logo
ಕನ್ನಡ ಸುದ್ದಿ  /  ಕ್ರೀಡೆ  /  Cristiano Ronaldo: ಫುಟ್ಬಾಲ್ ದಿಗ್ಗಜನಿಂದ ಮತ್ತೊಂದು ದಾಖಲೆ; 500 ಗೋಲುಗಳ ಮೈಲುಗಲ್ಲು ತಲುಪಿದ ರೊನಾಲ್ಡೊ

Cristiano Ronaldo: ಫುಟ್ಬಾಲ್ ದಿಗ್ಗಜನಿಂದ ಮತ್ತೊಂದು ದಾಖಲೆ; 500 ಗೋಲುಗಳ ಮೈಲುಗಲ್ಲು ತಲುಪಿದ ರೊನಾಲ್ಡೊ

HT Kannada Desk HT Kannada

Feb 10, 2023 11:46 AM IST

ಕ್ರಿಸ್ಟಿಯಾನೊ ರೊನಾಲ್ಡೊ

    • ರೊನಾಲ್ಡೊ ವಿಶ್ವದ ಐದು ವಿವಿಧ ಅಗ್ರ ಲೀಗ್‌ಗಳಲ್ಲಿ ಐದು ಕ್ಲಬ್‌ಗಳ ಪರ 503 ಲೀಗ್ ಗೋಲುಗಳನ್ನು ಗಳಿಸಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ (AFP)

ಜಾಗತಿಕ ಕ್ರೀಡಾಕ್ಷೇತ್ರದ ಜನಪ್ರಿಯ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಗುರುವಾರ ಸೌದಿ ಪ್ರೊ ಲೀಗ್‌ನಲ್ಲಿ ಅಲ್ ನಾಸರ್‌(Al Nassr) ತಂಡದ ಪರ ನಾಲ್ಕು ಗೋಲುಗಳನ್ನು ಗಳಿಸುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 500 ಕ್ಲಬ್ ಗೋಲುಗಳ ಮೈಲಿಗಲ್ಲನ್ನು ರೊನಾಲ್ಡೊ ತಲುಪಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಭಾನುವಾರ ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಪೋರ್ಚುಗಲ್ ಅಂತಾರಾಷ್ಟ್ರೀಯ ಫುಟ್ಬಾಲ್‌ ತಂಡದ ಆಟಗಾರ, ಆತಿಥೇಯ ಅಲ್ ವೆಹ್ದಾ(Al Wehda) ತಂಡದ ವಿರುದ್ಧ 30 ನಿಮಿಷಗಳಲ್ಲಿ ನಾಲ್ಕು ಗೋಲು ಹೊಡೆದರು. ಆ ಮೂಲಕ ತಮ್ಮ ತಂಡವನ್ನು 4-0 ಗೋಲುಗಳ ಅಂತರದಿಂದ ಗೆಲ್ಲಿಸಿದರು.

ರೊನಾಲ್ಡೊ ವಿಶ್ವದ ಐದು ವಿವಿಧ ಅಗ್ರ ಲೀಗ್‌ಗಳಲ್ಲಿ ಐದು ಕ್ಲಬ್‌ಗಳ ಪರ 503 ಲೀಗ್ ಗೋಲುಗಳನ್ನು ಗಳಿಸಿದ್ದಾರೆ. ಇದರಲ್ಲಿ ವಿಶ್ವವಿಖ್ಯಾತ ಮ್ಯಾಂಚೆಸ್ಟರ್ ಯುನೈಟೆಡ್‌ (Manchester United) ಪರ 103, ರಿಯಲ್ ಮ್ಯಾಡ್ರಿಡ್‌(Real Madrid) ಪರ 311, ಜುವೆಂಟಸ್‌ (Juventus) ಪರ 81 ಹಾಗೂ ಸ್ಪೋರ್ಟಿಂಗ್ ಲಿಸ್ಬನ್‌(Sporting Lisbon) ಪರ ಮೂರು ಗೋಲುಗಳನ್ನು ಗಳಿಸಿದ್ದಾರೆ. ಸದ್ಯ ತಮ್ಮ ಹೊಸ ಕ್ಲಬ್‌ ಅಲ್ ನಾಸರ್‌ ಪರ ಐದು ಗೋಲುಗಳನ್ನು ಗಳಿಸಿದ್ದಾರೆ.

ಐದು ಬಾರಿಯ ಬ್ಯಾಲನ್ ಡಿ'ಓರ್ ವಿಜೇತ ವಿಜೇತ ರೊನಾಲ್ಡೊ, ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅಲ್ ನಾಸರ್‌ ಕ್ಲಬ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಎರಡೂವರೆ ವರ್ಷಗಳ ಈ ಒಪ್ಪಂದವು ಬರೋಬ್ಬರಿ 200 ಮಿಲಿಯನ್ ಯುರೋಗಳಷ್ಟು ($216.54 ಮಿಲಿಯನ್) ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ. ಈ ತಂಡಕ್ಕೆ ರೊನಾಲ್ಡೊ ಅವರನ್ನು ನಾಯಕನಾಗಿ ನೇಮಿಸಲಾಗಿದೆ.

ಸದ್ಯ 16 ಪಂದ್ಯಗಳ ನಂತರ, ಅಲ್ ನಾಸರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಅಲ್ ಶಬಾಬ್‌ ತಂಡ ಮತ್ತು ಅಲ್ ನಾಸರ್ ತಲಾ 37 ಅಂಕಗಳನ್ನು ಪಡೆದಿವೆ.

2009ರಿಂದ 18ರವರೆಗೆ ಸ್ಪ್ಯಾನಿಷ್ ಫುಟ್ಬಾಲ್‌ ಕ್ಲಬ್‌ ಆಗಿರುವ ರಿಯಲ್ ಮ್ಯಾಡ್ರಿಡ್‌(Real Madrid) ಪರ ಆಡಿದ್ದ ರೊನಾಲ್ಡೋ, ಕ್ಲಬ್‌ ಹೆಸರನ್ನು ಆಕಾಶದೆತ್ತರಕ್ಕೆ ಕೊಂಡೊಯ್ದಿದ್ದರು. ಆ ಬಳಿಕ ತಮ್ಮ ಹಳೆಯ ತಂಡ ಮ್ಯಾಂಚೆಸ್ಟರ್‌ ಯುನೈಟ್‌ ಸೇರಿಕೊಂಡರು. ಆ ಬಳಿಕ ಯುನೈಟೆಡ್‌ ಕ್ಲಬ್‌ ತೊರೆದು ಸುದ್ದಿಯಾಗಿದ್ದರು. ಅದಾದ ಬೆನ್ನಲ್ಲೇ ಸೌದಿ ಅರೇಬಿಯಾದ ಕ್ಲಬ್‌ ಸೇರಿಕೊಂಡು ಅಚ್ಚರಿ ಮೂಡಿಸಿದ್ದರು.

ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಪೋರ್ಚುಗಲ್‌ ದೇಶದ ಪರ ರೊನಾಲ್ಡೋ ಆಡಿದ್ದರು. ಅಲ್ಲಿ ಘಾನಾ ವಿರುದ್ಧದ ಆರಂಭಿಕ ಗುಂಪು ಹಂತದ ಪಂದ್ಯದಲ್ಲಿ ಪೆನಾಲ್ಟಿ ಗಳಿಸುವ ಮೂಲಕ ಅಮೋಘ ಸಾಧನೆಯೊಂದನ್ನು ಮಾಡಿದರು. ಐದು ವಿಶ್ವಕಪ್‌ಗಳಲ್ಲಿ ಸ್ಕೋರ್ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಆದರೆ, ಪೋರ್ಚುಗಲ್ ಕ್ವಾರ್ಟರ್ ಫೈನಲ್‌ನಲ್ಲಿ ಮೊರಾಕೊ ವಿರುದ್ಧ ಸೋಲನುಭವಿಸಿತು.

ಇದನ್ನೂ ಓದಿ

MS Dhoni: ಟ್ರ್ಯಾಕ್ಟರ್ ಏರಿ ಉಳುಮೆ ಮಾಡಿದ ಮಾಹಿ; ವಿಡಿಯೋ ನೋಡಿ 'ಮತ್ತೆ ಮೈದಾನಕ್ಕೆ ಬನ್ನಿ' ಎಂದ ಅಭಿಮಾನಿಗಳು

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಎಂ ಎಸ್ ಧೋನಿ, ಸದ್ಯ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಕ್ರಿಕೆಟ್‌ನಲ್ಲೇ ಕೂಲ್‌ ಕ್ಯಾಪ್ಟನ್‌ ಎಂದು ಕರೆಸಿಕೊಳ್ಳುವ ಮಾಹಿ, ಹೆಚ್ಚು ಕಾಲ ತಮ್ಮ ತೋಟದ ಮನೆಯಲ್ಲಿ ಸಮಯ ಕಳೆಯುತ್ತಾರೆ. ಇದಕ್ಕೆ ಸರಿಯಾಗಿ ಮಾಹಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹರಿಬಿಟ್ಟಿರುವ ವಿಡಿಯೋವೊಂದನ್ನು ನೋಡಿ ಅಭಿಮಾನಿಗಳು ಪುಳಕಿತರಾಗಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು