logo
ಕನ್ನಡ ಸುದ್ದಿ  /  ಕ್ರೀಡೆ  /  Ind Vs Aus Test: ಕೊಹ್ಲಿಗೆ ಬಿರಿಯಾನಿ ಸಿಕ್ಕಂತಾಗಿದೆ, ಶತಕ ಬೇಡ, 200 ಬೇಕು ಎಂದ ಗವಾಸ್ಕರ್

Ind vs Aus Test: ಕೊಹ್ಲಿಗೆ ಬಿರಿಯಾನಿ ಸಿಕ್ಕಂತಾಗಿದೆ, ಶತಕ ಬೇಡ, 200 ಬೇಕು ಎಂದ ಗವಾಸ್ಕರ್

HT Kannada Desk HT Kannada

Mar 12, 2023 07:39 AM IST

ಸುನಿಲ್​ ಗವಾಸ್ಕರ್​​ - ವಿರಾಟ್​ ಕೊಹ್ಲಿ

    • Virat Kohli: ಅರ್ಧಶತಕ ಸಿಡಿಸಿ ಭರ್ಜರಿ ಫಾರ್ಮ್​ಗೆ ಮರಳಿರುವ ವಿರಾಟ್​ ಕೊಹ್ಲಿಗೆ ಈಗ ಬಿರಿಯಾನಿ ಸಿಕ್ಕಂತಾಗಿದೆ. ನನಗೆ ಶತಕ ಬೇಡ, 200 - 250 ರನ್​ ಬೇಕು ಎಂದು ಸುನಿಲ್​ ಗವಾಸ್ಕರ್​, ಕೊಹ್ಲಿಗೆ ಮನವಿ ಮಾಡಿದ್ದಾರೆ.
ಸುನಿಲ್​ ಗವಾಸ್ಕರ್​​ - ವಿರಾಟ್​ ಕೊಹ್ಲಿ
ಸುನಿಲ್​ ಗವಾಸ್ಕರ್​​ - ವಿರಾಟ್​ ಕೊಹ್ಲಿ

ಮೊದಲ ಮೂರು ಟೆಸ್ಟ್‌ಗಳಲ್ಲಿ ಅರ್ಧಶತಕದ ಗಡಿ ತಲುಪಲು ವಿಫಲರಾಗಿದ್ದ ವಿರಾಟ್ ಕೊಹ್ಲಿ (Virat Kohli) 4ನೇ ಟೆಸ್ಟ್‌ನಲ್ಲಿ ಅಜೇಯ 59 ರನ್ ಗಳಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ 424 ದಿನಗಳ ನಂತರ, ಅಂದರೆ ಒಂದೂವರೆ ವರ್ಷದ ಬಳಿಕ 50+ ಗಳಿಸಿದ ಸ್ಕೋರ್ ಆಗಿದೆ. ಕಿಂಗ್​​​ ಕೊಹ್ಲಿ ಅವರು ಕೊನೆಯ ಟೆಸ್ಟ್ ನಾಯಕರಾಗಿದ್ದಾಗ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅರ್ಧಶತಕ ಬಾರಿಸಿದ್ದರು.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

ಇದೀಗ 50 ರ ಗಡಿ ದಾಟಿದ ಕೊಹ್ಲಿ, ಶತಕದತ್ತ ಹೆಜ್ಜೆ ಇಟ್ಟಿದ್ದಾರೆ. ಆ ಮೂಲಕ ವಿರಾಟ್ ಮೂರೂವರೆ ವರ್ಷಗಳಿಂದ ಕಾಯುತ್ತಿರುವ ಟೆಸ್ಟ್ ಶತಕ ಪೂರೈಸಲು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

'ಪಿಚ್ ಹೇಗೆ ವರ್ತಿಸುತ್ತಿದೆ ಎಂಬುದನ್ನು ನೋಡಿದ ನಂತರ ಕೊಹ್ಲಿ ಅರ್ಧಶತಕ ಗಳಿಸಿದ್ದಾರೆ. ಆದರೆ ಈ ಅರ್ಧಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವುದು ಒಳ್ಳೆಯದು. ಹೀಗಾದರೆ ಟೀಮ್​​​ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲಿದೆ. 2ನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಬೇಗನೆ ಔಟ್ ಮಾಡಿ ಗೆಲ್ಲುವ ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಸಿವಿನಿಂದ ಬಳಲುತ್ತಿದ್ದಾರೆ ಕೊಹ್ಲಿ.!

ಸದ್ಯ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ರನ್​​ ಹಸಿವಿನಿಂದ ಬಳಲುತ್ತಿದ್ದಾರೆ. ಒಂದು ವೇಳೆ ಹಸಿವಿನಿಂದ ಕಂಗೆಟ್ಟಿರುವವನಿಗೆ ತಿನ್ನಲು ಏನಾದರೂ ಸಿಗುತಿದೆಯೇ.? ಹಾಗೆ ಅನ್ನ ಹುಡುಕುತ್ತಿರುವವನಿಗೆ ಬಿರಿಯಾನಿ ಸಿಕ್ಕರೆ ಹೇಗಿರುತ್ತದೆ. ನೀವೇ ಊಹೆ ಮಾಡಿ. ಅದೇ ರೀತಿ ವಿರಾಟ್ ಕೊಹ್ಲಿ ಹಲವು ವರ್ಷಗಳಿಂದ ಟೆಸ್ಟ್‌ನಲ್ಲಿ ಶತಕ ಬಾರಿಸಿರಲಿಲ್ಲ. ಹಾಗಾಗಿ ಅವರು 250 ಬಾರಿಸಿದರೆ ಲೆಕ್ಕ ಸರಿಹೋಗುತ್ತದೆ ಸಾಕು' ಎಂದು ಪ್ರತಿಕ್ರಿಯಿಸಿದ್ದಾರೆ.

2020ರ ಜನವರಿಯಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಸರಾಸರಿ 58 ಕ್ಕಿಂತ ಹೆಚ್ಚಿತ್ತು. ಟೆಸ್ಟ್​​ನಲ್ಲಿ 27 ಶತಕ ಸಿಡಿಸಿದ್ದ ಕಿಂಗ್​​ ಆಗ ಸಿಡಿಸಿದ್ದು ಕೇವಲ 25 ಅರ್ಧಶತಕ. ಆ ಸಮಯದಲ್ಲಿ ಅರ್ಧಶತಕಗಳಿಗಿಂತ ಹೆಚ್ಚು ಶತಕ ಸಿಡಿಸಿದ ಆಟಗಾರ ಎನಿಸಿದರು. ಆದರೆ ಆ ಬಳಿಕ ಕೊಹ್ಲಿ ಪ್ರದರ್ಶನ ಕುಸಿಯತೊಡಗಿತು.

ಮಾರ್ಚ್ 2023ರ ಹೊತ್ತಿಗೆ ವಿರಾಟ್ ಟೆಸ್ಟ್ ಸರಾಸರಿ 48ಕ್ಕೆ ಇಳಿದಿದೆ. ಈ ಮೂರು ವರ್ಷಗಳಲ್ಲಿ ಜೋ ರೂಟ್ 12 ಶತಕ ಬಾರಿಸಿದರೆ, ಸ್ಟೀವ್ ಸ್ಮಿತ್ 5 ಶತಕ ಬಾರಿಸಿದ್ದರು. ವಿರಾಟ್ ಕೊಹ್ಲಿ ಒಂದೇ ಒಂದು ಶತಕವನ್ನು ಗಳಿಸಲಿಲ್ಲ. 27 ಟೆಸ್ಟ್ ಶತಕಗಳ ಬಳಿಯೇ ತನ್ನ ಆಟವನ್ನು ನಿಲ್ಲಿಸಿದ್ದಾರೆ. ಇದೀಗ ಟೆಸ್ಟ್​ನಲ್ಲಿ ಶತಕವನ್ನು ಸಿಡಿಸುವ ಸುವರ್ಣಾವಕಾಶ ಕೊಹ್ಲಿ ಮುಂದಿದೆ.

59 ರನ್​​ ಗಳಿಸಿದ ಕೊಹ್ಲಿ ತವರಿನಲ್ಲಿ 4000 ಟೆಸ್ಟ್ ರನ್‌ಗಳನ್ನು ಪೂರೈಸಿದ ದಾಖಲೆ ಬರೆದಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಐದನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್, (Sachin Tendulkar) ರಾಹುಲ್ ದ್ರಾವಿಡ್ (Rahul Dravid), ಸುನಿಲ್ ಗವಾಸ್ಕರ್ ಮತ್ತು ವೀರೇಂದ್ರ ಸೆಹ್ವಾಗ್ (Virender Sehwag) ಈ ದಾಖಲೆ ನಿರ್ಮಿಸಿದ್ದರು.

ವಿಶೇಷವೆಂದರೆ, ಭಾರತದಲ್ಲಿ ಅತಿ ವೇಗವಾಗಿ 4000 ಟೆಸ್ಟ್ ರನ್ ಪೂರೈಸಿದ ಮೂರನೇ ಆಟಗಾರ ಕೊಹ್ಲಿ. ಸ್ಟೈಲಿಶ್‌ ಬ್ಯಾಟರ್‌ ಭಾರತದಲ್ಲಿ ತಮ್ಮ 77ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಸೆಹ್ವಾಗ್ ಕೇವಲ 71 ಇನ್ನಿಂಗ್ಸ್‌ಗಳಲ್ಲಿ ಭಾರತದಲ್ಲಿ 4000 ರನ್‌ಗಳನ್ನು ವೇಗವಾಗಿ ತಲುಪಿದ್ದರು. 78 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ ತೆಂಡೂಲ್ಕರ್ ಎರಡನೇ ಸ್ಥಾನದಲ್ಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು