logo
ಕನ್ನಡ ಸುದ್ದಿ  /  Sports  /  Ind Vs Nz 3rd Odi Team India Claims Top Spot In Icc Men S Odi Rankings

Ind Vs Nz 3rd ODI: ನ್ಯೂಜಿಲೆಂಡ್‌ ಎದುರು ಸರಣಿ ವಶ; ಏಕದಿನ ರ್ಯಾಂಕಿಂಗ್‌ನಲ್ಲಿ ನಂಬರ್‌ 1 ಸ್ಥಾನಕ್ಕೇರಿದ ಟೀಂ ಇಂಡಿಯಾ..

Jan 24, 2023 09:48 PM IST

ನ್ಯೂಜಿಲೆಂಡ್‌ ಎದುರು ಸರಣಿ ವಶ; ಏಕದಿನ ರ್ಯಾಂಕಿಂಗ್‌ನಲ್ಲಿ ನಂಬರ್‌ 1 ಸ್ಥಾನಕ್ಕೇರಿದ ಟೀಂ ಇಂಡಿಯಾ..

    • ಏಕದಿನದಲ್ಲಿ ಮೊದಲ ಸ್ಥಾನದಲ್ಲಿದ್ದ ನ್ಯೂಜಿಲೆಂಡ್‌ ತಂಡ ಇದೀಗ ಈ ಸರಣಿ ಸೋಲಿನ ಬಳಿಕ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು, ಭಾರತ ಅಗ್ರಸ್ಥಾನಕ್ಕೆ ಜಿಗಿತ ಕಂಡಿದೆ. 
ನ್ಯೂಜಿಲೆಂಡ್‌ ಎದುರು ಸರಣಿ ವಶ; ಏಕದಿನ ರ್ಯಾಂಕಿಂಗ್‌ನಲ್ಲಿ ನಂಬರ್‌ 1 ಸ್ಥಾನಕ್ಕೇರಿದ ಟೀಂ ಇಂಡಿಯಾ..
ನ್ಯೂಜಿಲೆಂಡ್‌ ಎದುರು ಸರಣಿ ವಶ; ಏಕದಿನ ರ್ಯಾಂಕಿಂಗ್‌ನಲ್ಲಿ ನಂಬರ್‌ 1 ಸ್ಥಾನಕ್ಕೇರಿದ ಟೀಂ ಇಂಡಿಯಾ.. (BCCI/ICC)

Ind Vs Nz 3rd ODI: ಮಂಗಳವಾರ ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು 90 ರನ್‌ಗಳಿಂದ 3-0 ಅಂತರದಿಂದ ಗೆಲ್ಲುವ ಮೂಲಕ ಟೀಂ ಇಂಡಿಯಾ ಹೊಸ ದಾಖಲೆ ಬರೆದಿದೆ. ಈ ಗೆಲುವಿನ ಮೂಲಕ ಏಕದಿನ ರ್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೆ ಏರಿಕೆ ಕಂಡಿದೆ.

ಟ್ರೆಂಡಿಂಗ್​ ಸುದ್ದಿ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನ್ಯೂಜಿಲೆಂಡ್ ತಂಡಕ್ಕೆ 386 ರನ್‌ಗಳ ದೊಡ್ಡ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಕಿವೀಸ್ ತಂಡ ಕೇವಲ 295 ರನ್ ಗಳಿಸಲಷ್ಟೇ ಶಕ್ತವಾಗಿ, ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಸೋಲನುಭವಿಸಿತು. ಶುಭ್‌ಮಾನ್‌ ಗಿಲ್‌ ಸರಣಿ ಶ್ರೇಷ್ಠ ಎನಿಸಿಕೊಂಡರೆ, ಮೂರನೇ ಪಂದ್ಯದಲ್ಲಿ 6 ಓವರ್‌ನಲ್ಲಿ 45 ರನ್‌ ನೀಡಿ 3 ವಿಕೆಟ್‌ ಕಿತ್ತ ಶಾರ್ದೂಲ್‌ ಠಾಕೂರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

90 ರನ್‌ಗಳ ಜಯ

ನ್ಯೂಜಿಲೆಂಡ್ ವಿರುದ್ಧ ಭಾರತ 90 ರನ್‌ಗಳ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಿವೀಸ್ ತಂಡವನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್‌ ಮಾಡಿದೆ. ಯಜುವೇಂದ್ರ ಚಾಹಲ್ ಅವರ ಎಸೆತದಲ್ಲಿ ಬಿಗ್‌ ಹಿಟ್‌ಗೆ ಪ್ರಯತ್ನಿಸಿದ ಸ್ಯಾಂಟ್ನರ್ ಅವರನ್ನು ವಿರಾಟ್ ಕೊಹ್ಲಿ ಲಾಂಗ್‌ ಆನ್‌ನಲ್ಲಿ ಕ್ಯಾಚ್‌ ಹಿಡಿದು ಔಟ್‌ ಮಾಡಿದರು. ಸ್ಯಾಂಟ್ನರ್ 29 ಎಸೆತಗಳಲ್ಲಿ 34 ರನ್ ಗಳಿಸಿದರು. ಈ ಪಂದ್ಯದ ಗೆಲುವಿನೊಂದಿಗೆ ಟೀಂ ಇಂಡಿಯಾ ಏಕದಿನದಲ್ಲಿ ವಿಶ್ವದ ನಂಬರ್ ಒನ್ ತಂಡ ಎನಿಸಿಕೊಂಡಿತು.

ಏಕದಿನದಲ್ಲಿ ಭಾರತ ನಂಬರ್‌ 1...

ಏಕದಿನದಲ್ಲಿ ಮೊದಲ ಸ್ಥಾನದಲ್ಲಿದ್ದ ನ್ಯೂಜಿಲೆಂಡ್‌ ಇದೀಗ ಈ ಸರಣಿ ಸೋಲಿನ ಬಳಿಕ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಭಾರತದ ಎದುರು ಎರಡನೇ ಏಕದಿನ ಪಂದ್ಯದಲ್ಲಿ ಸೋತಾಗಲೇ, ಮೊದಲ ಸ್ಥಾನದಿಂದ ಕೆಳಕ್ಕಿಳಿದು, ಮೊದಲ ಸ್ಥಾನಕ್ಕೆ ಇಂಗ್ಲೆಂಡ್‌ ಏರಿಕೆ ಕಂಡಿತ್ತು. ಇದೀಗ ಸರಣಿ ಗೆಲುವಿನ ಬಳಿಕ ಭಾರತ ಮೊದಲ ಸ್ಥಾನಕ್ಕೆ ಏರಿಕೆ ಕಂಡರೆ, ಇಂಗ್ಲೆಂಡ್‌ (2ನೇ ಸ್ಥಾನ), ಆಸ್ಟ್ರೇಲಿಯಾ (3ನೇ ಸ್ಥಾನ) ಮತ್ತು ನ್ಯೂಜಿಲೆಂಡ್‌ (4ನೇ ಸ್ಥಾನ) ದಲ್ಲಿದ್ದರೆ, ಪಾಕಿಸ್ತಾನ 5ನೇ ಸ್ಥಾನದಲ್ಲಿದೆ.

ಭಾರತಕ್ಕೆ ಡಬಲ್‌ ಸೆಂಚುರಿ ಧಮಾಕಾ..

ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 385 ರನ್ ಗಳಿಸಿತು. ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಶತಕದ ಇನಿಂಗ್ಸ್ ಆಡಿದರು. ನಾಯಕ ರೋಹಿತ್‌ 85 ಎಸೆತಗಳಲ್ಲಿ 101 ರನ್‌ ಸಿಡಿಸಿ ಶತಕದ ಬರ ನೀಗಿಸಿಕೊಂಡರು. ಶುಭ್‌ಮಾನ್‌ ಗಿಲ್‌ ಈ ಪಂದ್ಯದಲ್ಲಿಯೂ 78 ಎಸೆತಗಳಲ್ಲಿ 112 ರನ್‌ ಪೇರಿಸಿದರು. ಹಾರ್ದಿಕ್ ಪಾಂಡ್ಯ ಅರ್ಧಶತಕ ಬಾರಿಸಿದರೆ, ಎದುರಾಳಿ ತಂಡದ ಪರ ಡೆವೊನ್ ಕಾನ್ವೇ ಶತಕ ಬಾರಿಸಿದರು. ಅವರ ಬ್ಯಾಟ್‌ನಿಂದ 100 ಎಸೆತಗಳಲ್ಲಿ 138 ರನ್‌ ಹೊರಬಂದವು.

27ರಿಂದ ಮೂರು ಪಂದ್ಯಗಳ ಟಿ20 ಶುರು..

ಏಕದಿನದ ಬಳಿಕ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸೆಣಸಲಿದ್ದು, ಜನವರಿ 27 ರಂದು ರಾಂಚಿಯಲ್ಲಿ ಆರಂಭವಾಗಲಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು