logo
ಕನ್ನಡ ಸುದ್ದಿ  /  ಕ್ರೀಡೆ  /  Ind Vs Aus: Wtc ಫೈನಲ್​​ಗೂ ಮುನ್ನ ಭಾರತಕ್ಕೆ ಬಂತು 7,544 ಕಿ.ಮೀ ದೂರದಿಂದ ಸಿಹಿ ಸುದ್ದಿ!

IND vs AUS: WTC ಫೈನಲ್​​ಗೂ ಮುನ್ನ ಭಾರತಕ್ಕೆ ಬಂತು 7,544 ಕಿ.ಮೀ ದೂರದಿಂದ ಸಿಹಿ ಸುದ್ದಿ!

Prasanna Kumar P N HT Kannada

Apr 09, 2023 12:05 PM IST

ಚೇತೇಶ್ವರ್​ ಪೂಜಾರ

    • IND vs AUS: ಪೂಜಾರ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್​ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಸಸೆಕ್ಸ್​ ತಂಡದ ನಾಯಕನಾಗಿ ಕಣಕ್ಕಿಳಿರುವ ಪೂಜಾರ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಗಮನದಲ್ಲಿಟ್ಟುಕೊಂಡು ವಿಶೇಷ ಸಂದೇಶ ನೀಡಿದ್ದಾರೆ.
ಚೇತೇಶ್ವರ್​ ಪೂಜಾರ
ಚೇತೇಶ್ವರ್​ ಪೂಜಾರ (Twitter)

ಭಾರತದಲ್ಲಿ ಐಪಿಎಲ್ (IPL)​ ಸದ್ದು ಜೋರಾಗಿದೆ. ಈ ಸದ್ದು ಗದ್ದಲದ ನಡುವೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​​ ಪಂದ್ಯಕ್ಕೂ (ICC World Test Championship Final) ಮುನ್ನ 7,544 ಕಿಲೋ ಮೀಟರ್​​ ದೂರದಿಂದ ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​ ಸಿಕ್ಕಿದೆ. ಐಪಿಎಲ್​ ಟೂರ್ನಿಯ ಭಾಗವಾಗದ ಟೆಸ್ಟ್​ ಸ್ಪೆಷಲಿಸ್ಟ್ ಚೇತೇಶ್ವರ್​ ಪೂಜಾರ (Cheteshwar Pujara) ಈ ಸಂದೇಶ ರವಾನಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಹೌದು. ಚೇತೇಶ್ವರ್​ ಪೂಜಾರ ಸದ್ಯ ಇಂಗ್ಲೆಂಡ್​​​ನಲ್ಲಿದ್ದಾರೆ. ಇಂಗ್ಲೆಂಡ್​​​​ನಿಂದ ಭಾರತಕ್ಕೆ ಅಂದರೆ 7,544 ಕಿಲೋ ಮೀಟರ್​​​ (ಗೂಗಲ್​ ಮ್ಯಾಪ್​ ಪ್ರಕಾರ) ದೂರದಿಂದ ಈ ಸಂದೇಶ ಕಳುಹಿಸಿದ್ದಾರೆ. ಪೂಜಾರ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್​ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಸಸೆಕ್ಸ್​ ತಂಡದ ನಾಯಕನಾಗಿ ಕಣಕ್ಕಿಳಿರುವ ಪೂಜಾರ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಗಮನದಲ್ಲಿಟ್ಟುಕೊಂಡು ವಿಶೇಷ ಸಂದೇಶ ನೀಡಿದ್ದಾರೆ.

ಕೌಂಟಿಯಲ್ಲಿ ಮತ್ತೊಂದು ಶತಕ ಸಿಡಿಸಿದ ಪೂಜಾರ

ಇಂಗ್ಲೆಂಡ್​​ನಲ್ಲಿ ಕೌಂಟಿ ಚಾಂಪಿಯನ್​ಶಿಪ್​​ -2023ರಲ್ಲಿ (County Championship Division Two 2023) ಟೂರ್ನಿಯ ಮೊದಲ ಪಂದ್ಯದಲ್ಲಿ ಪೂಜಾರ ನೇತೃತ್ವದ ಸಸೆಕ್ಸ್ ತಂಡವು, ಡರ್ಹ್ಯಾಮ್​ ವಿರುದ್ಧ ಸೆಣಸಾಟ ನಡೆಸುತ್ತಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಪೂಜಾರ ಭರ್ಜರಿ ಶತಕ ಸಿಡಿಸುವ ಟೀಮ್​ ಇಂಡಿಯಾ ಕ್ಯಾಂಪ್​​ನಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದ್ದಾರೆ. ಇಂಗ್ಲೆಂಡ್​ನಲ್ಲೇ WTC ಫೈನಲ್​​ ಪಂದ್ಯ ನಡೆಯುವ ಕಾರಣ, ಟೀಮ್​ ಇಂಡಿಯಾಗೆ ವಿಶೇಷ ಸುದ್ದಿಯನ್ನು ಕಳುಹಿಸಿಕೊಟ್ಟಿದ್ದಾರೆ.

ಐಪಿಎಲ್ ಆಡುತ್ತಿರುವ ಟೀಮ್​ ಇಂಡಿಯಾ ಕ್ರಿಕೆಟರ್​ಗಳು ತವರಿನ ಪಿಚ್​​ಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ರೋಹಿತ್ ಶರ್ಮಾ ರನ್ ಗಳಿಸುತ್ತಿಲ್ಲ. ವಿರಾಟ್ ಕೊಹ್ಲಿ ಅಬ್ಬರಿಸುವ ನಿರೀಕ್ಷೆ ಹುಟ್ಟು ಹಾಕಿದ್ದಾರೆ. ಇನ್ನೂ ಕೆಲ ಆಟಗಾರರು ನಿರಾಸೆ ಮೂಡಿಸಿದ್ದಾರೆ. ಆದರೆ, ಪೂಜಾರ 7,544 ಕಿಮೀ ದೂರದಲ್ಲಿ ಹೋವ್‌ ಮೈದಾನದಲ್ಲಿ ಶತಕ ಬಾರಿಸಿ ಮಿಂಚಿ ಶುಭ ಸುದ್ದಿ ನೀಡಿದ್ದಾರೆ.

14 ಇನ್ನಿಂಗ್ಸ್‌ಗಳಲ್ಲಿ ಆರನೇ ಶತಕ

163 ಎಸೆತಗಳನ್ನು ಎದುರಿಸಿದ ಪೂಜಾರ, 13 ಬೌಂಡರಿ, 1 ಸಿಕ್ಸರ್​​​​ ನೆರವಿನಿಂದ 115 ರನ್​ ಗಳಿಸಿದ್ದಾರೆ. 2ನೇ ಇನ್ನಿಂಗ್ಸ್​​ನಲ್ಲಿ 35 ರನ್​ಗಳ ಕಾಣಿಕೆ ನೀಡಿದ್ದಾರೆ. ಇದು ಸಸೆಕ್ಸ್ ಪರ ಆಡಿದ 14 ಇನ್ನಿಂಗ್ಸ್‌ಗಳಲ್ಲಿ ಪೂಜಾರ ಅವರ ಆರನೇ ಶತಕವಾಗಿದೆ. ಕಳೆದ ಬಾರಿ ಪಾಲ್ಗೊಂಡಿದ್ದ ಕೌಂಟಿ ಟೂರ್ನಿಯಲ್ಲಿ ಪೂಜಾರ, 5 ಶತಕ ಚಚ್ಚಿದ್ದರು.

ತಂಡವನ್ನು ಆಧರಿಸಿದ ಪೂಜಾರ

ಡರ್ಹ್ಯಾಮ್​ ಮೊದಲ ಇನ್ನಿಂಗ್ಸ್​​ನಲ್ಲಿ 376 ರನ್‌ ಗಳಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ಸಸೆಕ್ಸ್, 4 ವಿಕೆಟ್‌ಗಳಿಗೆ ಕೇವಲ 91 ರನ್‌ ಗಳಿಸಿ ಕುಸಿತದ ಭೀತಿಗೆ ಸಿಲುಕಿತ್ತು. ಟೀಮ್​​ ಇಂಡಿಯಾದ ‘ನಯಾ ವಾಲ್’ ಎಂದೇ ಖ್ಯಾತರಾಗಿರುವ ಪೂಜಾರ ಈ ಶತಕಕ್ಕೆ ಸ್ಕ್ರಿಪ್ಟ್ ಮಾಡಿದ್ದಾರೆ. ಪೂಜಾರ ನಾಯಕತ್ವದ ಇನಿಂಗ್ಸ್‌ನಿಂದ ತಂಡದ 335ಕ್ಕೆ ತಲುಪಿತ್ತು. ಸೋಲುವ ಹಂತದಲ್ಲಿದ್ದ ಸಸೆಕ್ಸ್​​, ಈಗ ಗೆಲುವಿನ ಅಂಚಿನಲ್ಲಿದೆ.

ಮೊದಲ ಇನ್ನಿಂಗ್ಸ್​​​ನಲ್ಲಿ 41 ರನ್​ಗಳ ಮುನ್ನಡೆ ಪಡೆದ ಡರ್ಹ್ಯಾಮ್​​, 2ನೇ ಇನ್ನಿಂಗ್ಸ್​​ನಲ್ಲಿ ಕುಸಿತ ಕಂಡಿದೆ. 189 ರನ್​ಗಳಿಗೆ ಆಲ್​ಔಟ್​ ಆಗಿದೆ. 231 ರನ್​ಗಳ ಗುರಿ ಬೆನ್ನತ್ತಿದ ಸಸೆಕ್ಸ್​​ ಗೆಲುವಿಗೆ ಇನ್ನು 59 ರನ್​ಗಳ ಅಗತ್ಯ ಇದೆ. ಈಗಾಗಲೇ 5 ವಿಕೆಟ್​ ಕಳೆದುಕೊಂಡಿರುವ ಸಸೆಕ್ಸ್​, 4ನೇ ದಿನದಾಟದಲ್ಲಿ ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.

ಆಂಗ್ಲರ ನೆಲದಲ್ಲಿ ಪೂಜಾರ ಅವರ ಪ್ರಬಲ ಪ್ರದರ್ಶನವು ಈ ಜೂನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಉತ್ತಮ ಭುನಾದಿ ಹಾಕಿಕೊಟ್ಟಂತಾಗಿದೆ. ಆಂಗ್ಲರ ಕಂಡೀಷನ್​​​ನಲ್ಲಿ ಪೂಜಾರ ರನ್ ಮತ್ತು ಫಾರ್ಮ್‌ನಲ್ಲಿರುವುದು ಆಸ್ಟ್ರೇಲಿಯಾದ ಬೌಲರ್‌ಗಳಿಗೆ ಈ ಭಾರತ ತಂಡದ ಗೋಡೆ ಒಡೆಯುವುದು ಸುಲಭವಲ್ಲ. ಜೂನ್​​​ 7ರಂದು ಲಂಡನ್​ನ ಓವಲ್​ ಮೈದಾನದಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಪಂದ್ಯ ನಡೆಯಲಿದೆ.

    ಹಂಚಿಕೊಳ್ಳಲು ಲೇಖನಗಳು