ಶತಕ ಸಿಡಿಸಿದರೆ, ದಿನದಾಟದ ಅಂತ್ಯಕ್ಕೆ ಅಜೇಯ 146 ರನ್ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ ಸ್ಟೀವ್ ಸ್ಮಿತ್ ಅಜೇಯ 95 ರನ್‌ ಗಳಿಸಿ ಶತಕದ ಸಮೀಪ ಬಂದಿದ್ದಾರೆ. ಇವರಿಬ್ಬರೂ ಮುರಿಯದ ನಾಲ್ಕನೇ ವಿಕೆಟ್‌ಗೆ ಅಜೇಯ 251 ರನ್‌ ಒಟ್ಟುಗೂಡಿಸಿದ್ದಾರೆ.

ಹೆಡ್ ಮತ್ತು ಸ್ಮಿತ್ ಜೊತೆಯಾಟ ಕಂಡು ಭಾರತೀಯ ಬೌಲರ್‌ಗಳು ಸುಸ್ತಾದರು. ಹೀಗಾಗಿ ಮಹತ್ವದ ಪಂದ್ಯಕ್ಕೆ ರೋಹಿತ್ ಶರ್ಮಾ ಬಳಗದ ಬೌಲರ್‌ಗಳು ಸರಿಯಾದ ಸಿದ್ಧತೆ ನಡೆಸಿಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ರಮೀಜ್ ರಾಜಾ ಹೇಳಿದ್ದಾರೆ.

ಪಿಚ್ ಪರಿಸ್ಥಿತಿ ಮತ್ತು ಇಂಗ್ಲೆಂಡ್‌ನ ಹವಾಮಾನಕ್ಕೆ ಹೊಂದಿಕೊಳ್ಳಲು ಭಾರತವು ಫೈನಲ್‌ ಪಂದ್ಯಕ್ಕೂ ಮುಂಚಿತವಾಗಿ ಇಂಗ್ಲೆಂಡ್‌ನಲ್ಲಿ ಅಭ್ಯಾಸ ಪಂದ್ಯಗಳಲ್ಲಿ ಆಡಬೇಕಿತ್ತು ಎಂದು ರಮೀಜ್‌ ರಾಜಾ ಅಭಿಪ್ರಾಯಪಟ್ಟಿದ್ದಾರೆ. ಮೇ 29ರಂದು ಐಪಿಎಲ್‌ ಪಂದ್ಯಗಳು ಮುಗಿದಿದ್ದು, ಆ ಹಿನ್ನೆಲೆಯಲ್ಲಿ ಭಾರತದ ಆಟಗಾರರು ಹಂತ ಹಂತವಾಗಿ ಗುಂಪುಗಳಲ್ಲಿ ಇಂಗ್ಲೆಂಡ್‌ಗೆ ತೆರಳಿದ್ದರು.

“ಒಂದು ತಂಡವು ಉಪಖಂಡದಿಂದ ಇಂಗ್ಲೆಂಡ್‌ನಂತಹ ಶೀತ ಹವಾಮಾನವಿರುವ ವಾತಾವರಣಕ್ಕೆ ಬಂದು 5-6 ದಿನಗಳಲ್ಲಿ ಒಗ್ಗಿಕೊಳ್ಳಬೇಕು ಎಂದರೆ ಕಷ್ಟ. ಅದು ಕೂಡಾ ಒಂದೇ ಒಂದು ಪಂದ್ಯ ಆಡದೆ ಪ್ರಮುಖ ಪಂದ್ಯದಲ್ಲಿ ಆಡಲಾಗುತ್ತಿದೆ. ಭಾರತದ ತಂತ್ರ ನನಗೆ ಅರ್ಥವಾಗುತ್ತಿಲ್ಲ. ಇದು ಡಬ್ಲ್ಯುಟಿಸಿ ಫೈನಲ್. ಭಾರತವು ಇದಕ್ಕೂ ಮುಂಚೆಯೇ ಕನಿಷ್ಠ ಬೇರೆ ತಂಡಗಳೊಂದಿಗೆ ಅಭ್ಯಾಸ ಪಂದ್ಯಗಳನ್ನು ಆಡಬೇಕಿತ್ತು. ಕನಿಷ್ಠ 3-4 ಏಕದಿನ ಪಂದ್ಯಗಳನ್ನು ಆಡಿದ್ದರೂ ಸಹ, ಇಂತಹ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಬಹುದಿತ್ತು” ಎಂದು ರಾಜಾ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

“ಇಲ್ಲಿ ಮೋಡ ಕವಿದ ವಾತಾವರಣವಿದೆ. ಪಿಚ್ ಪರಿಸ್ಥಿತಿ ವಿಭಿನ್ನವಾಗಿದೆ. ಬೌಲರ್‌ಗಳು ಇಲ್ಲಿ ತಮ್ಮ ಲೈನ್‌ ಆಂಡ್‌ ಲೆಂತ್‌ ಸರಿಹೊಂದಿಸಬೇಕಾಗುತ್ತದೆ. ಐಪಿಎಲ್‌ನಲ್ಲಿ ಕೇವಲ ನಾಲ್ಕು ಓವರ್‌ಗಳನ್ನು ಎಸೆದ ನಂತರ, ಇಲ್ಲಿ ಒಂದು ದಿನದಲ್ಲಿ 17 ಓವರ್‌ಗಳನ್ನು ಬೌಲಿಂಗ್ ಮಾಡಬೇಕು. ಬೌಲರ್‌ಗಳಿಗೆ ವಿಶ್ರಾಂತಿ ಬೇಕು,” ಎಂದು ಅವರು ಹೇಳಿದ್ದಾರೆ.

ಮೊದಲ ದಿನದಾಟದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ, ಆರಂಭದಲ್ಲೇ ಪ್ರಮುಖ ಬ್ಯಾಟರ್‌ ಉಸ್ಮಾನ್‌ ಖವಾಜಾ ವಿಕೆಟ್‌ ಕಳೆದುಕೊಂಡಿತು. ಒಂದು ಹಂತದಲ್ಲಿ ಪ್ಯಾಟ್ ಕಮ್ಮಿನ್ಸ್ ಬಳಗವು ಕೇವಲ 76 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ, ಸ್ಮಿತ್‌ ಹಾಗೂ ಹೆಟ್‌ ದ್ವಿಶತಕದ ಜೊತೆಯಾಟದ ನೆರವಿನಿಂದ ತಡದ ಮೊತ್ತ ಹೆಚ್ಚಿತು. ಅಂತಿಮವಾಗಿ ಮೊದಲ ದಿನದ ಸ್ಟಂಪ್ಸ್ ವೇಳೆಗೆ ಆಸ್ಟ್ರೇಲಿಯಾವು 3 ವಿಕೆಟ್ ಕಳೆದುಕೊಂಡು 327 ರನ್ ಗಳಿಸಿದೆ. ಅಲ್ಲದೆ ಭರ್ಜರಿ ಮೊತ್ತ ಕಲೆ ಹಾಕುವ ಸೂಚನೆ ನೀಡಿದೆ.

ಭಾರತದ ವೇಗಿ ಮೊಹಮ್ಮದ್ ಸಿರಾಜ್, ಉಸ್ಮಾನ್ ಖವಾಜಾ ಅವರ ವಿಕೆಟ್‌ ಅನ್ನು ಬಲು ಬೇಗನೆ ಪಡೆದರು. ಆ ಬಳಿಕ ಒಂದಾದ ಓಪನರ್ ಡೇವಿಡ್ ವಾರ್ನರ್ ಮತ್ತು ಅಗ್ರ ಶ್ರೇಯಾಂಕದ ಟೆಸ್ಟ್ ಬ್ಯಾಟರ್ ಮಾರ್ನಸ್ ಲ್ಯಾಬುಶೆನ್ ಉತ್ತಮ ಪ್ರತಿದಾಳಿ ನಡೆಸಿದರು. ವಾರ್ನರ್‌ 60 ಎಸೆತಗಳಿಂದ 43 ರನ್‌ ಗಳಿಸಿ ಠಾಕೂರ್‌ಗೆ ವಿಕೆಟ್‌ ಒಪ್ಪಿಸಿದರು. ಅದಕ್ಕೂ ಮೊದಲು ಅವರು ಲ್ಯಾಬುಶೆನ್‌ ಜೊತೆಗೂಡಿ ಎರಡನೇ ವಿಕೆಟ್‌ಗೆ 69 ರನ್ ಒಟ್ಟುಗೂಡಿಸಿದರು. ಟ್ರಾವಿಸ್‌ ಹೆಡ್‌ ಹಾಗೂ ಸ್ಮಿತ್ ಆಟಕ್ಕೆ ಭಾರತ‌ ಎರಡನೇ ದಿನ ಲಗಾಮು ಹಾಕಬೇಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ