logo
ಕನ್ನಡ ಸುದ್ದಿ  /  Sports  /  Fifa World Cup 2022 Schedule Today

FIFA World Cup 2022: ಪೋರ್ಚುಗಲ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ದಕ್ಷಿಣ ಕೊರಿಯಾ? ಇಂದಿನ ಪಂದ್ಯಗಳು ಯಾವುವು?

HT Kannada Desk HT Kannada

Dec 02, 2022 02:30 PM IST

ರೊನಾಲ್ಡೊ ನೇತೃತ್ವದ ಪೋರ್ಚುಗಲ್ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ

    • ದಕ್ಷಿಣ ಕೊರಿಯಾ vs ಪೋರ್ಚುಗಲ್ ಮತ್ತು ಘಾನಾ vs ಉರುಗ್ವೆ ಪಂದ್ಯಗಳು, ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8.30ಕ್ಕೆ ನಡೆಯಲಿವೆ. ಸೆರ್ಬಿಯಾ - ಸ್ವಿಟ್ಜರ್ಲೆಂಡ್ ಮತ್ತು ಕ್ಯಾಮರೂನ್ - ಬ್ರೆಜಿಲ್ ಪಂದ್ಯಗಳು ಇಂದು ತಡರಾತ್ರಿ 12.30(ಶನಿವಾರ)ಕ್ಕೆ ಏಕಕಾಲದಲ್ಲಿ ನಡೆಯಲಿವೆ.
ರೊನಾಲ್ಡೊ ನೇತೃತ್ವದ ಪೋರ್ಚುಗಲ್ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ
ರೊನಾಲ್ಡೊ ನೇತೃತ್ವದ ಪೋರ್ಚುಗಲ್ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ (FIFA Twitter)

ಫಿಫಾ ವಿಶ್ವಕಪ್ 2022ರ ಗುಂಪು ಹಂತದಲ್ಲಿ, ಒಟ್ಟು 32 ತಂಡಗಳು ಅಗ್ರ 16 ತಂಡವಾಗಿ ಹೊರಹೊಮ್ಮಲು ಪರಸ್ಪರ ಸ್ಪರ್ಧಿಸುತ್ತಿವೆ. ನೆದರ್ಲ್ಯಾಂಡ್ಸ್, ಸೆನೆಗಲ್, ಇಂಗ್ಲೆಂಡ್, ಯುಎಸ್‌ಎ, ಅರ್ಜೆಂಟೀನಾ, ಪೋಲೆಂಡ್, ಫ್ರಾನ್ಸ್ ಮತ್ತು ಆಸ್ಟ್ರೇಲಿಯಾ ತಂಡಗಳು ಅಗ್ರ 16ರಲ್ಲಿ ಮೊದಲ ಎಂಟು ತಂಡಗಳಾಗಿ 16ರ ಸುತ್ತಿಗೆ ಪ್ರವೇಶಿಸಿವೆ. ಈ ಮೂಲಕ ನಾಕೌಟ್‌ ಹಂತದ ಸ್ಥಾನ ಭದ್ರಪಡಿಸಿವೆ. ಪಂದ್ಯಾವಳಿಯ ಗುಂಪು ಹಂತದಲ್ಲಿ ಕೊನೆಯ ಎಂಟು ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಆ ಬಳಿಕ ನಾಕೌಟ್ ಹಂತ ಆರಂಭ ಪಡೆಯಲಿವೆ. ಇಂದು ಕೂಡಾ ಒಟ್ಟು ನಾಲ್ಕು ಪಂದ್ಯಗಳು ನಡೆಯಲಿದ್ದು, ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಕ್ರಿಸ್ಟಿಯಾನೋ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡ ಕೂಡಾ, ವಿಶ್ವಕಪ್ 2022ರ 16ರ ಸುತ್ತಿಗೆ ಸಮೀಪಿಸಿದೆ. ದಕ್ಷಿಣ ಕೊರಿಯಾ ವಿರುದ್ಧದ ತಮ್ಮ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಗೆದ್ದು, ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರಿಸಲು ಎದುರು ನೋಡುತ್ತಿದೆ. ಏತನ್ಮಧ್ಯೆ, ದಕ್ಷಿಣ ಕೊರಿಯಾ ಕೂಡಾ ಪೋರ್ಚುಗಲ್‌ ವಿರುದ್ಧ ಗೆಲ್ಲಲು ನೋಡುತ್ತಿದೆ. ಇದೇ ವೇಳೆ ಮತ್ತೊಂದು ಪಂದ್ಯದಲ್ಲಿ ಉರುಗ್ವೆಯು ಘಾನಾವನ್ನು ಸೋಲಿಸಲು ಸಜ್ಜಾಗಿದೆ. ಆದರೂ, ಕೊನೆಯ 16ರ ಸುತ್ತಿಗೆ ಟಿಕೆಟ್‌ ಪಡೆಯಲು ಈ ಏಷ್ಯಾ ರಾಷ್ಟ್ರವು ಉರುಗ್ವೆಗಿಂತ ಉತ್ತಮ ಗೋಲು ವ್ಯತ್ಯಾಸವನ್ನು ಹೊಂದಿರಬೇಕು.

ಮತ್ತೊಂದೆಡೆ, G ಗುಂಪಿನಲ್ಲಿ ಎರಡು ಪಂದ್ಯಗಳು ಇಂದು ನಡೆಯಲಿವೆ. ಸೆರ್ಬಿಯಾ ತಂಡವು ಸ್ವಿಟ್ಜರ್ಲೆಂಡ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸ್ವಿಟ್ಜರ್ಲೆಂಡ್ ಕನಿಷ್ಠ ಪಕ್ಷ ಡ್ರಾ ಸಾಧಿಸಿ, ಮುನ್ನಡೆಯುವ ಅವಕಾಶ ಹೊಂದಿದೆ. ಆದರೆ ಸೆರ್ಬಿಯಾಗೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿದೆ.

ಏತನ್ಮಧ್ಯೆ, ಬಲಿಷ್ಠ ಬ್ರೆಜಿಲ್ ತಂಡವು ಕ್ಯಾಮರೂನ್ ವಿರುದ್ಧ ಕಣಕ್ಕಿಳಿಯಲಿದೆ. ಕೊನೆಯ 16ರ ಸುತ್ತಿಗೆ ಪ್ರವೇಶಿಸಲು ಈ ಪಂದ್ಯವನ್ನು ಕ್ಯಾಮರೂನ್ ಗೆಲ್ಲಬೇಕಾಗಿದೆ. ಕ್ಯಾಮರೂನ್‌ ದೇಶದ ಮುಂದಿನ ಸುತ್ತಿನ ಆಸೆ, ಸೆರ್ಬಿಯಾ ಮತ್ತು ಸ್ವಿಟ್ಜರ್ಲೆಂಡ್ ಪಂದ್ಯದ ಫಲಿತಾಂಶವನ್ನು ಅವಲಂಬಿಸಿದೆ. ಬ್ರೆಜಿಲ್ ಈಗಾಗಲೇ ಎರಡು ಪಂದ್ಯಗಳಲ್ಲಿ ಎರಡು ಗೆಲುವಿನೊಂದಿಗೆ 16ರ ಸುತ್ತಿಗೆ ಪ್ರವೇಶಿಸಿದೆ. ಈಗ ಮತ್ತೊಂದು ಗೆಲುವಿನೊಂದಿಗೆ ತಮ್ಮ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆಯುವ ಕನಸಿನಲ್ಲಿದೆ.

ಇಂದಿನ ಪಂದ್ಯಗಳು

  • ದಕ್ಷಿಣ ಕೊರಿಯಾ ವಿರುದ್ಧ ಪೋರ್ಚುಗಲ್
  • ಘಾನಾ ವಿರುದ್ಧ ಉರುಗ್ವೆ
  • ಸೆರ್ಬಿಯಾ ವಿರುದ್ಧ ಸ್ವಿಟ್ಜರ್ಲೆಂಡ್
  • ಕ್ಯಾಮರೂನ್ ವಿರುದ್ಧ ಬ್ರೆಜಿಲ್

ಪಂದ್ಯಗಳು ಯಾವಾಗ ನಡೆಯುತ್ತವೆ?

ದಕ್ಷಿಣ ಕೊರಿಯಾ vs ಪೋರ್ಚುಗಲ್ ಮತ್ತು ಘಾನಾ vs ಉರುಗ್ವೆ ಪಂದ್ಯಗಳು, ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8.30ಕ್ಕೆ ನಡೆಯಲಿವೆ. ಸೆರ್ಬಿಯಾ - ಸ್ವಿಟ್ಜರ್ಲೆಂಡ್ ಮತ್ತು ಕ್ಯಾಮರೂನ್ - ಬ್ರೆಜಿಲ್ ಪಂದ್ಯಗಳು ಇಂದು ತಡರಾತ್ರಿ 12.30(ಶನಿವಾರ)ಕ್ಕೆ ಏಕಕಾಲದಲ್ಲಿ ನಡೆಯಲಿವೆ.

ಪಂದ್ಯಗಳು ಎಲ್ಲಿ ನಡೆಯುತ್ತವೆ?

ದಕ್ಷಿಣ ಕೊರಿಯಾ ಮತ್ತು ಪೋರ್ಚುಗಲ್ ನಡುವಿನ ಪಂದ್ಯವು ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ನಡೆಯಲಿದೆ. ಘಾನಾ ಮತ್ತು ಉರುಗ್ವೆ ಪಂದ್ಯವು ಅಲ್ ಜನೌಬ್ ಸ್ಟೇಡಿಯಂನಲ್ಲಿ ನಡೆಯಲಿದೆ. ಅತ್ತ ಸೆರ್ಬಿಯಾ ಮತ್ತು ಸ್ವಿಟ್ಜರ್ಲೆಂಡ್ ಪಂದ್ಯವು ಸ್ಟೇಡಿಯಂ 974ನಲ್ಲಿ ನಡೆದರೆ, ಕ್ಯಾಮರೂನ್ ಮತ್ತು ಬ್ರೆಜಿಲ್ ಪಂದ್ಯವು ಲುಸೇಲ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಇಂದಿನ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ವಿವರ

ಇಂದಿನ ಎಲ್ಲಾ ನಾಲ್ಕು ಪಂದ್ಯಗಳು Sports18 ಮತ್ತು Sports18 HD ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಇದರೊಂದಿಗೆ ಈ ಪಂದ್ಯಗಳನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ. ಇಷ್ಟೇ ಅಲ್ಲದೆ https://www.hindustantimes.com/sports/football ನಲ್ಲಿ ಲೈವ್‌ ಅಪ್ಡೇಟ್‌ ಅನ್ನು ನೀವು ಅನುಸರಿಸಬಹುದು.

    ಹಂಚಿಕೊಳ್ಳಲು ಲೇಖನಗಳು