logo
ಕನ್ನಡ ಸುದ್ದಿ  /  ಕ್ರೀಡೆ  /  Cricketer Vinod Kambli: ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆ; ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ ಪ್ರಕರಣ ದಾಖಲು

Cricketer Vinod Kambli: ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆ; ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ ಪ್ರಕರಣ ದಾಖಲು

HT Kannada Desk HT Kannada

Feb 05, 2023 03:26 PM IST

ವಿನೋದ್ ಕಾಂಬ್ಳಿ ಮತ್ತು ಅವರ ಪತ್ನಿ ಆಂಡ್ರಿಯಾ

    • ಭಾರತದ ಪರ 17 ಟೆಸ್ಟ್‌ಗಳಲ್ಲಿ ಆಡಿರುವ ಮಾಜಿ ಬ್ಯಾಟ್ಸ್‌ಮನ್, 54.20 ಸರಾಸರಿಯಲ್ಲಿ 1,084 ರನ್ ಗಳಿಸಿದ್ದಾರೆ. 104 ಏಕದಿನ ಪಂದ್ಯಗಳಲ್ಲಿ, ಕಾಂಬ್ಳಿ 32.59 ಸರಾಸರಿಯಲ್ಲಿ 2,477 ರನ್ ಗಳಿಸಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಎರಡು ದ್ವಿಶತಕಗಳನ್ನು ಗಳಿಸಿದ್ದಾರೆ.
ವಿನೋದ್ ಕಾಂಬ್ಳಿ ಮತ್ತು ಅವರ ಪತ್ನಿ ಆಂಡ್ರಿಯಾ
ವಿನೋದ್ ಕಾಂಬ್ಳಿ ಮತ್ತು ಅವರ ಪತ್ನಿ ಆಂಡ್ರಿಯಾ (PTI file)

ಮುಂಬೈ: ಮದ್ಯದ ಅಮಲಿನಲ್ಲಿ ಇಬ್ಬರು ಮಕ್ಕಳ ಎದುರೇ ಪತ್ನಿ ಆಂಡ್ರಿಯಾ(Andrea) ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ ಪ್ರಕರಣ ದಾಖಲಾಗಿದೆ. ಮುಂಬೈನ ಬಾಂದ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಸಂಬಂಧ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಬಾಂದ್ರಾ ಪೊಲೀಸರ ಪ್ರಕಾರ, ಶುಕ್ರವಾರ ತಡರಾತ್ರಿ ಆಂಡ್ರಿಯಾ ಅವರು ದೂರು ನೀಡಿದ ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ. ಬಾಂದ್ರಾ ರೆಕ್ಲಮೇಷನ್‌ನಲ್ಲಿರುವ ಜೆಡಬ್ಲ್ಯೂಎಲ್ ಕೋಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿರುವ ತಮ್ಮ ನಿವಾಸದಲ್ಲಿ ಕಾಂಬ್ಳಿ ಮದ್ಯ ಸೇವಿಸಿದ್ದಾರೆ. ಮದ್ಯದ ನಶೆಯಲ್ಲಿ ಪತ್ನಿಯನ್ನು ನಿಂದಿಸಿ, ಹಿಂಸಾತ್ಮಕವಾಗಿ ವರ್ತಿಸಿದ್ದಾರೆ ಎಂದು ಆಂಡ್ರಿಯಾ ತಮ್ಮ ಹೇಳಿಕೆಯಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಕಾಂಬ್ಳಿ ಅವರು ಅಡುಗೆ ಪ್ಯಾನ್‌ನ ಮುರಿದ ಹ್ಯಾಂಡಲ್ ಅನ್ನು ಪತ್ನಿ ಮೇಲೆ ಎಸೆದರು. ಇದರಿಂದ ಆಕೆಯ ತಲೆಗೆ ಗಾಯಗಳಾಯಿತು. ಅಲ್ಲದೆ ಅವರು ತಮ್ಮ ಬ್ಯಾಟ್‌ನಿಂದ ಹೊಡೆಯಲು ಪ್ರಯತ್ನಿಸಿದರು. ಆದರೆ ಬ್ಯಾಟ್‌ ಅನ್ನು ಅವರ ಕೈಯಿಂದ ಕಸಿದುಕೊಳ್ಳುವಲ್ಲಿ ಪತ್ನಿ ಯಶಸ್ವಿಯಾದರು. ನಂತರ ಆಂಡ್ರಿಯಾ ಅವರು ತಕ್ಷಣವೇ ತಮ್ಮ ಮಕ್ಕಳನ್ನು ಕರೆದುಕೊಂಡು ಮನೆಯನ್ನು ತೊರೆದರು,” ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಕ್ಕಳನ್ನು ಕರೆದುಕೊಂಡು ಮನೆಯಿಂದ ಹೊರನಡೆದ ಆಂಡ್ರಿಯಾ, ನಂತರ ಬಾಂದ್ರಾದ ಭಾಭಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದರು. ಆ ಬಳಿಕ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಅಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿಕೊಂಡು, ವೈದ್ಯಕೀಯ ವರದಿಯ ಪ್ರತಿಯನ್ನು ಸಹ ಸಲ್ಲಿಸಿದ್ದಾರೆ.

“ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧದಿಂದ ಗಾಯಗಳನ್ನು ಮಾಡಿದ ಮತ್ತು ಉದ್ದೇಶಪೂರ್ವಕ ಅವಮಾನಕ್ಕಾಗಿ, ನಾವು ಕಾಂಬ್ಳಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ” ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಭಾರತದ ಪರ 17 ಟೆಸ್ಟ್‌ಗಳಲ್ಲಿ ಆಡಿರುವ ಮಾಜಿ ಬ್ಯಾಟ್ಸ್‌ಮನ್, 54.20 ಸರಾಸರಿಯಲ್ಲಿ 1,084 ರನ್ ಗಳಿಸಿದ್ದಾರೆ. 104 ಏಕದಿನ ಪಂದ್ಯಗಳಲ್ಲಿ, ಕಾಂಬ್ಳಿ 32.59 ಸರಾಸರಿಯಲ್ಲಿ 2,477 ರನ್ ಗಳಿಸಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಎರಡು ದ್ವಿಶತಕಗಳನ್ನು ಗಳಿಸಿದ್ದಾರೆ.

ವಿನೋದ್ ಕಾಂಬ್ಳಿ ಮತ್ತು ಅವರ ಎರಡನೇ ಪತ್ನಿ ಆಂಡ್ರಿಯಾ, 2010 ರಲ್ಲಿ ತಮ್ಮ ಮಗನನ್ನು ಜಗತ್ತಿಗೆ ಸ್ವಾಗತಿಸಿದ್ದರು. ಆಂಡ್ರಿಯಾರನ್ನು ವಿವಾಹವಾದ ನಂತರ, ಕಾಂಬ್ಳಿ ಕ್ಯಾಥೊಲಿಕ್ ಧರ್ಮಕ್ಕೆ ಮತಾಂತರಗೊಂಡರು. ತಮ್ಮ ಮಗನಿಗೆ ಜೀಸಸ್ ಕ್ರಿಸ್ಟಿಯಾನೋ ಕಾಂಬ್ಲಿ ಎಂದು ಹೆಸರಿಟ್ಟರು.

ಗಮನಿಸಬಹುದಾದ ಇತರೆ ಸುದ್ದಿಗಳು

Paris Olympics: ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಸಿದ್ಧತೆ ಮೇಲ್ವಿಚಾರಣೆ ಮಾಡಲು ಸಮಿತಿ ರಚನೆ

ನವದೆಹಲಿ: 2024ರ ಪ್ಯಾರಿಸ್ ಮತ್ತು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಭಾರತ ತಯಾರಿ ನಡೆಸುತ್ತಿದೆ. ಉತ್ತಮ ಪ್ರದರ್ಶನ ನೀಡಿ ಹೆಚ್ಚು ಪದಕ ಗೆಲ್ಲುವತ್ತ ಭಾರತ ಚಿತ್ತ ಹರಿಸುತ್ತಿದೆ. ಹೀಗಾಗಿ ಒಲಿಂಪಿಕ್ಸ್‌ಗೆ ಭಾರತೀಯ ಅಥ್ಲೀಟ್‌ಗಳ ಸಿದ್ಧತೆಯನ್ನು ಪರಿಶೀಲಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕ್ರೀಡಾ ಸಚಿವಾಲಯ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್(Indian Olympic Association) ಮತ್ತು ಇತರ ಮಧ್ಯಸ್ಥಗಾರರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು